ಕೂಲಿಯಾಳುಗಳಾದ ಕರ್ಣಾಟಕ ಪೋಲೀಸರು..

5

ಯೂಟ್ಯೂಬ್-ನಲ್ಲಿ ಹೀಗೇ ಕನ್ನಡದ ವಿಡಿಯೋಗಳನ್ನು ಹುಡುಕುತ್ತಿದ್ದೆ. ಆಗ ಸಿಕ್ಕಿದ್ದು ಈ ವಿಡಿಯೋ..

 

ಟಿ.ವಿ.9 ಮಾಡಿರುವ ಒಂದು ಸ್ಟಿಂಗ್ ಆಪರೇಶನ್ ಇದು. ಬೆಂಗಳೂರು ಸಿಟಿ ಆರ್ಮ್ಡ್ ರಿಸರ್ವ್ ಡಿ.ಸಿ.ಪಿ ಎಂ. ನಂಜುಂಡಸ್ವಾಮಿ ಈ ಆಪರೇಶನ್-ನ ಗುರಿ. ಈ ಆಸಾಮಿ ಮಾಡಿರುವುದು ಅಂತಿಂಥ ಕೆಲಸವಲ್ಲ. ಕೈಕೆಳಗೆ ಕೆಲಸ ಮಾಡುವ ಸರಕಾರಿ ಪೋಲೀಸರನ್ನೇ ತನ್ನ ಸ್ವಂತ ಮನೆ ಕಟ್ಟಿಸಿಕೊಳ್ಳಲು ಬಳಸಿಕೊಂಡಿದ್ದಾನೆ. ಪೋಲೀಸ್ ಇನ್ಸಪೆಕ್ಟರ್ ನಾಗರಾಜ ಎಂಬುವವನು ಇದರ ಕಂಟ್ರಾಕ್ಟರ್. ಸುಮಾರು ಒಂದೂವರೆ ವರ್ಷದಿಂದ ನಡೆಯುತ್ತಿರುವ ಈ ಮನೆ ಕಟ್ಟುವ ಕೆಲಸಕ್ಕೆ ಕೇವಲ ಪೋಲೀಸರೇ ಕೂಲಿಯಾಳುಗಳು. ಅವರು ಸರಿಯಾಗಿ ಮನೆಗೂ ಹೋಗುವಂತಿಲ್ಲ..ವಿಡಿಯೋ ನೋಡುತ್ತಿದ್ದರೆ ತಲೆ ಚಿಟ್ಟು ಹಿಡಿಯುತ್ತದೆ.

 

ವಿಡಿಯೋ ಲಿಂಕ್: http://www.youtube.com/watch?v=CoSK1plVaKU&feature=channel

 

ಏನಾಗುತ್ತಿದೆ ಕರ್ಣಾಟಕದಲ್ಲಿ? ರಾಜಕೀಯ ಫುಡಾರಿಗಳಿಗಿಂತಲೂ ಕೀಳಾಗಿದ್ದಾರೆ ಈ ಸರಕಾರಿ ನೌಕರರು.

 

ಈ ವಿಷಯವನ್ನು ಇನ್ನೂ ಮುಂದುವರೆಸಲು ಸಾಧ್ಯವಾಗುತ್ತಿಲ್ಲ..

ಜೈ ಕರ್ಣಾಟಕ!! ಜೈ ಕನ್ನಡ!!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜುನಾಥ್, ಇದೇ ರೀತಿ ಶಿವಮೊಗ್ಗದಲ್ಲಿ ನಡೆದು ಸರ್ಕಲ್ ಇನ್ಸ್ ಪೆಕ್ಟರ್ ಆಗಿನ ಎಸ್.ಪಿ ಅರುಣ್ ಚಕ್ರವರ್ತಿಯಿಂದ ಛೀಮಾರಿ ಹಾಕಿಸಿಕೊಂಡಿದ್ದ. ಇದು ಆಗ ದೊಡ್ಡ ಸುದ್ದಿಯಾಗಿತ್ತು.

ನಮಸ್ಕಾರ ನಾಡಿಗ ಸರ್, ತುಂಬಾ ದಿನಗಳ ಬ್ರೇಕ್-ನ ನಂತರ ಪುನಃ ಸಂಪದದಲ್ಲಿ ತೊಡಗಿಕೊಂಡಿದ್ದೀರಿ. ಪುನಃ ಸುಸ್ವಾಗತ. ನಿಮ್ಮ ಹೊಸ ಪತ್ರಿಕೆ ಪ್ರಾರಂಭ ಮಾಡುವ ಕೆಲಸ ಚೆನ್ನಾಗಿ ಆಗುತ್ತಿದೆ ಎಂದು ಭಾವಿಸುತ್ತೇನೆ. ನೀವು ತಿಳಿಸಿದ ಸರ್ಕಲ್ ಇನ್ಸ್-ಪೆಕ್ಟ್ರ ವಿಷಯ ಗೊತ್ತಿರಲಿಲ್ಲ.. ಹಾಗಿದ್ದರೆ ನಂಜುಂಡ್ಸ್ವಾಮಿದು ಹೊಸ ರೀತಿಯ ಪ್ರಕರಣವೇನೂ ಅಲ್ಲ ಅಂದ ಹಾಗಾಯ್ತು.. ಆದರೂ ಒಬ್ಬ ಐಪಿಎಸ್ ಅಧಿಕಾರಿ ಒಂದೂವರೆ ವರ್ಷಗಳ ಕಾಲ ಪೋಲೀಸರನ್ನು ಕೂಲಿ ಕಾರ್ಮಿಕರಂತೆ ಬಳಸಿಕೊಳ್ಳುತ್ತಾನೆ ಅಂದ್ರೆ..

ಹೌದು ಮಂಜುನಾಥ್, ಗ್ರಾ.ಪಂ ಚುನಾವಣೆಯೊಳಗೆ ಪತ್ರಿಕೆ ತರಬೇಕು ಎನ್ನುವ ಉದ್ದೇಶ ನನ್ನ ಮತ್ತು ಗೆಳೆಯನ್ನದ್ದಾಗಿತ್ತು. ದುರಾದೃಷ್ಟ ಗೆಳೆಯನಿಗೆ ಶಿಗ್ಗಾಂವ್ ಬಳಿ ಅಪಘಾತವಾಗಿ ತೊಡೆಯ ಮೂಳೆ ಮುರಿದಿದೆ. ಸದ್ಯದಲ್ಲೇ ಆತ ಚೇತರಿಸಿಕೊಳ್ಳುತ್ತಾನೆ ಎಂದು ವೈದ್ಯರು ನುಡಿದಿದ್ದಾರೆ. ಹಾಗೇ ಲೋನ್ ಬಿಡುಗಡೆಯಾಗಲು ಕೆಲ ದಿನಗಳು ಬೇಕಾಗಿರುವುದರಿಂದ ಕನಿಷ್ಠ 6 ತಿಂಗಳಾದರೂ ಬೇಕಾಗುತ್ತದೆ. ಪತ್ರಿಕೆ ಆರಂಭವಾದ ಇಲ್ಲಿನ ಒಳ್ಳೆಯ ಲೇಖನಗಳನ್ನು ಹೆಕ್ಕಿ ಪತ್ರಿಕೆಯಲ್ಲಿ ಹಾಕುವ ಆಸೆ ಇದೆ. ನಿಮ್ಮೆಲ್ಲರ ಪ್ರೋತ್ಸಾಹ ಹೀಗೆ ಇರಲಿ ಮಂಜುನಾಥ್.ಧನ್ಯವಾದಗಳು.

ಅಧಿಕಾರವಿದ್ದರೆ ಏನು ಬೇಕಾದರೂ ಮಾಡಬಹುದು ಅನ್ನುವುದಕ್ಕೆ ಇದು ಇನ್ನೊಂದು ಸಾಕ್ಷಿ. ಅದೂ ಅಲ್ಲದೆ ಈಯಪ್ಪ ಕಾಂಪೌಂಡ್ ಗೋಡೆಯ ಮೇಲೆ ರಾಷ್ಟ್ರನಾಯಕರಂತೆ ತನ್ನ ಚಿತ್ರ ಬರೆಸಿಕೊಂಡಿರುವುದನ್ನೂ ನೋಡಿದೆ. ಬಹಳ ತೆವಲಿದೆ ನಂಜುಂಡಸ್ವಾಮಿಗೆ!

ಕೆಲಸಕ್ಕೆ ಸೇರುವಾಗ ದೇಶದ, ಜನರ ಉದ್ದಾರ ಎಂದೆಲ್ಲಾ ಹೇಳಿ ಸೇರುವ ಇಂಥವರು ಹೇಗೆ ಬರುಬರುತ್ತಾ ಜನರಿಂದ, ತಮ್ಮ ಉದ್ದೇಶಗಳಿಂದ ದೂರವಾಗುತ್ತಾರೆ ಎಂಬುದು ನಿಜವಾಗಿಯೂ ಖೇದಕರ ವಿಚಾರ. ಏನೇ ಆದರೂ ಈ ಮಟ್ಟಿಗಿನ ಅಧಿಕಾರದ ಮದವಿರಬಾರದು. ನೋಡುತ್ತಿರಿ, ಈ ಅಧಿಕಾರಿಗೆ ಏನೂ ಆಗುವುದಿಲ್ಲ. ಹೆಸರಿಗೆ ಒಂದು ತನಿಖೆ ಮಾಡುತ್ತಾರೆ, ನಂತರ ವರದಿ ಧೂಳು ಹಿಡಿಯುತ್ತದೆ. ಅದೂ ವಿ.ಎಸ್. ಆಚಾರ್ಯ-ರಂಥ ರಬ್ಬರ್ ಸ್ಟ್ಯಾಂಪ್ ಗೃಹಮಂತ್ರಿಯಿರುವಾಗ..