ಕನ್ನಡವ ತಂತ್ರಜ್ಞಾನ ಸ್ನೇಹಿ ಭಾಷೆಯಾಗಿಸಲು ನಾವು ನೀವು ಏನು ಮಾಡಬಹುದು?

5
ಜ್ಞಾನಪೀಠ ವಿಜೇತ ಡಾ.ಚಂದ್ರಶೇಖರ ಕಂಬಾರರು ಕನ್ನಡ ತಂತ್ರಜ್ಞಾನ ಸ್ನೇಹಿ ಭಾಷೆಯಾಗಬೇಕೆಂಬ ಕಳಕಳಿಯನ್ನು ವ್ಯಕ್ತಪಡಿಸಿದ್ದಾರೆ. ಕನ್ನಡ ಭಾಷೆಗೆ ತಂತ್ರಜ್ಞಾನ ಸ್ಪರ್ಶ ನೀಡುವ ಬಗ್ಗೆ ಹಿಂದಿನಿಂದಲ್ಲೂ ಚರ್ಚೆಗಳು ನಡೆಯುತ್ತಿವೆ. ಈ ಬಗ್ಗೆ ಪ್ರಯತ್ನಗಳು ನಡೆದಿವೆ. ಆದರೆ ಯಾವುದು ಪೂರ್ಣವಾಗಿ ಜಾರಿಗೆ ಬಂದಿಲ್ಲ. ಮೊಬೈಲನಲ್ಲಿ ಕನ್ನಡ ಬಳಕೆಯ ಬಗ್ಗೆ ಹೇಳುವುದಾದರೆ ಕೆಲವೇ ಕೆಲವು ಸೆಟ್ ಗಳಲ್ಲಿ ಮಾತ್ರ ಕನ್ನಡದ ಆಯ್ಕೆ ಇದೆ.ಕನ್ನಡ ಭಾಷೆಯ ಮೊಬೈಲಗಳಿದ್ದರೂ ಜನಸಾಮಾನ್ಯರಿಗೆ ಮೊ ಬೈಲನಲ್ಲಿ ಕನ್ನಡ ಬಳಸುವುದರ ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲ. ಇನ್ನೂ ನಮ್ಮ ಕನ್ನಡದ ಮಕ್ಕಳು ಕಂಪ್ಯೂಟರನ ಮೂಲಕ ರಾಮಾಯಣ,ಮಹಾಭಾರತ,ಸೇರಿದಂತೇ ಕನ್ನಡದ ಪ್ರಸಿದ್ದರ ಕಥೆಗಳನ್ನು ಓದುವಂತ ಪರಿಸರ ನಿರ್ಮಾಣವಾಗಬೇಕಿದೆ.ಇದಕ್ಕೆಲ್ಲಾ ಕನ್ನಡಿಗರಾದ ನಾವುಗಳೇ ಮುಂದಾಗಬೇಕೇ ವಿನಹ ಮತ್ಯಾರು ಅಲ್ಲ.ನಮ್ಮ ಕನ್ನಡ ನೆಲದಲ್ಲಿ ಸ್ಥಾಪನೆಯಾಗಿ ವಿಶ್ವವಿಖ್ಯಾತಿ ಪಡೆದ ಎಷ್ಟೋ ಸಾಪ್ಟ್ ವೇರ್ ಸಂಸ್ಥೆಗಳಿವೆ.ಇಂಥ ಸಂಸ್ಥೆಗಳು ಕನ್ನಡವನ್ನು ತಂತ್ರಜ್ಞಾನ ಸ್ನೇಹಿಗೊಳಿಸುವ ಮನಸ್ಸು ಮಾಡಲಿ. ನಮ್ಮ ಅಕ್ಕಪಕ್ಕದ ಇತರ ಭಾಷೆಗಳು ಈಗ ಈ ವಿಚಾರದಲ್ಲಿ ನಮ್ಮಗಿಂತ ಎಷ್ಟೋ ಮುಂದಿವೆ.ಕನ್ನಡಗರಾದ ನಮ್ಮಗೇನು ಕಡಿಮೆಯಾಗಿದೆ?.ಸಮರ್ಥ ತಂತ್ರಜ್ಞರು,ಕನ್ನಡಕ್ಕೆ ಕಾರ್ಯಕ್ಕೆ ತುಡಿಯುವ ಕನ್ನಡಿಗರು ಇರುವಾಗ ಇನ್ಯಾಕೆ ತಡ?
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನ0ದೀಶರೇ, ನಿಮ್ಮ ಮಾತು ನಿಜ. "ಬರಹ" ಮತ್ತು "ನುಡಿ" ತ0ತ್ರಾ0ಶಗಳನ್ನು ಪ್ರಪ್ರಥಮ ಬಾರಿಗೆ ಅಭಿವ್ರುದ್ದಿ ಪಡಿಸಿದ್ದು ಕನ್ನಡಿಗರಾದ ವಾಸು ಚ0ದ್ರಶೇಖರ್. ಅದನ್ನೇ ಭಾರತೀಯ ಎಲ್ಲ ಭಾಷಿಕರೂ ಅಳವಡಿಸಿಕೊ0ಡಿದ್ದಾರೆ. ನಮ್ಮಲ್ಲಿ ತ0ತ್ರಾ0ಶದ ಕೊರತೆಯಿಲ್ಲ ಆದರೆ ಅದನ್ನು ಬಳಸಿ, ಉಳಸಿ ಕನ್ನಡವನ್ನು ಅಭಿವ್ರುದ್ದಿ ಪಡಿಸಬೇಕೆ0ಬ ಕಾಳಜಿ ಇಲ್ಲದಿರುವುದು.

ಶ್ರೀಧರ್: (1) ಬರಹ ತಂತ್ರಾಂಶ - ವಾಸು ಅವರದು. "ನುಡಿ" - ಕನ್ನಡ ಗಣಕ ಪರಿಷತ್ತಿನದು. ಲೋದ್ಯಾಶಿ ಯವರ ಪದ ಎಂಬ ಒಂದು ತಂತ್ರಾಂಶ http://www.pada.co.in/ ಕೂಡ ಲಭ್ಯವಿದೆ. (2) ಬರಹದಲ್ಲಿ ಹೆಚ್ಚಿನ ಭಾರತೀಯ ಭಾಷೆಗಳಲ್ಲಿ ಲೇಖನ ಬರೆಯಬಹುದು. ಆದರೆ ಇತರ ಭಾಷಿಕರು ಅದನ್ನೇ ಬಳಸಿಕೊಂಡಿದ್ದಾರೆ ಅನ್ನುವುದೂ ಸರಿಯಲ್ಲ. ಪ್ರೀತಿ ಇರಲಿ. ಇತೀ, ಉಉನಾಶೆ