ಬೆಲೆ ಕಟ್ಟುವುದು

5

ಒಬ್ಬ ಕೋಳಗಳನ್ನು ಸಾಕಿದ್ದನಂತೆ. ಅವನ ಕೋಳಿಗಳು ಸುತ್ತಮುತ್ತಲೆಲ್ಲ ಬಹು ಪ್ರಸಿದ್ಧಿ. ಪತ್ರಿಕೆಗಳಲ್ಲೂ ದೃಶ್ಯಮಾಧ್ಯಮಗಳಲ್ಲೂ ಅವುಗಳ ಬಗ್ಗೆ ಆಗಾಗ್ಗೆ ಉಲ್ಲೇಖವಾಗುತ್ತಿತ್ತು. ಒಬ್ಬ ಸಂದರ್ಶನ ನಡೆಸಿ ’ಏನ್ಸಾರ‍್ ನೀವು ನಿಮ್ಮ ಕೋಳಿಗಳಿಗೆ ಏನು ಊಟ ಹಾಕ್ತೀರಿ?’ ಅಂದ್ರಂತೆ. ಆತ ’ಸಾರ‍್ ನಾನು ಬಾದಾಮಿ, ಗೋಡಂಬಿ, ಪಿಸ್ತಾ, ಚಾಕಲೆಟ್ಟು ಇವನ್ನೆಲ್ಲ ಕೊಟ್ಟು ಸಾಕ್ತೀನಿ’ ಅಂದನಂತೆ. ಈ ವಿಷಯ ಗೊತ್ತಾಗಿದ್ದೇ ಆದಾಯ ತೆರಿಗೆಯವರು ದಾಳಿ ನಡೆಸಿದರಂತೆ. ಆಮೇಲೆ ಆತ ಹುಷಾರಾದ. ಹೀಗೇ ಮತ್ತೊಬ್ಬ ಸಂದರ್ಶಕ ಅದೇ ಪ್ರಶ್ನೆಯನ್ನು ಕೇಳಿದಾಗ ’ಸ್ವಾಮೀ ನಾನು ಏನೂ ತಿನ್ನಿಸೊಲ್ಲ, ಉಪವಾಸ ಕೆಡವ್ತೀನಿ, ಏನೋ, ಆಗೊಂದಿಷ್ಟು ಈಗೊಂದಿಷ್ಟು ಮಿಕ್ಕಿದ್ದು ಪಕ್ಕಿದ್ದು ಹಾಕ್ತೀನಿ’ ಅಂದ. ಕೂಡಲೇ ಪ್ರಾಣಿದಯಾಸಂಘದವರು ಬೊಬ್ಬೆ ಹಾಕಿದರು. ಆತ ಇನ್ನಷ್ಟು ಹುಷಾರಾದ, ಯಾರಾದ್ರೂ ಕೇಳಿದ್ರೆ ’ಹಾಗೆಲ್ಲ ನಾನು ಕೋಳಿಗಳಿಗೆ ಮೇವು ಹಾಕೋದಿಲ್ಲ, ಒಂದೊಂದು ಕೋಳಿಗೂ ದಿನಕ್ಕೆ ಒಂದೊಂದು ರೂಪಾಯಿ ಕೊಟ್ಟುಬಿಡುತ್ತೇನೆ, ಅವುಗಳೇ ತಮಗೆ ಬೇಕಾದ ಊಟವನ್ನು ಕೊಂಡು ತಿನ್ನುತ್ತವೆ’ ಎಂದು ಹೇಳತೊಡಗಿದ.

ಇದನ್ನು ಜೋಕಾಗಿ ತೆಗೆದುಕೊಳ್ಳಿ. ನಾನು ಇದನ್ನು ಹೇಳಿದ ಉದ್ದೇಶವಿಷ್ಟೆ. ಇತ್ತೀಚೆಗೆ ಬೆಂಗಳೂರು ವಿವಿಯ ಘಟಿಕೋತ್ಸವ ನಡೆಯಿತು. ವಿವಿಗೇ ಮೊದಲ ಸ್ಥಾನ ಪಡೆದವರಿಗೆ ಚಿನ್ನದ ಪದಕ ನೀಡುವುದು ನಡೆದುಕೊಂಡು ಬಂದ ಸಂಪ್ರದಾಯ ತಾನೇ? ಅವರು ನೀಡುವ ಪದಕ ಅಪ್ಪಟ ಚಿನ್ನದ್ದಲ್ಲ ಎನ್ನುವುದು ಎಲ್ಲರಿಗೂ ಗೊತ್ತು. ಆದರೆ ಆ ಪದಕ ಸ್ವೀಕರಿಸುವ ಸಂದರ್ಭದ ಸಂಭ್ರಮ ಇರುತ್ತಲ್ಲ ಅದು ಎಂದೂ ಮರೆಯಲಾಗದ ಅನುಭವ. ಆ ಒಂದು ಸಂತಸಕರ ಸಂದರ್ಭಕ್ಕೆ ಮಸಿ ಬಳಿದವರು ಈ ಬೆಂಗಳೂರು ವಿವಿಯವರು. ಅವರು  ಪದಕದ ಬದಲಿಗೆ ಐವತ್ತು ರೂಪಾಯಿಗಳ ಡಿಡಿ ನೀಡಿ ಹೊಸ ಪರಂಪರೆಗೆ ನಾಂದಿ ಹಾಡಿದರು. ಐವತ್ತು ರೂಪಾಯಿಗಳಿಗೆ ವಿದ್ಯಾರ್ಥಿಗಳು ತಮಗೆ ಬೇಕಾದ ಗಾತ್ರದ, ಬೇಕಾದ ತೂಕದ ಪದಕ ಕೊಂಡು ಧರಿಸಿಕೊಳ್ಳಲಿ ಎಂದು.

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಚೆನ್ನಾಗಿ ಬರೆದಿದ್ದೀರಿ ಜೋಸೆಫ್.. ನನಗೂ ಈ ಬಗ್ಗೆ ಓದಿ ಮನಸ್ಸಿಗೆ ಕಸಿವಿಸಿಯಾಗಿತ್ತು, ಒಂದು ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಹೀಗೂ ಆಗಬಹುದೇ ಎಂದು.. ಇತ್ತೀಚೆಗೆ ಬೆಂಗಳೂರು ವಿಶ್ವವಿದ್ಯಾಲಯದ ಹೆಸರು ಒಳ್ಳೆ ಕಾರಣಗಳಿಗಿಂತ ಕೆಟ್ಟವುಗಳಿಗೇ ಹೆಚ್ಚು ಸೀಮಿತವಾಗಿದೆ. ರಾಜಕೀಯದಲ್ಲಿ ಇರಬೇಕದಾವರು ಶಿಕ್ಷಣ ಕ್ಷೇತ್ರಕ್ಕೆ ಬಂದಲ್ಲಿ ಹೀಗೆ ಆಗಬಹುದೇನೋ. ಯಾವುದರ ಬೆಲೆ ಏನು ಎಂದು ಅರ್ಥ ಮಾಡಿಕೊಳ್ಳವುದು ಇವರ ವ್ಯಾಪ್ತಿಗೆ ಮೀರಿದ್ದಾಗಿರುತ್ತದೆ, ಅಲ್ಲವೇ? ಹೋಗಿ ಹೋಗಿ ಐವತ್ತು ರೂಪಾಯಿ ಕೊಡುವುದಕ್ಕೆ ಇವರುಗಳಿಗೆ ಮನಸ್ಸಾದರೂ ಹೇಗೆ ಬಂತೋ?

ಜೋಸೆಫ್ ರೇ, ನಮಸ್ಕಾರ. ನಮ್ಮ ವಿವಿ ವ್ಯವಸ್ಥೆ ಎಷ್ಟು ಕುಲಗೆಟ್ಟು ಹೋಗಿದೆ ಎ೦ಬುದಕ್ಕೆ ಇದಕ್ಕಿ೦ಥಾ ಬೇರೆ ಸಾಕ್ಷಿ ಬೇಕೆ? ಎಲ್ಲವನ್ನೂ ದುಡ್ಡಿನಲ್ಲಿ ಅಳೆಯುವುದಕ್ಕಾಗುತ್ತದೆಯೇ? ಪದಕ ಸ್ವೀಕರಿಸುವಾಗಿನ ಸ೦ದರ್ಭದಲ್ಲಿ ವಿದ್ಯಾರ್ಥಿರ್ಗಳಲ್ಲಿ ಆ ಇಡೀ ಒ೦ದು ವರ್ಷದ ಪರಿಶ್ರಮ ಮತ್ತು ಎಷ್ಟೋ ವರ್ಷಗಳ ಕನಸು ತು೦ಬಿರುತ್ತದೆ. ವಿದ್ಯಾರ್ಥಿಗಳ ಆ ಸ೦ಭ್ರಮವನ್ನೂ ಕಸಿದುಕೊ೦ಡ ಬೆ೦ಗಳೂರು ವಿ.ವಿ.ಗೆ ಧಿಕ್ಕಾರವಿರಲಿ. ಇ೦ತಿ ನಿಮ್ಮವ ನಾವಡ.

"ನಿಮಗೆ ಒಂದು ಖಾಲಿ ಪ್ರಮಾಣ ಪತ್ರ ಕೊಡ್ತೀವಿ ನಿಮಗೆ ಬೇಕಾದಹಾಗೆ ಅದರಲ್ಲಿ ಬರ್ಕೊಳ್ಳಿ" ಪ್ರಿಂಟಿಗ್ ದುಡ್ಡು ಉಳಿಸೋಕೆ ಬೆಂ.ವಿ.ವಿ ಈ ಥರಾ ಪ್ಲಾನ್ ಮಾಡಬಹುದಾ?

ಹೊನ್ನಿನ ಬಿಲ್ಲೆ ನೀಡಲು ಯಾವುದೋ ಕಾಲದಲ್ಲಿ ದತ್ತಿ ನಿಧಿ ಸ್ಥಾಪನೆಯಾಗಿರುತ್ತದೆ. ಅದನ್ನು ಯಾರೋ ದಾನಿಗಳು ಕೊಡಮಾಡಿರುತ್ತಾರೆ, ಅವರಿಗೆ ಇಷ್ಟವೆನಿಸಿದ ಸಂಗತಿಗಳಲ್ಲಿ ಹೆಚ್ಚಿನ ಅಂಕ ಪಡೆದವರಿಗೆ ನೀಡಲು! ಆಗಿನ ಕಾಲದಲ್ಲಿ ಐವತ್ತು ರೂಪಾಯಿಗೆ ಚಿನ್ನದ ಬಿಲ್ಲೆ ಬರುತ್ತಿತ್ತು. ಈಗ ಪ್ಲಾಸ್ಟಿಕ್ಕು ಬರಬಹುದು! ವಿವಿ ಕುಲಪತಿಗಳಾದರೂ ಏನು ಮಾಡಿಯಾರು? ಹಣ ಎಲ್ಲಿಂದ ತಂದಾರು? ಸರಕಾರಕ್ಕೆ ಕೇಳಿದರೆ ಕೊಟ್ಟೀತೇ? ತಪ್ಪು ವಿವಿಯದೆನ್ನಲಿಕ್ಕೆ ಆಗದು. ಸರಕಾರ ಇದಕ್ಕೆ ಪ್ರಾಯೋಜಿಸಿದರೆ ಸುಗ್ಗಿ ನಡೆದೀತು! ವಿಚಾರ ದಿಟವೆನಿಸಿದರೂ target victim ತಪ್ಪಾಗಿದೆ!

ಸಾಲಿಮಠರಿಗೆ ನಮಸ್ಕಾರ. ದತ್ತಿನಿಧಿಯ ಬಗೆಗಿನ ನಿಮ್ಮ ಮಾತು ನಿಜ. >>ಸರಕಾರ ಇದಕ್ಕೆ ಪ್ರಾಯೋಜಿಸಿದರೆ ಸುಗ್ಗಿ ನಡೆದೀತು!>> ಸಕ್ಕತ್ ಜೋಕ್!! ಆದರೆ ಸರಕಾರದ ಪರವಾಗಿ ಅಲ್ಲಿ ಉನ್ನತ ಶಿಕ್ಷಣಮಂತ್ರಿಗಳೇ ಉಪಸ್ಥಿತರಿದ್ದರಲ್ಲ. ಬಹುಶಃ ಅವರ ಗಮನಕ್ಕೆ ತಂದೇ ಈ ಡಿಡಿ ವ್ಯವಹಾರ ನಡಿಸಿರಬಹುದು. ಹೇಳಿ ಕೇಳಿ ಸದರಿ ಮಂತ್ರಿಗಳು ಎಬಿವಿಪಿ ಹಿನ್ನೆಲೆಯವರು. ಅಂದರೆ ನೀತಿ ನಿಜಾಯತಿಯ ಪರವಿದ್ದವರು. ಅವರ ಬಳಿ ವಿದ್ಯಾರ್ಥಿಗಳು ಈ ಡಿಡಿ ವಿಷಯದ ಕುರಿತು ಪ್ರಶ್ನಿಸಿದಾಗ ಅವರು ’ಇದನ್ನೆಲ್ಲ ಇಶ್ಯೂ ಮಾಡಬೇಡ್ರೀ’ ಎಂದರಂತೆ. ಅವರ ಸರಕಾರದಲ್ಲಿ ಈಗಾಗಲೆ ಬಹಳಷ್ಟು ಇಶ್ಯೂಗಳು ತಲೆತಿನ್ತಾ ಇವೆ. ಹನ್ನೊಂದರಲ್ಲಿ ಇನ್ನೊಂದು ಯಾಕೆ ಅನ್ನೋದು ಅವರ ಇಂಗಿತವಿರಬೇಕು.