ಇದು ನಮ್ಮ ಭಾರತದಲ್ಲಿ ಮಾತ್ರ ನಡೆಯುವ ಘಟನೆ.

4.4

ಇದು ನಮ್ಮ ಭಾರತದಲ್ಲಿ ಮಾತ್ರ ನಡೆಯುವ ಘಟನೆ.ಒಬ್ಬ ಕಾಶ್ಮೀರಿ ಉಗ್ರವಾದಿ ಭಾರತದ ಧ್ವಜವನ್ನು ಸುಡುತ್ತಿರುವುದುಶ್ರೀನಗರದಲ್ಲಿ ನಮ್ಮ ತ್ರಿವರ್ಣ ಧ್ವಜದ ಗತಿ

ನಮ್ಮ ಭಾರತ ಸರಕಾರ ಮತ್ತು ಮೀಡಿಯಗಳ ನಾಚಿಕೆ ಗೇಡು ದ್ವಂದ್ವ ನೀತಿ

ಇಡೀ ಪ್ರಪಂಚದಲ್ಲಿ ನಮ್ಮದೇ ಇಂತಹ ದೇಶ , ಇಲ್ಲಿ ಯಾರೂ ಏನೂ ಬೇಕಾದರೂ ಮಾಡ ಬಹುದು

ಇಲ್ಲಿನ  ಬ್ರೇಕಿಂಗ ನ್ಯೂಸ್ ನೋಡಿ


*       ತೆಂಡೂಲ್ಕರ್ ನಮ್ಮ  ರಾಷ್ಟ್ರ ಧ್ವಜದಂತಹ ಕೇಕ್ ಮಾಡಿ ಕಟ್ ಮಾಡಿದರೆ ಅವನನ್ನು ನಾವು ಬಯ್ಯುತ್ತೇವೆ
*       ಮಂದಿರಾ ಬೇಡಿ ಎಲ್ಲದೇಶಗಳ ಧ್ವಜವನ್ನೊಳಗೊಂಡ ಸೀರೆ ಉಟ್ಟರೆ ಅವಳನ್ನು ಕ್ಷಮೆ ಕೇಳಿಸುತ್ತೇವೆ   
*       ಕಲಕತ್ತದಲ್ಲೊಬ್ಬ ಬೆಂಗಳೂರಿನಲ್ಲೊಬ್ಬ ಸಿಪಾಯಿ ಕೈತಪ್ಪಿ ನಮ್ಮ ಧ್ವಜವನ್ನು ಬೀಳಿಸಿದರೆ ನಾವು ಅವರನ್ನು ಕೆಲ್ಸದಿಂದ ವಜಾ ಮಾಡುತ್ತೇವೆ

ಯಾಕೆ ಈ ರೀತಿಯ ದ್ವಂದ್ವ ನೀತಿ?

ಕಳೆದ ಅಮರನಾಥ ಸಂಘರ್ಷದಲ್ಲಿ ಜಮ್ಮುವಾಸಿಯೊಬ್ಬ ನಮ್ಮ ಧ್ವಜ ಹಿಡಿದು ಭಾರತ ಮಾತಾ ಕೀ ಜೈ ಎಂದು ಕೂಗಿದ್ದಕ್ಕೆ ಅವನನ್ನು ಕಾಶ್ಮೀರಿ ಪೋಲೀಸ್ ಕಮಿಷರನೊಬ್ಬ ಕೊಲ್ಲಲು ಆರ್ಡರ್ ಕೊಟ್ಟು ಕೊಲ್ಲಿಸಿದ, ಶಾಂತಿಯುತ ಜಮ್ಮುವಾಸಿಗಳು ಕೊಲ್ಲಲ್ಪಟ್ಟರು
ಅಮರನಾಥದಂತಹ  ಕೇಸಿನ  ಹಾಗೆ ಕಾಶ್ಮೀರಿಗಳು ತಮ್ಮ ಬೇಡಿಕೆಗಾಗಿ ನಮ್ಮ  ರಾಷ್ಟ್ರ ಧ್ವಜ ಸುಟ್ಟು ಚಳವಳಿ ಮಾಡಿದರೆ ನಮ್ಮ ರಾಜಕೀಯ ಧುರೀಣರೊಬ್ಬರು ಅಲ್ಲಿಗೆ ತೆರಳಿ ಕೋಟಿಗಟ್ಟಲೆ ಹಣ ಸ್ಯಾಂಕ್ಷನ್ ಮಾಡಿ ಬರುತ್ತಾರೆ.
ಪ್ರತಿ ಆಗಸ್ಟ್ ೧೪ ರಂದು ಪಾಕೀಸ್ತಾನೀ ಧ್ವಜ ಹಾರಿಸಲ್ಪಟ್ಟು ನಮ್ಮ  ಧ್ವಜ ಸುಡಲ್ಪಡುತ್ತದೆ ಘನ ಸರ್ಕಾರ  ...ನೋಡಿಕೊಂಡು ಸುಮ್ಮನಿರುತ್ತದೆ


ಇದು ನಮ್ಮ ಭಾರತದಲ್ಲಿ ಮಾತ್ರ ನಡೆಯುವ ಘಟನೆ.


ಮೇಲಿನ  ಚಿತ್ರಗಳನ್ನು  ನೋಡಿ


ನಮ್ಮ ಮಾಧ್ಯಮಗಳಿಗೆ  ನಾಚಿಕೆಯಾಗಬೇಕು


ಇಂತಹ ಚಿತ್ರ, ಹಾಗೂ ನಿಜ ವಿಷಯಗಳನ್ನು ಮರೆ ಮಾಚಿದ್ದಕ್ಕೆ"ಬರೇ ಜನ ಗಣ  ಮನ" ದಿಂದ ಏನಾಗುತ್ತದೆ?  ಹೇಳಿ..?

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕ್ಷಮಿಸಿ, ಮೇಲಿನ ಲೇಖನದಲ್ಲಿ ಒಂದು ತಪ್ಪು ನುಸುಳಿದೆ. ತಪ್ಪು: <<ಒಬ್ಬ ಕಾಶ್ಮೀರಿ ಉಗ್ರವಾದಿ ಭಾರತದ ಧ್ವಜವನ್ನು ಸುಡುತ್ತಿರುವುದು>> ಒಪ್ಪು: ಒಬ್ಬ ಪ್ರತ್ಯೇಕತಾವಾದಿ ಗುಂಪಿನ ನಾಯಕ ನಮ್ಮ ರಾಷ್ಟ್ರ ಧ್ವಜವನ್ನು ಸುಡುತ್ತಿರುವುದು. ದಯವಿಟ್ಟು ಇದನ್ನು ಸರಿಪಡಿಸಿಕೊಂಡು ಓದಿಕೊಳ್ಳಿ

ಇಂಥ ರೇಜಿಗೆ ಹುಟ್ಟಿಸುವ ರಾಜಕಾರಣಿಗಳ ಕೈಯಿಂದ ಆಳಿಸಿಕೊಳ್ಳುವ ಭಾರತೀಯ ಸೇನೆಯದೆ ತಪ್ಪು. ಹೀಗೆ ಹೇಳಲು ನನಗೆ ಅತೀವ ದುಖ:ವಾಗುತ್ತದೆ. ಭಾರತಿಯ ಸೇನೆ ಮೇಲೆ ಆರೋಪ ಹೊರಿಸಲು. ಆದರೆ ಯಾರೇ ಆದರೂ ಒಳ್ಳೆಯವರಾಗಿದ್ದರೆ ಸಾಲದು, ಅನ್ಯಾಯದ ವಿರುಧ್ಧ ಸಿಡಿದು ಏಳದಿದ್ದರೆ ದಿದ್ದರೆ ಅದು ಅನ್ಯಾಯವನ್ನು ಪ್ರೋತ್ಸಾಹಿಸಿದಷ್ಟೇ ತಪ್ಪು ಎಂದು ನನ್ನ ಭಾವನೆ. ಇದು ಪ್ರಜೆಗಳಿಗೂ ಅನ್ವಯಿಸುತ್ತದೆ, ಸೇನೆಯಂಥ ಸಂಸ್ಥೆಗಳಿಗೂ. ಭಾರತದಲ್ಲಿ ಬಹುಸಂಖ್ಯಾತ ಜನರು ರಾಜಕೀಯದಿಂದ ರೋಸಿಹೋಗಿ ಇಂಥವರಿಂದ ಬಿಡುಗಡೆ ಕಾಣಿಸುವ ಸಹಾಯವನ್ನು ನಿರೀಕ್ಷಿಸುತ್ತಿದ್ದಾರೆ ಎಂಬುದನ್ನು ಸೇನೆ ಅರಿಯಬೇಕು, ಆ ಸಹಾಯವನ್ನು ನಿಡುವ ಶಕ್ತಿ ಸೇನೆ ಬಿಟ್ಟರೆ ಬೇರಾರು ಇಲ್ಲ ಎಂಬುದನ್ನು ಅದು ಅರಿಯಬೇಕು. ನೀವು ಪ್ರಸ್ತಾಪಿಸಿದ ವಿಷಯವೊಂದೇ ಅಲ್ಲ, ರೈತರ ಬವಣೆ, ಬಡವರ, ಅಸಹಾಯಕರ ಗೋಳು ಸಹಿಸಲಾರದಷ್ಟು ಅಸಹನಿಯವಾಗಿದ್ದು, ಇದನ್ನು ಹೀಗೆಯೇ ಮುಂದುವರೆಯಲು ಬಿಟ್ಟರೆ ದೇಶವೇ ನಾಶವಾಗಿ ಹೋಗುವುದರಲ್ಲಿ ಅನುಮಾನವಿಲ್ಲ.

ನಮ್ಮನ್ನಳುತ್ತಿರುವ ಸರ್ಕಾರದ ದುರ್ಭಲ ನೀತಿಗಳಿಂದ ನಾವು ಈಗಾಗಲೇ ಕಾಶ್ಮೀರವನ್ನು ಕಳೆದುಕೊಂಡಿದ್ದೇವೆ. ಅಲ್ಲಿನ ವಿಭಜನಕಾರಿ ಶಕ್ತಿಗಳು ಜನರ ಮನಸ್ಸನ್ನು ವಿಚ್ಚಿದ್ರ ಗೊಳಿಸಿ ಭಾರತ ವಿರೋಧಿ ಚಟುವಟಿಕೆಗಳಿಗೆ ಪ್ರೋತ್ಸಾಹಿಸುತ್ತಿವೆ. ನಮ್ಮೊಂದಿ ಇದ್ದುಕೊಂಡು ಇಲ್ಲಿನ ನೀರು ಕುಡಿದು ಹೇಗೆ ಭಾರತ ವಿರೋಧಿ ಯೋಚನೆಗಳು ನಡೆಯುತ್ತಿವೆ ಎಂದು facebook ನ ಈ link http://goo.gl/Sz55 ನೋಡಿದರೆ ತಿಳಿಯುವುದು. ವಿ. ಸೂ. Comments ನೋಡಲು Facebook ಗೆ login ಆಗಬೇಕು.

ಕೋಮುವಾದಿ ಗುಂಪಿಗೆ ನಿಮಗೆ ಸ್ವಾಗತ ಸುಸ್ವಾಗತ :) "ಈ ಥರದ ಕೊಂಡಿಗಳು ಚಿತ್ರಗಳು ಸಾವಿರಾರು ಕೊಡಬಹುದು , ಅದರ ಸತ್ಯಾಸತ್ಯತೆ ಪರಿಶೀಲಿಸಿ. ಗೂಗಲ ನಲ್ಲಿ ಹುಡುಕಿ., ಕೊಂಡಿಗಳೊಂದಿಗಿನ ನಿಮ್ಮ ಕೊಂಡಿ ಸಾಗಲಿ , " ಕ್ಷಮಿಸಿ, ಈ ಥರ ಪ್ರತಿಕ್ರಿಯೆಗಳಿಗೆ ಸಿದ್ದರಾಗಿರಿ ಎಂದಷ್ಟೆ ನನ್ನ ಸಲಹೆ.......

ನನ್ನ ತಮ್ಮ ಕಾಶ್ಮಿರದಲ್ಲಿ ಕಳೆದ ೧೫ ವರ್ಷಗಳಿಂದ ಸೇನೆಯಲ್ಲಿ ಸೇವೆ ಸಲ್ಲಿಸುತಿದ್ದಾನೆ. ಅವನಲ್ಲಿ ಕಾಶ್ಮಿರದ ಬಗ್ಗೆ ವಿಚಾರಿಸಿದಾಗ, ಅಲ್ಲಿನ ಜನರಿಗೆ ಸ್ವಲ್ಪವೂ ಭಾರತ ದೇಶದ ಬಗ್ಗೆ ಪ್ರೇಮವಿಲ್ಲ. ಪಾಕಿಸ್ತಾನದ ಕಡೆಗೆ ಯಾವಗಲೂ ತಮ್ಮ ಒಲವನ್ನು ತೋರಿಸುತ್ತಿರುತ್ತಾರೆ. ಮುಂಚಿನಿಂದಲೂ ಅವರ ಮನಸ್ಸಿನಲ್ಲಿ ಪಾಕ್ ನ ಬಗ್ಗೆ ಪ್ರೀತಿ ನಾಟಿರುವಾಗ, ಭಾರತದ ಬಗ್ಗೆ ಯಾವ ಕಾರಣಕ್ಕೆ ಗೌರವಗಳನ್ನು ಕೊಡುತ್ತಾರೆ? ನಮ್ಮ ಘನ ಭಾರತ ಸರಕಾರ ಅಗತ್ಯಕ್ಕಿಂತಲೂ ಅನುದಾನ ವಿನಾಕಾರಣ ಕೊಡುತ್ತದೆ. ಆದರೆ ದೇಶ ಕಾಯುವ ನಮ್ಮ ಸೈನಿಕರಿಗೆ ಹೆಚ್ಚಿನ ಸೌಲಭ್ಯ ಸವಲತ್ತು ಗಳನ್ನು ಕೊಡುವ ಬಗ್ಗೆ ಚಿಂತಿಸುವುದಿಲ್ಲ. ಎಂದು ಅಳಲು ತೋಡಿಕೊಳ್ಳುತ್ತಾನೆ. ಇತ್ತೀಚಿಗೆ ನಾನು ಪ್ರತಿಯೊಬ್ಬರ ಬಾಯಲ್ಲಿ ಕೇಳುವ ಮಾತೇನಂದರೆ, ನಮ್ಮ ಸರಕಾರ ಗಳಿಗೆ ಮೀಟರ್ ಇಲ್ಲ ಅಂತ. ಹೌದು ಅದು ಖಂಡಿತ ನಿಜಾನೆ. ನಾಚಿಕೆ ಗೇಡಿನ ಕೇಂದ್ರ ಸರಕಾರ. -- ರಂಗನಾಥ