ಕನ್ನಡ 'ಆಟ'ದ/sportive ನುಡಿಯಂತೆ ?

0

ಕನ್ನಡ 'ಆಟ'ದ/sportive ನುಡಿಯಂತೆ ?

ನಾನು ಕೆ.ವಿ.ಸುಬ್ಬಣ್ಣನವರ 'ಕವಿರಾಜಮಾರ್ಗ ಮತ್ತು ಕನ್ನಡ ಜಗತ್ತು' ಓದುತ್ತಿರುವಾಗ ಇದನ್ನು ಗಮನಿಸಿದೆ.

ನಾವು (ಕನ್ನಡಿಗರು) ಜಗಳವನ್ನು 'ಆಡು'ತ್ತೇವೆಯೇ ಹೊರತು 'ಮಾಡು'ವುದಿಲ್ಲ :) ಇದರಿಂದ ನಾವು
ಸಿಕ್ಕಾಪಟ್ಟೆ sportive. :)

ಬೇರೆ ನುಡಿಗಳಲ್ಲಿ ಯಾರು ಜಗಳವನ್ನು 'ಆಡು'ವುದು ನಂಗೆ ಗೊತ್ತಿಲ್ಲ. ಗೊತ್ತವರು ತಿಳಿಸಿ

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಒಳ್ಳೆ ಪ್ರಶ್ನೆ. ಉತ್ತರ ನನ್ನಲಿಲ್ಲ.
ಆದರೆ ನಿಮ್ಮ ಬುಧ್ಧಿಗೆ ಮತ್ತಿಷ್ಟು ಗ್ರಾಸ.
ಬೇರೆ ಬೇರೆ ಕ್ರಿಯೆಗಳಿಗೆ ಬೇರೆ ಬೇರೆ ಕೆಳಗಿನಂತೆ ಪದಗಳ ಉಪಯೋಗಗಳು. ಕನ್ನಡಿಗರು sportive ಅಷ್ಟೇ ಅಲ್ಲದೆ ಇನ್ನೂ ಏನೇನು ಇರಬಹುದು ಯೋಚಿಸಿ ಹೇಳಬಲ್ಲಿರಾ?

ನಾವು ಅಡಿಗೆಯನ್ನು ಮಾಡುತ್ತೇವೆ, ಊಟವನ್ನೂ ಮಾಡುತ್ತೇವೆ. ಊಟ “ತಿನ್ನೋದು” ಅಪರೂಪ.
ಬುಧ್ಧಿ ಉಪಯೋಗಿಸುತ್ತೇವೆ, ಬುಧ್ಧಿ ಹೇಳುತ್ತೇವೆ. ಬುಧ್ಧಿ ಇಲ್ಲದೆ ಮಾತಾಡುತ್ತೇವೆ ಕೂಡ.
ಹಾಡು ಹೇಳುತ್ತೇವೆ. ಹಾಡು ಕೇಳುತ್ತೇವೆ. ಹಾಡು ಹಾಡೋದೂ ಉಂಟು.
ನೀರನ್ನು ಸೇದುತ್ತೇವೆ. ಬೀಡಿ ಮತ್ತು ಸಿಗರೇಟನ್ನೂ ಸೇದುತ್ತೇವೆ.
ವಚನ ಓದುತ್ತೇವೆ, ವಚನ ಹಾಡುತ್ತೇವೆ, ವಚನ ಕೊಡುತ್ತೇವೆ, ಕೊಟ್ಟ ವಚನ ತಪ್ಪುತ್ತೇವೆ ಕೂಡ.
ಮಾತನ್ನು ಕೇಳುತ್ತೇವೆ, ಮಾತನ್ನು ಕೊಡುತ್ತೇವೆ. ಮಾತನ್ನು ಉಳಿಸಿಕೊಳ್ಳುತ್ತೇವೆ, ಮಾತನ್ನು ತಪ್ಪುತ್ತೇವೆ ಕೂಡ.
ಬೆಲೆಯನ್ನು ಕೇಳುತ್ತೇವೆ, ಬೆಲೆಯನ್ನು ಕೊಡುತ್ತೇವೆ
ನಗಾರಿ ಬಾರಿಸುತ್ತೇವೆ, ಮೃದಂಗ ಬಾರಿಸುತ್ತೇವೆ, ಹಾಗೆಯೇ ವೀಣೆ ನುಡಿಸದೇ ಅದನ್ನೂ ಬಾರಿಸುವದುಂಟು.
ಕೆಲವೊಮ್ಮೆ ಗುಂಡು ಹೊಡೆಯುತ್ತೇವೆ, ಹಾರಿಸುತ್ತೇವೆ ಆದರೆ ಗುಂಡು ಹಾಕೋದೇ ಜಾಸ್ತಿ.
ಎಣ್ಣೆ ಹಚ್ಚುತ್ತೇವೆ, ಬೆಣ್ಣೆ ತೆಗೆಯೋದಲ್ಲದೆ ಹಚ್ಚುವುದು ಕೂಡ ಉಂಟು. ಗುಂಡಿನ ಹಾಗೆಯೇ ಎಣ್ಣೆ ಹಾಕೋದೂ ಉಂಟು.

-ನವರತ್ನ ಸುಧೀರ್

[quote= Ennares]ನೀರನ್ನು ಸೇದುತ್ತೇವೆ. ಬೀಡಿ ಮತ್ತು ಸಿಗರೇಟನ್ನೂ ಸೇದುತ್ತೇವೆ[/quote]
ಹಾಗೆಯೇ, ನೀರನ್ನು ಕುಡಿಯುತ್ತೇವೆ. ಬೀಡಿ ಮತ್ತು ಸಿಗರೇಟನ್ನೂ ಕುಡಿಯುತ್ತೇವೆ. :-)

ನಾವು ಬೀಡಿ, ಸಿಗರೇಟನ್ನು ಕುಡಿಯಲ್ಲ......ಸೇದುವುದು
ಹಿಂದಿಲಿ ಬೀಡಿ, ಸಿಗರೇಟನ್ನ ಕುಡಿತಾರೆ :)
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ಹ್ಹ ಹ್ಹ! ಚೆನ್ನಾಗಿದೆ!

ತಮಿಳರು ಜಗಳವನ್ನು ಹಾಕುತ್ತಾರೆ :) (ಸಂಡೈ ಪೋಡುವನ್) - ಏಕೆಂದರೆ, ತಮಿಳರು ಜಗಳ ಆಡಲು ಅಸಮರ್ಥರು.

ಯಾಕೆ ಗೊತ್ತೇ? ಆಡು ಎಂದರೆ ತಮಿಳಲ್ಲಿ ಕುಣಿ, ನರ್ತಿಸು ಎಂಬರ್ಥ :)

-ಹಂಸಾನಂದಿ

ವೈಭವ,
ನಿಜ. ಓದುತ್ತಿದ್ದಂತೆ, ನಾವು ತುಂಬ ಹಿಂದೆ ಆಡಿದ ಚಂಪಾ ಬರೆದ 'ಕೊಡೆಗಳು' ನಾಟಕ ನೆನಪಾಯಿತು. ಅದರಲ್ಲಿಯೂ ಹಾಗೆಯೇ,
' ಎನ್ ರಿಚ್ ಅದರಿ ನಮ್ಮ ಭಾಷಾ! ಹೊಡದಾಟಾನೂ ಆಟಾನs! ಹುಡುಗಾಟಾನೂ ಆಟಾನs!!'
ನನ್ನಿ.
ಕೇಶವ
Visit my blog:
http://kannada-nudi.blogspot.com