ಇಂದಿನ ಪರಿಸ್ಥಿತಿಯಲ್ಲಿ ಸ್ವದೇಶಿ ಯಾವುದು? ವಿದೇಶಿ ಯಾವುದು?

4.25

        ವಿಕಾಸ ಹೆಗಡೆ ರಾಜೀವ ದೀಕ್ಷಿತರಿಗೆ ಶ್ರದ್ಧಾಂಜಲಿ ಸಲ್ಲಿಸಲು ಬರೆದ ಲೇಖನದ (http://sampada.net/blog/vikashegde/03/12/2010/29321)  ಚ ರ್ಚೆಯು ಎಲ್ಲೆಲ್ಲೋ ತಲುಪಿದೆ. ಆ ಕೊಂಡಿಯು ಚರ್ಚೆಗೆ ಸರಿಯಲ್ಲ ಅನ್ನಿಸಿದ್ದು, ಚರ್ಚೆಯು ಅಗತ್ಯ ಎನ್ನಿಸಿದ್ದರಿಂದ ಈ ಕೊಂಡಿಯಲ್ಲಿ ಮುಂದುವರಿಸುತ್ತಿದ್ದೇನೆ.

 

 ವಿಷಯ ಇಷ್ಟು!

ಒಂದು:

ಸ್ವದೇಶಿ ಎಂಬ ತತ್ವವನ್ನು ಬಹಳ ಜನ ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ.

ಸ್ವದೇಶಿ ಎಂದರೆ ಆ ಪ್ರದೇಶದ್ದು ಮಾತ್ರ ಎಂದರ್ಥ. ಭಾರತ ದೇಶದ್ದು ಅಂತ ಅರ್ಥ ಅಲ್ಲ.

ಸ್ವದೇಶಿಯಲ್ಲಿ ಎಂದರೆ ಮೆಟ್ಟಿಲುಗಳು ಹೀಗಿವೆ,

೧. ಮೊದಲು ಬರುವುದು ನಿಸರ್ಗದತ್ತ ಉತ್ಪನ್ನಗಳು.
೨. ಮನೆಯಲ್ಲಿ ತಯಾರಾದ ವಸ್ತುಗಳು.
೩. ಪಕ್ಕದ ಮನೆಯಲ್ಲಿ ತಯಾರಾದ ವಸ್ತುಗಳು.
೪. ನಮ್ಮ ಏರಿಯಾದಲ್ಲಿ ತಯಾರಾದ ವಸ್ತುಗಳು.
೫. ನಮ್ಮ ಊರಲ್ಲಿ ತಯಾರಾದ ವಸ್ತುಗಳು.
೬. ನಮ್ಮ ಅಕ್ಕ ಪಕ್ಕದ ಊರಲ್ಲಿ ತಯಾರಾದ ವಸ್ತುಗಳು.
೭. ನಮ್ಮ ಎಕಾನಾಮಿಯಲ್ಲಿ ತಯಾರಾಗುವ ವಸ್ತುಗಳು.

ಸ್ವದೇಶಿ ಎಂದರೆ ಭಾರತಕ್ಕೆ ಮಾತ್ರ ಸೀಮಿತವೆಂದಲ್ಲ. ಇದು ವಿಶ್ವವ್ಯಾಪಿ ತತ್ವ.

ಪಕ್ಕದ ಮನೆಯಲ್ಲಿ ಸೋಪು ಸಿಗುತ್ತಿದ್ದರೂ ಪಕ್ಕದ ಏರಿಯಾದಿಂದ ಸೋಪು ಖರೀದಿಸಿದರೆ ಅದು ವಿದೇಶಿಯೇ! (ಕ್ವಾಲಿಟಿ ವಿಷಯ ಇಲ್ಲಿ ಬೇಡ)

ನಮ್ಮ ಊರಿನಲ್ಲಿ ಸಿಗದೇ ಪಕ್ಕದ ಊರಿನಲ್ಲಿ ಕೊಂಡುಕೊಂಡರೆ ಅದು ಸ್ವದೇಶಿ!

ಸ್ವದೇಶಿ ಎಂಬುದು ಆರ್ಥಿಕ ಸ್ವಾವಲಂಬನೆಗೆ ಹಾದಿ.

 

ಎರಡು:

{ಮೊದಲು ನಮ್ಮ ಗ್ರಾಮಗಳಲ್ಲೇ ಉತ್ಪನ್ನಗಳು ತಯಾರಾಗಬೇಕು,ಅವು ಅವೆಲೆಬಲ್ ಇಲ್ಲದ ಸ್ಥಳಗಳಲ್ಲಿ ಅವರ ಕೈಗೆಟಕುವ ದರದಲ್ಲಿ(ನಮ್ಮ ಲಾಭ ಹಿಡಿದು) ರಫ್ತಾಗಬೇಕು,ಅಂದರೆ ಮಾತ್ರ ವಿದೇಶದಿಂದ ಬರುವ ವಸ್ತುಗಳಿಗೆ ಕಡಿವಾಣ ಬೀಳುತ್ತೆ ಹಾಗೂ ಬಳಕೆಗೂ ಸಹ..}
ಒಂದು ಬಾರಿ ಪ್ರಾಕ್ಟಿಕಲ್ ಆಗಿ ಯೋಚಿಸಿ.. ಬಾಬಾ ರಾಮ್ ದೇವ್ ಗೆ ಕಾರ್ಪೋರೇಟುಗಳಿಂದ ಜೀವ ಬೆದರಿಕೆ ಯಾಕೆ ಇದೆ? ಯಾಕೆಂದರೆ ಅವರು ತಯಾರಿಸುತ್ತಿರುವ ಟೂತ್ ಪೇಸ್ಟ್ ಮತ್ತು ಇತರ (ಬೇವಿನಕಡ್ಡಿ ??) ಪ್ರಾಡಕ್ಟುಗಳಿಂದ ಹಿಂದುಸ್ತಾನ್ ಯುನಿಲಿವರ್ ನ ಮಾರಾಟಕ್ಕೆ ಪೆಟ್ಟು ಬೀಳುತ್ತಿದೆ. ಅಥವಾ ಮುಂದೆ ಪೆಟ್ಟು ಬೀಳಬಹುದು ಎಂಬ ಭಯ ಅವರಿಗಿದೆ. ನೀವು ಹೇಳಿದಂತೆ ಗ್ರಾಮದಲ್ಲೆ ಉತ್ಪನ್ನಗಳು ತಯಾರಾಗುವುದು ದೇಶದ ಎಲ್ಲಾ ಕಡೆ ಒಂದೇ ಬಾರಿಗೆ ಆಗುವುದಿಲ್ಲ. ಅದಕ್ಕೆ ಸಮಯ ಬೇಕು. ಅಲ್ಲದೆ ಅಂತಹವನ್ನು ಯುನಿಲಿವರ್ ದುಡ್ಡು ಕೊಟ್ಟು ಕೊಂಡುಕೊಂಡು ಜಾಣತನ ಮೆರೆಯಬಹುದು. MTR ಆದ ಗತಿ ಆಗಬಹುದು. ಈ ನಿಟ್ಟಿನಲ್ಲಿ ಯೋಚಿಸಿದರೆ ಬಾಬಾ ಮಾಡಿದ್ದು ಪೂರ್ತಿ ಸ್ವದೇಶಿ ಅಲ್ಲದಿದ್ದರೂ ಈಗಿನ ಪರಿಸ್ಥಿತಿಗೆ ಸರಿಯಾಗಿದೆ. ಅಲ್ಲದೆ ನಾನು ಮೊದಲೇ‌ ಹೇಳಿದಂತೆ ಅವರೆಲ್ಲೂ‌ ನನ್ನದೇ ಬ್ರಾಂಡಿನ ಉತ್ಪನ್ನಗಳನ್ನು ಮಾತ್ರ ಕೊಳ್ಲಿ ಎಂದು ಹೇಳಿಲ್ಲ.

 ಹಳ್ಳಿಯಲ್ಲಿರುವವರಿಗೆ ಬಾಬಾರ ಬೇವಿನ ಕಡ್ಡಿಪುಡಿ ಕೊಂಡುಕೊಳ್ಳುವಷ್ಟು ದುಡ್ಡೆಲ್ಲಿದೆ ಸ್ವಾಮಿ? ನಮ್ಮ ದೇಶದಲ್ಲೀಗ ಹೆಚ್ಚುಕಮ್ಮಿ ಶೇ ೩೦ ರಷ್ಟು ಜನ ಪಟ್ಟಣಗಳಲ್ಲಿದ್ದಾರೆ. ಅಂತಹವರಿಗೆ ಇರುವ ಮಾಲುಗಳು ಅವು. ಯುನಿಲಿವರ್ ನಂತಹ ಕಂಪೆನಿಗಳು ದುಡ್ಡುಮಾಡುವುದೇ ಇಂತಹ ಗ್ರಾಹಕರಿಂದ.

 

ಚರ್ಚೆಗೆ ಸ್ವಾಗತ.

 

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಮುಲ್-ವಿದೇಶಿ !!! ಅಂತಾದರೆ >೬. ನಮ್ಮ ಅಕ್ಕ ಪಕ್ಕದ ಊರಲ್ಲಿ ತಯಾರಾದ ವಸ್ತುಗಳು. ತಪ್ಪು .. ನಂದಿನಿ ಮೊಸರು ಅಮುಲ್ ಮೊಸರಿಗಿಂತ ದುಬಾರಿ ಎನಿಸಿದರೆ ,ನಂದಿನಿ ಸ್ವದೇಶೀ ಅಮುಲ ವಿದೇಶಿ ಎಂದು ಬಿಡಲಾಗುವುದಿಲ್ಲ.. ಬಿಟ್ಟರೆ,ಪಾಯಿಂಟ್ ೭ ಸಹ ತಪ್ಪಾಗುತ್ತೆ.. >ಸಿಂಪಲ್. ನನ್ನ ಮನೆಯ ಹಳ್ಳಿಯ ಸುತ್ತಮುತ್ತ ಸಾಕಷ್ಟು ಬೇವಿನ ಗಿಡಗಳು ಬೆಳೆಯುತ್ತವೆ. ಮತ್ತೆ ರಾಮದೇವರ ಬ್ರಾಂಡ್ ನ್ನು ಹರಿದ್ವಾರದಿಂದ ಆಮದು ಮಾಡಿಕೊಳ್ಳುವುದೇಕೆ? ಇಲ್ಲಿ ಹಣ ರಾಮದೇವರ ಕೈಗೆ ಸೇರಿ ಕೇಂದ್ರೀಕರಣವಾಗುತ್ತಿದೆ. ಉಚಿತವಾಗಿ ಪ್ರಕೃತಿಯಲ್ಲಿ ದೊರೆಯುವುದನ್ನು ಹರಿದ್ವಾರಕ್ಕೆ ಹಣ ಕಳುಹಿಸಿ ಖರೀದಿಸಿದರೆ ಅದು ಸ್ವದೇಶಿಯೇ?< ಆದರೆ ನಮ್ಮ ಮನೆಯ ಸುತ್ತ ಮುತ್ತ ಬೆಳೆಯಲ್ಲ..!!ನಿಮ್ಮಿಂದ ಅಥವಾ ಬಾ.ರಾ ಅವರಲ್ಲಿ ಯಾವುದು ನನ್ನ ಎಕೊನಾಮಿಯಲ್ಲಿ ಬರುತ್ತೆ ಅದನ್ನು ನೋಡಿ ಆಮದು ಮಾಡಿ ಕೊಂಡರೆ ವಿದೇಶಿಯೇ? ಇವೆಲ್ಲ ಇಂಟರ್ ಲಿಂಕ್ಡ್ ,ಮತ್ತು ಇಂಟರ್ ಡಿಪೆನ್ದೆಂತ, ಮೇಲಿನ ಮೆಟ್ಟಿಲುಗಳನ್ನು ಒಟ್ಟಾಗಿ ಸ್ವದೇಶೀ ಎನ್ನಬೇಕು..ಹೊರತು ಒಂದೊಂದಾಗಿ ಸ್ವದೇಶೀ/ವಿದೇಶಿ ಅಂತ ವಿಂಗಡಿಸಬಾರದು..

<<ನಂದಿನಿ ಮೊಸರು ಅಮುಲ್ ಮೊಸರಿಗಿಂತ ದುಬಾರಿ ಎನಿಸಿದರೆ ,ನಂದಿನಿ ಸ್ವದೇಶೀ ಅಮುಲ ವಿದೇಶಿ ಎಂದು ಬಿಡಲಾಗುವುದಿಲ್ಲ.. ಬಿಟ್ಟರೆ,ಪಾಯಿಂಟ್ ೭ ಸಹ ತಪ್ಪಾಗುತ್ತೆ..>> ಹೇಗೆ ತಪ್ಪಾಗುತ್ತೆ? ನಂದಿನಿ ದುಬಾರಿ ಎನ್ನಿಸಿದರೂ ನಂದಿನಿ ಸ್ವದೇಶಿಯೇ! ಕೋಲ್ಗೇಟ್ ಗಿಂತ ಮಿಸ್ವಾಕ್ ದುಬಾರಿಯಲ್ಲವೇ? ಹಾಗೆ! ಸ್ವದೇಶಿ ಕಡಿಮೆ ಬೆಲೆಯದಾಗಲೇಬೇಕು ಅಂತ ಏನೂ ಇಲ್ಲ. <<ಆದರೆ ನಮ್ಮ ಮನೆಯ ಸುತ್ತ ಮುತ್ತ ಬೆಳೆಯಲ್ಲ..!!ನಿಮ್ಮಿಂದ ಅಥವಾ ಬಾ.ರಾ ಅವರಲ್ಲಿ ಯಾವುದು ನನ್ನ ಎಕೊನಾಮಿಯಲ್ಲಿ ಬರುತ್ತೆ ಅದನ್ನು ನೋಡಿ ಆಮದು ಮಾಡಿ ಕೊಂಡರೆ ವಿದೇಶಿಯೇ?>> if and only if ಸಿಗದಿದ್ದರೆ ಆಗ ಅದು ಸ್ವದೇಶಿ. <<ಇವೆಲ್ಲ ಇಂಟರ್ ಲಿಂಕ್ಡ್ ,ಮತ್ತು ಇಂಟರ್ ಡಿಪೆನ್ದೆಂತ, ಮೇಲಿನ ಮೆಟ್ಟಿಲುಗಳನ್ನು ಒಟ್ಟಾಗಿ ಸ್ವದೇಶೀ ಎನ್ನಬೇಕು..ಹೊರತು ಒಂದೊಂದಾಗಿ ಸ್ವದೇಶೀ/ವಿದೇಶಿ ಅಂತ ವಿಂಗಡಿಸಬಾರದು..>> ಹೌದು ತತ್ವದ ಬಗ್ಗೆ ಸಂಪೂರ್ಣ ಕ್ಲಾರಿಟಿ ಇರಬೇಕು. ಆಗ ಇವೆಲ್ಲ ತಲೆಬಿಸಿಗಳು ಇರುವುದಿಲ್ಲ.

>ಸ್ವದೇಶಿ ಕಡಿಮೆ ಬೆಲೆಯದಾಗಲೇಬೇಕು ಅಂತ ಏನೂ ಇಲ್ಲ.< >if and only if ಸಿಗದಿದ್ದರೆ ಆಗ ಅದು ಸ್ವದೇಶಿ.< ಹಾಗಿದ್ದರೆ ಎಕಾನಾಮಿ ಬಗ್ಗೆ ಉಲ್ಲೇಖಿಸಲೇ ಬಾರದಿತ್ತು..ಎಷ್ಟೇ ದುಬಾರಿ ಎನಿಸಿದರೂ ತೆಗೆದುಕೊಳ್ಳಿ ಅನ್ನಬಹುದಿತ್ತು ಕಡಿಮೆ ಬೆಲೆಯ ಸ್ವದೇಶೀ ಏನಿದೆ..ಅದನ್ನು ನೋಡಿ ತೆಗೆದುಕೊಂಡರೂ ಸ್ವದೆಶಿಯೇ.. ಬೇರೆ ಊರಿನದ್ದು ಆದರೂ ಪರವಾಗಿಲ್ಲ.. ಒಂದು ವಸ್ತು ಪಕ್ಕದ ಮನೆಯಲ್ಲೇ ಇದ್ದರೂ ,ಪಕ್ಕದ ಏರಿಯದಲ್ಲಿ ಸಿಗುವ ವಸ್ತು ಸಸ್ತಾ ಎನಿಸಿದರೆ ಅದನ್ನು ತೆಗೆದುಕೊಳ್ಳುವುದರಲ್ಲಿ ತಪ್ಪೇನಿಲ್ಲ.. ಏಕೆಂದರೆ ಆಗ ಸ್ವದೇಶಿಯ ಪರಿಧಿ..ಪಕ್ಕದ ಏರಿಯ ವರೆಗೂ ಹೋಗುತ್ತದೆ.. ಆದರೆ ಅದೇ ಬೆಲೆ ಯಲ್ಲಿ ಪಕ್ಕದೂರಿನಲ್ಲಿ ಸಿಗುತ್ತಿದ್ದರೆ ಅಲ್ಲಿಂದ ತರಿಸುವುದು ವಿದೇಶಿ ಆಗುತ್ತದೆ.. ಅದಕ್ಕೆ ಹೇಳಿದ್ದು ಇವೆಲ್ಲ ಇಂಟರ್ ಲಿಂಕ್ಡ್ ಅಂತ..

ಉದ್ದೇಶ ಇಷ್ಟೇ! ಎಲ್ಲಿಂದಲೋ ತರಿಸಿ ಬಳಸುವುದಕ್ಕಿಂತ ನಮ್ಮ ಕೈಗೆಟುಕುವ ಕಡೆ ದೊರೆಯುವ ವಸ್ತುಗಳ ಬಳಕೆ ನಮ್ಮ ಸುತ್ತಲಿನ ವಿತ್ತೀಯ ಶಕ್ತಿಯನ್ನು ಹೆಚ್ಚಿಸುತ್ತದೆ. ಇದಮಿತ್ಥಂ ಎಂದು ಗಣಿತದಂತೆ ಹೇಳಲಾಗದಿದ್ದರೂ ನೀವು ಹೇಳಿದಂತೆ ಒಂದು ವಿವೇಚನೆ ಇರಬೇಕಾಗುತ್ತದೆ. ನನ್ನ ಪಕ್ಕದವನ ಬಳಿ ನಾನು ಕೊಂಡರೆ ಪಕ್ಕದವನು ನನ್ನ ಬಳಿ ಕೊಳ್ಳುತ್ತಾನೆ. ನನು ದೂರಕ್ಕೆ ಹೋದರೆ ಅವನೂ ದೂರಕ್ಕೆ ಹೋಗುತ್ತಾನೆ. ಕಡಿಮೆ ಬೆಲೆಗೆ ಸಿಗುತ್ತದೆ ಎಂದು ಪಕ್ಕದ ಊರಿಗೆ ಎಲ್ಲರೂ ಹೊರಡತೊಡಗಿದರೆ ಆ ಊರಿನವನು ಕಡಿಮೆ ಬೆಲೆಗೆ ಮಾರಿ ಅಕ್ಕ ಪಕ್ಕದ ಊರಿನವನಲ್ಲೆಲ್ಲ monopoly ಮಾಡಿಕೊಳ್ಲಬಹುದು. ಒಂದು ತಾಲ್ಲೂಕು ಮೊನೊಪಲಿ ಮಾಡಿಕೊಂಡವನು ಮತ್ತೊಂದು ತಾಲ್ಲೂಕಿಗೆ ಹೊರಡುತ್ತಾನೆ. ಕಡಿಮೆ ಬೆಲೆಗೆ ಕೊಡುತ್ತಾನೆ. ನಮ್ಮ ದೇಶದವನೇ ತಾನೆ ಅಂತ ಯೋಚಿಸಿ ಅವನ ಬಳಿ ಕೊಂಡರೆ ಆಗ ನಮ್ಮ ಮನೆಯ ಅಕ್ಕಪಕ್ಕದ ಕೈಗಾರಿಕೆಗಳು ಹೊಡೆತ ತಿನ್ನುತ್ತವೆ. ಈಗ ಆಗಿರುವುದು ಅದೇ. ಮತ್ತೆ ಇದು corporate ಸಂಸ್ಕ್‌ಋತಿಗೆ ದಾರಿ ಮಾಡಿಕೊಡುತ್ತದೆ. ಬಂಡವಾಳ ಹೂಡಿ ಕಡಿಮೆ ಬೆಲೆಗೆ ರುಚಿ ತೋರಿಸಿ monolpoly ಮಾಡುವುದು ಹಳೆಯ ವ್ಯಾಪಾರಿ ಟ್ರಿಕ್. cooperative ಇದ್ದರೆ ಪರವಾಗಿಲ್ಲ competitive ಇದ್ದರೆ ತೊಂದರೆ.

ಓ ಹೊಸ ಥ್ರೆಡ್ ಬರೆದೇ ಬಿಟ್ರಿ ಹರ್ಷ ಅವರೇ!.. ಒಳ್ಳೇದಾಯಿತು. ನನಗೆ ಅನಿಸುವ ಕೆಲವು ವಿಷಯಗಳು : ೧. ಇದಮಿಥ್ಥಂ ಎನ್ನುವುದು ನಮ್ಮ ಸಂಸ್ಕೃತಿಗೆ ಹೇಳಿ ಮಾಡಿಸಿದ್ದಲ್ಲ. ಆದ್ದರಿಂದ ಅವರವರ ಭಾವಕ್ಕೆ ತಕ್ಕಂತೆ ಸ್ವದೇಶಿ ಅನುಸರಿಸುವುದೇ ಲೇಸು. ಹಾಗಿದ್ದರೆ ಸ್ವದೇಶಿ ಅಂದರೆ ಏನು? ಪ್ರತಿಯೊಬ್ಬನಿಗೂ ಬೇರೆ ಬೇರೆ ಹಂತಗಳಲ್ಲಿ ಬೇರೆ ಬೇರೆ ಜವಾಬ್ದಾರಿಗಳಿರುತ್ತವೆ. ಉದಾ ತನ್ನ ದೇಹದ ಆರೋಗ್ಯವನ್ನು ನೋಡಿಕೊಳ್ಳುವುದು, ಅದಕ್ಕೆ ಬೇಕಾದ್ದು ಕೊಡುವುದು ನಮ್ಮದೇ ಜವಾಬ್ದಾರಿ. ಇದು ವೈಯಕ್ತಿಕ ಮಟ್ಟ. ಇಲ್ಲಿಂದ ನಂತರ ನಮ್ಮ ನಮ್ಮ ಕುಟುಂಬಕ್ಕೆ ಒಳೆಯದಾಗುವಂಥದ್ದು ಮಾಡಬೇಕು. ತದನಂತರ ನಮ್ಮ ಬೀದಿಗೆ ಅಥವಾ ನಮ್ಮ ಕೋಮಿಗೆ ಒಳ್ಳೆಯದಾಗುವಂಥದ್ದು ಮಾಡಬೇಕು (ಇಲ್ಲಿ ಕೋಮು ಅಂದರೆ ಋಣಾತ್ಮಕವೇ ಆಗಬೇಕಿಲ್ಲ. ಅದೊಂದು ಸಾಮಾಜಿಕ ಭದ್ರತೆಯೂ ಹೌದು). ನಂತರ ತನ್ನ ದೇಶಕ್ಕೆ ಒಳ್ಳೆಯದಾಗುವಂಥದ್ದು ಮಾಡಬೇಕು. ಈ ನಿಟ್ಟಿನಲ್ಲಿ ಯೋಚಿಸಿದರೆ ಹರ್ಷ ಅವರು ಹೇಳಿದಂತೆ ಬಾಬಾ ರಾಮ್ ದೇವ್ ಉತ್ಪನ್ನ ಕೊಂಡರೆ ತನ್ನ ಊರಲ್ಲೇ ಉತ್ಪಾದನೆಯಾಗುವ ಜೇನು, ಅಲೊವೆರ, ಬೇವಿನ ಕಡ್ಡಿಗಳಿಗೆ ಅನ್ಯಾಯವಾದಂತೆ. ಯಾಕೆಂದರೆ ಅವನ್ನು ಬೆಂಬಲಿಸುವ (ಕೊಳ್ಳುವ ಮೂಲಕ) ಜವಾಬ್ದಾರಿ ನಮ್ಮ ಮೇಲಿದೆ. ಆದರೆ, ಇಲ್ಲಿ ಒಂದು ವಿಷಯವನ್ನು ಗಮನಿಸಬೇಕು. ರಾಷ್ಟ್ರೀಯ ತುರ್ತಿನ ಸಂದರ್ಭದಲ್ಲಿ ಎಲ್ಲರೂ ತಮ್ಮ ತಮ್ಮ ಆದ್ಯತೆಗಳನ್ನು ಮರೆತು ದೇಶಕ್ಕೆ ಸಹಾಯ ಮಾಡಿದ್ದನ್ನು ನಾವು ಅನೇಕ ಸಂದರ್ಭಗಳಲ್ಲಿ ನೋಡಿದ್ದೇವೆ. ಅದು ಪ್ರಾಕೃತಿಕ ವಿಕೋಪಗಳ ಸಮಯದಲ್ಲಿ ಇರಬಹುದು ಅಥವಾ ಕಾರ್ಗಿಲ್ ಯುಧ್ಧದ ಸಮಯದಲ್ಲಿ ಇರಬಹುದು. ಭಾರತದ ಈಗಿನ ಆರ್ಥಿಕ ಪರಿಸ್ಥಿತಿ ನೋಡಿದರೆ ಅದು ವಿಕೋಪಕ್ಕಿಂತ ಕಮ್ಮಿಯೇನಿಲ್ಲ. ನೂರಾರು ವಿದೇಶಿ ಕಂಪೆನಿಗಳು ನಮ್ಮ ಮೂಢ ಜನರನ್ನು ಪುಸಲಾಯಿಸಿ, ಔಷಧಿ, ಟಾನಿಕ್ಕು, ಹೆಲ್ಥ್ ಡ್ರಿಂಕ್ ಗಳು, ಲಸಿಕೆಗಳು ಹಲ್ಲುಪುಡಿ, ಪ್ರಸಾದನ ಸಾಮಾಗ್ರಿಗಳು ಹೀಗೆ ಏನೇನೋ ನೆಪದಲ್ಲಿ ಅನಗತ್ಯ ವಸ್ತುಗಳನ್ನು ನಮಗೆ ಮಾರಾಟ ಮಾಡಿ ನಮ್ಮ ಸಂಪತ್ತನ್ನು ದೋಚಿದ್ದಾರೆ. ಈ ನಿಟ್ಟಿನಲ್ಲಿ ಯೋಚಿಸಿದಾಗ, ಇದನ್ನೊಂದು ತುರ್ತಾಗಿ ಪರಿಹರಿಸಬೇಕಾದ ಅವಘಡ ಎಂದು ತಿಳಿದುಕೊಂಡಾಗ ಇಂತಹ ವಿದೇಶಿ ಕಂಪೆನಿಗಳಿಗೆ ಒಂದು ಪರ್ಯಾವವನ್ನು ಹುಡುಕಬೇಕಾಗುತ್ತದೆ. ಇದು ಎರಡು ರೀತಿಯಲ್ಲಿ ಕೆಲಸ ಮಾಡಬೇಕು - ದುಡ್ಡು ವಿದೇಶಕ್ಕೆ ಹೋಗುವ ಬದಲಾಗಿ ನಮ್ಮಲ್ಲೇ ಉಳಿಯಬೇಕು, ಮತ್ತು ಎರಡನೇಯದಾಗಿ ಇದು ಕುಡಲೇ ಜಾರಿಯಾಗಬೇಕು (ಯಾಕೆಂದರೆ ಇನ್ನೂ ನಿಧಾನವಾದಲ್ಲಿ ಸಂಪತ್ತು ಪೂರಾ ಕೊಳ್ಳೆ ಹೋಗಬಹುದು). ಇಂತಹ ಸಂದರ್ಭದಲ್ಲಿ ರಾ.ಬಾ. ಉತ್ಪನ್ನಗಳು ಈ ಉದ್ದೇಶವನ್ನು ಈಡೇರಿಸುತ್ತದಲ್ಲವೇ? ಅಂದರೆ "ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡರೆ ಸಾವಿರ ವರ್ಷ ಆಯುಸ್ಸು" ಎಂದಂತೆ. ಅದರ ಬದಲಾಗಿ ಬರೇ ಹಳ್ಳಿಯಲ್ಲಿ ಉದ್ದಿಮೆಗಳು ಬರಬೇಕೆಂದು ಕೂತರೆ ಅವು ದೇಶವ್ಯಾಪಿ ಆಗುವ ಹೊತ್ತಿಗೆ ದೇಶವೇ ಉಳಿಯುತ್ತದೆ ಎನ್ನುವುದು ಸಂಶಯ. ೨. ಇವೆಲ್ಲದರ ಜೊತೆ ತುರ್ತಾಗಿ ಬೇಕಾಗಿರುವುದು ಹಳ್ಳಿಗಳಲ್ಲಿ ಆರ್ಥಿಕ ವ್ಯವಸ್ಥೆ ಬೆಳೆಸಲು ಬೇಕಾದ ಯುವ ಜನ. ಇವರಿಗೆ ಆದ್ಯತೆಗಳ ಸ್ಪಷ್ಟ ಅರಿವಿದ್ದು, ಅದಕ್ಕಾಗಿ ದುಡಿಯುವವರಾಗಿರಬೇಕು. ಅಂತಹ ಪಡೆಯೊಂದನ್ನು ರಾಮ್ ದೇವ್ ಕಟ್ಟುತ್ತಿದ್ದಾರೆ. ತಾವು ಹೋದಲ್ಲೆಲ್ಲ ಈ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ. ೩. ಬಾ. ರಾ. ರಿಂದಾಗಿ ಆಗಿರುವ ಇನ್ನೊಂದು ಪರೋಕ್ಷ ಉಪಯೋಗವೆಂದರೆ - Alternative medicine ಬಗ್ಗೆ ಜನರಿಗೆ ಹೆಚ್ಚಾಗಿರುವ ನಂಬಿಕೆ. ಯಾಕೆ ಅಂತಿರಾ? ತಾವು ಹೋದಲ್ಲೆಲ್ಲಾ ನೆಲ್ಲಿ, ಅಮೃತ ಬಳ್ಳಿ, ತುಳಸಿ, ಅಲೊವೆರಾ ಮುಂತಾದವುಗಳ ಬಗ್ಗೆ (ಗಮನಿಸಿ - ಗಿಡಗಳ ಬಗ್ಗೆ. ತಮ್ಮ ಪ್ರಾಡಕ್ಟುಗಳ ಬಗ್ಗೆ ಅಲ್ಲ) ಸಾಕಷ್ಟು ಪ್ರಚಾರ ಮಾಡುತ್ತಾ ಬಂದಿದ್ದಾರೆ. ಇದರಿಂದಾಗಿ ಆರೋಗ್ಯವಂತ ಜೀವನ ಹೊಂದಲು ದುಬಾರಿ ಔಷಧಿಗಳ ಅಗತ್ಯವಿಲ್ಲ ಎಂದು ಜನರಿಗೆ ಅರಿವಾಗತೊಡಗಿದೆ. ದೇಶಿ ಔಷಧ ಪಧ್ಧತಿಗಳ ಬಗ್ಗೆ ಹೆಚ್ಚಾಗಿರುವ ಜನಪ್ರಿಯತೆಗೆ ಸಾಕ್ಷಿ ಬೆಂಗಳೂರಿನಲ್ಲಿ ಮೊನ್ನೆ ತಾನೆ ಮುಕ್ತಾಯಗೊಂಡ ಆಯುಷ್ ಸಮ್ಮೇಳನ. ಅದು ಜನರಿಂದ ಕಿಕ್ಕಿರಿದು ಹೋಗಿತ್ತು. ಅಲ್ಲಿ ಇದ್ದ ಮಳಿಗೆಗಳಲ್ಲಿ ಇದ್ದಿದ್ದು ಸ್ವದೇಶಿ ಉದ್ದಿಮೆಗಳೇ. ಕೊಟೆಕ್ಕಲ್ ಆರ್ಯವೈದ್ಯಶಾಲೆ, ಇನ್ನೂ ಮುಂತಾದ ಅನೇಕ ಔಷದಿ ತಯಾರಕ ಕಂಪೆನಿಗಳು ಅಲ್ಲಿದ್ದವು. ಇವೆಲ್ಲ ಕಾರ್ಪೋರೇಟ್ ಅನಿಸಿದವರಿಗೆ ಔಷಧಿ ಗಿಡಗಳ ಬಗ್ಗೆ ಮಾಹಿತಿ, ಪುಸ್ತಕಗಳು, ಮನೆಮದ್ದು, ಔಷಧೀಯ ಗಿಡಗಳೂ ಲಭ್ಯವಿದ್ದವು. ಇಂತಹವುಗಳ ಬಗ್ಗೆ ಜನರಿಗೆ ಆಸಕ್ತಿ ಹೆಚ್ಚಾದಂತೆ ದೇಶೀ ಆರ್ಥಿಕತೆ ಗಟ್ಟಿಯಾಗುವುದರಲ್ಲಿ ಸಂಶಯವಿಲ್ಲ. ಈ ಕೆಲಸ ಬಾಬಾ ಒಬ್ಬರಿಂದಲೇ ಆಗುತ್ತದೆ ಎಂದು ಖಂಡಿತಾ ತಿಳಿಯಬಾರದು. ಬಾಬಾ ರಂತಹ ನೂರಾರು ಜನ ಬೇಕು.

ಮೊದಲ ಅಭಿಪ್ರಾಯಕ್ಕೆ ಕಾಲವೇ ಉತ್ತರ ಹೇಳಬೇಕು. ಯಾಕೆಂದರೆ ಬ್ರಿಟಿಷರ ಜಾಗಕ್ಕೆ ನಮ್ಮ ಭ್ರಷ್ಟ ರಾಜಕಾರಣಿಗಳು ಕೂತಂತೆ ರಾಮದೇವರ ಪ್ರಾಡಕ್ಟುಗಳು ಮಾರುಕಟ್ಟೆಯಲ್ಲಿ ಕೂರಬಾರದು. ರಾಮದೇವರ ಪ್ರಾಡಕ್ಟುಗಳ ಮೊನೋಪಲಿ ಆದರೆ ಮತ್ತೆ ಕಷ್ಟ. ರಾಮದೇವರು ಒಳ್ಲೆಯವರಾದರೂ ಅವರ ನಂತರ ಬರುವವರು ಒಳ್ಲೆಯವರು ಎಂದು ಹೇಳಲು ಬರುವುದಿಲ್ಲ. ಇದಕ್ಕಾಗಿ ಒಬ್ಬ ವ್ಯಕ್ತಿಯ ಮೇಲೆ ಅವಲಂಬಿತವಾಗದ ಒಂದು foolproof ವ್ಯವಸ್ಥೆ ಬೇಕು. ಅದೇ ನಿಜವಾದ ಸ್ವದೇಶಿ. <<ಇವೆಲ್ಲದರ ಜೊತೆ ತುರ್ತಾಗಿ ಬೇಕಾಗಿರುವುದು ಹಳ್ಳಿಗಳಲ್ಲಿ ಆರ್ಥಿಕ ವ್ಯವಸ್ಥೆ ಬೆಳೆಸಲು ಬೇಕಾದ ಯುವ ಜನ. ಇವರಿಗೆ ಆದ್ಯತೆಗಳ ಸ್ಪಷ್ಟ ಅರಿವಿದ್ದು, ಅದಕ್ಕಾಗಿ ದುಡಿಯುವವರಾಗಿರಬೇಕು. ಅಂತಹ ಪಡೆಯೊಂದನ್ನು ರಾಮ್ ದೇವ್ ಕಟ್ಟುತ್ತಿದ್ದಾರೆ. ತಾವು ಹೋದಲ್ಲೆಲ್ಲ ಈ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡುತ್ತಿದ್ದಾರೆ. >> ಇದರ ಬಗ್ಗೆ ಚರ್ಚಿಸಿದ್ದೇನಾದರೂ ಕೆಲಸ ನಡೆಯುತ್ತಿರುವುದು ಕಂಡುಬರುತ್ತಿಲ್ಲ. decentralization ಮಾದರಿಯಲ್ಲಿ ಕೆಲಸ ಮಾಡುವಂತೆ ಸೂಚಿಸಲಾಗಿದೆ ಅಂತ ಕೇಳಿದ್ದೇನೆ. ಆದರೆ ಇದು ನಡೆಯುತ್ತಿದೆಯೇ ಎಂಬುದು ಗೊತ್ತಿಲ್ಲ. ನಡೆದರೆ ಒಳ್ಲೆಯದು. Alternative medicine ಗಳ ಬಗ್ಗೆ ಬಾಬಾ ರಾಮದೇವರಿಗಿಂತ ಹೆಚ್ಚಿನ ಕೆಲಸ ಮಾಡಿದವರಿದ್ದಾರೆ. ಬಾಬಾ ರ ಅಡ್ವರ್ಟೈಸ್ ಮೆಂಟ್ ಚೆನ್ನಾಗಿದೆ ಅಷ್ಟೇ! ಬಾಬಾ ರಾಮದೇವರು ಔಷಧಿ ತಯಾರಿಸುವ ಮತ್ತು ಅದನ್ನು ಮಾರುಕಟ್ಟೆಯಲ್ಲಿ ಕಳಿಸುವ ವಿಧಾನಗಳೆಲ್ಲ ಕಾರ್ಪೊರೇಟ್ ವಿಧಾನದ್ದು. ಬಾಬಾ ರಾಮದೇವರ ಫ್ರಾಂಚೈಸಿ ಪಡೆಯುವವನು ಹತ್ತು ಲಕ್ಷ ಡಿಪಾಸಿಟ್ ಇಡಬೆಕು, ಐದು ಲಕ್ಷ ವೆಚ್ಚದ ಔಷಧಿಗಳನ್ನು ಖರೀದಿ ಮಾಡಬೇಕು. (ಇದು ಎರಡು ವರ್ಷಗಳ ಹಿಂದಿನ ರೇಟು) ಸಂತ ಅಸಾರಾಮಜೀ ಬಾಪು ಇತ್ಯಾದಿ ಸನ್ಯಾಸಿಗಳ ಔಷಧಿಗಳು ಕಡಿಮೆ ಬೆಲೆಗೆ ದೊರೆಯುತ್ತವಲ್ಲದೇ ಪರಿಣಾಮಕಾರಿಯೂ ಇವೆ. ಭಾರತೀಯ ಔಷಧಿ ವ್ಯವಸ್ಥೆಯ ಬಗ್ಗೆ ಜಾಗೃತಿ ಶುರುವಾಗಿ ಸಾಕಷ್ಟು ವರ್ಷಗಳು ಕಳೆದಿವೆ. ರಾಮದೇವರದೂ ಸಹ ಈ ಜಾಗೃತಿಯಲ್ಲಿ ಒಂದು ಪಾತ್ರವಿದೆ ಎಂಬುದು ಒಪ್ಪತಕ್ಕ ವಿಷಯ.

ಆಯ್ತು. ರಾಮದೇವ್ ಸ್ವದೇಶಿ ಅಲ್ಲದಿದ್ದರೆ ಅಲ್ಲ, ಹೌದಾದರೆ ಹೌದು. ಬಿಟ್ಟುಬಿಡಿ ಅದನ್ನು. ಈ ಚರ್ಚೆ ಬೆಳೆಸಿದ್ದಕ್ಕೆ ನನಗೆ ಬೇಸರವಾಗುತ್ತಿದೆ. ಕ್ಷಮೆಯಿರಲಿ ಅದಕ್ಕಾಗಿ.

ಹರ್ಷರ ಚರ್ಚೆಯಲ್ಲಿ ನನ್ನವೊಂದಿಷ್ಟು ಅನಿಸಿಕೆಗಳು.. ನನಗನಿಸಿದಂತೆ ರಾಜೀವರ ಸ್ವದೇಶಿ ಸಿದ್ದಾಂತ ಗಾಂಧೀಜಿಯವರ ಗ್ರಾಮಸ್ವರಾಜ್ಯ ಕಲ್ಪನೆಯಿಂದ ಪ್ರಭಾವಿತವಾದದ್ದು. ಸ್ಥಳೀಯ ಅವಶ್ಯಕತೆಗಳು ಆದಷ್ಟೂ ಸ್ಥಳೀಯವಾಗಿಯೇ ಪೂರೈಸಲ್ಪಟ್ಟು, ಸ್ಥಳೀಯ ಜನರ ಆರ್ಥಿಕತೆಗೆ ಸಹಾಯವಾಗಬೇಕು ಎಂಬ ತತ್ವವುಳ್ಳದ್ದು. ಸರಳವಾದ, ಅವಶ್ಯಕತೆ ಇದ್ದಷ್ಟನ್ನೇ ಹೊಂದುವ ಜೀವನ ತತ್ವದಿಂದ ಪೃಕೃತಿ ಮತ್ತು ಮನುಷ್ಯನ ಸಂಬಂಧ ಸುಲಲಿತವಾಗಿ ಮುಂದುವರಿಯಬೇಕು ಎಂಬ ಉದ್ದೇಶ ಉಳ್ಳದ್ದು. ಇದೊಂದು ನೆಲ-ಜಲಗಳ ಅತಿಯಾದ ಶೋಷಣೆ ಇಲ್ಲದ ಶ್ರಮಾಧಾರಿತ ಗುಡಿಕೈಗಾರಿಕೆಗಳ ಕನಸು. ಇಂತಹ ಕನಸೊಂದು ಎಲ್ಲರನ್ನು ತಲುಪುವ , ವಾಸ್ತವಕ್ಕೆ ಹೊಂದಿಕೊಳ್ಳುವ ಭರದಲ್ಲಿ ಒನಿಡಾ, ವಿಡಿಯೊಕೊನ್, ಗೋದ್ರೇಜ್, ಪಾರ್ಲೆ ಮುಂತಾದವರ ಉತ್ಪನ್ನಗಳನ್ನು ಕೊಳ್ಳುವುದು ಮತ್ತು ಹೊರ ದೇಶಕ್ಕೆ ವಿದೇಶಿ ವಿನಿಮಯ ಹೋಗುವುದನ್ನು ತಡೆಯುವುದೇ ಸ್ವದೇಶಿ ತತ್ವ ಎನ್ನುವ ಮಟ್ಟಕ್ಕೆ ಸರಳಿಕೃತಗೊಂಡಿತು. ಸ್ವದೇಶಿಯ ನಿಜ ಅರ್ಥದಂತೆ..ಸ್ವದೇಶಿ ಎಂದರೆ ಸ್ಥಳೀಯ ಎಂಬುದನ್ನು ಗಮದಲ್ಲಿಟ್ಟುಕೊಂಡು, ನಾವು ಹೇಗೆ ಇದನ್ನು ಪಾಲಿಸಬಹುದು ಎಂದು ಯೋಚಿಸಿದಾಗ ಕೆಲವು ಸರಳ ವಿಧಾನಗಳು ಹೊಳೆಯುತ್ತವೆ. ಅದರಂತೆ ನಾನು ಯಾವ ಸ್ಥಳಕ್ಕೆ ಹೋಗುತ್ತೇನೆಯೊ ಆ ಸ್ಥಳದ ಜನರ ಆರ್ಥಿಕತೆಗೆ ನೆರವಾಗುವಂತೆ ನನ್ನ ವ್ಯವಹಾರವನ್ನು ರೂಪಿಸಿಕೊಳ್ಳುವುದು ಒಂದು ಸುಲಭ ದಾರಿ. ಉದಾಹರಣೆಗೆ ಪ್ರವಾಸಕ್ಕೆ ಹೋದರೆ.. - ಸ್ಥಳೀಯರು ನಡೆಸುವ ಹೊಂ ಸ್ಟೆಗಳಿದ್ದಲ್ಲಿ ಅಲ್ಲಿಯೇ ವಾಸ್ತವ್ಯ ಹೂಡುವುದು. - ಊಟಕ್ಕೆ ಸ್ಥಳೀಯ ಖಾನಾವಳಿ. - ಹೆಗ್ಗೊಡಿನಂತ ಊರಿಗೆ ಹೋದರೆ 'ಚರಕ' ದ ಉತ್ಪನ್ನಗಳನ್ನು ಕೊಳ್ಳುವುದು ಅಥವಾ ಬನವಾಸಿಗೆ ಹೋದರೆ ಅಲ್ಲಿಯ ಗುಡಿಗಾರರಿಂದ ಸಣ್ಣ-ಪುಟ್ಟ ಕಲಾಕೃತಿ ಖರೀದಿಸುವುದು ನನ್ನ ಆದ್ಯತೆಯಾಗಬೇಕು. - ಕೇರಳಕ್ಕೆ ಹೋದರೆ ಕರ್ನಾಟಕದ ಪ್ಯಾಕಡ್ ಎಳೆನೀರು ಲಭ್ಯವಿದ್ದರೂ..ಸ್ಥಳೀಯವಾಗಿ ಮಾರುವ ಎಳೆ ನೀರನ್ನೆ ಕುಡಿಯುವುದು. ತಿಪಟೂರಿಗೆ ಬಂದಾಗ ಕೇರಳಕ್ಕೆ ಬೈ ಹೇಳಿ, ತಿಪಟೂರಿನ ಎಳೆನೀರಿಗೆ ಜೈ ಎನ್ನುವುದು. (ಸಧ್ಯಕ್ಕಿಷ್ಟು..ಚರ್ಚೆ ಮುಂದುವರಿದಂತೆ ಇನ್ನಷ್ಟು ಸೇರಿಸುವೆ)

ನನಗನ್ನಿಸಿದ೦ತೆ ಹಾಗೂ ಶ್ರೀಸಾಲೀಮಠರು ಹೇಳಿದ೦ತೆ “ಸ್ವದೇಶಿ“ ಎ೦ಬ ಪದದ ಅರ್ಥೈಸುವಿಕೆಯಲ್ಲಿ ಪ್ರಸಕ್ತ ಜನಾ೦ಗ ತಪ್ಪು ದಾರಿ ತುಳಿಯುತ್ತಿದೆ! ನಿಜಾರ್ಥದಲ್ಲಿ ಭಾರತೀಯ ಗ್ರಾಮೀಣ ಗುಡಿ ಕೈಗಾರಿಕೆಗಳನ್ನು ಪ್ರೋತ್ಸಾಹಿಸಲಿಕ್ಕಾಗಿ, ಅದಕ್ಕೊ೦ದು ಪೂರ‍ಕ ಅರ್ಥವ್ಯವಸ್ಥೆಯನ್ನು ನಿರ್ಮಿಸುವುದಕ್ಕಾಗಿ, ಮಾರುಕಟ್ಟೆಯ ಬೆಳವಣಿಗೆಗಾಗಿ, ಮು೦ದಾನೊ೦ದು ದಿನದಲ್ಲಿ ಕೈಗಾರಿಕೆಗಳ ಅಭಿವೃಧ್ಧಿಯಿ೦ದ, ಗುಡಿ ಕೈಗಾರಿಕೆಗಳು ನಾಶವಾಗಬಾರದೆ೦ಬ ಮು೦ದಾಲೋಚನೆ ಯಿ೦ದ ಬಾಪು “ಸ್ವದೇಶೀ“ ಚಿ೦ತನೆಯನ್ನು ವ್ಯಾಪಕವಾಗಿ ಪ್ರಚಾರ ಮಾಡಿದರೆ೦ಬುದು ನನ್ನ ಅನಿಸಿಕೆ. ಭಾರತೀಯರು ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ನಗರ ಪ್ರದೇಶಗಳಲ್ಲಿ ಸ್ವಯ೦ ತಯಾರಿಸುವ ಉತ್ಪನ್ನಗಳನ್ನು ಕೊಳ್ಳುವುದರ ಮೂಲಕ ಸ್ವಯ೦ ಅರ್ಥವ್ಯವಸ್ಥೆಯನ್ನು ನಿರ್ಮಿಸಿಕೊಳ್ಳಲೆ೦ಬ ಚಿ೦ತನೆ ಗಾ೦ಧೀಜಿಯ ವರಲ್ಲಿತ್ತು! ಆದರೆ ನ೦ತರದ ದಿನಗಳಲ್ಲಿ ಸ್ವದೇಶೀ ತನ್ನ ಅರ್ಥವನ್ನು ಕಳೆದುಕೊ೦ಡಿತು. ಸರ್ಕಾರಗಳೂ ಕೈಗರಿಕೆಯ ಅಭೀವೃಧ್ಧಿಯತ್ತ ವಿಶೇಷ ಗಮನವನ್ನು ಹರಿಸಿದ್ದರಿ೦ದ, ಗ್ರಾಮೀಣ ಗುಡಿ ಕೈಗಾರಿಕೆಗಳು ತಮ್ಮ ಪತನದ ಹಾದಿಯನ್ನು ಹಿಡಿದವು! ಪ್ರಸಕ್ತ ರಾಜ್ಯಸರ್ಕಾರಗಳು ಹಾಗೂ ಕೇ೦ದ್ರ ಸರ್ಕಾರಗಳು ಸ್ವದೇಶೀ ಚಿ೦ತನೆಯತ್ತ ಹೆಚ್ಚೆಚ್ಚು ಗಮನ ನೀಡುತ್ತಿವೆಯಾದರೂ, ವ್ಯಾಪಕ ಪ್ರಚಾರವನ್ನು ನೀಡುವುದರಲ್ಲಿ ಸೋಲುತ್ತಿವೆ! ಮೂಲಾರ್ಥದಲ್ಲಿ ‘ಸ್ವದೇಶೀ‘ ಯು ನಮ್ಮ ಗ್ರಾಮೀಣ ಅರ್ಥವಯವಸ್ಥೆಯ ಏಳಿಗೆಯನ್ನು ಪ್ರತಿಬಿ೦ಬಿಸುತ್ತದೆ. ಹಾಗೆಯೇ “ಗ್ರಾಮೋಧ್ಧಾರವೇ ದೇಶೋಧ್ಧಾರ“ ಎ೦ಬ ತತ್ವದಲ್ಲಿಯೂ ಈ “ಸ್ವದೇಶೀ“ ಪದವು ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಳ್ಳುತ್ತದೆ! ತನ್ಮೂಲಕ ಅದು ದೇಶವ್ಯಾಪಿಯಾಗಿ “ಸ್ವದೇಶ“ವನ್ನು ಪ್ರತಿಬಿ೦ಬಿಸುತ್ತದೆ! ರಾಜೀವ ದೀಕ್ಷಿತರೂ ಅದೇ “ ಗ್ರಾಮೋಧ್ಧಾರ“ ದ ಕಲ್ಪನೆಯಿ೦ದಲೇ ‘ಸ್ವದೇಶೀ‘ ಆ೦ದೋಲನವನ್ನು ಶುರು ಹಚ್ಚಿಕೊ೦ಡಿದ್ದು! ಅದರ ಔನ್ನತ್ಯದೆಡೆಗೆ ಅದನ್ನು ಮುನ್ನಡೆಸಿದ್ದು! ಸ್ವದೇಶೀ ಉತ್ಪನ್ನಗಳನ್ನು ಬಳಸುವುದರ ಮೂಲಕ ಸ್ವದೇಶೀ ಅರ್ಥವ್ಯವಸ್ಥೆಗೊ೦ದು ಭದ್ರ ಬುನಾದಿಯನ್ನು ಹಾಕುವುದು ಅವರ ಉದ್ದೇಶವಾಗಿತ್ತು. ಉದಾಹರಣೆಗೆ ಶ್ರೀಕ್ಷೇತ್ರ ಧರ್ಮಸ್ಥಳದ “ಗ್ರಾಮೀಣಾ ಭಿವೃಧ್ಧಿ ಕಾರ್ಯಕ್ತಮಗಳಲ್ಲಿನ ಒ೦ದು ಸಣ್ಣ ಕ್ರಮವಿದೆ. ಒ೦ದೂರಿನ ಒ೦ದು ಸ೦ಘದ ಸದಸ್ಯರು ಪ್ರತಿದಿನವೂ ಹೊರಗೆಲ್ಲೂ ಕೆಲಸಕ್ಕೆ ಹೋಗದೆ, ತಮ್ಮ ಸದಸ್ಯರ ಪ್ರತಿ ಮನೆಗೂ ಕೆಲಸಕ್ಕೆ ಹೋಗುತ್ತಾರೆ. ಒಬ್ಬೊಬ್ಬರ ಮನೆಗೆ ಎಲ್ಲರೂ ಒ೦ದೊ೦ದು ದಿನ! ವಾರವಿಡೀ ಖಾಯ೦ ಕೆಲಸವೂ ಆಯಿತು.. ತನ್ನ ಮನೆಯ ಕೆಲಸವೂ ಆಯಿತು! ಇದು ಆ ಊರಿನಲ್ಲಿನ ನಿರುದ್ಯೋಗ ಸಮಸ್ಯೆಯನ್ನು ಸಾಧ್ಯವಾದಷ್ಟು ಮಟ್ಟಿಗೆ ಹೋಗಲಾಡಿಸುತ್ತದೆ ( ಅದಕ್ಕಾಗಿಯೇ ಇತ್ತೀಚೆಗೆ ಹೆಚ್ಚೆಚ್ಚು ಜನಪ್ರಿಯವಾಗುತ್ತಿರುವ ಈ ಕಾರ್ಯಕ್ರಮ ನಿಧಾನವಾಗಿ ಇಡೀ ಕರ್ನಾಟಕ ರಾಜ್ಯದಾದ್ಯ೦ತ ವ್ಯಾಪಿಸುತ್ತಿದೆ) ಹೀಗೆ ಆಯಾ ಊರಿನ ಸದಸ್ಯರು ಆಯಾ ಊರಿನ ನಿರು ದ್ಯೋಹ ಸಮಸ್ಯೆಯನ್ನು ಹೋಗಲಾಡಿಸಿಕೊ೦ಡಲ್ಲಿ ಎಷ್ಟು ಉತ್ತಮವಲ್ಲವೆ? ಅ೦ತೆಯೇ ಆ ಕಾರ್ಯಕ್ರಮಗಳದಿಯಲ್ಲಿ ಗ್ರಾಮೀನ ಗುಡಿ ಕೈಗಾರಿಕೆಗಳನ್ನು ಆರ೦ಭಿಸುವವರಿಗೆ, ಯಾವುದೋ ಕಾರಣಕ್ಕೆ ತಮ್ಮ ಪರ೦ಪರಾನುಗತ ಕಾರ್ಯಗಳನ್ನು ಕೈಬಿಟ್ಟು, ಹತಾಶರಾಗಿ ಪ್ರಸಕ್ತ ಅದನ್ನು ಮು೦ದುವರೆಸುವಲ್ಲಿ ಆಸಕ್ತಿಯಿರುವವರಿಗೆ ಸ೦ಘದ ಸಹಾಯದಿ೦ದ ಮೂಲಧನವನ್ನು ಕಡಿಮೆ ಬಡ್ದಿಗೆ ನೀದಲಾಗುತ್ತದೆ. ವಾರಕ್ಕೊಮ್ಮೆಯೋ ಯಾ ತಿ೦ಗಳಿಗೊಮ್ಮೆ ಯೋ ಅದನ್ನು ಮರುಪಾವತಿಸಿಕೊ೦ಡು ಹೋದರಾಯಿತು. ಅವರು ಉತ್ಪಾದಿಸಿದ ವಸ್ತುಗಳಿಗೆ ಸ೦ಘದಿ೦ದಲೇ ಮಾರುಕಟ್ಟೆಯನ್ನು ಕಲ್ಪಿಸುವ ವ್ಯವಸ್ಥೆಯೂ ಇದೆ. ಸ೦ಘದ ಕೇ೦ದ್ರಗಳಿಗೆ ತಮ್ಮ ಉತ್ಪಾದಿತ ವಸ್ತುಗಳನ್ನು ನಿಗದಿತ ಬೆಲೆಗೆ ನೀಡಿದರಾಯಿತು. ಗುಡಿ ಕೈಗರಿಕೆಗಳ ಬೆಳವಣಿಗೆಗೆ ಇದಕ್ಕಿ೦ತ ಉತ್ತಮ ಮಾರ್ಗವಿದೆಯೇ? “ಸ್ವದೇಶಿ‘ ಪದವನ್ನು ಹೀಗೆ ನಾವು ಅರ್ಥೈಸಿಕೊ೦ಡಲ್ಲಿ ನಮಗೆ “ಕಾರ್ಪೋರೇಟ್“ ಪದ ಅರ್ಥದ ವ್ಯಾಪ್ತಿ ಬಹು ಸುಲಭವಾಗಿ ಆಗುವುದಿಲ್ಲವೇ! ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.