ಶಂಬಾರ ಒಂದು ಮಣಿಪು

0

ಹೊನ್ನ ಮುಸುಕನು ಓಸರಿಸಿ ತಾಯ್ ನನ್ನಿಯೇ
ನಿನ್ನ ಮೊಗವನು ತೊರೇ|
ಬನ್ನ ಬಡುತಿಹೆ ನಾನು ನಿನ್ನ ದರುಶನಕಾಗಿ
ಹಡೆದಮ್ಮ ವರವ ನೀಡೆ|

ಹೀಗೆಂದು ಶಂಬಾ ಜೋಶಿಯವರು ಅವರ 'ಮಹಾರಾಷ್ಟ್ರದ ಮೂಲ' ಹೊತ್ತಗೆಯಲ್ಲಿ ಬೇಡಿಕೊಂಡಿದ್ದಾರೆ. ಇದನ್ನು ಬಿಡಿಸಿ ಹೇಳ್ತಿರಾ? 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮನ್ನಿಪು ನೀಡಿ, ಅದು ಹೀಗಾಗಬೇಕು....

ಹೊನ್ನ ಮುಸುಕನು ಓಸರಿಸಿ ತಾಯ್ ನನ್ನಿಯೇ
ನಿನ್ನ ಮೊಗವನು [b]ತೋರೆ[/b]|
ಬನ್ನ ಬಡುತಿಹೆ ನಾನು ನಿನ್ನ ದರುಶನಕಾಗಿ
ಹಡೆದಮ್ಮ ವರವ ನೀಡೆ|

ಅರ್ಥ ಸರಳ ಇದೆ .
"ಹಿರಣ್ಮಯೇನ ಪಾತ್ರೇನ ...." ಅಂತ ಏನೋ ಸಂಸ್ಕೃತದಲ್ಲೆಲ್ಲೋ ಇದೆ . ಅದರರ್ಥ ; ಸತ್ಯವು ಬಂಗಾರದ ಪಾತ್ರೆಯಲ್ಲಿ ಅಡಗಿದೆ . ಬಂಗಾರ ಅದನ್ನು ಮುಚ್ಚಿದೆ. ಎಂಬರ್ಥದ್ದು ಅದು .

ಸತ್ಯವನ್ನು ಶಂ ಬಾ ಅವರು ಅನ್ವೇಶಿಸುತ್ತಿದ್ದರು .

ಬಂಗಾರದ ಮುಸುಕನ್ನು ಸರಿಸಿ ಓ ಸತ್ಯವೇ ( ನನ್ನಿಯೇ) ನಿನ್ನ ಮುಖವನ್ನು ತೋರಿಸು .

ಕಷ್ಟ ( ಬನ್ನ) ಪಡುತ್ತಿದ್ದೇನೆ ನಿನ್ನ ( ಸತ್ಯದ ) ದರುಷನ( ದರ್ಶನ - ಸಾಕ್ಷಾತ್ಕಾರ? ) ಕ್ಕಾಗಿ , ಹಡೆದಮ್ಮ ( ಕನ್ನಡಮ್ಮ ಇರಬಹುದು ... ಕನ್ನಡದ ಮೂಲ , ಹುಟ್ಟು , ಕಣ್ಮರೆ ಇತ್ಯಾದಿ ವಿಷಯಗಳ ಕುರಿತು ಆಗ ಯೋಚಿಸುತ್ತಿದ್ದರು ಅಂತ ಕಾಣುತ್ತದೆ . ) ಅದಕ್ಕಾಗಿ ವರವ ಕೊಡು ಅಂತ
ಬೇಡಿಕೊಂಡಿದ್ದಾರೆ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ಅದು ಸರಿ , ’ಮಣಿಪು’ ಅಂದ್ರೆ ಏನು ? ಸ್ವಲ್ಪ ಹೇಳ್ತೀರಾ?

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ಮಿಶ್ರಿಕೋಟಿಯವರಿಗೆ ನನ್ನ ಮಣಿಪು :) 'ಮಣಿ' ಅಂದರೆ ಬಾಗು, ತಲೆವಾಗು ಅಲ್ಲವೇ. ಮಣಿಪು ಅಂದರೆ ತಲೆಬಾಗುವಿಕೆ, ನಮನ, ನಮಸ್ಕಾರ, ಪ್ರಾರ್ಥನೆ ಈ ಎಲ್ಲ ತಿಳಿವುಗಳನ್ನು ತೆಗೆದುಕೊಳ್ಳಬಹುದಲ್ಲವೇ?