"ತಿಣಿಕಿದನು ಫಣಿರಾಯ..." - ಈ ಪದ್ಯದ ಅರ್ಥವೇನು?

0

ತಿಣಿಕಿದನು ಫಣಿರಾಯ ರಾಮಾ
ಯಣದ ಕವಿಗಳ ಭಾರದಲಿ ತಿಂ
ತಿಣಿಯ ರಘುವರ ಚರಿತೆಯಲಿ ಕಾಲಿಡಲು ತೆರಪಿಲ್ಲ
ಬಣಗು ಕವಿಗಳ ಲೆಕ್ಕಿಪನೆ ಸಾ
ಕೆಣಿಸದಿರು ಶುಕರೂಪನಲ್ಲವೆ
ಕುಣಿಸಿ ನಗನೇ ಕವಿ ಕುಮಾರವ್ಯಾಸನುಳಿದವರ
(ಕರ್ಣಾಟಕ ಭಾರತ ಕಥಾಮಂಜರಿ, ಪೀಠಿಕಾಸಂಧಿ, ಪದ್ಯ ೧೭.)

ವಿ.ವಿ.ಯವರು ಈ ಪದ್ಯದ ಅರ್ಥವನ್ನು ಬಹಳ ಹಿಂದೆಯೇ ಕೇಳಿದ್ದರು.

ಗೊತ್ತಿರುವವರು ಹೇಳುತ್ತಿರಾ?
ಮುಂಗಡವಾಗಿ ನನ್ನಿ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪದ್ಯದ ಸ್ಥೂಲ ಅರ್ಥ ಹೀಗಿದೆ:

"

ಈ ನಮ್ಮ ಭೂಮಿಯು (ಅಂದರೆ ಭೂಗೋಳವು) ಆದಿಶೇಷನ ತಲೆಯ ಮೇಲೆ ನಿಂತಿದೆ ಎಂದು ನಂಬಿಕೆ.

ಈ ನಮ್ಮ ಭೂಮಿಯ ಮೇಲೆ, ರಾಮಾಯಣವನ್ನು ಬರೆದ ಕವಿಗಳು ಅನೇಕರಿದ್ದಾರೆ - ವಾಲ್ಮೀಕಿಯಿಂದ ಹಿಡಿದು ವೀರಪ್ಪಮೊಯಿಲಿವರೆಗೆ... (ಅಫ್‍ಕೋರ್ಸ್ ಕುಮಾರವ್ಯಾಸನ ಕಾಲದಲ್ಲಿ ವೀರಪ್ಪಮೊಯಿಲಿ ಇರಲಿಲ್ಲ, ಕುಮಾರಸ್ವಾಮಿಯ ಕಾಲದಲ್ಲಿ ಇದ್ದಾರೆ).

ರಾಮಾಯಣದ ಬೇರೆಬೇರೆ ಆವೃತ್ತಿಗಳಿಂದ ಮತ್ತು ಅವನ್ನು ಬರೆದಿರುವ ಕವಿಗಳಿಂದ ಭೂಮಿಭಾರವಾಗಿದೆ; ಭೂಮಿಯನ್ನು ಹೊತ್ತ ಫಣಿರಾಯ ಅಂದರೆ ಆದಿಶೇಷ ತಿಣುಕುವಂತಾಗಿದೆ; ಭೂಮಿಯ ಮೇಲೆ ಕಾಲಿಡಲೂ ಜಾಗ (ತೆರಪು) ಇಲ್ಲದಷ್ಟು ಸಾಂದ್ರವಾಗಿ ರಾಮಾಯಣ ಕವಿಗಳು ತುಂಬಿಕೊಂಡಿದ್ದಾರೆ.

ಅದಕ್ಕಾಗಿ ನಾನು (= ಕುಮಾರವ್ಯಾಸ) ರಾಮಾಯಣದ ಗೋಜಿಗೆ ಹೋಗದೆ ಮಹಾಭಾರತದ ಕಥೆಯನ್ನು ಪೇಳುವಂಥವನಾಗುತ್ತೇನೆ.

"

ಜಗತ್ತಿನಲ್ಲಿರುವ ರಾಮಾಯಣಗಳ ಸಂಖ್ಯೆ - ನಂಬಿದರೆ ನಂಬಿ , ಇಲ್ಲವೆ ಬಿಡಿ - ಒಂದು ಲಕ್ಷ ಅಂತೆ ! - ಈ ವಾರದ ಸುಧಾದಲ್ಲಿ ಈ ವಿಷಯ ಬಂದಿದೆ.

"ಕನ್ನಡಗೆ ಪರಮ ಪಾವನ ತುಳಸಿ"

ಪ್ರಿಯರೇ,
ಶ್ರೀ ಜೋಶಿಯವರು ಹೇಳಿದ್ದನ್ನು ಮುಂದುವರೆಸುತ್ತೀದ್ದೇನೆ. ಕುಮಾರವ್ಯಾಸನ ಕಾಲದಲ್ಲಿ ಪ್ರಚಲಿತವಾಗಿದ್ದ ರಾಮಾಯಣಗಳ ಸಂಖ್ಯಾಬಾಹುಳ್ಯ ತುಂಬಾ ಇದ್ದಿರಬೇಕು. ಆದ್ದರಿಂದಲೇ ಆತ ಹಾಗೆ ಹೇಳಿದ್ದಾನೆ. ಭೂಮಿಯ ಮೇಲೆ ಕಾಲಿಡಲು ಸ್ಠಳವಿಲ್ಲದಂತೆ ರಾಮಾಯಣಗಳು ತುಂಬಿಕೊಂಡಿವೆ ಎನ್ನುತ್ತಾನೆ. ಅನಂತರ ಆ ಕಾಲದಲ್ಲಿದ್ದ ಕವಿಗಳನ್ನು ಗೇಲಿ ಮಾಡುತ್ತಾ ಬಣಗುಕವಿಗಳ ಲೆಕ್ಕಿಪನೇ ಎನ್ನುತ್ತಾನೆ. ಇಧು ಅಹಂಕಾರವೆಂದಲ್ಲ. ತನ್ನ ಆತ್ಮವಿಶ್ವಾಸವನ್ನು ಇಲ್ಲಿ ಪ್ರಕಟಿಸಿದ್ದಾನೆ. ಅಂದರೆ ತಾನು ಅಲ್ಪಕವಿಗಳ ಸಾಲಿನಲ್ಲಿ ಸೇರುವಂತಹವನಲ್ಲ. ಅಂತಹವರನ್ನು ತಾನು ಗಣನೆಗೆ ತೆಗೆದುಕೊಳ್ಳುವವನೇ? ತಾನು ಕುವರ ವ್ಯಾಸ. ಶುಕರೂಪ. ವ್ಯಾಸರ ಕುವರ. ಈ ಅಲ್ಪ ಕವಿಗಳನ್ನು ತಾನು ಕುಣಿಸಿ ನಗುವುದಿಲ್ಲವೇ? ಎಂದು ಹೇಳುತ್ತಾನೆ.

ಜೋಶಿ ಮತ್ತು ಜವಳಿಯವರಿಗೆ ನನ್ನಿಗಳು. ಅರ್ಥ ತುಂಬ ಸೊಗಸಾಗಿದೆ.
ಬಣಗು ಕವಿ ಅರ್ಥ ಸ್ಥೂಲವಾಗಿ ಗೊತ್ತಾಯಿತು. ಆದರೆ ಹಾಗಂದರೇನು? :-(

ಬಣಗು ಕವಿಗಳು ಎಂದರೆ ಅಲ್ಪ , ಹೀನ,ಕೀಳಾದ ಕವಿಗಳು ಎಂದರ್ಥ. ತನ್ನ ಕಾಲದ ಕವಿಗಳನ್ನು ಆತ ಗೇಲಿ ಮಾಡುತ್ತಾನೆ., ಅಂದರೆ ಕುವರವ್ಯಾಸ ಅಹಂಕಾರಿ ಎಂದು ಹೇಳಲಿಕ್ಕಾಗುವುದಿಲ್ಲ. ಹಲಗೆ ಬಳಪವ ಪಿಡಿಯದ ಒಂದು ಅಗ್ಗಳಿಕೆ ಎಂಬ ಆತ್ಮವಿಶ್ವಾಸ ಇಲ್ಲೂ ಕಾಣಿಸಿಕೊಂಡಿದೆ ಅಷ್ಟೆ

ನನ್ನಿ.

[quote=ಜವಳಿ]ಕುವರವ್ಯಾಸ ಅಹಂಕಾರಿ ಎಂದು ಹೇಳಲಿಕ್ಕಾಗುವುದಿಲ್ಲ[/quote]
ನಿಜ. ಈ ತರದ ಆತ್ಮವಿಶ್ವಾಸವನ್ನು ಹಿಂದಿನ ನಮ್ಮ ಅನೇಕ ಕವಿಗಳಲ್ಲಿ ಕಾಣಬಹುದು.