ಕನ್ನಡ ಪತ್ರಿಕೆಗಳು

0

ಕನ್ನಡ ಪತ್ರಿಕೆಗಳು ಮುಂಚಿನ ಅಂದವನ್ನಾಗಲಿ, ಮುಂಚಿನ ಮೌಲ್ಯಗಳನ್ನಾಗಲಿ ಉಳಿಸಿಕೊಂಡಿಲ್ಲಾ ಅನ್ನುವುದು ನನ್ನ ಅನಿಸಿಕೆ.ಈಗಿನ ಕನ್ನಡ ಪತ್ರಿಕೆಗಳನ್ನು ಕೊಂಡು ಓದಲು ಮನಸ್ಸೇ ಬರುವುದಿಲ್ಲ. ಸುದ್ದಿಗಳನ್ನು ಜಾಹಿರಾತುಗಳ ನಡುವಿನಿಂದ ಹೆಕ್ಕಿ ಓದುವುದೇ ತ್ರಾಸದ ಕೆಲಸ. ನಾನು ದಿನಾಲು ಉದಯವಾಣಿ, ವಿಜಯ ಕರ್ನಾಟಕ ಓದುತ್ತೇನೆ. ನನಗೇಕೊ ಹಳೇ ಉದಯವಾಣಿಯೇ ಖುಷಿ ಕೋಡುವುದು. ಈಗ ಅದರಲ್ಲಿ ಪೇಜು ತುಂಭ ಜಾಹಿರಾತು ಸುದ್ದಿ ಓದುವುದಕಿಂತ ಸುದ್ದಿ ನೋಡೋದು ಮಾತ್ರ. ಮುಂಚಿನ ಒಳ್ಳೆಯ ಅಂಕಣಕಾರರ ಲೇಖನವು ಮಾಯ. ಕ್ರೀಡೆಗೆ ಎರಡು ಪುಟ ಮೀಸಲಿಟ್ಟು ಅಲ್ಲಿ ಜಾಹಿರಾತು ತುಂಬಿಸುತ್ತಾರೆ. ರವಿವಾರದ ಸಾಪ್ತಾಹಿಕ ವಂತು ತುಂಬಾ ಕಳೆ ಗುಂದಿದೆ, ಮುಂಚಿನ ಸೌಂದ್ರಯ ಕಳೆದು ಕೊಂಡಿದೆ. ಓಟ್ಟಾರೆ ಹಣ ಮಾಡೊದೆ ಮುಖ್ಯ ವಾದಂತೆ ತೋರುತ್ತದೆ. ಈಕಡೆ ವಿಜಯ ಕರ್ನಾಟಕ ನಾನು ಬದಲಾಗಿದ್ದೇನೆ ಅಂತ ಹೇಳಿಕೊಂಡು "ಟೈಂಸ್ ಆಫ಼್ ಇಂಡಿಯ"ದ ಕನ್ನಡ ಅಚ್ಚಿನ ಹಾಗೆ ಕಾಣಲಾರಂಬಿಸಿದೆ. ನೀವೇನಂತೀರಿ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

--ಟೈಂಸ್ ಆಫ಼್ ಇಂಡಿಯ"ದ ಕನ್ನಡ ಅಚ್ಚಿನ ಹಾಗೆ ಕಾಣಲಾರಂಬಿಸಿದೆ---

ಇದು ನಿಜ. ಅದರಲ್ಲಿನ ಸುದ್ದಿಗಳು ಜಾಹಿರಾತುಗಳ ಮಧ್ಯ ಕಳೆದು ಹೋಗುತ್ತಿವೆ. ಈಗ ವಿ.ಕ ಬರೀ ಝಲಕ್ ಝಲಕ್ !

ವಿಜಯ್ ಕರ್ನಾಟಕ ಅಂತು ಸಿಕ್ಕಾಪಟ್ಟೆ ಹಾಳಗ್ತಾ ಇದೆ..ಅದು ಟೈಮ್ಸ್ ಆಫ್ ಇಂಡಿಯಾ ದ ಕನ್ನಡ ಪತ್ರಿಕೆ ತರ ಕಣ್ತ ಇದೆ..ಇಧೆ ರೀತಿ ಮುಂದುವರಿದರೆ ಅದು ಮುಚ್ಚು ಹೋಗಬಹುದು..ರವಿ ಬೆಳೆಗರೇ ಮೊದಲು ಟೈಮ್ಸ್ ವಿರೋಧಿ ಅದವನು,ಈಗ ಅದೇ ಪ್ರಕಾಶನದ ಪೇಪರ್ ನಲ್ಲಿ ಬರಿತ ಇರೋದು ಅವನ ಅವಕಾಶವದಿತನಕ್ಕೆ ಸಾಕ್ಷಿಯಾಗಿದೆ.. ಮತ್ತೆ ಆ ಪ್ರತಾಪ್ ಸಿಂಹ ಅವರು ಸಹ ಬರಿ ಒಂದೇ ರೀತಿ ಹಿಂದೂ ಮುಸ್ಲಿಂ ಗ್ಗೆ ಬರೀತಾ ತಮ್ಮಲ್ಲಿ ವೈವಧ್ಯಥೆ ಇಲ್ಲ ಅಂತ ಪ್ರೂವೆ ಮಾಡ್ತಾ ಇದ್ದಾರೆ.. ವಿಷೆಶ್ವರ ಭಟ್ಟರು ಪರ್ವಾಗಿಲ್ಲ, ಒಳ್ಳೆ ಗಂಭೀರ ಲೇಖನ ಜೊತೆ ಹೊಸತನವನ್ನು ಹೇಳುತ್ತ ಇದ್ದಾರೆ.. ಅದ್ರೆ ಬೇಸರ ಅಂದ್ರೆ ಒಂದು ಒಳ್ಳೆಯ ಪತ್ರಿಕೆ ಕೇವಲ ಹಣದಸೆಗಾಗಿ ಯಾವ ಹಾಧಿ ಹಿಡಿತಾ ಇರೋದು..? ಸಂಕೆಶ್ವರ ಅವರು ಪತ್ರಿಕೆ ಮಾರಿ ತುಂಬಾ ಮೋಸ ಮಡಿ ಬಿಟ್ರು..