ಈ ಹಾಡಿನ ಅರಿತ ಏನು ಮತ್ತು ಯಾವ ರಾಗದಲ್ಲಿದೆ?

0

ಈ ಹಾಡು 'ಮಲಯಮಾರುತ' ಸಿನಿಮಾದ್ದು.
ಬರೆದವರು : ಮುತ್ತುಸ್ವಾಮಿ ದೀಕ್ಶಿತರ್
ಇನಿ: ವಿಜಯಬಾಸ್ಕರ್

"ಮಥುರಾಂಬಾಭಜರೀ ರೇ ಮಾನಸ ಮದನಜನಕಾದಿ ಗುರುಕುಲಸೇವಿತ
ಮಥುರಾಪುರಿ ನಿವಾಸಿನಿ ಧನಿನಿ|| ಮನುಕುಬೇರಾದಿಮನೋಲ್ಲಾಸಿನಿ|

ಮಾತಂಗತನಯ ಮಧುಕರವೇಣಿ ಮಾಧವಾರಭಯ ವರಪ್ರದಾಯಿನಿ
ಭಕ್ತವಿಶ್ವಾಸಿನಿ ಸುವಾಸಿನಿ ಶ್ರೀಸ್ತವರಾಜನುದಿಪ್ರಾಸಿದಿನಿ"

ಇದು ಯಾರ ಬಗ್ಗೆ ಬರೆದಿರುವುದು? ಮತ್ತು ಯಾವ ರಾಗದಲ್ಲಿದೆ? ದಯವಿಟ್ಟು ತಿಳಿಸಿ.

[ಹಾಡಿನಲ್ಲಿ ತಪ್ಪಿದ್ದರೆ ಮನ್ನಿಸಿ ]

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೂಲತಃ ದೀಕ್ಷಿತರ ಈ ಕೃತಿ ಸ್ಠವರಜ ರಾಗದಲ್ಲಿದೆ. (ಸಂಗೀತಕಲಾನಿಧಿ ಟಿ ಕೆ ಗೋವಿಂದರಾವ್ ಅವರ ದೀಕ್ಷಿತರ ಕೃತಿಗಳ ಸಂಪೂರ್ಣ ಸ್ವರ-ಸಾಹಿತ್ಯ ಸಂಗ್ರಹ - Compositions of Muddusvami Dikshitar ಪುಸ್ತಕದಿಂದ)
ಸಂಪೂರ್ಣ ಮೇಳಪದ್ಧತಿಯಲ್ಲಿ ಇದಕ್ಕೆ ಸಮಾನ ರಾಗ ಷಡ್ವಿಧಮಾರ್ಗಿಣಿ. ನಾನು ಈ ಕೃತಿಯನ್ನ ಕೇಳಿಲ್ಲ, ಆದ್ದರಿಂದ ಚಿತ್ರದಲ್ಲೂ ಅದೇ ರಾಗದಲ್ಲಿದೆಯಾ/ಇಲ್ಲ್ವಾ ಗೊತ್ತಿಲ್ಲ! ಮಧುರಾಂಬಿಕೆಯನ್ನು ಭಜಿಸು ಮನವೇ ಅನ್ನೋದು ಮೊದಲ ಸಾಲಿನ ಅರ್ಥ. ದ್ವಿತೀಯಾ ವಿಭಕ್ತಿ ಉಪಯೋಗಿಸಿರೋದ್ರಿಂದ, ಮಧುರಾಂಬಾಂ, ನಿವಾಸಿನೀಂ - ಹೀಗೆ ಅನುಸ್ವಾರಾಂತ್ಯ ಪದಗಳು ಇವೆ. ಹಾಗೇ ’ಗುರುಕುಲ’ ಅಲ್ಲ, ’ಗುರುಗುಹ’ - ಇದು ದೀಕ್ಷಿತರ ಅಂಕಿತ. ಕೃತಿಯ ಕೊನೆಯ ಸಾಲಿನಲ್ಲಿ ’ಸ್ಥವರಾಜನುತಿ’ ಅನ್ನೋ ಕಡೆ, ರಾಗ ಮುದ್ರೆ ಇದೆ. ಇದು ಮಧುರಾಂಬಾ(ಮಥುರಾ ಅಲ್ಲ) ಅಂದರೆ ಮಧುರೆಯ ಮೀನಾಕ್ಷಿಯ ಬಗ್ಗೆ ರಚಿಸಿರುವ ಒಂದು ಕ್ಷೇತ್ರಕೃತಿ. ದೀಕ್ಷಿತರು ಹೀಗೇ ವಿವಿಧ ಪುಣ್ಯಕ್ಷೇತ್ರಗಳ ಪ್ರಧಾನ ದೇವದೇವತೆಗಳ ಮೇಲೆ ಅನೇಕ ಕ್ಷೇತ್ರ ಕೃತಿಗಳನ್ನ ರಚಿಸಿದ್ದಾರೆ.
ಸಾಹಿತ್ಯ:

ಪಲ್ಲವಿ: ಮಧುರಾಂಬಾಂ ಭಜರೇ ರೇ ಮಾನಸ ಮದನಜನಕಾದಿ ಗುರುಗುಹ ಸೇವಿತ

ಅನುಪಲ್ಲವಿ: ಮಧುರಾಪುರಿ ನಿವಾಸಿನೀಂ ಧನಿನೀಂ ಮನುಕುಬೇರಾದಿ ಮನೋಲ್ಲಾಸಿನೀಂ

ಚರಣ: ಮತಂಗತನಯಾಂ ಮಧುಕರವೇಣೀಂ ಮಾಧವಾದ್ಯಭಯವರಪ್ರದಾಯಿನೀಂ ಭಕ್ತವಿಶ್ವಾಸಿನೀಂ ಸುವಾಸಿನೀಂ ಶ್ರೀ ಸ್ಥವರಾಜನುತಿ ಪ್ರಸಾದಿನೀಂ

ಒಂದು ವಿವರ ಇಲ್ಲಿ ಕೊಡಬೇಕಿತ್ತು.

ವೈಭವರು ಮಲಯಮಾರುತ ಚಿತ್ರದಲ್ಲಿ ಅಳವಡಿಸಿರುವ ಈ ಕೃತಿಯ ಬಗ್ಗೆ ಕೇಳಿದ್ದಾರೆ. ಈ ಕೃತಿಯ ಮೂಲ ರಾಗ ಬೆನಕ ಹಾಗೂ ಶ್ರೀಮಾತಾ ಅವರು ತಿಳಿಸಿದಂತೆ ಸ್ತವರಾಜ.

ದುರದೃಷ್ಟವಶಾತ್, ಈ ಚಿತ್ರದಲ್ಲಿ ಯೇಸುದಾಸ್ ಅವರು ಈ ಕೃತಿಯನ್ನು ಭವಪ್ರಿಯ ಎನ್ನುವ ಇನ್ನೊಂದು ಬೇರೆ ರಾಗದಲ್ಲಿ ಹಾಡಿದ್ದಾರೆ. ಯಾಕೆ? ನನಗೆ ಗೊತ್ತಿಲ್ಲ. ಇದು ಸರಿಯೇ? ಅಲ್ಲ ಎಂದು ಮಾತ್ರ ಹೇಳಬಲ್ಲೆ.

ಮೂಲ ಹಾಡಿನ ಮಟ್ಟು ತಿಳಿಯದಿದ್ದ ಪಕ್ಶದಲ್ಲಿ (ಉದಾಹರಣೆಗೆ ಪುರಂದರ, ಅನ್ನಮಯ್ಯರ ರಚನೆಗಳು) ಅವರ ರಚನೆಗಳನ್ನು ನಮ್ಮ ಮನಸ್ಸಿಗೆ ಸಂತೋಷವಾಗುವಂತೆ ಹೇಳಿಕೊಳ್ಳಬಹುದು. ಆದರೆ, ರಚನೆ ಮಾಡಿದವರ ಉದ್ದೇಶ ತಿಳಿದಿದ್ದಾಗ ಅದನ್ನು ಬೇರೆ ರಾಗಕ್ಕೆ ಅಳವಡಿಸುವುದು ತಪ್ಪು.

ಭವಪ್ರಿಯ ಎನ್ನುವುದೂ ಒಂದು ಮೇಳಕರ್ತ ರಾಗ. ೪೪ನೆಯದು.

-ಹಂಸಾನಂದಿ

ಇನ್ನೂ ಒಂದು ವಿಷಯವನ್ನು ಸೇರಿಸಿಬಿಡಬೇಕೆನಿಸಿತು.

ಕೆಲವು ರಾಗಗಳಲ್ಲಿ ಸಂಪೂರ್ಣಮೇಳ ಹಾಗೂ ಅಸಂಪೂರ್ಣ ಮೇಳ ರಾಗಗಳು ಹೆಸರಿನಲ್ಲಿ ಮಾತ್ರವೇ ಬೇರೆಯಾದರೂ, ಇನ್ನು ಕೆಲವು ಕಡೆ ಅವು ಪೂರ್ತಿ ಬೇರೆ ರಾಗಗಳೇ ಆಗುತ್ತವೆ. ಸ್ತವರಾಜ ಅಂತಹ ರಾಗಗಳಲ್ಲೊಂದು. ೪೬ನೇ ಷಡ್ವಿಧಮಾರ್ಗಿಣಿಗೂ, ೪೬ನೇ ಸ್ತವರಾಜಕ್ಕೂ ಹೋಲಿಕೆ ಕಡಿಮೆಯೇ. ರಾಗ ಭಾವವೂ, ಸಂಚಾರವೂ ಬೇರೆಯೇ. ಅದೇ (ಉದಾಹರಣೆಗೆ ಹೇಳುವುದಾದರೆ), ೫೬ನೇ (ಸಂಪೂರ್ಣ) ಮೇಳರಾಗ ಷಣ್ಮುಖಪ್ರಿಯವೂ, ೫೬ನೇ ಅಸಂಪೂರ್ಣಮೇಳ ರಾಗವಾದ ಚಾಮರವೂ ಹೆಸರಿನಲ್ಲಷ್ಟೆ ಬೇರೆ. ಆದರೆ, ಸ್ವರೂಪ ಒಂದೇ.

-ಹಂಸಾನಂದಿ