ನನಗೊಂದು ನನ್ನದೇ ಬದುಕಿದೆ ಎಂದು ಆಕೆ ತಿಳಿಸುವುದು ಹೇಗೆ?

0

ಪಡ್ಡೆ ಹುಡುಗರ ಮನಸ್ಸಿನಲ್ಲಿ ತನ್ನ ಅದ್ಭುತ ಆಟದ ಮೂಲಕ ಅಲೆಯೆಬ್ಬಿಸಿದ್ದ ಟೆನಿಸ್ ತಾರೆ ಸಾನಿಯಾ ಮಿರ್ಜಾ, ಮತ್ತೊಮ್ಮೆ ವಿವಾಹದ ವಿಷಯದಲ್ಲಿ ಸುದ್ದಿಯ ಕೇಂದ್ರ ಬಿಂದುವಾಗಿದ್ದಾಳೆ. ಪಾಕಿಸ್ತಾನದ ಖ್ಯಾತ ಕ್ರಿಕೆಟ್ ತಾರೆ ಶೋಯೆಬ್ ಮಲಿಕ್ ನನ್ನು ವರಿಸಲು ಮುಂದಾಗಿರುವುದೇ ಈಗ ವಿವಾದವಾಗಿದೆ. ಈ ವಿವಾಹ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ.

ಭಾರತವನ್ನು ಪ್ರತಿನಿಧಿಸುತ್ತಿದ್ದ ತಾರೆಯೊಬ್ಬಳು ವಿವಾಹದ ನಂತರ ತನ್ನ ಗಂಡನ ದೇಶವನ್ನು ಪ್ರತಿನಿಧಿಸಬೇಕು ಎಂಬ ವಿಚಾರಕ್ಕಿಂತಲೂ ಆಕೆ ಪಾಕಿಸ್ತಾನವನ್ನು ಪ್ರತಿನಿಧಿಸುತ್ತಳಲ್ಲ ಎಂಬ ಚಿಂತೆಯೇ ಮುಂದಿರುವಂತೆ ಕಾಣಬರುತ್ತಿದೆ. ಈ ಕುರಿತು ಹಲವಾರು ನಾಯಕರು ಭಾರೀ ಹೇಳಿಕೆಗಳನ್ನು ನೀಡಿದ್ದಾರೆ. ಮಹಾರಾಷ್ಟ್ರದ ಹುಲಿ ಮತ್ತೊಮ್ಮೆ ಘರ್ಜಿಸಿದೆ. ಸಾನಿಯಾ, ತನ್ನ ವಿವಾಹದ ನಂತರವೂ ಭಾರತವನ್ನು ಪ್ರತಿನಿಧಿಸಿಯೇ ಆಡುತ್ತೇನೆಂದು ಸ್ಪಷ್ಟವಾಗಿ ಹೇಳಿದ್ದಾಳೆ.  ಆದರೂ ಚರ್ಚೆಗಳು ನಿಂತಿಲ್ಲ. ಇಲ್ಲಿ ಈ ವಿವಾಹವನ್ನು ವ್ಯಕ್ತಿಗಳಿಬ್ಬರ ಭಾವನಾತ್ಮಕ ವಿಷಯವೆಂದು ಪರಿಗಣಿಸಬೇಕೆ? ಇಲ್ಲ ರಾಷ್ಟ್ರ ರಾಜಕಾರಣಕ್ಕೂ ಖಾಸಗಿ ಬದುಕಿಗೂ ತಳುಕು ಹಾಕಬೇಕೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ನನಗೊಂದು ನನ್ನದೇ ಬದುಕಿದೆ ಎಂದು ಆಕೆ ತಿಳಿಸುವುದು ಹೇಗೆ? << ಯಾವುದಕ್ಕೂ ಪ್ರತಿಕ್ರಿಯೆ ನೀಡದೇ ಸುಮ್ಮನೇ ಇದ್ದುಬಿಡುವುದರ ಮೂಲಕ, ಅಷ್ಟೇ.