ಮಠ ಶಿಷ್ಯರಿಗೆ ಮರ‍್ಯಾದೆ ಇದ್ದರೆ...

3.5

 ಮಾಜಿ ಸಿಎಂ, ರಾಜ್ಯದ ಕೆಲವು ಮಠಗಳಿಗೆ ಹೊರೆ-ಹೊರೆಯಾಗಿ ಕಾಣಿಕೆ ಹೊರೆಸಿಕೊಟ್ಟರು ಎಂಬ ಗಟ್ಟಿಗಂಟಲಿನ ಆರೋಪ ಒಂದಷ್ಟು ದಿನ ಇತ್ತು. ಕೊಡಿಸಿಕೊಂಡವರು ತುಟಿ ಪಿಟಕ್ ಎನ್ನಲಿಲ್ಲ; ಶಿಷ್ಯರು ಪ್ರತಿಭಟಿಸಲಿಲ್ಲ. 'ಹೌದೂ’ ಸ್ಪಷ್ಟವಾಗಲಿಲ್ಲ; ’ಅಲ್ಲ’ವೂ ಅಲ್ಲಗಳೆಯಲಿಲ್ಲ!
 ಪ್ರಸಿದ್ಧ ಕಾಂಚೀ ಮಠದ ಇಬ್ಬರೂ ಸ್ವಾಮಿಗಳಮೇಲಿನ ಕೊಲೆಗಡುಕತನದ ಆರೋಪ ಈಗ ಮತ್ತೆ ಗರಿಗೆದರಿದೆ. ಮದ್ರಾಸ್ ಹೈಕೋರ್ಟ್, ವಿಚಾರಣೆಯ ಮಂದಗತಿಯನ್ನು ಖಂಡಿಸಿ ಅದನ್ನು ತ್ವರೆಗೊಳಿಸಬೇಕೆಂದಿದೆ. ಕೊಲೆಗಡುಕತನ, ಸ್ವಾಮೀಜಿಗಳ ಮೇಲಿನ ವೈಯಕ್ತಿಕ ಆರೋಪವೇ ಹೊರತು, ಶಂಕರ ಭಗವತ್ಪಾದರ ದಕ್ಷಿಣಾಮ್ನಾಯ ಪೀಠದ ಮಹತ್ವ ಮತ್ತು ಮೇರುತನಗಳನ್ನೇನೂ ಇದರಲ್ಲಿ ಪ್ರಶ್ನಿಸಿಲ್ಲ; ಇದೇ ಪೀಠದ ಪೂರ್ವಾಚಾರ‍್ಯ ಚಂದ್ರಶೇಖರೇಂದ್ರ ಸರಸ್ವತಿಗಳ ಸಚ್ಚಾರಿತ್ರ್ಯವನ್ನು ಯಾರೂ ಮರೆಯುವಂತಿಲ್ಲ. ಮಠ-ಪೀಠಗಳು, ಐಹಿಕ ದ್ರವ್ಯ ಸಂಪತ್ತು, ಕೀರ್ತಿಕಾಮನೆಗಳಿಂದ ಹೊರೆತಾದುದವೆಂಬುದನ್ನು ಬದುಕಿ ತೋರಿಸಿದ ಆಚಾರ‍್ಯರವರು. ಈ ಆರೋಪಿಗಳಿಗಾದರೊ ಆ ನೈತಿಕ ಶೌರ್ಯ ಅಂದೂ ಇಲ್ಲ; ಇಂದೂ ಇಲ್ಲ. ಆದರೆ ಅವರಿಂದಲೇ ಉಪದೇಶ, ಅಚಾರ, ದೀಕ್ಷೆ ಪಡೆದ ಓರ್ವ ಶ್ರದ್ಧಾಳು ಶಿಷ್ಯರನ್ನೂ ಈ ನೈತಿಕ ಪ್ರಜ್ಞೆ ಕಾಡಲಿಲ್ಲವಲ್ಲಾ; ಪಾಪದ ಆರೋಪಿಗಳನ್ನು ತುಚ್ಚೀಕರಿಸುವ ಸಂಪನ್ನತೆ, ನಮ್ಮಲ್ಲಿನ ಮಠಶಿಷ್ಯರೆಂಬ ಕುರಿಮಂದೆಗೂ ಉಂಟಾಗಲಿಲ್ಲವಲ್ಲಾ; ಸಮಾನ ಸಂಕಟ ತರುವ ಪ್ರಸಂಗಗಳಿವು!
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.