ರಾಜಕಾರಣಿಗೊಂದು ಆತ್ಮಸಾಕ್ಷಿ!

0

 ಕಲ್ಲಿದ್ದಲು ಗಣಿ ಹಂಚಿಕೆಯಲ್ಲಿ ಕೆಲ ಅಕ್ರಮ ನಡೆದಿದೆ ಎಂದು ಸಿಎಜಿ ವರದಿಯಲ್ಲದೆಯಂತೆ. ತನಿಖೆ ಕಾಲದಲ್ಲಿ, ಕಲ್ಲದ್ದಲು ಖಾತೆ ಪ್ರಧಾನಿ ಬಳಿ ಇತ್ತು. ಆದ್ದರಿಂದ ಲೋಪ-ದೋಷದ ’ನೈತಿಕ ಹೊಣೆ’ ಹೊತ್ತು ಪ್ರಧಾನಮಂತ್ರಿ, ಪಟ್ಟ ಬಿಡಬೇಕೆನ್ನುವುದು, ಪ್ರತಿ ಪಕ್ಷ, ಬಿಜೆಪಿಯ ಕೊಲಾಹಲ. ’ಅತ್ಮಸಾಕ್ಷಿ’ ಎನ್ನುವುದು ಒಬ್ಬ ವ್ಯಕ್ತಿಯ ಅಂತರಂಗದ ವಿಷಯ. ಅದು ಹೊಗಿನಿಂದ ತುರುಕುವುದೇ?! ಅಧಿಕಾರದಲ್ಲೇ ನಿಂತು, ಅಪಾದನೆಗಳು ಅಸತ್ಯ ಎಂದು ಸಾಬೀತು ಪಡಿಸುವುದನ್ನೇ ಅವರು, ’ಆತ್ಮಸಾಕ್ಷಿ’ ಎಂದುಕೊಳ್ಳಬಹುದು!
 ಕರ್ನಾಟಕದ ಮಾಜಿ ಮುಖ್ಯಮಂತ್ರಿಯ ಮೇಲೆ ಹೊರೆಸಿದ ಆರೋಪ-ಆಪಾದನೆಗಳ ವಿಚಾರದಲ್ಲೂ ’ಅತ್ಮ’ಸಾಕ್ಷಿ’ ಸೊಲ್ಲು ಕೇಳಿ ಬಂದಿತ್ತು. ಅವರ ’ಆತ್ಮಸಾಕ್ಷಿ’ಯೇನೋ ಆರೋಪಗಳನ್ನು ಎಡಗೈನಿಂದ ತಳ್ಳಿಹಾಕಿತು. ಆದರೂ ಬಿಜೆಪಿ, ತನ್ನದೇ ಅಂತರಿಕ ಪಳತೋಟಿಯಿಂದಾಗಿ, ಅವರನ್ನು ತಾಂತ್ರಿಕವಾಗಿ ಹೊರದಬ್ಬಿದಂತೆ ಮಾಡಿದರೂ, ಇವರ ವರ್ಚಸ್ಸಿನೆದುರು ಅದೇ ಮಂಕಾಗಿಹೋಯಿತು!
 ಪಾತಕಿಯೊಬ್ಬನ್ನು ಗಲ್ಲಿಗೆ ಹಾಕಿ; ಆತನ ಪಾತಕ ಸಾಬೀತಾದ ನಂತರ. ಅದನ್ನು ನೆಪಮಾತ್ರವಾಗಿಟ್ಟುಕೊಂಡು, ಕೇಂದ್ರದಲ್ಲಿ ಬಿಜೆಪಿ ಮತ್ತು ರಾಜ್ಯದಲ್ಲಿ ಕಾಂಗ್ರೆಸ್, ಸಂಸತ್ತು ಮತ್ತು ಶಾಸಕಾಂದ ಕಲಾಪವನ್ನೇ ಒತ್ತೆ ಹಿಡಿಯುವುದು ಅದರದರ ಬುದ್ಧಿಗೇಡಿ-ಹೊಣೆಗೇಡಿತನವನ್ನಷ್ಟೇ ತೋರಿಸುತ್ತದೆ!      
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಭಾರತದಲ್ಲಿ ನೈಸರ್ಗಿಕ ಸಂಪತ್ತಿನ ಲೂಟಿಗೆ ಸರ್ಕಾರವೇ ಖಾಸಗೀಕರಣ, ಉದಾರೀಕರಣದ ಹೆಸರಿನಲ್ಲಿ ಅನುಮತಿ ಕೊಟ್ಟಿರುವಾಗ ಇದಕ್ಕೆ ಎಲ್ಲ ರಾಜಕೀಯ ಪಕ್ಷಗಳೂ ಹೊಣೆಗಾರರಾಗುತ್ತಾರೆ. ಹೀಗಾಗಿ ಒಂದು ಪಕ್ಷ ಹಾಗೂ ಸರ್ಕಾರವನ್ನು ಮಾತ್ರವೇ ಇದಕ್ಕೆ ದೂಷಿಸುವುದರಿಂದ ಪ್ರಯೋಜನ ಇಲ್ಲ. ನೈಸರ್ಗಿಕ ಸಂಪನ್ಮೂಳಗಳಾದ ಕಲ್ಲಿದ್ದಲು, ಕಬ್ಬಿಣದ ಅದಿರು, ನೈಸರ್ಗಿಕ ಅನಿಲ, ಬೇರೆ ವಿಧದ ಖನಿಜಗಳು ಹಾಗೂ ಟೆಲಿಕಾಂ ತರಂಗಾಂತರ ಇತ್ಯಾದಿಗಳನ್ನು ಖಾಸಗಿಯವರಿಗೆ ತೆಗೆದು ಮಾರಲು ಅಥವಾ ಉಪಯೋಗಿಸಲು ಕೊಡುವಾಗ ಅನುಸರಿಸಬೇಕಾದ ಸ್ಪಷ್ಟ ನೀತಿಯನ್ನೇ ನಮ್ಮ ಸಂಸತ್ತು ರೂಪಿಸಿಲ್ಲ. ಖಾಸಗೀಕರನ್ ಆರಂಭವಾದ ೯೦ರ ದಶಕದಿಂದ ಹಿಡಿದು ಇಂದಿನವರೆಗೆ ಹೀಗೆ ನೈಸರ್ಗಿಕ ಸಂಪನ್ಮೂಲದ ಹಗಲು ದರೋಡೆಯ ಲೆಕ್ಕ ಹಾಕಿದರೆ ಅದು ಬಹುಶ: ಅದು ೨೫ ಲಕ್ಷ ಕೋಟಿ ರೂಪಾಯಿಗಳನ್ನು ಮೀರಬಹುದೋ ಏನೋ. ಹೀಗಾಗಿ ಎಲ್ಲ ಪಕ್ಷಗಳ ಸಂಸದರೂ ಈ ಹಗಲುದರೋಡೆಯಲ್ಲಿ ಸಹಭಾಗಿಗಳೇ (ಎಡ ಪಕ್ಷಗಳ ಸಂಸದರು ಈ ಬಗ್ಗೆ ಅಲ್ಪ ಸ್ವಲ್ಪ ದನಿ ಎತ್ತಿರಬಹುದು ಹೊರತುಪಡಿಸಿದರೆ). ಈ ಬಗ್ಗೆ ಸಂಸತ್ತಿನಲ್ಲಿ ಸ್ಪಷ್ಟ ನೀತಿಯನ್ನು ಉದಾರೀಕರಣಕ್ಕೆ ದೇಶವನ್ನು ತೆರೆದಾಗಲೇ ರೂಪಿಸಬೇಕಾಗಿತ್ತು. ಈ ಕೆಲಸ ಮಾಡದ ಸಂಸದರು ಹಾಗೂ ರಾಜಕೀಯ ಪಕ್ಷಗಳು ಈಗ ಕೋಟೆ ಸೂರೆ ಹೋದ ಮೇಲೆ ದಿಡ್ಡಿ ಬಾಗಿಲು ಹಾಕುವಂತೆ ಸಂಸತ್ತನ್ನು ಕಾರ್ಯನಿರ್ವಹಿಸಲು ಬಿಡದೆ ಇರುವುದು ಸಮಂಜಸವಲ್ಲ. ಈಗಲಾದರೂ ಇವರು ಪ್ರತಿಪಕ್ಷಗಳು ಮತ್ತು ಆಡಳಿತ ಪಕ್ಷಗಳು ಒಂದು ಸ್ಪಷ್ಟ ನೀತಿಯನ್ನು ರೂಪಿಸುವುದನ್ನು ಬಿಟ್ಟು ಪರಸ್ಪರರನ್ನು ನಿಂದಿಸುತ್ತಾ ಕಾಲಕಳೆಯುವುದು ನೋಡಿದರೆ ಇವರು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಶ್ವಾಸವಿಲ್ಲದ ಬೇಜವಾಬ್ದಾರಿಯುತ ವ್ಯಕ್ತಿಗಳು ಎಂದೇ ಹೇಳಬೇಕಾಗುತ್ತದೆ.

ರಾಜಕಾರಣಿ ಎಂಬ ಪ್ರಾಣಿವರ್ಗ, ಪ್ರಜಾಸತ್ತೆಯಲ್ಲಿ ನಂಬಿಕೆಯಿರದ ಬೇಜವಾಬ್ದರಿ ಜನವಷ್ಟೇ ಅಲ್ಲ, ರಾಷ್ಟ್ರೀಯ, ಅಂತಾರಾಷ್ಟ್ರೀಯ, ಸ್ಥಳೀಯ ಅಗುಹೊಗಿನ ಬಗ್ಗೆ ಆಸಕ್ತಿ-ತಿಳುವಳಿಕೆಯಿಲ್ಲದವರೂ ಅಗಿದ್ದರೇನೊ ಎನಿಸುತ್ತದೆ! General knowledge, Commonsense ಎಂಬ ಎಲ್ಲವನ್ನೂ ಕೇವಲ Political senseಗೆ ಮಾರಿಕೊಳ್ಳುವ ಈ ಪೈಕಿಯ ಒಬ್ಬರನ್ನೇ ನಮ್ಮ ಪ್ರತಿನಿಧಿ ಎಂದು ಒಪ್ಪಿಕೊಳ್ಳಬೇಕಾದ ಕರ್ಮ, ನಮ್ಮದು! ದೋಷವನ್ನು ಸಂವಿಧಾನದಲ್ಲಿ ಎಣಿಸಲಾಗದು. ಬಹುತೇಕ commonsense ಉಳ್ಳ ಪ್ರಜೆಗಳ ಪ್ರತಿನಿಧಿಗಳು ದೇಶವನ್ನಾಳುವಂತೆ ಪ್ರಜಾಪ್ರತಿನಿಧಿ ಕಾಯ್ದೆಗೆ ತಿದ್ದುಪಡಿಯಾಗಬೇಕಾಗಿದೆ. ಆ ಕುರಿತು ಗಂಭೀರ ಆಂದೋಳನ ನಡೆಯಬೇಕಾಗಿದೆ. ಈ ಮಾತನ್ನು ತಾವು ಅನುಮೋದಿಸಬಹುದೆಣದುಕೊಂಡಿದ್ದೇನೆ!

ಸಂಸತ್ತು ಹಾಗೂ ಶಾಸನ ಸಭೆಗಳಿಗೆ ಪ್ರಜ್ಞಾವಂತ, ಚಿಂತನಶೀಲ ಹಾಗೂ ನಿಸ್ವಾರ್ಥಿ ಜನಗಳು ಮಾತ್ರ ಹೋಗಲು ಸಾಧ್ಯವಾಗುವಂಥ ಒಂದು ವ್ಯವಸ್ಥೆ ರೂಪಿಸಬೇಕಾದ ಅಗತ್ಯ ಇದೆ. ಇದಕ್ಕಾಗಿ ಚುನಾವಣಾ ವ್ಯವಸ್ಥೆಯಲ್ಲಿ ಸುಧಾರಣೆಗಳು ಆಗಬೇಕಾಗಿದೆ ಎಂಬುದರಲ್ಲಿ ಸಂದೇಹವೇ ಇಲ್ಲ. ಈ ಕುರಿತು ಆಂದೋಲನದ ಅವಶ್ಯಕತೆ ಇದೆ. ರಾಜಕೀಯ ಪಕ್ಷಗಳ ಸ್ವರೂಪ ಹಾಗೂ ರಾಜಕೀಯ ಪಕ್ಷಗಳ ಸಂವಿಧಾನದಲ್ಲೂ ಕೆಲವು ಸ್ಪಷ್ಟ ನಿಯಮಗಳನ್ನು ಜಾರಿಗೆ ತಂದರೆ ಹೆಚ್ಚಿನ ಪರಿಣಾಮ ಉಂಟಾಗಲು ಸಾಧ್ಯ.

ತಮ್ಮ ಸ-ಅಸಕ್ತ ಪರಿವೀಕ್ಷಣೆಗೆ ಧನ್ಯವಾದಗಳು. ತಾವು ಹೇಳಿದ ಸದ್ಗುಣಗಲು ನಮ್ಮ ಪ್ರಜಾಸತ್ತೆಗೆ ಬರಬೇಕಾದರೆ, ಸಂಸದರೂ ಶಾಸಕರೂ ತಮ್ಮ ಇಡೀ ಮತಕ್ಷೇತ್ರವನ್ನು ಸಮಾನವಾಗಿ ಕಾಣುವುದು ಅನಿವಾರ್ಯವಾಬೇಕು. ’ಬಹುಮತ’ವನ್ನು ಕಡೆಗಣಿಸಿ, ’ತಮ್ಮವರನ್ನು’ ಮಾತ್ರಾ ಓಲೈಸಿಕೊಂಡು ’ಬದುಕುವ’ ವಿಚ್ಛಿದ್ರಕಾರಿಗಳಿಗೆ ಅವಕಾಶವೇ ಇರಬಾರದು. ಹಾಗಾಗಬೇಕಾದರೆ, ಗೆಲುವಿಗೆ, ಮತಕ್ಷೇತ್ರದ ಕನಿಷ್ಠ ಶೇ. 50+ ಮತಪ್ರಾಪ್ತಿ ಕಡ್ಡಾಯವಗಬೇಕು. ಆಗ ’ಅಯೋಗ್ಯರು, ಅಯೋಗ್ಯರಿಂದ, ಅಯೋಗ್ಯರಿಗಾಗಿ’ ಆಡಳಿತ ನಡೆಸುವ ಪಾಳೆಗಾರಿಕೆಗೆ ವಿಮುಕ್ತಿ ದೊರೆಯುತ್ತದೆ.