ರವಿ ಬೆಳಗೆರೆಯವರ ಲೇಖನ - ದಟ್ಸ್ ಕನ್ನಡದಲ್ಲಿ

0

ಇಲ್ಲಿ ನೋಡಿ:

http://thatskannada.oneindia.in/column/ravibelagere/110607caste_religion_intellectuals.html

ನಾನು ಬೆಳಗೆರೆಯವರ ಕ್ರೈಮ್ ಡೈರಿಯ ಅಭಿಮಾನಿಯೇನೂ ಅಲ್ಲ - ಆದರೆ ಇಲ್ಲಿ ಅವರು ಬರೆದಿರುವುದು ನನಗೆ ಸರಿ ಕಂಡಿತು.

ಆವರಣದ ಬಗ್ಗೆ ಚರ್ಚೆ ನಡೆಯುತ್ತಿರುವ ಈ ಸಮಯದಲ್ಲಿ, ಈ ಬರಹವನ್ನು ಗಮನಿಸಲೇ ಬೇಕಾಗುತ್ತೆ. ಆ ಕಾದಂಬರಿ ಕೆಲವರಿಗೆ ಹಿಡಿಸಬಹುದು, ಕೆಲವರಿಗೆ ಹಿಡಿಸದಿರಬಹುದು (ನನಗೂ ಅದು ಬಹಳ ಹಿಡಿಸಿಲ್ಲ; ಅವರ ಮಂದ್ರವೂ ನನಗೆ ಅಷ್ಟಾಗಿ ಹಿಡಿಸಲಿಲ್ಲ, ಆದರೆ ಅದಕ್ಕೆಂದು ನಾನು ಸಂಗೀತ ಕೇಳುವುದನ್ನೇನೂ ಬಿಡಲಿಲ್ಲ ;) ) 

ನಮಗೆ ಹಿಡಿಸದ ಕಾರಣಕ್ಕೆ ನಾವು ಬರೆದವರ ಮೇಲೆ ಗೂಬೆ ಕೂರಿಸಬೇಕೇ? ಇಲ್ಲದ ಆಪಾದನೆ ಮಾಡಬೇಕೇ? ಬಾಲವಿಧವೆಯರನ್ನು ಮಾಡುವ ಕ್ರೂರ ಸಂಪ್ರದಾಯವನ್ನು ಟೀಕಿಸುವ ಫಣಿಯಮ್ಮ (ಎಂ.ಕೆ.ಇಂದಿರಾ)ನಂತಹ ಪುಸ್ತಕವನ್ನು ಸ್ವಾಗತಿಸುವ ನಾವು, ಔರಂಗಜೇಬನ ಬಗ್ಗೆ ಕೆಲವು ಸತ್ಯಗಳನ್ನು ಬರೆದದ್ದಕ್ಕೆ ಭೈರಪ್ಪನವರನ್ನು ವಾಚಾಮಗೋಚರವಾಗಿ ಬೈಯಬೇಕೇ?

-ಹಂಸಾನಂದಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.