ಇದು ಅಪಘಾತವಲ್ಲ, ಸರ್ಕಾರ ಮಾಡಿದ ಕೊಲೆ

5

 

ಮೈಸೂರಿನ ಕಡಕೋಳ ಬಳಿಯ ಉ೦ಡಬತ್ತಿ ಕೆರೆಗೆ ಟೆ೦ಪೋ ಬಿದ್ದು ಸತ್ತವರ ಸ೦ಖ್ಯೆ ೩೧.  "ಇದು ಅಪಘಾತವಲ್ಲ, ಸರ್ಕಾರ ಮಾಡಿದ ಕೊಲೆ" ಎ೦ದ  ಕೆ.ಎಸ್.ಪುಟ್ಟಣ್ಣಯ್ಯ, ರೈತ ಸ೦ಘದ ಮುಖ೦ಡ.  ಇದು ನಿಜಕ್ಕೂ ಸರ್ಕಾರ ಮಾಡಿದ ಕೊಲೆಯೇ ಅಲ್ಲವೇ?  ರಾಜ್ಯದ ಎಲ್ಲ ದಿಕ್ಕುಗಳಲ್ಲಿಯೂ ರಸ್ತೆಗಳು ಹದಗೆಟ್ಟು ಹೋಗಿವೆ.  ಹಾಳಾದ ರಸ್ತೆಗಳಿ೦ದಾಗಿ ಜೀವ ಕೈಯಲ್ಲಿ ಹಿಡಿದು ಸ೦ಚರಿಸುವ ಪರಿಸ್ಥಿತಿ ಬ೦ದೊದಗಿದೆ.  ಅಭಿವೃದ್ಧಿಯಲ್ಲಿ ರಾಜ್ಯ ಎರಡನೆಯ ಸ್ಥಾನದಲ್ಲಿದೆ ಎ೦ದು ಕೊಚ್ಚಿಕೊಳ್ಳುತ್ತಿರುವ ಯಡ್ಯೂರಪ್ಪನವರಿಗೆ ಈ ದುರ೦ತಗಳು ಕಾಣುತ್ತಿವೆಯೇ?  ರಸ್ತೆಗಳ ಅಭಿವೃದ್ಧಿಯ ಬಗ್ಗೆ ದಿವ್ಯ ಉದಾಸೀನ ತೋರುತ್ತಿರುವ ಲೋಕೋಪಯೋಗಿ ಸಚಿವ ಸಿ.ಎ೦.ಉದಾಸಿಯವರು ತಮ್ಮ ಉದಾಸೀನವನ್ನು ತೊರೆದು ಇನ್ನಾದರೂ ಎದ್ದೇಳುವರೇ?  ಎಲ್ಲಕ್ಕೂ ಮಿಗಿಲಾಗಿ ಈ ರಾಜ್ಯದಲ್ಲಿ ಸರ್ಕಾರ ಎ೦ಬುದು ಇದೆಯೇ?  ಇನ್ನೆಷ್ಟು ಜೀವಗಳು ಇವರ ದುರಾಡಳಿತಕ್ಕೆ ಬಲಿಯಾಗಬೇಕು?  ಇತಿಹಾಸದಲ್ಲಿ ಕರ್ನಾಟಕ ಕ೦ಡ ಅತ್ಯ೦ತ ಕೀಳುಮಟ್ಟದ ಆಡಳಿತ ವ್ಯವಸ್ಥೆ ಬಿಜೆಪಿಯಿ೦ದ!  ಜನತೆ ಕನಸುಗಳನ್ನು ಕ೦ಡು ಬಿಜೆಪಿಗೆ ಮತ ನೀಡಿದ್ದಕ್ಕೆ ದಿನನಿತ್ಯ ರಸ್ತೆಗಳಲ್ಲಿ ಮತ ನೀಡಿದವರ ಮಾರಣಹೋಮ!!  ಇದಕ್ಕೆ೦ದು ಕೊನೆ?  ನಿಜಕ್ಕೂ ಮುಖ್ಯಮ೦ತ್ರಿ ಯಡ್ಯೂರಪ್ಪನವರಿಗೆ ಅಧಿಕಾರದಲ್ಲಿ ಮು೦ದುವರಿಯುವ ನೈತಿಕ ಹಕ್ಕಿದೆಯೇ????    ನಿಮ್ಮ ಅಭಿಪ್ರಾಯ!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

 ಯಡ್ಯೂರಪ್ಪ ಮತ್ತವರ ಸಹಚರರ ಪಾಪದ ಕೊಡ ತು೦ಬುತ್ತಿದೆ.  ಇಷ್ಟರಲ್ಲೇ ಶಿಕ್ಷೆ ಕಾದಿದೆ.  ಮಡಿದವರ ಸ೦ಬ೦ಧಿಕರ ಶಾಪ ಅವರಿಗೆ ತಟ್ಟದೆ ಇರುತ್ತದೆಯೇ?

 

ಈ ಯಡ್ಯೂರಪ್ಪನಿಂದಾಗಿ ಇತ್ತೀಚೆಗೆ "ಅಭಿವೃಧ್ಧಿ" ಎಂಬ ಶಬ್ದ ಕಿವಿಗೆ ಬಿದ್ದರೆ ಕಾದ ಸೀಸ ಹುಯ್ದಂತಾಗುತ್ತಿದೆ. ಯಡಿಯೂರಪ್ಪನ ಅಭಿವೃಧ್ಧಿ ಯಾರಿಗೆ ಬೇಕು.. ರೈತರು ಜನಸಾಮಾನ್ಯರು ಎಕ್ಕಡ ತಗೊಂಡು ಎರಡು ಬಾರಿಸಬೇಕು ಇಂಥವಕ್ಕೆ..

ತುಂಬಾ ಕಡಿದಾದ ದಾ(ಏ)ರಿ... ಒಂದೆಡೆ ಹಳ್ಲ, ಇನ್ನೊಂದೆಡೆ ಕೆರೆ... ಜೊತೆಗೆ ಕೆಟ್ಟದಾದ ರಸ್ತೆ ಬೇರೆ... ಮೈಸೂರು - ಊಟಿ, ಮೈಸೂರು - ಕೊಯಮತ್ತೂರು, ಮೈಸೂರು - ವೈನಾಡು........... ರಸ್ತೆ ಆದ್ದರಿಂದ ವಾಹನ ದಟ್ಟಣೆ ಬೇರೆ... ಓವರ್ ಟೇಕ್ ಮಾಡಲಾಗದಂತ ಅಸ್ಟೊಂದು ಅಗಲ ವಿಲ್ಲದ ರಸ್ತೆ... ಎಸ್ಟು ವರ್ಷಗಳಿಂದ ಈ ರಸ್ತೆ ಹೀಗೇ ಇದೆ ಎಂದರೆ...... ವಾಹನ ಚಾಲನೆ ಮಾಡುವಾಗ ಮೈಯೆಲ್ಲಾ ಕಣ್ಣಾಗಿರಬೇಕು... ಒಟ್ನಲ್ಲಿ... ಕೆಟ್ಟ ವ್ಯವ(ರ)ಸ್ತೆಯಡಿಯಲ್ಲಿ ಸತ್ ಪ್ರಜೆಗಳು.... :( :( :(