ಕನ್ನಡದಲ್ಲಿ ಸೈನ್ಸ್ ಫಿಕ್ಷನ್

5

ಕನ್ನಡದಲ್ಲಿ ಸೈನ್ಸ್ ಫಿಕ್ಷನ್ ಬರವಣಿಗೆಗಳನ್ನು ಹುಡುಕುತ್ತಿದ್ದೆ. ಹಲವರ ಬಳಿ ವಿಚಾರಿಸಿದೆ. ನಮ್ಮ ಮಾಮ ತುಂಬ ಕನ್ನಡ ಪುಸ್ತಕಗಳನ್ನು ಓದ್ತಿರ್ತಾರೆ - ಅವರ ಬಳಿ ವಿಚಾರಿಸಿದಾಗ ಕನ್ನಡದಲ್ಲಿ ಸೈನ್ಸ್ ಫಿಕ್ಷನ್ ಬರೆದ ಕೆಲವರ ಹೆಸರುಗಳು ತಿಳಿದುಬಂತು.

"ಮನು" ಎಂಬ ನಾಮಾಂಕಿತದಡಿ ಬರೆಯುವ ರಂಗನಾಥನ್, ರಾಜಶೇಖರ ಭೂಸನೂರಮಠ, ಚಿರಪರಿಚಿತರಾದ ನಾಗೇಶ್ ಹೆಗಡೆ ಹಾಗು ಇನ್ನೂ ಹಲವರು ಕನ್ನಡದಲ್ಲಿ ಸೈನ್ಸ್ ಫಿಕ್ಷನ್ ಬರೆದಿದ್ದಾರೆಂದು ತಿಳಿದುಬಂತು. ಪ್ರಿಸ್ಮ್ ಪಬ್ಲಿಷರ್ಸ್ ಹೊರತಂದಿರುವ "ಕನ್ನಡದಲ್ಲಿ ವೈಜ್ಞಾನಿಕ ಕಥೆಗಳು" ಪುಸ್ತಕದಲ್ಲಿ ಹಲವಾರು ಬರಹಗಳಿವೆಯಂತೆ.

ಇದಲ್ಲದೆ ಸ್ವತಃ ಕೆ ಪಿ ಪೂರ್ಣಚಂದ್ರ ತೇಜಸ್ವಿಯವರು ಬರೆದ "ಕರ್ವಾಲೋ" ಕೂಡ ಸೈನ್ಸ್ ಫಿಕ್ಷನ್ ರೀತಿಯಲ್ಲಿತ್ತು.

ಮಾಮ ಹೇಳುವಂತೆ "ಮನು"ರವರು ಬರೆದ "ಮೃಗಶಿರ", ರಾಜಶೇಖರ ಭೂಸನೂರಮಠ ಬರೆದ "ವಜ್ರಗಳು, ಒಣಕೊಬ್ಬರಿ ಮತ್ತು e=mc2" ಓದಲು ಬಹಳ ಚೆನ್ನಾಗಿದೆಯಂತೆ.

ಸೈನ್ಸ್ ಫಿಕ್ಷನ್ ಬಗ್ಗೆ ಮಾತನಾಡುವಾಗ ತಮ್ಮ ಸಿನಿಮಾ ಮೂಲಕ ವಿಶ್ವದಾದ್ಯಂತ ಛಾಪು ಮೂಡಿಸಿದ ನಿರ್ದೇಶಕ ಸತ್ಯಜಿತ್ ರೇ ಬರೆದ ಪುಸ್ತಕಗಳು ನೆನಪಾಗುತ್ತದೆ. ಅವರು ತಮ್ಮ ಮಾತೃ ಭಾಷೆ ಬೆಂಗಾಲಿಯಲ್ಲಿ ಬರೆದ "ಪ್ರೊಫೆಸರ್ ಶೋಂಕು" ಪುಸ್ತಕಗಳ ಇಂಗ್ಲೀಷ್ ಅನುವಾದ ಸಾಕಷ್ಟು ಅಚ್ಚಾಗಿವೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮನು ಎಂಬ ಹೆಸರಿನಲ್ಲಿ ಬರೆಯುವವರ ನಿಜವಾದ ಹೆಸರು ಪಿ.ಎನ್. ರಂಗನ್. ಇವರ ಹಲವು ಕಾದಂಬರಿಗಳು ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿದ್ದವು. ಸೈನ್ಸ್ ಫಿಕ್ಷನ್ ಎನ್ನುವುದಕ್ಕಿಂತ, ಕುತೂಹಲಕಾರಿ ಕಥೆಗಳು ಇವರದು ಎನ್ನಬಹುದು.

ಮತ್ತೊಬ್ಬ ಕಥೆಗಾರ ಸಂಜಯ ಹಾವನೂರ ಅವರು ಹಲವು ಈ ಮಾದರಿಯ ಕಥೆಗಳನ್ನು ಬರೆದಿದ್ದಾರೆ. ಇವರ ಲಿಫ್ಟ್ ಎಂಬ ಕಥೆ ಮಯೂರದಲ್ಲಿ ಬಂದದ್ದು ನೆನಪಿದೆ ನನಗೆ. ಅಲ್ಲದೆ ಅವರು ಮರಾಠಿಯ ಜಯಂತ ನಾರಳಿಕರ್ ಅವರ ಕಥೆಗಳನ್ನೂ ಕನ್ನಡಿಸಿದ್ದಾರೆ ಎಂದು ನೆನಪು. ಒಂದು ಸುಪರ್ ನೋವಾ ಸ್ಫೋಟದ ಬಗ್ಗೆಯ ಸ್ಫೋಟ(?) ಅನ್ನುವ ಕಥೆ ಕಸ್ತೂರಿಯ ಪುಸ್ತಕ ವಿಭಾಗದಲ್ಲಿ ಪ್ರಕಟವಾಗಿತ್ತು.

ಇವೆರಡೂ ೮೦-೮೫ ರ ಸುಮಾರಿಗೆ ಬಂದವಾದರೂ, ಇವತ್ತು ಓದಿದಷ್ಟು ನಿಚ್ಚಳವಾಗಿವೆ!

-ಹಂಸಾನಂದಿ

ಧನ್ಯವಾದಗಳು, ಹಂಸಾನಂದಿಯವರೆ. ಇಷ್ಟೆಲ್ಲ ವಿಷಯ ಗೊತ್ತಿರಲಿಲ್ಲ.

ನಾರಳೀಕರ್ ಬಗ್ಗೆ ಕೇಳಿದ್ದೆ. ಆದರೆ ಕನ್ನಡದಲ್ಲಿ ಈ ರೀತಿ ಫಿಕ್ಷನ್ ಬರೆದವರು ಕಡಿಮೆ?
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ಬಹಳ ಹಿಂದೆ 'ಸುಧಾ' ವಾರಪತ್ರಿಕೆಯಲ್ಲಿ 'ಅಟ್ಲಾಂಟಿಸ್' ಎಂಬ ಧಾರವಾಹಿ(??) ಓದಿದ ನೆನಪು. ಬಹಳ ಸ್ವಾರಸ್ಯಕರವಾದ ವೈಜ್ನಾನಿಕ ಕಥೆ. ಶ್ರೀ ರಾಜಶೇಖರ ಭೂಸನೂರಮಠ ಅವರೇ ಬರೆದಿದ್ದಿರಬೇಕು.

ಶಾಮಲ

ಧನ್ಯವಾದಗಳು, ಶ್ಯಾಮಲರವರೆ. ಒಮ್ಮೆ ನಮ್ಮ ಮಾಮನ ಮನೆಯ ಹಳೆಯ ಸುಧಾ ಆರ್ಕೈವ್ ಕೆದಕಿ ಇದನ್ನು ಓದಿನೋಡಬೇಕು. :)
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ಮನು ಅವರ "ಮಹಾ ಸಂಪರ್ಕ" ಇತ್ತೀಚಿನ ದಿನಗಳಲ್ಲಿ ಬಂದಂತಹ ಉತ್ತಮ science fiction ಈ ಸಂಶೋಧನಾತ್ಮಕ ಗ್ರಂಥದಲ್ಲಿ ಲೇಖಕರು ಭಾರತದ ಮೇಲೆ ಬೇರೊಂದು ಗ್ರಹದಿಂದ ಬಂದು ನೆಲೆಸಿದ ಜನರು ನಡೆಸಿದ ಪ್ರಯೋಗಳ ತರ್ಕ ಹಾಗೂ ಸಾಧ್ಯತೆಗಳನ್ನು ತೆರೆದಿಡುತ್ತಾರೆ.
ಮಹಾಭಾರತವನ್ನು ಈ ದ್ರಶ್ತಿಕೋನದಿಂದ ನೋಡಿದ ಪ್ರಾಯಶ: ಪ್ರಥಮ ಗ್ರಂಥ. (ಪರ್ವದ ಛಾಯೆ ಮೂಡಿದರೂ, ಭಿನ್ನ ದ್ರಶ್ಟಿಕೋನ)
ಸುಮಾರು ೮೦೦ ಪುಟಗಳ ಈ ಗ್ರಂಥ ನಿಂತ ನಿಲುವಿನಲ್ಲಿಯೇ ಓದಿಸಿಕೊಂಡು ಹೋಗುವಂತಹುದು

ವಂದನೆಗಳು - ಒಮ್ಮೆ "ಮಹಾ ಸಂಪರ್ಕ" ಕೂಡ ಓದಿ ನೋಡಬೇಕು. "ಮನು" ರವರ ಬಗ್ಗೆ ಮತ್ತಷ್ಟು ಮಾಹಿತಿ ಇದ್ದರೆ ಹಂಚಿಕೊಳ್ಳಿ - ಒಮ್ಮೆ ಅವರೊಂದಿಗೆ [:http://sampada.net/podcasts|ಸಂಪದ ಪಾಡ್ಕ್ಯಾಸ್ಟ್] ಕೂಡ ಮಾಡಬಹುದು. :)
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]