ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು

0

http://vijaykarnatakaepaper.com/pdf/2007/11/01/20071101a_008101003.jpg

ಹೋರಾಟ, ಹಾರಾಟ ಸಾಕು...ಕನ್ನಡ ಮಾತಾಡಬೇಕು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇವರು ಹೀಗೆ ಬರೀತಾರೆ. ಅದರ ಮರುದಿನನೇ "ಕಹಾ ಗಯೆ ವೋ ದಿನ್" (ಬಾನುವಾರದ ವಿ.ಕ ನೋಡಿ) ಅಂತ ಹಿಂದೀಲಿ ತಮ್ಮ ಸುದ್ದಿಯೋಲೆಯಲ್ಲಿ ತಲೆಬರಹ ಹಾಕ್ತಾರೆ.

ಇದು ಇಬ್ಬಂದಿತನವಲ್ಲವೆ? :)

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ಈ ಲೇಖನ thatakannada.com ನಲ್ಲಿ ಪ್ರಕಟವಾದಾಗ ನನ್ನ ಪ್ರತಿಕ್ರಿಯೆ ಕೆಳಕಂಡಂತಿತ್ತು.
"ಕನ್ನಡಾ? ಅದಿ ಎನ್ನಡಾ?
ಕನ್ನಡ ಯಾರಿಗೆ ಸ್ವಾಮಿ ಬೇಕು? ಕನ್ನಡದವರಿಗೆ ತಾನೇ? ಕನ್ನಡದಿಂದ ಯಾರು ತಾನೆ ಉಧ್ಧಾರ ಆಗಿದ್ದಾರೆ? ವ್ಯಾಪಾರ ವಹಿವಾಟುಗಳಲ್ಲಿ ಕನ್ನಡಕ್ಕೇನು ಕೆಲಸ? ಕನ್ನಡ ಬರೀ ಸಾಹಿತ್ಯ, ಸಂಗೀತ, ಕಲೆಗಾಗಿ ಮಾತ್ರ ಸೀಮಿತವಾಗಿದೆಯಲ್ಲವೇ? ಕನ್ನಡ ಮಾತಾಡಿ ನಾಲಿಗೆ ತೀಟೆ ತೀರಿಸ್ಕೋಬೇಕಾದವ್ರು ಬೇಕಾದ್ರೆ ಕನ್ನಡ ಕಲೀಲಿ. ಎಲ್ರಿಗೂ ಯಾಕೆ ಸ್ವಾಮಿ ಒತ್ತಾಯ? ಪರಭಾಷೀಯರೇ ಬಹುಸಂಖ್ಯಾತರಾಗಿರುವ ಬೆಂಗಳೂರಿನಲ್ಲಿ ಅವಶ್ಯಕತೆ ಇಲ್ಲದಿದ್ದರೆ ವೃಥಾ ಶ್ರಮವಹಿಸಿ ಏಕೆ ಅಷ್ಟು ಭಾಷೆಗಳನ್ನು ಕಲಿಯಬೇಕು? ಮುಂದೆ ಒಳ್ಳೇ ಕೆಲಸ ಸಿಕ್ಕು ಹಣ ಸಂಪಾದಿಸೋಕ್ಕೆ ಇಂಗ್ಲೀಷ್ ಅಲ್ಲವೇ ಮುಖ್ಯ. ಅದನ್ನು ಕಲಿತರಾಯಿತು. ಕನ್ನಡ ಕಟ್ಕೊಂಡು ನಮಗೇನು ಅಂತ ತಾತ್ಸಾರ ನಮ್ಮ ಯುವ ಜನರಿಗೆ.

ಕನ್ನಡ ಉಧ್ಧಾರ ಮಾಡೋದಕ್ಕೇ ಸಾಕಷ್ಟು ಬೇರೆ ಕೆಲಸವಿಲ್ಲದ ಜನ ಇದ್ದಾರೆ. ಅವ್ರು ಮಾಡಲಿ ಪ್ರತಿಭಟನೆ, ಕಪ್ಪು ಬಾವುಟ ಪ್ರದರ್ಶನ ಇತ್ಯಾದಿಗಳನ್ನ. ಕನ್ನಡದ ನಾಮ ಫಲಕ ಬೇಕೆ? ಹಾಕಿದ್ರಾಯ್ತು. ಕೆಳಗೆ ಇಂಗ್ಲೀಷ್ನಲ್ಲಂತೂ ಇರುತ್ತಲ್ಲ. ಹೋಟೆಲ್‍ಗಳಲ್ಲಿ ತಿಂಡಿ ಪಟ್ಟಿ ಕನ್ನಡದಲ್ಲಿ ಬೇಕೆ? ಪ್ರಿಂಟ್ ಮಾಡಿಸಿ ಕೊಟ್ಟರಾಯ್ತು ಬಿಡಿ. ಟೀ ಶರ್ಟ್ ಹಾಕ್ಕೋಬೇಕೆ? ಅದೂ ಮಾಡೋಣ ಬಿಡಿ.
ಇನ್ನಾದ್ರೂ ನಮ್ಮನ್ನ ನಮ್ ಪಾಡಿಗೆ ಬಿಡ್ತೀರಾ ಅಂತ ಕೇಳ್ತಾರೆ ಈಗಿನ ಹುಡುಗ್ರು.

“ಟೈಮ್ಸ್” ಓದೋ ಬೆಂಗಳೂರು, “ವಿಜಯಕರ್ನಾಟಕ” ಓದೋ ಬೆಂಗಳೂರುಗಳು ಪೂರ್ತಿ ಭಿನ್ನ. ಅಲ್ಲಿರೋರು ಇಲ್ಲಿಲ್ಲ. ಇಲ್ಲಿರೋರು ಅಲ್ಲಿಲ್ಲ. ನಾವುಗಳು ನಮ್ಮ ಪ್ರಪಂಚದಲ್ಲಿದ್ದುಕೊಂಡು ಕನ್ನಡ ಕನ್ನಡ ಅಂತ ಎಷ್ಟು ಶಂಖ ಹೊಡಕೊಂಡರೂ ಅದನ್ನ ಕೇಳಬೇಕಾದ ಜನಗಳಿರುವ ಪ್ರಪಂಚಕ್ಕೆ ತಲುಪೋಲ್ಲ. ಬರಿಯ ಅರಣ್ಯರೋದನ ನಮ್ಮದು!

ಅಂದ ಹಾಗೇ, ನಿಮ್ಮ “ಟೈಮ್ಸ್ ಆಫ್ ಇಂಡಿಯಾ” ಪತ್ರಿಕೆ “ಲೀಡ್ ಇಂಡಿಯಾ” ಎಂಬ ಸ್ಪರ್ಧೆ ನಡೆಸುತ್ತಿದೆ. ಇದರ ಉದ್ದೇಶ್ಯ ರಾಷ್ಟ್ರ ನಿರ್ಮಾಣದ ಕಾರ್ಯದಲ್ಲಿ ತೊಡಗಲು ಸಿದ್ಧರಿರುವ ಯುವ ಪೀಳಿಗೆಯ ಸ್ಫೂರ್ತಿವೆತ್ತ ಧುರೀಣರನ್ನು ಗುರುತಿಸುವುದು. ಹೀಗೆ ಬೆಂಗಳೂರನ್ನು ಪ್ರತಿನಿಧಿಸಲು ಆಯ್ಕೆಯಾದವರು ಒಬ್ಬರು ಉತ್ತರ ಭಾರತೀಯರು. ವಿಜಯಕರ್ನಾಟಕ ಏಕೆ ಈ ಸ್ಪರ್ಧೆಯ ಬಗ್ಗೆ ಅಷ್ಟು ತಲೆ ಕೆಡಿಸಿಕೊಳ್ಳಲಿಲ್ಲ? ಅದೇಕೆ ಸಾಕಷ್ಟು ಸಂಖ್ಯೆಯಲ್ಲಿ ನಮ್ಮ ಕನ್ನಡದ ಯುವ ಜನಾಂಗ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲಿ ಎಂದು ಹುರಿದುಂಬಿಸಲಿಲ್ಲ? ನಮ್ಮ ಕನ್ನಡದ ಯುವಕರಿಗೆ ಹುಮ್ಮಸ್ಸಿಲ್ಲವೇ? ಉತ್ಸಾಹವಿಲ್ಲವೇ?"

ಇದಕ್ಕೆ ಅವರ ಉತ್ತರ ಇನ್ನೂ ಸಿಕ್ಕಿಲ್ಲ.

ಈ ನಡುವೆ ವಿ. ಕ. ದಲ್ಲಿನ ಜಾಹೀರಾತುಗಳನ್ನು ನೋಡಿದ್ದೀರಾ. ಮುಕ್ಕಾಲು ಮೂರು ಪಾಲು ಜಾಹೀರಾತುಗಳೆಲ್ಲ ಇಂಗ್ಲೀಷ್ ಭಾಷೆಯದೇ. ಅದೇಕೆ ಅನುವಾದ ಮಾಡೋಕೆ ಒತ್ತಾಯಿಸಲಿಲ್ಲ? ಪಾಪ ಯಾರೋ ಇಂಗ್ಲ್ಲೀಷ್ ಲೇಖನ ಕೊಟ್ಟವರ ಮೇಲೆ ಆ ಹುಡುಗಿ ಮುಂದೆ ಹಾರಿ ಹಾಯ್ದು ಹೀರೋ ಅನ್ನಿಸಿಕೊಂಡ್ರಲ್ಲಾ. ಇಲ್ಲೇಕೆ ಮಾಡೋಲ್ಲ? ಯಾಕೇಂದ್ರೆ ಅವರ "commercial Interests" ಪ್ರಧಾನವಲ್ಲವೇ?

ಹಾಗೇನೇ ಬೆಂಗಳೂರಿನಲ್ಲಿ ಇರೋ ಕನ್ನಡದವರು ಕನ್ನಡದ ಬಗ್ಗೆ ತೋರಿಸೋ ಕಾಳಜಿ ಕೂಡ.

ಇನ್ನು ಅವರ ರಾಜ್ಯೋತ್ಸವದ ಬಗ್ಗೆ ಪ್ರಕಟಿಸಿದ ಕನ್ನಡಪರ ಲೇಖನಗಳದೆಷ್ಟು ಉನ್ನತ ಮಟ್ಟದ್ದಾಗಿತ್ತು ಅನ್ನೋದನ್ನು ಓದುಗರೇ ನಿರ್ಧರಿಸಬೇಕು.

ಬರೀ ಕನ್ನಡ ಮಾತಾಡಿಬಿಟ್ರೆ ಕನ್ನಡಿಗರ ಅಭಿವೃಧ್ಧಿ ಆಗುತ್ತೆ ಅಂದುಕೊಳ್ಳೋದು ಮೂರ್ಖತನ. ಪರಭಾಷೀಯರು ನಮ್ಮಲ್ಲಿ ಜಾಸ್ತಿ ಬೆರೆತು ನಮ್ಮನ್ನು ಮತ್ತು ನಮ್ಮ ಸಂಸ್ಕೃತಿ ಗೌರವಿಸುವ ಹಾಗೆ ಪ್ರೇರೇಪಿಸಲು ಏನು ಮಾಡಬೇಕು ಅಂತ ಯೋಚಿಸುವುದು ಮುಖ್ಯ. ಅವರನ್ನು ಹಂಗಿಸೋದು,ಕಡ್ಡಾಯ ಮಾಡೋದು, ಪ್ರತಿಭಟಿಸೋದು ಇವೆಲ್ಲ ಉಪಯೋಗವಿಲ್ಲದ ಕೆಲಸ.

-ನವರತ್ನ ಸುಧೀರ್

ವೈಭವ,

ಎರಡು ಹಿ೦ದಿಯ ಪದಗಳನ್ನು ಬಳಸಿದ್ದರಿ೦ದಾಗಿ ಕನ್ನಡಕ್ಕೇನೂ ಕೊರತೆಯಾಗಲಿಲ್ಲ. ನಮ್ಮಲ್ಲಿ ಹಿ೦ದಿ ಸೇರಿಸಿ ಮಾತಾಡುವವರು ಇಲ್ಲದ೦ತಾಗುವವರೆಗೂ ಅದು ಇಬ್ಬಂದಿತನವಲ್ಲ. 'ಸ್ಪರ್ಶ' ಚಿತ್ರದಲ್ಲಿ ಸಿಹಿಕಹಿ ಚ೦ದ್ರು ಹಿ೦ದಿ ಬೆರೆಸಿ ಮಾತಾಡುವಾಗ ಕಿರಿಕಿರಿಯಾಗಲಿಲ್ಲವೇ?
ಕನ್ನಡದಲ್ಲಿ ಇತರ ನುಡಿಗಳಿ೦ದ ಅನುವಾದಗೊಳ್ಳದ ಧಾರಾವಾಹಿಗಳನ್ನು ಪ್ರಕಟಿಸುವ ಒ೦ದೇ ಒ೦ದು ಮ್ಯಾಗಝಿನ್ ನಾನು ಕ೦ಡ೦ತೆ ಇಲ್ಲ. ಗೊತ್ತಿದ್ದವರು ತೋರಿಸಿಕೊಡಿ.

ಇತ್ತೀಚೆಗೆ ಟಿವಿಯಲ್ಲಿ ಮಲೆಯಾಳದ ನಿರ್ದೇಶಕ ಪ್ರಿಯದರ್ಶನ್‍ರ ಸ೦ದರ್ಶನ ಪ್ರಸಾರವಾಗುತ್ತಿತ್ತು.(ಮಲೆಯಾಳದ ಅತ್ಯುತ್ತಮ ನಿರ್ದೇಶಕ ಪ್ರಿಯದರ್ಶನ್‍, ಹಿ೦ದಿಯಲ್ಲೂ ಮನ್ನಣೆ ಗಳಿಸಿದ್ದಾರೆ. ಹಿ೦ದಿಯಲ್ಲಿ ಭೂಲ್‍ಭುಲಯ್ಯಾ ಸೇರಿದ೦ತೆ ಹಲವು ಚಿತ್ರಗಳನ್ನು ನಿರ್ದೇಶಿಸಿದ್ದಾರೆ.) ಇ೦ಗ್ಲಿಷ್ ಬೆರೆಸಿದ ಮಲೆಯಾಳದಲ್ಲೇ ಮಾತಾಡುತ್ತಿದ್ದರು. ನಿರೂಪಕಿಯೂ ಚೆನ್ನಾಗಿ ಇ೦ಗ್ಲಿಷ್ ಮಾತಾಡುತ್ತಿದ್ದರು. ಮಾತಿನ ನಡುವೆ ನಿರೂಪಕಿ ಕೇಳಿದರು, 'ನೀವು ಅವರಿಗೆ ಯಾವ ಭಾಷೆಯಲ್ಲಿ ವಿವರಿಸುತ್ತೀರಿ' ಅ೦ತ. ಅವರ ಉತ್ತರ 'ಮಲೆಯಾಳದಲ್ಲಿ'. ಅ೦ದರೆ ಮಲೆಯಾಳಿಯೊಬ್ಬ ಯಾವುದೇ ನುಡಿಯನ್ನಾಡಿದರೂ ಅವರಿಗೆ ಅದು ಮಲೆಯಾಳವೇ.

ನವರತ್ನ ಸರ್,
ಪರಭಾಷೀಯರು ನಮ್ಮಲ್ಲಿ ಜಾಸ್ತಿ ಬೆರೆತು ನಮ್ಮನ್ನು ಮತ್ತು ನಮ್ಮ ಸಂಸ್ಕೃತಿ ಗೌರವಿಸುವ ಹಾಗೆ ಪ್ರೇರೇಪಿಸಲು ಏನು ಮಾಡಬೇಕು ಅಂತ ಯೋಚಿಸಿದರೆ ಮೊದಲನೆಯದಾಗಿ ನಮ್ಮದರ ಬಗೆಗೆ ಅಕ್ಕರೆಯಿರಬೇಕು. ನಮ್ಮಲ್ಲಿ ಅದು ಇಲ್ಲದಿದ್ದಾಗ ಇನ್ನೊಬ್ಬರನ್ನು ಒತ್ತಾಯಿಸುವುದಲ್ಲ. ನನಗೆ ಬೆ೦ಗಳೂರಿನಲ್ಲಿ ಸಿಗುವ ಸ್ಥಾನ ಒಬ್ಬ ಮಲೆಯಾಳಿಯದ್ದೇ. 'ನಿನ್ ಚಹರೇನೇ ಹ೦ಗಿದೆಯಲ್ಲೋ', 'ಕಾಸರಗೋಡು ಕೇರಳ ಅಲ್ವಾ ಗುರು', 'ನಿಮ್ ರಾಜ್ಯದ್ ಭಾಷೇನ ನೀವು ಮೊದ್ಲು ಗೌರವಿಸ್ಬೇಕು', 'ಕರ್ನಾಟಕದಲ್ಲಿ ಹುಟ್ಟಿರೋರು ಮಾತ್ರ ಕನ್ನಡಿಗರು', 'ಕನ್ನಡ ಹೆ೦ಗ್ ಬರುತ್ತೆ', 'ಕಾಸರಗೋಡಿನಲ್ಲಿ ಕನ್ನಡವನ್ನ ಯಾರು ಮಾತಾಡುತ್ತಾರೋ...ನಾನ೦ತೂ ನೋಡಿಲ್ಲಪ್ಪ!' ಇ೦ತಹ ಕಮೆ೦ಟುಗಳನ್ನು ಕನಿಷ್ಠ ಐನೂರು ಬಾರಿಯಾದರೂ ಬೆ೦ಗಳೂರಿನಲ್ಲಿ ಕೇಳಿದ್ದೇನೆ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು

ರೀ ಬೋಳುಂಬು ಮಲೆಯಾಳಿಗಳೆ ( :) ತಮಾಷೆಗೆ... )
ನಿಮ್ಮ ಮನಸ್ಸಿನಲ್ಲಿ ಅದೆಷ್ಟು.. ಕಾಸರಗೋಡು ಕನ್ನಡದ ಬುಗ್ಗೆ ಕುದಿತಿದೆಯಂತ ಅರಿವಾಗ್ತಿದೆ ನನಗೆ..
ಕರ್ನಾಟಕದ ಸುಮಾರು 15% ದಿಂದ 20% ಸಾಹಿತಿಗಳು ಕಾಸರಗೋಡಿನಲ್ಲಿದ್ದಾರೆ ಅಂತ ಕೇಳಿದ್ದೆ..
ಗೋವಿಂದ ಪೈಗಳು ಕಾಸರಗೋಡನ್ನು ಕನ್ನಡಕ್ಕೆ ಸೇರಿಸಬೇಕು ಅಂತ ಅದೆಷ್ಟು ಹೆಣಗಾಡಿದರು... ಪಾಪ ಅವರು ಇರೋವರೆಗೂ ಅದಾಗಲೆ ಇಲ್ಲ.
ನನಗೂ ತುಂಬಾ ಬೇಜಾರು... ಆದರೆ ಹೀಗೆ ಖುಷಿ ಪಡ್ತೀನಿ. ಏನೆಂದರೆ.. ಪಕ್ಕದ ರಾಜ್ಯದಲ್ಲೊಂದು ಜಿಲ್ಲೆಯಲ್ಲಿ ಕನ್ನಡದ ಪೆಂಪು ಇದೆ.. ಕಂಪೂ ಇದೆ ಅಂತ... ಮುಂದೊಂದು ದಿನ ಸೇರುತ್ತೆ ಅಂತ ಆಸೆ ಇದೆ ನನ್ನಲ್ಲಿ..

ಅಣ್ಣ,

ಎರಡು ಪದ ಅಂತ ಅಲ್ಲ. ಒಂದು 'ಸಮಸ್ತ ಕನ್ನಡಿಗರ ಹೆಮ್ಮೆ' ಸುದ್ದಿಯೋಲೆಯಲ್ಲಿ ತಲೆಬರಹ ತೀರ ಹಿಂದಿಯಲ್ಲೇ ಇರಬೇಕ? ಎಲ್ಲೊ ಒಂದು ಕಡೆ ಇದ್ದಿದ್ದರೆ ನಾನು ಹೇಳುತ್ತಿರಲಿಲ್ಲ. ಒಂದು ತಲೆಬರಹದ ತೀರ ಬರೀ ಹಿಂದಿನೇ ಇದೆ. ಮತ್ತೆ ಯಾಕೆ ಹಿಂದಿನ ದಿನವೇ ಎಲ್ಲರೂ ಕನ್ನಡದಲ್ಲೇ ಮಾತಾಡಬೇಕು ಅವರು ಅಪ್ಪಣೆಯಿತ್ತರು. ಅದಕ್ಕೆ ಇಬ್ಬಂದಿತನವೆಂದೇ ಆಟೇ
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ಚರ್ಚೆಯಲ್ಲಿ ಇಷ್ಟೊಂದು ತರಕಾರಿ ತುಂಬಿದರೆ ಹೇಗೇ? ಸ್ವಲ್ಪ ನಮ್ಮ ತರಹದವರ ಬಗ್ಗೆಯೂ ಯೋಚನೆ ಮಾಡಿ. ಕುರಿ ಬಾಡು, ಹಂದಿ ಬಾಡು, ಕೋಳಿ ತಿನ್ನುವವರೂ ಇದ್ದೀವಲ್ಲ. ಹುರುಕುಲು, ಎಸರು ಎಂಬ ಎರಡು ಪದದೊಳಗೇ ಬಾಡೂಟದ ಎಲ್ಲಾ ವಿಭವಗಳನ್ನೂ ವರ್ಣಿಸುವ ಸ್ಥಿತಿಯಲ್ಲಿ ನಾವಿದ್ದೀವಿ. ಹೆಚ್ಚಿನದು ಬೇಕೆಂದರೆ ಕಬಾಬ್, ಖೈಮಾ ಅಂತಾ ಉರ್ದುವಿಗೆ ಇಲ್ಲದಿದ್ದರೆ ಫ್ಱೈ, ಡ್ರೈ ಅಂತ ಇಂಗ್ಲಿಷಿಗೆ ಹೋಗಲೇ ಬೇಕಾದ ಸ್ಥಿತಿ ಸ್ವಾಮಿ ನಮ್ಮದು :) 

ಇಸ್ಮಾಯಿಲ್ ನನ್ನ ಬ್ಲಾಗ್: http://ismail.in

ಶ್ರೀ ಇಸ್ಮಾಯಿಲ್,
ಇಲ್ಲಿ ಸಾಧ್ಯವಾದರೆ ಕನ್ನಡದ ಬಗೆಗೆ ಹೋರಾಟವನ್ನೋ ಹಾರಾಟವನ್ನೋ ಮಾಡಿ.ಕೂಟಿನ ಬಗೆಗಿನ ಚರ್ಚೆ ಇನ್ನೊ೦ದು ಎಳೆಯಲ್ಲಿ ಮು೦ದುವರಿದಿದೆ. [:)]
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು