ನರ್ಸ್ ಜಯಲಕ್ಷ್ಮಿ ಮತ್ತು ಅಬಕಾರಿ ಸಚಿವ ರೇಣುಕಾಚಾರ್ಯ ಪ್ರಕರಣ - ಮಠದ ಸ್ವಾಮಿಗಳಿಂದ ಸಂಧಾನ

3.5

ನರ್ಸ್ ಜಯಲಕ್ಷ್ಮಿ ಮತ್ತು ಅಬಕಾರಿ ಸಚಿವ ರೇಣುಕಾಚಾರ್ಯರ ನಡುವಿನ ಜೀವ ಬೆದರಿಕೆ ಪ್ರಕರಣ ಸಂಧಾನದ ಮೂಲಕ ಬಗೆಹರಿದಿದೆ. ಜಯಲಕ್ಷ್ಮಿ ಹಾಗೂ ರೇಣುಕಾಚಾರ್ಯ ಹೇಳುವ ಪ್ರಕಾರ ಇಬ್ಬರು ಮಠದ ಸ್ವಾಮಿಗಳಿಂದ ಈ ಸಂಧಾನ ಫಲಶ್ರುತಿಯಾಯಿತಂತೆ, (ಮಠದ ಅಥವಾ ಸ್ವಾಮಿಜೀಯ ಹೆಸರನ್ನು ಬಹಿರಂಗ ಪಡಿಸಿಲ್ಲ) ಹಾಗಾದರೆ ಮಠಗಳ ಕೆಲಸ ಇನ್ನ್ಮುಂದೆ ಇದೆ ರೀತಿಯೇನು ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕಳ್ಳ ಸ್ವಾಮಿಗಳ ಸಮಸ್ಯೆಗಳನ್ನು ರಾಜಕೀಯ ನಾಯಕರು ಸೇರಿ ಪರಿಹಾರ ಮಾಡಿಕೊಡಬೇಕು ಎನ್ನುವುದರ ಸೂಚನೆ ಅಡಗಿಲ್ಲವೇ ಇಲ್ಲಿ? :) ಅದೇನೇ ಆಗ್ಲೀ...ಇನ್ನು ಮುಂದೆ ಮಟ ಮಟ ಮಧ್ಯಾಹ್ನ ಕೂಡ ಏನೇ ಆನಾಚಾರ ಮಾಡಿದ್ರೂ ಮಠದವರು ಬಂದು ಬಚಾವ್ ಮಾಡ್ತಾರೆ... ಅಂದ ಹಾಗಾಯ್ತು!? :)

"ಇಬ್ಬರು ಮಠದ ಸ್ವಾಮಿಗಳು ಅಂದ್ರಿ.... ಅಲ್ಲೇ ಸಮಸ್ಯೆ ಶುರುವಾಗೋದು ... ಈ ಇಬ್ಬರೂ ಒಂದೇ ಮಠದವರೇ ಅಥವಾ ಬೇರೆ ಬೇರೆ ಮಠದವರೇ ... ಬೇರೆ ಆದಲ್ಲಿ, ನಮ್ಮನ್ನೇಕೆ ಸೇರಿಸಲಿಲ್ಲ ಎಂದು ಇನ್ನಿತರ ಮಠಗಳಿಂದ ಆಕ್ಷೇಪ ಶುರು .. ಒಂದೇ ಆದಲ್ಲಿ ಇಬ್ಬರೇಕೆ ಬೇಕಿತ್ತು? .... ಯಾಕೆ ಹೇಳಿದೆ ಅಂದರೆ ಸಮಸ್ಯೆ ಹೆಮ್ಮರವಾಗಲು ಇವು ಸಸಿಗಳು :-(

ಸಾನಿಯಾ ಮದುವೆ ಗೆ ಸಂಬಂದಿಸಿದಂತೆ... ಮಲ್ಲಿಕ್ ಪ್ರಕರಣವನ್ನು ಮೌಲ್ವಿಗಳು ಬಗೆಹರಿಸುವುದಾದರೆ ಜಯಲಕ್ಷ್ಮಿ ರೇಣುಕಾಚಾರ್ಯ ಪ್ರಕರಣವನ್ನು ಮಠದವರು ಯಾಕೆ ಬಗೆಹರಿಸಬಾರದು?

ಈ ವಿಷಯದ ಕುರಿತು ಸಮಗ್ರ ಹಾಗೂ ಕೂಲಂಕುಷ ನೋಟದ ಅಗತ್ಯ ಎದ್ದು ಕಾಣುತ್ತಿದೆ. ಹೀಗಾಗಿ ಪ್ರಕರಣದ ವಿವಿಧ ಮಗ್ಗಲುಗಳು ಹೀಗೂ ಇರಬಹುದು ಎಂದು ಊಹಿಸಿದ್ದೇನೆ. 1: ನಡೆದ ಸಂಧಾನವನ್ನೂ ಕೂಡ ಜಯಲಕ್ಷಿ ಮೇಡಂ ರೆಕಾರ್ಡ್ ಮಾಡಿಕೊಂಡು ಬ್ಲ್ಯಾಕ್ಮೇಲ್ ಮಾಡಿದ್ರೆ ಹೇಗೆ? 2: ಸರಕಾರದಿಂದ ಮಠಗಳಿಗೆ ನೀಡಲಾದ ಹಣಕ್ಕೆ ಬದಲಾಗಿ ಕೃತಜ್ಞತಾಪೂರ್ವಕವಾಗಿ ಇಷ್ಟಾದರೂ ಪ್ರತ್ಯುಪಕಾರ ಮಾಡದಿದ್ರೆ ಸರಿಯೇ? 3: ಹಾಗಾದ್ರೆ ಈ ಹಿಂದೆ ತೆಗೆದ ರೇಣುಕಾಚಾರ್ಯನ ಫೋಟೋ/ನೆಗೆಟಿವ್/ಒರಿಜಿನಲ್ಸ್-ಗಳನ್ನು ಏನ್ಮಾಡ್ತಾರಂತೆ? 4: ಮುಂದಿನ ಎಲೆಕ್ಶನ್-ನಲ್ಲಿ ಹೊನ್ನಾಳಿಯಲ್ಲಿ ರೇಣುಕಾಚಾರ್ಯನ ವಿರುದ್ಧ ಆಕೆ ಸ್ಪರ್ಥಿಸದಿರುವ ಬಗ್ಗೆಯೂ ಸಭೆಯಲ್ಲಿ ಏನಾದರೂ ರಿಸೊಲ್ಯುಶನ್ ಆಗಿದೆಯೇ? ಇವಿಷ್ಟೇ ನನಗೆ ಹೊಳೆದದ್ದು. ಒಟ್ಟಿನಲ್ಲಿ ಕರ್ಣಾಟಕದಲ್ಲಿ ಏನೇನು ಆಗಬಾರದೋ ಅದೆಲ್ಲವೂ ಆಗುತ್ತಿವೆ ಎಂದು ಈ ಪ್ರಕರಣದಿಂದ ಕಾಣಿಸುತ್ತಿದೆ. ಹಣಕ್ಕಾಗಿ ತಮ್ಮನ್ನೇ ಮಾರಿಕೊಳ್ಳುವ ಇಂಥವರು ದೊಡ್ಡ ವ್ಯಕ್ತಿಗಳಾಗಿ ರೂಪುಗೊಳ್ಳುವುದು ಹೇಗೆ ಎಂಬುದೇ ಅಚ್ಚರಿ.