ಹೆಂಬೇಡಿ ರಾಜಕಾರಣಕ್ಕೆ ತಕ್ಕ ಶಾಸ್ತಿಯಾಗಲಿ

3

 ಅಸ್ಸಾಮಿನ ಒಂದು ಜಿಲ್ಲೆಯ ಒಂದು ಭಾಗದಲ್ಲಿ, ಮೇಲ್ನೋಟಕ್ಕೆ ಕೋಮು ಗಲಭೆಯೆನಿಸುವಂಥಾ ಪ್ರಸಂಗ ಘಟಿಸುತ್ತದೆ; ರಾಜ್ಯ ಸರಕಾರ ಬಂದೊಬಸ್ತ್ ಕ್ರಮ ಕೈಗೊಳ್ಳುತ್ತದೆ; ಗಾಬರಿ ಅಲ್ಲಿಗೆ ನಿಲ್ಲದೆ, ದೂರದ ಕರ್ನಾಟಕ ಮತ್ತು ಆಂಧ್ರ ಪ್ರದೇಶಗಳನ್ನೇ ಅರೆಸಿ ಬರುತ್ತದೆ! ಇದು, ಬಿಜೆಪಿಯ ಮೇಲೆ ಕೊಮು ಗಲಭೆಯ ಗೂಬೆ ಕೂರಿಸುವ ಸ್ವದೇಶೀ ರಾಜಕೀಯವೇ? ಹಾಗಾದರೆ ಆಂಧ್ರ ಪ್ರದೇಶವೇಕೆ ಮತ್ತು ಸುದಕ್ಷ ಅಡಳಿತವೆನ್ನಲಾಗುವ ಗುಜರಾತ್‌ ಸರಕರವನ್ನು ಬಿಟ್ಟಿದ್ದೇಕೆ? ಕೋಕ್ರಾಜಾರ್ ಅಸ್ಸಾಮಿನ ಒಂದು ಜಿಲ್ಲೆ; ಅಲ್ಲಿನ ಘಟನೆ, ಇಡೀ ಈಶಾನ್ಯ ರಾಜ್ಯಗಳ ವಲಸಿಗರನ್ನು ಥರಗುಟ್ಟಿಸಬೇಕೇಕೆ? ಇಲ್ಲಿ ರಾಜಕೀಯ ಹತಾಶರ ಅಥವಾ ಮಹತ್ವಾಕಾಂಕ್ಷಿಗಳ ಹೆಂಬೇಡಿಗಳ ಕೈವಾಡವೇ ಎತ್ತಿ ಕಾಣುವುದು.
ಅಂಥ ಅಕ್ರಮ ಸಂತಾನಗಳನ್ನು ಈಗಿಂದೀಗಲೇ ಪತ್ತೆಹಚ್ಚಬೆಕು; ನೇರವಗಿ ಸುಪ್ರೀಂ ಕೋರ್ಟಿನಿಂದಲೇ ಶೀಘ್ರ ವಿಚಾರಣೆ ನಡೆಯಬೇಕು; ಘಟನೆಯನ್ನು ಮಹಾಜನತೆ ಮರೆಯುವ ಮುನ್ನವೇ ಅಪರಾಧಿಗಳಿಗೆ ಅತ್ಯುನ್ನತ ಶಿಕ್ಷೆಯಾಗಬೇಕು. ಹಾಗಾಗದಿದ್ದರೆ ಹೇಡಿಗಳ ಕ್ಷುಲ್ಲ ರಾಜಕಿಯ ನಮ್ಮ ಸಂವಿಧಾನವನ್ನೂ, ನ್ಯಾಯಾಂಗವನ್ನೂ, ಕಾರ‍್ಯಾಂಗದ ನೈತಿಕ ಸ್ಥೈರ್ಯವನ್ನೂ ನುಂಗಿ ನೀರು ಕುಡಿದುಬಿಡುತ್ತದೆ
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅವರ ದೇಶದ ಪ್ರಧಾನ ಮಂತ್ರಿಗಳಿಂದ ಇಲ್ಲಿ ನುಸುಳಲು ಅವರಿಗೆ ಅಧಿಕೃತ ಅನುಮತಿಯಿದೆ ಹಾಗೇಯೇ ಇದರ ಬಗ್ಗೆ ಪ್ರತಿಭಟಿಸಲು ನಮ್ಮ ದೇಶದ ಸೈನಿಕ ಸ್ಮಾರಕಗಳನ್ನು ಒಡೆದು ಹಾಕುವ ಹಕ್ಕು ಕೂಡ ಅವರಿಗಿದೆ! ಖರೀದಿಸಲ್ಪಟ್ಟ ಪತ್ರಕರ್ತರು, ಟೀವೀಯವರು ಹಾಗು ಸ್ವಾರ್ಥ ರಾಜಕಾರಣದಿಂದಾಗಿ ಇದರ ಬಗ್ಗೆ ವಸ್ತು ನಿಷ್ಟ ವರದಿ ಇಲ್ಲಿಯ ತನಕ ನಮ್ಮ ಕಣ್ಣಿಗೆ ಕಂಡು ಬಂದಿಲ್ಲವಾದ್ದರಿಂದ ಸಮಯ ಕಳೆದ ನಂತರ ನಿಜವಾಗಿ ನಡೆದದ್ದು ಏನೆಂಬುದು ಗೊತ್ತಾಗುವುದು. ನ್ಯಾಯಾಂಗ ತನಿಖೆ ಎಂದರೆ ಮಮತಾ ನೆನಪಾಗುವಳು! ಹಾಗಾಗಿ ನೀರಿಗೆ ಬಿದ್ದ ಹೆಣ ಸ್ವಲ್ಪ ದಿನವಾದ ನಂತರ ತೇಲಲೆ ಬೇಕು, ಅಲ್ಲಿಯ ತನಕ ಕಾಯೋಣ

ತೇಲುತ್ತದೆ, ನಿಜ. ಅಷ್ಟೊತ್ತಿಗೆ ಅದು ಕೊಳೆತು ನಾರಿರುತ್ತದೆ. Crocked ರಾಜಕರಣಿಗಳೂ, ಅವರ ಬಾಡಿಗೆ ಭಂಟರಾದ so called ಮಾಧ್ಯಮ ಮತ್ತು ಪತ್ರಿಕೆಯವರು, ಅದರ Postmotem ವರದಿಯನ್ನೂ ತಮ್ಮ ಅನುಕೂಲಕ್ಕೆ ತಕ್ಕಂತೆಯೇ ತೋರಿಸುತ್ತಾರೆ; ಬರೆಯುತ್ತಾರೆ. ಸತ್ಯ ಸತ್ತಷ್ಟೂ, ನಾರಿ ಕೊಲೆತಷ್ಟೂ ಅವರಿಗೇ ಲಾಭ! ಈ ಪ್ರಜಾಪ್ರಬುತ್ವಕ್ಕೆ ಏನನ್ನೋಣ?!