ಮಹಾಪ್ರಾಣಕ್ಕೆ ಮಹಾಪ್ರಾಣಕ್ಕೆ ಒತ್ತಾಗಿ ಬರುವುದು ಉಂಟೆ?

0

ಕನ್ನಡದಲ್ಲಿ ಬಳಕೆಯಲ್ಲಿ ಇಲ್ಲವೇ ಇಲ್ಲ ಎನ್ನಬಹುದು. ಸಕ್ಕದದಲ್ಲಿ ಇರಬಹುದೇ?

ಮಾದರಿ: ಖ್ಖ, ಘ್ಘ, ಛ್ಛ, ಝ್ಝ, ಠ್ಠ, ಢ್ಢ, ಥ್ಥ, ಧ್ಧ, ಫ್ಫ, ಭ್ಭ,

ಅಬ್ಬಾ, ಸಿಕ್ಕಾಪಟ್ಟೆ ಉಲಿಯಲು ತುಂಬಾ ಎಡರು-ತೊಡರು :(

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಹಾಪ್ರಾಣಕ್ಕೆ ಮಹಾಪ್ರಾಣ ಒತ್ತಕ್ಷರ ಸಾಧ್ಯವಿಲ್ಲ. ಹಾಗಿದ್ದರೂ ಉಚ್ಚರಿಸಲಾಗದು ಉಚ್ಚಾರ ಅಲ್ಪ+ಮಹಾಪ್ರಾಣ ಅಷ್ಟೆ.
ವಿಠ್ಠಲ ಎಂದು ಬರೆದರೂ ಉಚ್ಚರಿಸಲು ಸಾಧ್ಯವಿರುವುದು ವಿಟ್ಠಲ ಎಂದೇ.
ಹಾಗೆಯೇ ಕ್ಗ, ಚ್ಜ ಟ್ಡ, ತ್ದ, ಪ್ಬ ಸಾಧ್ಯವಿಲ್ಲ. ಅದೂ ಗ್ಗ, ಜ್ಜ, ಡ್ಡ, ದ್ದ, ಬ್ಬ ಎಂದಷ್ಟೇ.

ಸಾಧ್ಯತೆ ಬಗ್ಗೆ ಹೇೞಿದ್ದು. ಸಕ್ಕದವೋ, ಪಾಗದವೋ, ಕನ್ನಡವೋ ಪ್ರಸ್ತುತವಲ್ಲ. ಮಹಾಪ್ರಾಣಕ್ಕೆ ಮಹಾಪ್ರಾಣ ಒತ್ತಕ್ಕರ ಉಚ್ಚರಿಸಲಾಗದೆಂದೇ ನನ್ನ ಅಭಿಪ್ರಾಯ.

ಬರೆಯಲಿಕ್ಕೆ ಏನು ಸ್ವಾಮಿ? ಉಚ್ಚರಿಸಲಿಕ್ಕೆ ಬರಬೇಕಲ್ಲ. ಮಹಾಪ್ರಾಣದ ಮೇಲೆ ಮಹಾಪ್ರಾಣ (ಶ್, ಷ್, ಸ್‍ಗಳನ್ನು ಬಿಟ್ಟು. ಕನ್ನಡದಲ್ಲಿರುವ ಒಂದೆ ಸ್+ಸ್=ಚ್ಚ್ ಕೇಶಿರಾಜನೇ ಹೇೞಿದ್ದಾನೆ. ಹಾಗಾಗಿ ಮುಸ್ಸಂಜೆ ತಪ್ಪು. ಮುಚ್ಚಂಜೆ ಸರಿ. ಹಾಗಾಗಿ ಕನ್ನಡದಲ್ಲೂ ಸ್ಸ್ ಇಲ್ಲ.) ಒತ್ತಿ ಉಚ್ಚರಿಸಲಾಗದು. ಆಮೇಲೆ ಯಾವಾಗಲೂ ಪರದ ಅಕ್ಷರವೇ ಮಹಾಪ್ರಾಣ. ಹಾಗೆಯೇ ರ್+ರ್‍, ಱ್+ಱ್, ಹ್+ಹ್ ಕೂಡ ಇಲ್ಲ.