ಎರಡು ಸುದ್ದಿಗಳು, ದೇಶದ ಹಿತಕ್ಕೆ ಮಾರಕ

5

ನಿನ್ನೆ, ದಂತೆವಾಡದಲ್ಲಿ ನಕ್ಸಲರು ಭಿಕರ ದಾಳಿ ನಡೆಸಿ ಅಮಾಯಕರನ್ನು ಹತ್ಯೆಗೈದ ಸುದ್ದಿ. ಈ ಸುದ್ದಿ ಪ್ರಕಟವಾಗುತಿದ್ದರೆ, ಅತ್ತ ಗೃಹಮಂತ್ರಿಗಳು, ಒಂದು ವರ್ಷ ಪೂರೈಸ್ದ ಸಂಧರ್ಭದ ಬಗ್ಗೆ , "ಯಾವುದೇ ದೊಡ್ಡ ಭಯೋತ್ಪಾದನೆ ಚಟುವಟಿಕೆ ನಡೆದಿಲ್ಲ " ಎಂದು ಖುಶಿಯಾಗಿ NDTV  ಗೆ ಸಂದರ್ಶನದಲ್ಲಿ ಹೇಳುತ್ತಿದ್ದರು.  ಈ ನಕ್ಸಲ ಸಮಸ್ಯೆಗೆ ಪರಿಹಾರಕ್ಕೆ ಇನ್ನೂ ಹೆಚ್ಚಿನ ಬಲ ಬೇಕೆಂದು ಪ್ರಧಾನಿಗಳ ಬಳಿ ಚರ್ಚೆ ನಡೆಸುವುದಾಗಿ ಹೇಳಿಕೆ ಕೊಟ್ಟಿದ್ದಾರೆ. ಗುಡ್ ಲಕ್ ಹೇಳಬೇಕು ಅವರಿಗೆ, ಸತ್ತವರ ಕುಟುಂಬಕ್ಕೆ?  ಅಲ್ಲಿರುವ ಪೋಲಿಸ್ ಸಿಬ್ಬಂದಿಗೆ?   ಈ ನಕ್ಸಲ್ ಸಮಸ್ಯೆಗೆ ಒಂದು ಶಾಶ್ವತ ಪರಿಹಾರ ಕೊಡಲೇ ಬೇಕು ಅನ್ನುವ ಮನಸ್ಸು ಸರ್ಕಾರಕ್ಕೆ ಇದ್ದಂತಿದೆಯೆ? ಪಂಜಾಬ್ ಸಮಸ್ಯೆಗೆ ಪರಿಹಾರ ಕಂಡುಕೊಂಡಂತೆ ಇದಕ್ಕೆ ಯಾಕೆ ಪರಿಹಾರ ಕಂಡುಕೊಳುತ್ತಿಲ್ಲ? ನಕ್ಸಲರನ್ನು ಬೆಂಬಲಿಸಿದ ಗೌರಿ ಲಂಕೇಶ್, ಜಿಕೆಗೊ, ಈ ತಂಡ ಯಾಕೊ ಇನ್ನೂ ಎದ್ದಂತಿಲ್ಲ ಪತ್ರಿಕಾ ಹೇಳಿಕೆ ಕೊಡಕ್ಕೆ.

ಇನ್ನೊಂದು ಸುದ್ದಿ,  ಕಾಶ್ಮೀರದಲ್ಲಿ ಭಯೋತ್ಪಾದರ [ಈ ಪದ ಬಳಸಿದರೆ ಕೆಲವರಿಗೆ ಇರುಸು ಮುರುಸು, :)] ಸಂಭಳ ಹೆಚ್ಚು ಮಾಡಿದ್ದಾರಂತೆ!  ಅದೂ ೧೦೦%. ಯಾವ ಸರ್ಕಾರಿ /ಖಾಸಗಿ ಕಂಪನಿಯಲ್ಲೂ ಇಷ್ಟು ಹೆಚ್ಚು ಮಾಡುವ ಪರಿ ಇಲ್ಲ.  http://thatskannada.oneindia.in/news/2010/05/17/kashmir-terrorists-get-p...

ಈ ರೀತಿ ಸಂಬಳ ಹೆಚ್ಚು ಪಡೆದವರು ಅದಕ್ಕೆ ಪ್ರತಫಲವಾಗಿ ಏನು ಮಾಡಬಹುದು? ತಮ್ಮ ಚಟುವಟಿಕೆ ಹೆಚ್ಚಿಸಬಹುದೆ? ಈ ಆಕರ್ಷಕ ಸಂಬಳ ಕಂಡು ಇತರ ದೇಶಭಕ್ತರು [ಆ ದೇಶಕ್ಕೆ] ಇ ಹುದ್ದೆಯಲ್ಲಿ ತೊಡಗಿಸಿಕೊಳ್ಳಬಹುದಲ್ಲವೇ? ಆಗ ಭಾರತಕ್ಕೆ ಏನೆಲ್ಲ ಕಂಟಕ ಒದಗಬಹುದು?  ಇನ್ನೇಷ್ಟು ಅಕ್ಷರಧಾಮ, ಮುಂಬೈ ಘಟನೆಗಳು ಕಾದಿವೆಯೋ?  ಇದಕ್ಕೆ ಸೂಕ್ತ ಪರಿಹಾರವೆಂದರೆ, ಈ ರೀತಿ ಸಂಬಳ ಪಡೆಯುತ್ತಿರುವವರನ್ನು ಒಂದೆಡೆ ಸೇರಿಸಿ, ೨೦೦% ಹೆಚ್ಚು ಸಂಬಳ ಕೊಟ್ಟು, ರೇಷನ್ ಕಾರ್ಡ್, ಗುರುತುಚೀಟಿ, ಡ್ರೈವಿಂಗ್ ಲೈಸೆನ್ಸ್, ಮನೆ, ಉಚಿತ ಪಡೀತರ,  ಇದೆಲ್ಲವನ್ನು ಕೊಟ್ಟು ಬಿಡಬೇಕು.

 

 

 

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಳೆದೊಂದು ವರ್ಷದಲ್ಲಿ ಪೂನಾದಲ್ಲಿ ನಡೆದ ಬಾಂಬು ದಾಳಿಯನ್ನು ಹೊರತುಪಡಿಸಿ ಯಾವುದೇ ಭಯೋತ್ಪಾದಕ ಕೃತ್ಯ ನಡೆದಿಲ್ಲ ಎಂದನ್ನುತ್ತಿದ್ದ ಅವರ ಮಾತುಗಳನ್ನು ಕೇಳಿದಾಗ, ಬರೀ ಸಂಖ್ಯೆಗಳಿಂದಲೇ ತುಲನಾತ್ಮಕ ವಿಶ್ಲೇಷಣೆ ಮಾಡುವ ಮಾಜೀ ವಿತ್ತಮಂತ್ರಿಯ ಬಗ್ಗೆ ಮರುಕ ಮೂಡಿತು ನನಗೆ. ಅಲ್ಲದೆ ಹತ್ತು ಹಲವು ಬಾರಿ ತನ್ನ ಅಸಹಾಯಕತೆಯನ್ನು ತೋಡಿಕೊಂಡ ಗೃಹಮಂತ್ರಿಯ ಬಗ್ಗೆ ಕನಿಕರ ಪಟ್ಟೆ ನಾನು. ನಕ್ಸಲರ ಪರ ಮಾತನಾಡುವ ಸಾಮಾಜಿಕ ಕಳಕಳಿ ಹೊಂದಿದ ಬುದ್ಧಿಜೀವಿಗಳು, ಮಾನವ ಹಕ್ಕುಗಳ ಹೋರಾಟಗಾರರನ್ನೆಲ್ಲಾ ಆತ ನೇರವಾಗಿ ಪ್ರಶ್ನಿಸಿದ ಪರಿ ಇಷ್ಟವಾಯ್ತು. ಆದರೆ ಈ ಸರ್ಕಾರದ ಇಚ್ಛಾಶಕ್ತಿಯ ಕೊರತೆಯನ್ನು ಪರೋಕ್ಷವಾಗಿ ಬಿಂಬಿಸುತ್ತಲೇ ಹೋದರು ಮಾನ್ಯ ಮಂತ್ರಿಗಳು. ಹೆಚ್ಚಿನ ಸಂಬಳ ನೀಡುವ ಉದ್ದಿಮೆಗಳು ತಮ್ಮ ನೌಕರರಿಂದ ಹೆಚ್ಚಿನ ಕೆಲಸವನ್ನು, ಪರಿಶ್ರಮವನ್ನು ನಿರೀಕ್ಷಿಸುವಂತೆ, ಭಯೋತ್ಪಾದಕರಿಗೂ ಹೆಚ್ಚಿನ ಸಂಬಳ ನೀಡಿ, ಹೆಚ್ಚಿನ ಗುರಿಯನ್ನು ಮುಟ್ಟಿ ತೋರಿಸುವ ಆದೇಶವನ್ನೂ ನೀಡಿರಬಹುದು, ಈ ಭಯೋತ್ಪಾದಕ ಸಂಘಟನೆಗಳು. ಇದರ ಬಗ್ಗೆ ಸರಕಾರ ಗಂಭೀರವಾಗಿ ಚಿಂತನೆ ನಡೆಸಬೇಕಾಗಿದೆ.

ಜಿಕೆಗೊ, ಕೆಲದಿನಗಳ ಹಿಂದೆ ಪ್ರಜಾವಾಣಿಯಲ್ಲಿ ನಕ್ಸಲ್ ಹಿಂಸೆ ಕುರಿತು ಒಂದು ಲೇಖನ ಬರೆದಿದ್ದರು ಅತ್ಯಂತ ಸಮತೋಲನದ ಲೇಖನವದು. ಬಹುಶಃ ನಕ್ಸಲರ ಹಿಂಸೆಯಿಂದ ಬೇಸತ್ತ ಮಾಜಿ ನಕ್ಸಲ್ ಬೆಂಬಲಿಗರ ಲೇಖನ ಸಮಯೋಚಿತ. ಬದಲಾವಣೆಯ ಗಾಳಿ ಹೀಗೆ ಬೀಸುತ್ತಿರಲಿ ಎಲ್ಲ ನಕ್ಸಲ್ ಬೆಂಬಲಿಗರಿಗೆ. ಕಾಂಗ್ರೆಸ್ ಮತ್ತು ಕಮ್ಯುನಿಸ್ಟರ ಪರಿಸ್ಥಿತಿ ಈಗ ಪಾಕಿಸ್ತಾನದ ರೀತಿಯಾಗಿದೆ. ಸಾಕಿದ ನಾಯಿ ಹಿಂತಿರುಗಿ ಗೊರ್ ಎನ್ನುತ್ತಿದೆ.

ಮುತಾಲಿಕರು ದುಡ್ಡು ಪಡೆದು ಗಲಭೆ ಸೃಷ್ಟಿಸುತ್ತಾರಂತೆ ಅಂತ ದೇಶದ ತುಂಬಾ ಅಷ್ಟೆಲ್ಲಾ ಜೋರಾಗಿ ಭರಾಟೆ ಎಬ್ಬಿಸಿದವರು ಈಗ ಮಾತ್ರ ಏನೂ ಆಗದವರಂತೆ ಕೂತಿದ್ದಾರೆ. ನಿಮಗ್ಯಾಕೆ ಬೇಕಿತ್ತು ಭಾಸ್ಕರ್ ಅವರೇ ಈ ವಿಷಯವನ್ನು ಚರ್ಚೆ ಮಾಡುವ ಹುನ್ನಾರ. ಹಾಗೇ ಇರುತ್ತಿದ್ದರೆ ಈ ಸುದ್ದಿ ರದ್ದಿಯಾಗಿ ಬಿಡುತ್ತಿತ್ತಲ್ಲ.. ಛೀ ಛೀ.. ನೀವ್ಯಾಕೋ ಸೆಕ್ಯುಲರಿಸಂನಲ್ಲಿ ನಂಬಿಕೆ ಇಟ್ಟವರಂತೆ ಕಾಣಿಸುತ್ತಿಲ್ಲ.. :-)