ಮತ್ತೆ ರಾಜ್ಯಕ್ಕೆ ಅನ್ಯಾಯ

3

ಮತ್ತೆ ಕ್ರಿಕೆಟ್ ವರ್ಲ್ಡ್ ಕಪ್ selection ಮುಗಿದಿದೆ. ಮತ್ತೆ ನಮ್ಮ ರಾಜ್ಯಕ್ಕೆ ಅನ್ಯಾಯ ಆಗಿದೆ ಅನ್ನಿಸುತ್ತೆ. ಮನೀಶ್ ಪಾಂಡೆ, ಉತ್ತಪ್ಪ ಅಂತ ಒಳ್ಳೆ ಆಟಗಾರರಿಗೆ ಮತ್ತೆ ಅವಕಾಶ ತಪ್ಪಿದೆ. ಇದರ ಬಗ್ಗೆ ನಿಮ್ಮ ಅನಿಸಿಕೆ ಏನು?....


ವಿನಯ ಕುಮಾರ ಅವಕಾಶ ಸಿಕ್ಕರೂ ಆಡಿಸುವದು ಸಂಶಯವೇ?.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆಯ್ಕೆಯಾಗದಿರುವುದೇ ಒಳ್ಳೆಯದು! ಯಾಕೆಂದರೆ ಮನೀಶ್ ಇನ್ನೂ ಒಂದು ರಣಜಿಯನ್ನು ಮಾತ್ರ ಆಡಿದ್ದಾನೆ. ಅವನ ಬ್ಯಾಟಿಂಗ್ ಇನ್ನೂ ಪಕ್ವವಾಗಿರುವುದಿಲ್ಲ. consistancy ಬಂದಿರುವುದಿಲ್ಲ. ರಣಜಿಯಲ್ಲಿ ಯಶಸ್ಸು ಪಡೆದು ಅಪಕ್ವವಾಗಿದ್ದಾಗಲೇ ಅಂತರ್‍ರಾಷ್ಟ್ರೀಯ ಪಂದ್ಯಗಳಿಗೆ ಬಂದು ಅಲ್ಲಿನ ಮಟ್ಟಕ್ಕೆ ಹೊಂದಿಕೊಳ್ಳಲಾಗದೇ ಕ್ರಿಕೆಟ್ ಜೀವನದಲ್ಲಿ ಸೋಲುಂಡ ಮುನಾಫ್, ಇಶಾಂತ್, ಉತ್ತಪ್ಪ, ಮನೋಜ್ ತಿವಾರಿ,ಬದರಿನಾಥ್, ರೋಹಿತ್ ಶರ್ಮಾ ಇವರೆಲ್ಲರ ಉದಾಹರಣೆ ನಮ್ಮೆದುರಿಗೆ ಇದೆ. ದೇಶದ ತಂಡಕ್ಕೆ ಆಡುವ ಮುಂಚೆ ದ್ರಾವಿಡ್, ಶ್ರೀನಾಥ್, ಕುಂಬ್ಳೆ, ವೆಂಕಿ, ಬ್ರಿಜೇಶ್, ವಿಶ್ವನಾಥ್ ಎಲ್ಲರೂ ಕನಿಷ್ಟ ನಾಲ್ಕು ರಣಜಿ ಋತುಗಳಲ್ಲಿ ಆಡಿದ್ದರು. ರಾಷ್ಟ್ರೀಯ ತಂಡದಲ್ಲಿ ಆಡುವ consistancy ಯನ್ನು ನಮ್ಮ ಹುಡುಗರು ಬೆಳೆಸಿಕೊಳ್ಳಬೇಕಿದೆ. ಇಲ್ಲವಾದರೆ ಅವರ ಭವಿಷ್ಯಕ್ಕೇ ಕೊಳ್ಳಿ ಬಿದ್ದೀತು! ಉತ್ತಪ್ಪನೊಂದಿಗೇ ರಾಷ್ಟ್ರೀಯ ತಂಡಕ್ಕೆ ಬಂದು ನಂತರ ವಾಪಸು ಹೋಗಿ ರಣಜಿಯಲ್ಲಿ ಪಳಗಿ ಮರು ಆಯ್ಕೆಯಾದ ಗೌತಮ್ ಗಂಭೀರ್‍ ಈಗ ಎಲ್ಲಿದ್ದಾನೆ, ಉತ್ತಪ್ಪ ಎಲ್ಲಿದ್ದಾನೆ ನೋಡಿ. ಉತ್ತಪ್ಪ, ಇಶಾಂತ್, ಮುನಾಫ್ ಗೆ ಆದಂತೆ ಮನಿಷ್, ಮಿಥುನ್, ವಿನಯ್ ಗೆ ಆಗಬಾರದು. ವಿನಯ್ ಗೆ ಅಂತರ್‍ರಾಷ್ಟ್ರೀಯ ಮಟ್ಟಕ್ಕೆ ಬೇಕಾದ ವೇಗ ಸಾಲದು. ಈಗ ಯಶಸ್ಸು ಸಿಗಬಹುದಾದರೂ ಒಮ್ಮೆ ಅವನ ಬಾಲಿಂಗ್ ಶೈಲಿಗೆ ದಾಂಡಿಗರು ಒಗ್ಗಿಕೊಂಡರೆ ವಿನಯ್ ಮತ್ತೊಬ್ಬ ಜೊಗಿಂದರ್‍ ಶರ್ಮಾ ಆದಾನು! ವಿನಯ್ ನಮ್ಮ ದಾವಣಗೆರೆಯವನು. ಅವನು ದೇಶದ ತಂಡದಲ್ಲಿ ಆಡಿದರೆ ನಮಗೂ ಹೆಮ್ಮೆಯೇ! ಆದರೆ ಅವನು ತಂಡದಲ್ಲಿ ಬಹಳ ದಿನ ಇರಬೇಕು.

ಆತ್ಮಿಯ ಶ್ರೀ ಹರ್ಷ, ನೀವು ಹೇಳಿರುವದು ನಿಜ. ಪಕ್ವತೆ ಬೇಕು ಅಂತ ಕಡೆಗಣಿಸಿ ಬೇರೆಯವರಿಗೆ ಅವಕಾಶ ಕೊಡುವ ಹುನ್ನಾರ ನಡೆದರೆ ಮಾತ್ರ ಮನಸಿಗೆ ಬೇಜಾರ ಆಗುತ್ತೆ. ಏನಂತೀರಾ?. ಹಾಗೆ ನಡಿಯದಿರಲಿ ಎಂಬುದೇ ನಮ್ಮೆಲ್ಲರ ಆಶಯ.

ಮನೀಶ್ ಪಾಂಡೆ ಕನ್ನಡದವನೇ? ಅವನಿಗೆ ಕನ್ನಡ ಬರುತ್ತದೆಯೇ? ನನಗಂತೂ ಗೊತ್ತಿಲ್ಲ. ಆದರೆ ಒಂದಂತೂ ನಿಜ: ಕರ್ನಾಟಕದ ಮಟ್ಟಿಗೆ ಹೇಳುವುದಾದರೆ, ನಮ್ಮ ರಾಜ್ಯದಲ್ಲಿರುವವರೆಲ್ಲರೂ (ಅದರಲ್ಲೂ ಬೆಂಗಳೂರಿನವರು) ಕನ್ನಡದವರಾಗಿರಲೇಬೇಕೆಂದು ಭಾವಿಸುವುದು ತಪ್ಪು. ಪಾಂಡೆ ಆಯ್ಕೆಯಾದರೂ ಅದರ ಶ್ರೇಯಸ್ಸು ಕರ್ನಾಟಕಕ್ಕೆ ಸಿಗಬಹುದಾದರೂ ಕನ್ನಡಕ್ಕೆ ಸಿಗಲಾರದು. ಇದು ರಾಹುಲ್ ದ್ರಾವಿಡ್, ರಾಬಿನ್ ಉತ್ತಪ್ಪ, ಮುಂತಾದವರಿಗೂ ಅನ್ವಯಿಸುತ್ತದೆ. ಉದಾಹರಣೆಗೆ "ಅತಿವೇಗಿ" (ಅವಿವೇಕಿ) ಬೌಲರ್ ಶ್ರೀಶಾಂತ್ ಬೆಳೆದಿದ್ದು, ಹೈಸ್ಕೂಲ್ ಓದಿದ್ದು ಬೆಂಗಳೂರಿನಲ್ಲೇ. ಬೆಂಗಳೂರಿನಲ್ಲಿ ಯಾರಾದರೂ ಕನ್ನಡದಲ್ಲಿ ಪ್ರಶ್ನೆ ಕೇಳಿದರೆ, when i come next time to Bangalore, i will try to answer in Kannada ಎಂದು ತನ್ನ ಟಿಪಿಕಲ್ ಮಲೆಯಾಳಿ ಡಿಪ್ಲೊಮಾಟಿಕ್ ಉತ್ತರ ನೀಡುತ್ತಾನೆ. ಅಲ್ಲದೇ ಮುಂದಿನ ಐಪಿಎಲ್ ನಲ್ಲಿ ಕೊಚ್ಚಿನ್ ಪರ ಆಡುವುದು ನನ್ನ ಬಯಕೆ ಎಂದೂ ಹೇಳುತ್ತಾನೆ. ಅಪ್ಪಟ ಕನ್ನಡದ ಹುಡುಗರಾದ, ಹಾಗೂ ಬಡ/ಕೆಳಮಧ್ಯಮ ವರ್ಗದಿಂದ ಬಂದು ಸ್ವಂತ ಪರಿಶ್ರಮ ಮಾತ್ರದಿಂದಲೇ ಯಶಸ್ವಿಯಾದ ಸುನಿಲ್ ಜೋಶಿ, ವಿನಯ್, ಮಿಥುನ್ ರಂಥವರಿಗೆ ನಮ್ಮ ಬೆಂಬಲ ಸದಾ ಇರಬೇಕು. ಆದರೆ ಕನ್ನಡದ ಬಗ್ಗೆ ಯಾವುದೇ ರೀತಿಯ ಅಭಿಮಾನ, ಪ್ರೀತಿ ಇಲ್ಲದಿರುವವರಿಗೆ ಭಾರತ ತಂಡದಲ್ಲಿ ಸ್ಥಾನ ಸಿಗದಿದ್ದಲ್ಲಿ ಅದಕ್ಕಾಗಿ ಮರುಗುವುದು ಸರಿಯಲ್ಲ ಎಂದು ನನ್ನ ಭಾವನೆ.