ಮೊಬೈಲ್ ಫಿಲಾಸಫಿ ಭಾಗ ೧

2.666665
ಮೊಬೈಲ್ ಫಿಲಾಸಫಿ ಭಾಗ ೧ 1. ನಾವು ಯಾರ ಸಂಪರ್ಕ ಇಟ್ಟುಕೊಳ್ಳಲು ಬಯಸುತ್ತೇವೋ ಅವರು ನಮಗೆ ಬೇಕಾದಗ ನಮ್ಮೊಡನೆ ಇರುವುದಿಲ್ಲ. ಅವರಿಗೆ ಕಾಲ್ ಮಾಡುತ್ತೇವೆ ಅಥವ ಅವರು ನಮ್ಮ ಮೊಬೈಲ್‌ಗೆ ಕಾಲ್ ಮಾಡುತ್ತಾರೆ. 2. ನಾವು ಯಾರ ಜೊತೆಯಲ್ಲಿ ಇರುತ್ತೇವೋ ಅವರ ಸಂಪರ್ಕ ನಮಗೆ ಬೇಕಾಗಿರುವುದಿಲ್ಲ. ಆದ್ದರಿಂದ ನಮಗೆ ಕಾಲ್ ಬಂದಾಗ ನಾವೇ ಕೊಂಚ ದೂರ ಹೋಗಿ ಮಾತಾಡುತ್ತೇವೆ. 3. ಆದ್ದರಿಂದ ನಮ್ಮನ್ನು ಬಯಸುವವರಿಂದ ನಾವು, ನಾವು ಬಯಸುವವರಿಂದ ನಮ್ಮವರು ಸದಾ ದೂರವೇ ಇರುತ್ತಾರೆ ಎಂಬ ಪರಮಸತ್ಯವನ್ನು ಮೊಬೈಲ್ ತಿಳಿಸಿಕೊಡುತ್ತದೆ. ಹೌದೆ?
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೊಬೈಲು ಸುಳ್ಳು ಹೇಳುವುದನ್ನೂ ಕಲೆಸಿಕೊಡುತ್ತದಲ್ಲವೆ? ;) -- "ಹೊಸ ಚಿಗುರು, ಹಳೆ ಬೇರು"

ದೂರವಾಣಿಯಲ್ಲೂ ಹೀಗೆಯೇ ಅಲ್ಲವೇ! ಎಷ್ಟೋ ಸಲ ಇತರರ ಮನೆಗೆ ಕರೆ ಮಾಡಿದಾಗ ಮಕ್ಕಳ ಧ್ವನಿ ಕೇಳಿಸುವುದು. ಇಂಥಹವರು ಮನೆಯಲ್ಲಿ ಇದ್ದಾರೆಯೇ ಅಂತ ಕೇಳಿದ್ರೆ, ಅಪ್ಪ ಯಾರೋ ಕೇಳ್ತಿದ್ದಾರೆ ಮಾತಾಡ್ತೀಯೋ ಅಥವಾ ನೀನು ಮನೆಯಲ್ಲಿ ಇಲ್ಲ ಅಂತ ಹೇಳ್ಬಿಡ್ಲೋ ಅಂತ ಆ ಮಕ್ಕಳಾಡುವುದೂ ಕೇಳಿಸತ್ತೆ. ಇನ್ನು ಮೊಬೈಲ್‍ನಲ್ಲಿ ಬೇಡದ ಕರೆ ಬಂದಾಗ ತೆಗೆದುಕೊಳ್ಳದೇ ಹಾಗೇ ಡಿಸ್‍ಕನೆಕ್ಟ್ ಮಾಡಬಹುದು. --- ತವಿಶ್ರೀನಿವಾಸ