ಕನ್ನಡದವರಿಗ್ಯಾಕೆ ಬಂತು ತಮಿಳು ಬುದ್ಧಿ?

0

ಈ ನಡುವೆ ಬಹಳಷ್ಟು ಜನಗಳು ಕನ್ನಡ ಕನ್ನಡ ಎಂದುಕೊಂಡು ಅಂಗಡಿಗಳನ್ನೊಡೆಯೋದು, ಚಿತ್ರಮಂದಿರಗಳನ್ನ ಚೂರು ಮಾಡೋದು, ಪೇಪರುಗಳನ್ನ ಬೈಯೋದು ಇವೆಲ್ಲಾ ಕಸುಬು ಮಾಡಿಕೊಂಡಿರುವುದು ಗಮನಕ್ಕೆ ಬರದೇ ಇರೋದಿಲ್ಲ. ಕನ್ನಡ ಪ್ರೇಮೆ ಇದೇನಾ? ಕನ್ನಡ ತಾಯಿ ಹೀಗೆ ಮಚ್ಚು ದಿಣ್ಣೆ ಹಿಡಿದು ಜಗಳ ಕಾರುವವರು ತನ್ನ ಮಕ್ಕಳೆಂದು ಹೆಮ್ಮೆ ಪಡುವಳಾ?

ತಮಿಳರ ಬುದ್ಧಿ ಬಂದುಬಿಟ್ಟಿದೆಯಾ ನಮ್ಮ ಜನಕ್ಕೆ?

ಸಮಸ್ತ ಕನ್ನಡಿಗರು ಕನ್ನಡ ಪ್ರೇಮವನ್ನ ಇಷ್ಟಕ್ಕೇ ಸೀಮಿತಗೊಳಿಸಿಕೊಂಡಿರಬೇಕಾ? ಭಾಷೆ ಬೇರೊಬ್ಬರ ಮೇಲೆ ಹೇರುವ ದೌರ್ಜನ್ಯವಾಗಬೇಕಾ? ಅಥ್ವ ಭಾಷೆಯನ್ನ ಬೆಳೆಸೋ ಕಡೇನೂ ಗಮನ ಹರಿಸಬೇಕಾ?

ಕನ್ನಡ ಕುವರರು, ಕುವರಿಯರು ಉತ್ತರಿಸಲೇಬೇಕು.

~ ಗಂಗಾಧರ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಯ್ಯೊ ತಮಿಳರ ಹಾಗೆ ಇದ್ದರೆ ಕನ್ನಡ, ಕನ್ನಡಿಗರ ಸ್ತಿತಿ ಇನ್ನು ಚನ್ನಾಗಿರುತ್ತಿತ್ತು. :)

ಈಟೆಲ್ಲ ಬರೆದಿರುವ ನೀವು ಕನ್ನಡದ, ಕನ್ನಡಿಗರ ಸ್ತಿತಿ ಬಗ್ಗೆ ಮೊದಲು ಉಂಕಿಸಿ. ಚೆನ್ನಾಗಿದಿಯಾ? ನಮ್ಮ ನೆಲದಲ್ಲೇ ನಾವು ಗುಲಾಮರಾಗಿದ್ದೀವಿ :(

ಕನ್ನಡಿಗರು ತಮಿಳರಂತ್ತಿದ್ದರೆ ಬಹಳ ಸಂತೋಶವಾಗುತ್ತಿತ್ತು. ಅದು ಆಗಲು ಇನ್ನು ೨೦-೨೫ ವರ್ಶಗಳಾಗಬಹುದು. ಒಂದು ಉದಾಹರಣೆಯನ್ನು ಕೊಡುತ್ತೀನಿ:

ತಮಿಳರು ಎಂದಿಗು ಅವರ ರಾಜ್ಯದಲ್ಲಿ ಅಥವ ಅವರು ಬಹುಸಂಖ್ಯಾತರಾಗಿರುವ ಸ್ಥಳದಲ್ಲಿ ತಮಿಳು ಬಿಟ್ಟು ಬೇರೆ ಬಶೆ ಮಾತಾಡುವುದಿಲ್ಲ, ಆದರೆ ನಮ್ಮ ಕನ್ನಡದವರು ಬೆಂಗಳೂರಿನಲ್ಲೆ ಹಿಂದಿ, ತೆಲಗು ತಮಿಳು ಮಾತಡುತ್ತಾರೆ

ಈ ಮಟ್ಟವನ್ನು, ಈಗಿನ ಅಂದರೆ ಭಾರತ ಸ್ವತಂತ್ರ್ಯ ಗೊಂಡಮೇಲೆ ತಮಿಳರು ಹೇಗೆ ಸಾದಿಸಿದರು ಅಂತ ತಿಳಿಯಲು, "ಇರುವರ್" ಎಂಬ ತಮಿಳು ಚಿತ್ರ ನೂಡಿ. ನಾನು ಕನ್ನಡ ಬಿಟ್ಟು ಬೇರೆ ಚಿತ್ರ ನೂಡುವುದು ಬಹಳ ಕಡಿಮೆ. ಆದರೆ ನಾವು ತಮಿಳರ ತರಹ ರಾಷ್ಟ್ರ ಮಟ್ಟದಲ್ಲಿ ಬೇಳೆಯಬೇಕಾದರೆ, ೫೦-೭೦ ರ ದಶಕದಲ್ಲಿ ಅಲ್ಲಿನ ಜನನಾಯಕರು ಹೇಗೆ ಹಿಂದಿ ವಿರುದ್ದ ಹೂರಾಡಿದರೂ, ಅಂತಃ ನಾಯಕರು ಕನ್ನಡಕ್ಕೆ ಬೇಕಾಗಿದ್ದಾರೆ. ಅದನ್ನು ಈ ಚಿತ್ರದಲ್ಲಿ ಚೆನ್ನಾಗಿ ತೂರಿಸಿದ್ದಾರೆ.

ನೀವು ಹೇಳಿದ ಹಾಗೆ ಕನ್ನಡಿಗರು ತಮಿಳರಂತೆ ಬಾಷಾಭಿ ಮಾನ ಬೇಳಸಿಕೊಳ್ಳಲಿ ಎಂದು ಹಾರಿಸುತ್ತೀನಿ.

ನಾವು ಹಿಗಂದುಕೊಂಡೇ ನಮಗೀಗತಿ ಬಂದಿರೋದು. ಕನ್ನಡ ಯೆಲ್ಲಿ ಚೆನ್ನಾಗಿ ಇದೆ ಹೇಳಿ. ರಾಜಧಾನಿಯಲ್ಲಿ ಅದರ ಅವಸ್ಥೆ ನೋಡಿದರೆ ಅರ್ಥ ಆಗುತ್ತೆ. ಒಮ್ಮೆ ನಮ್ಮ ಮಂಗಳೂರು ರೈಲ್ವೇಸ್ಟೇಷನ್ಗೆ ಬನ್ನಿ, ಅದು ಕೇರಳದಲ್ಲಿ ಇದ್ದಿವೋ ಅನುಸುತ್ತೆ. ಅಲ್ಲಿ ನೌಕರರ ಮುಷ್ಕರ ನಡೆದರೆ ಅವರ ನಾಯಕರು ಬಾಷಣ ಮಾಡೊದು ಮಲಯಾಳಂ ನಲ್ಲಿ. ಅದು ಯಾಕೆ ಬೆಂಗಳೋರು, ಮೈಸೂರು, ಮಂಡ್ಯ, ಮೈಸೂರು ಕಡೆಯಿಂದ ನಮ್ಮಲ್ಲಿ ಓದಲು ಬರುವ ಹುಡುಗ/ಗಿರು ಮತಾಡೊದು ಇಂಗ್ಲಿಷ್!. ಇವರಿಗೆ ಕನ್ನಡ ಅಭಿಮಾನ ಬರಿಸೊದಕೆಅಲ್ಲದಿದ್ರು ಸ್ವಲ್ಪ ಕನ್ನಡದ ಭಗ್ಗೆ ಭಯ ಬಕ್ತಿ ಬರಲಿ..