ಸುದ್ದಿ ಪತ್ರದಲ್ಲಿ ಸ್ವಲ್ಪ ಬದಲಾವಣೆಗಳು

0

'ಸಂಪದ'ದ ಸದಸ್ಯರೆಲ್ಲರಿಗೂ ನಿನ್ನೆ ಎರಡು ಇ-ಪತ್ರಗಳು ಬಿತ್ತರಿಸಿ ಹೋದವು. ಎಲ್ಲರ ಮೇಯ್ಲ್ ಬಾಕ್ಸ್ ತುಂಬಿಸಿದ್ದಕ್ಕೆ ಕ್ಷಮೆ ಇರಲಿ. ಇನ್ನು ಮುಂದೆ ಸಂಪದ ಸುದ್ದಿ ಪತ್ರವು ಮೇಯ್ಲಿಂಗ್ ಲಿಸ್ಟ್ ಮೂಲಕ ಬಿತ್ತರಿಸಲಾಗುವುದು. ಇದಕ್ಕೆ ಕಾರಣಗಳು ಬಹಳಷ್ಟಿವೆ. ಮೊದಲನೆಯದು, ಏಕಾಏಕಿ ಇ-ಪತ್ರಗಳು ಸರ್ವರಿನಿಂದ ಕಳುಹಿಸುವಾಗ ಬೌನ್ಸ್ ಆದಲ್ಲಿ ಸರ್ವರ್ ನೋಡಿಕೊಳ್ಳುತ್ತಿರುವವರಿಗೆ ವಿನಾ ಕಾರಣ ತಲೆನೋವು. ಎರಡನೆಯದು, ಎಲ್ಲರಿಗೂ ಸುದ್ದಿ ಪತ್ರ ಕಳುಹಿಸುವ ಬದಲು ಅದನ್ನೋದುವ ಉತ್ಸಾಹವುಳ್ಳ ಸದಸ್ಯರಿಗೆ ಮಾತ್ರ ಕಳುಹಿಸಿದರೆ, ಸರ್ವರಿನ ಮೇಲೆ ಲೋಡ್ ಕೂಡ ಕಡಿಮೆಯಾಗುವುದು. ಜೊತೆಗೆ ಮೇಯ್ಲ್ ಮ್ಯಾನ್ ಎಂಬುವ ಸುದ್ದಿ ಪತ್ರ ತಂತ್ರಾಂಶ ಬೌನ್ಸ್ ಆಗುವ ವಿಳಾಸಗಳನ್ನು ಚೆನ್ನಾಗಿ ನಿರ್ವಹಿಸುತ್ತದೆ.

(Update) ಸೂ: ಸೆಪ್ಟೆಂಬರ್ ೩೦ ರಂತೆ 'ಸಂಪದ'ದಲ್ಲಿ ಸದಸ್ಯರಾಗಿದ್ದ ಎಲ್ಲರೂ ಈ ಇ-ಅಂಚೆ ಪೆಟ್ಟಿಗೆಗೆ 'ಬೈ ಡೀಫಾಲ್ಟ್' ಸದಸ್ಯರು. ಮತ್ತೊಮ್ಮೆ ನೊಂದಾಯಿಸಿಕೊಳ್ಳುವ ಅವಶ್ಯಕತೆ ಇಲ್ಲ.

[:http://sampada.net/Newsletter_subscribe]

ಸದ್ಯಕ್ಕೆ ಈ ವ್ಯವಸ್ಥಾಪನೆ. ಎಲ್ಲ ಸದಸ್ಯರೂ ಸಹಕಾರ ನೀಡುವಿರೆಂದು ತಿಳಿಯುತ್ತೇನೆ,

- ಹೆಚ್ ಪಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾನು ಈ ಸುದ್ದಿ ಪತ್ರಕ್ಕೆ ಸದಸ್ಯತನಕ್ಕಾಗಿ ಅರ್ಜಿ ಗುರಾಯಿಸಿದೆ. ಆದರೆ ಕೆಲವೇ ಕ್ಷಣದಲ್ಲಿ ನನಗೆ ಈ ಕೆಳಗಿನ ಪತ್ರ ಬಂತು.. ಹಾಗಾದರೆ....!!
An attempt was made to subscribe your address to the mailing list
newsletter@sampada.net. You are already subscribed to this mailing list.

Note that the list membership is not public, so it is possible that a bad
person was trying to probe the list for its membership. This would be a
privacy violation if we let them do this, but we didn't.

If you submitted the subscription request and forgot that you were already
subscribed to the list, then you can ignore this message. If you suspect that
an attempt is being made to covertly discover whether you are a member of this
list, and you are worried about your privacy, then feel free to send a message
to the list administrator at newsletter-owner@sampada.net.

ಆದರೆ ನಾನು ಇದಕ್ಕಿಂತ ಮೊದಲು ಅರ್ಜಿ ಭರ್ತಿ ಮಾಡಿಯೇ ಇಲ್ಲ

ನಾನು ನಿಮಗಾಗಿ ಭರ್ತಿ ಮಾಡಿದ್ದೆ ;)

ಈಗಿರುವ ಎಲ್ಲ ಸದಸ್ಯರಿಗೂ ಕಷ್ಟ ತಪ್ಪಿಸಲು ನಾನೇ ಸ್ವತಃ ಭರ್ತಿ ಮಾಡಿಬಿಟ್ಟೆ. ಬೇಡದಿದ್ದವರು ಮಾತ್ರ ಒಂದಷ್ಟು ಕಷ್ಟವೆಸಗಿ unsubscribe ಮಾಡಿಕೊಳ್ಳಬೇಕು ;)

--

"ಹೊಸ ಚಿಗುರು, ಹಳೆ ಬೇರು"