ದಿ ಹಿಂದೂ ಇ-ಪೇಪರ್ ಫೆಬ್ರವರಿ ೯ ರಿಂದ

0

[:http://epaper.thehindu.com/sub_inf.htm|'ದಿ ಹಿಂದೂ' ಪತ್ರಿಕೆಯ] ಇ-ಪೇಪರ್ ಆವೃತ್ತಿ [:http://epaper.thehindu.com/sub_inf.htm|ಫೆಬ್ರವರಿ ೯ ರಿಂದ ಲಭ್ಯವಂತೆ]. ಇಲ್ಲಿಯವರೆಗೂ ಸಾಧಾರಣ ಬೆಂಗಳೂರಿನಲ್ಲಿ ಚಾಲ್ತಿಯಲ್ಲಿರುವ ಎಲ್ಲ ಪತ್ರಿಕೆಗಳು ಇ-ಪೇಪರ್ ಆಗಿ ಲಭ್ಯವಿದ್ದವು - 'ದಿ ಹಿಂದೂ' ಪತ್ರಿಕೆಯೊಂದನ್ನು ಬಿಟ್ಟು.

ತಮಾಷೆಯೆಂದರೆ ಉಳಿದೆಲ್ಲ ಪತ್ರಿಕೆಗಳ ಇ-ಪ್ರತಿಗಳು ಉಚಿತವಾಗಿ ಲಭ್ಯವಿದೆ. ಜಿಲ್ಲಾವಾರು ಕೆಲವು ಉತ್ತಮ ಸುದ್ದಿ ಪ್ರಕಟಣೆ, ಮೆಟ್ರೊ ಪ್ಲಸ್ ನಲ್ಲಿರುವ ಕೆಲವು ಕನ್ನಡಿಗರ ಉತ್ತಮ ಲೇಖನಗಳನ್ನು ಬಿಟ್ಟರೆ ಬೆಂಗಳೂರಿಗೆ ತಮಿಳು ಸುದ್ದಿ ಬಿತ್ತರಿಸುವ 'ದಿ ಹಿಂದೂ' ಪತ್ರಿಕೆಯ ಇ-ಪ್ರತಿ ಎಷ್ಟರ ಮಟ್ಟಿಗೆ ಸ್ವೀಕೃತವಾಗುತ್ತದೆ ಎಂಬುದು ಕುತೂಹಲದ ವಿಷಯ.

ತಮಿಳುನಾಡಿನಲ್ಲಿನ ಪ್ರಮುಖ ಸುದ್ದಿ ಬೆಂಗಳೂರಿನ 'ದಿ ಹಿಂದೂ' ಸಂಚಿಕೆಯ ಮುಖಪುಟದಲ್ಲಿರುತ್ತದೆ! ಆದರೆ ಇಂಗ್ಲೀಷ್ ಮಟ್ಟಿಗೆ 'ದಿ ಹಿಂದೂ' ಪತ್ರಿಕೆಯಷ್ಟು ಸಾಂಪ್ರದಾಯಿಕ ಪತ್ರಿಕೆ, ಶಿಸ್ತಿನ ಪತ್ರಿಕೆ ಸದ್ಯಕ್ಕೆ ಯಾವುದೂ ಬಹುಶಃ ಇಲ್ಲ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.