ಕನ್ನಡ-ತೆಲುಗು ಒಂದೇ ಲಿಪಿ

4.5

ಕೆಳ ದಿನಗಳ ಹಿಂದೆ(೩-೪ ದಿನಗಳ ಹಿಂದೆ)ಡೆಕ್ಕನ್ ಹೆರಾಲ್ದ್ ನಲ್ಲಿ ಬಂದಿತ್ತು.
ಕನ್ನಡ ಹಾಗೂ ತೆಲುಗು ಭಾಷೆಗಳಿಗೆ ಒಂದೆ ಲಿಪಿಯನ್ನು ಅಳವಡಿಸುವ ಪ್ರಯತ್ನ ನಡಿಯಲಿದೆ. ಣೀಟ್ ವಾರನ್ಗಲ್ ನವರು ಈ ದಿಸೆಯಲ್ಲಿ ಕೆಲಸ ಮಾಡಬಹುದು.
ಎರಡು ಭಾಷೆಗಳಿಗೆ ಒಂದೆ ಲಿಪಿ ಅಳವಡಿಸುವ ಬಗ್ಗೆ ಸಂಪದದವರು ಏನು ಹೇಳ ಬಯಸುತ್ತೀರಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

೧. ಮೊದಲು ಎರಡು ಭಾಷೆಗಳು ಒಂದೇ ಲಿಪಿ ಹೊಂದಿದ್ದವು . ನಂತರ ಲಿಪಿಗಳು ಬೇರೆ ಬೇರೆ ಆದವು . ಏಕೆ ? ಮತ್ತು ಹೇಗೆ ? ಅಧ್ಯಯನ ಮಾಡಬೇಕು .

೨. ಹಿಂದೆ ಇಂಥ ಚರ್ಚೆ ಆಗಿರಬಹುದು . ಹಾಗಿದ್ದಲ್ಲಿ ಆ ಎಲ್ಲ ವಿವರ ಬಲ್ಲವರು ತಿಳಿಸಬೇಕು .

ಮತ್ತೆ ಮತ್ತೆ ಪ್ರಾರಂಭದಿಂದ ಪ್ರಾರಂಭಿಸುವದನ್ನು ತಪ್ಪಿಸಿ ಈ ಸಂಬಂಧದ ಇಲ್ಲಿಯವರೆಗಿನ ಮಾಹಿತಿ ಪಡೆದು ಅಲ್ಲಿಂದ ನಮ್ಮ ಚರ್ಚೆ ಮುಂದುವರಿಸಬೇಕು.

ಶ್ರೀಕಾಂತ ಮಿಶ್ರಿಕೋಟಿ.

ಸದ್ಯದ ತೆಲುಗಿನಲ್ಲಿ ’ೞ’ ಗೆ ಸಂಕೇತವಿಲ್ಲದಿರುವುದಱಿಂದ ಹೊಸಲಿಪಿಯಲ್ಲಿ ’ೞ’ ಅೞಿಸಿಹೋಗುವ ಭಯವಿದೆ. ’ೞ’ ಈಗಾಗಲೇ ಕನ್ನಡದಲ್ಲಿ ಕೆಲವು ಪಂಗಡಗಳಲ್ಲಿ ಬಿಟ್ಟರೆ ನಶಿಸಿರುವುದಱಿಂದ ಇದು ನಮಗೆ ಇನ್ನೊಂದು ನಷ್ಟ ತರಬಹುದು.

ಮೊದಲಾಗಿ, ಸಂಪದದಲ್ಲಿ [:http://sampada.net/fonthelp#help-keying-in|ಕನ್ನಡ ಲಿಪಿ ಬಳಸಿ ಬರೆಯಿರಿ].

ನೀವು ಉದ್ದೇಶಿಸಿರುವ [:http://67.18.142.206/deccanherald/nov042004/s7.asp|ಪತ್ರಿಕಾ ಪ್ರಕಟಣೆ ಇಲ್ಲಿದೆ].

ಕನ್ನಡ - ತೆಲುಗು ಭಾಷೆಗಳಿಗೆ ಒಂದೇ ಲಿಪಿ ಮಾಡಹೊರಟಿರುವವರಿಗೆ ನಾವು "ಮಾಡಬೇಡಿ" ಎಂದು ಹೇಳಲಾಗುವುದಿಲ್ಲ. ಅದು ಸರಿಯೋ, ತಪ್ಪೋ, progressiveಓ ಅಲ್ಲವೋ ಅದೂ ಕೂಡ ಕಾಲವೇ ತಿಳಿಸಬೇಕಾದ ಸಂಗತಿ. ನಮ್ಮ ಅಭಿಪ್ರಾಯಗಳನ್ನು ದಾಖಲು ಮಾಡಬಹುದಷ್ಟೇ ಆಗಬಹುದಾದ್ದರಿಂದ ನಿಮ್ಮೆಲ್ಲರೊಂದಿಗೆ ನನ್ನ ಅಭಿಪ್ರಾಯವನ್ನೂ ಸೇರಿಸುತ್ತೇನೆ.

ನಾವೀಗ ಬಳಸುತ್ತಿರುವ ಲಿಪಿಗಳು [:http://www.ancientscripts.com/sa_ws.html|ಹೇಗೆ ಉಗಮವಾದುವೆಂಬ ಸಂಗತಿ] ಇಲ್ಲಿ ಗಮನಿಸಬೇಕಾದ ಅಂಶ. ಕನ್ನಡ - ತೆಲುಗುಗೆ ಒಂದೇ ಲಿಪಿ ಬೇಕೆಂದರೆ ಹೊಸದೊಂದು ಲಿಪಿ ತಯಾರಿಸುವ ಅವಶ್ಯಕತೆ ಬಹುಶಃ ಇರದು. [http://www.ancientscripts.com/old_kannada.html|ಹಳೆಗನ್ನಡವನ್ನೇ ಬಳಸಬಹುದು]. ಆದರೆ ಅದು ನಿಜವಾಗಲೂ ಬೇಕೆ? ಕಾಲಚಕ್ರದಲ್ಲಿ ಹಿಂದಕ್ಕೆ ತಿರುಗಿದಂತಾಗುತ್ತದೆ ಅಲ್ವೆ?

--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"

ಜನ ಒಂದಾಗಬೇಕು ನಿಜ. ಆದರೆ ಭಾಷೆಗಳು ಬೇರೆಬೇರೆಯಾಗಿದ್ರೆ ಒಂದೇ ಲಿಪಿಯಿಂದ ಪ್ರಯೋಜನವಾದರೂ ಏನು? ಲಿಪಿ ಒಂದೇ ಆದ್ರೆ ಜನ ಒಂದಾಗೋಕ್ಕೆ ಹೇಗೆ ಸಾಧ್ಯ? ಸಾಂಕೇತಿಕವಾಗಿ ಬರೆಯುವ ಲಿಪಿಯಲ್ಲಿ homogenity ತಂದುಕೊಂಡು ಏನು ಸಾಧಿಸಬೇಕಾಗಿಲ್ಲ.ಇರುವ ಐಡೆಂಟಿಟಿ ಮತ್ತು ವೈವಿಧ್ಯತೆಯನ್ನು ಏಕೆ ಕಳೆದುಕೊಳ್ಳಬೇಕು?
"The first day of the conference will feature a seminar on trade, industry and commerce, the second day with a seminar on women and youth"
ಇವು ಈ ಲಿಪಿಯ ವಿಷಯಕ್ಕಿಂತ ಹೆಚ್ಚು ಅವಶ್ಯಕತೆಯ ವಿಷಯಗಳು ಅನ್ನಿಸುತ್ತದೆ.

--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

nanna prakara ivaga yavasthiyalli idheyo adhe sthiyalli lipigalannu biduvudu sooktha.
namma bashe/lipi nammage doddadhu, hage telagu navara bashe/lipi avarige hechu priya, yake NIT avarige e tharahada yochane banto gothilla.
ondhu paksha eradu bashegu seri ondhe lipi thandharu jana eshtara mattige oppuvaru annuvudhu prashne.
NIT andhare National Institute of Technology allave?, nanna prakara allina vidhyarthigalu project maduva utsahadalli etarahadha prayathnakke chalene kottirabahudhu.
-Raghuram

ನಾನು ಕನ್ನಡದವಳಾಗಿ ಅನ್ನುವುದಕಿಂತ ಭಾರತೀಯಳಾಗಿ ಹೇಳುವುದಾದರೆ,ಇಂದು ನಾವು ಅದೆಸ್ಟೋ ಕ್ಶೇತ್ರಗಳಲ್ಲಿ ಬದಲಾವಣೆ ಕಾಣಬೇಕಾಗಿದೆ,ಆದರೆ ತರಲು ಕೈಜೋಡಿಸುವವರಿಲ್ಲ.ಭಾಶೆ ಎಂಬುದು ಸಂದೇಶರವಾನೆಯನ್ನು ಸಲೀಸು ಮಾಡುವ ಮಾಧ್ಯಮ,ಅಂದರೆ ಅದು ನಮ್ಮ ಅನುಕೂಲ. ಬದಲಾವಣೆ ಎಲ್ಲಿ ಬೇಕೊ ಅಲ್ಲಿ ಬದಲಾವಣೆ ತರುವವರು ಯಾರೂ ಇಲ್ಲಾ!ಬೆಳಗಾವಿಯ ವಿಶಯದಲ್ಲಿ ಭಾಶೆಯನ್ನೇ ಕಾರಣವಾಗಿಸಿಕೊಂಡು ಅದೆಸ್ಟೋ ಹಿರಿಯರು(!) ಕಿರಿಯರು ಕಚ್ಹಾಡಿದ್ದಾರೆ.ನನಗೆ ಈ ಲಿಪಿ ಬದಲಾವಣೆ ಅದೇನು ಮಹತ್ತರವಾದದ್ದನ್ನು ಸಾದಿಸಬಹುದೆಂದು ತೊಚುತ್ತಿಲ್ಲಾ.ಅದೊಂದು ಏಕತೆಯತ್ತಪಯಣವಾದರೆ ಬದಲಾವಣೆಗೆ ಸ್ವಾಗತಿಸಬಹುದಲ್ಲವೆ? ಬದಲಾವಣೆ ಜಗದ ನಿಯಮ,ನಮಗೆ ಕಾಣುವ ಜಗತ್ತೆಂಬುದು ನಮ್ಮ ಕೈಯ್ಯಲ್ಲಿದೆ, ಒಳಿತು ಕೆಡುಕುಗಳನರಿತು ಪಯಣಿಸಬೇಕಸ್ಟೆ.