ಕಾಮನ್ ಸೆನ್ಸಿಗೊಂದು ಸವಾಲ್

1

ದಲಿತನೊಬ್ಬ 'ನಾನು ಬ್ರಾಹ್ಮಣನಾಗಬೇಕು' ಎಂದು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರೆ, ಅದಕ್ಕೆ ಸರ್ಕಾರದ ಉತ್ತರ ಏನಿರಬಹುದು? ಊಹೆ ಮಾಡಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿವೃತ್ತ ನ್ಯಾಯಾಧೀಶರ ಆಯೋಗ ರಚಿಸಿ, ಅದಕ್ಕೆ ನೀಡಿರುವ ಆರು ತಿಂಗಳುಗಳ ಗಡಿಯನ್ನು ಹತ್ತು ಬಾರಿ ವಿಸ್ತರಿಸಿ, ಕೊನೆಗೂ ಆ ಆಯೋಗ ಸರಕಾರಕ್ಕೆ ಸಲ್ಲಿಸುವ ವರದಿಯ ಮೇಲೆ ಚರ್ಚೆ ಮಾಡಿ, ಸರಕಾರ ಬದಲಾಗಿರೋ ಕಾರಣದಿಂದ, ಹಿಂದಿನ ಆಯೋಗ ರಾಜಕೀಯ ಪೂರ್ವಗ್ರಹ ಉಳ್ಳದ್ದೆಂದು ಸಬೂಬು ನೀಡೀ, ಮರು ಆಯೋಗ ನೇಮಕ ಮಾಡಿ .... .... ... ... ... ಅರ್ಜಿ ಹಾಕಿದ್ದ ಆ ದಲಿತ ಸತ್ತ ಅಂತ ಸುದ್ದಿ ಬಂದಿದೆ... :)

ತಪ್ಪು ಗ್ರಹಿಕೆ ಪ್ರಶ್ನೆ ಕೇಳಿದವರಿಗೋ? ಇಲ್ಲ ಉತ್ತರ ಹೇಳಿದವರಿಗೋ? ಉತ್ತರ ಹೇಳಿದವರಿಗೆ ಎಂದಾದರೆ ವಿವರಿಸಿ ಬಿಡುತ್ತೇನೆ ಕೇಳಿ. ನಾನು ಹಲವಾರು ಲೇಖನಗಳಲ್ಲಿ ಇದನ್ನ ಓದಿದ್ದೇನೆ.ದಲಿತರು ಬ್ರಾಹ್ಮನರಾಗಳು ಬಿಡುತ್ತಾರೆಯೇ ಅಂತ. ಅಲ್ಲಾರಿ ಜಾತಿ ಬದಲಾದರೆ ಏನಾಗುತ್ತೆ? ಜಾತ್ಯಾತೀತರು ಅನ್ನುವವರಿಗೆ ಜಾತಿಯ ಮಾತೇಕೆ ಬೇಕು? ಇಲ್ಲಿವರೆಗೂ ನಮ್ಮ ಮನಗಳು ಬದಲಾಗುವುದಿಲ್ಲವೋ ಅಲ್ಲಿಯವರೆಗೆ ಯಾರ್ ಯಾವ್ ಜಾತಿಗೆ ಬದಲಾದರು ಏನು ಬದಲಾಗೋದಿಲ್ಲ. ಬದಲಾಗಬೇಕಿರುವುದು ನಮ್ಮ ಮನಸ್ಥಿತಿ.. ಜಾತಿ ಅಲ್ಲ!

ಇದೇ ಉತ್ತರವನ್ನು ಮೊದಲೇ ಹೇಳಬಹುದಿತ್ತು. ಇರಲಿ ಬಿಡಿ. <<ಬದಲಾಗಬೇಕಿರುವುದು ನಮ್ಮ ಮನಸ್ಥಿತಿ.. ಜಾತಿ ಅಲ್ಲ>> ಓಕೆ. ಜೊತೆಗೆ ಜಾತೀಯೇ ಇರಬಾರದೆಂದು ಆಶಿಸುವುದು ತಪ್ಪೇನಿಲ್ಲವಲ್ಲ. ಜಾತಿಗಳ ಮನೆ ಹಾಳಾಗಿ ಹೋಗಲಿ, ಕನಿಷ್ಠ ಪಕ್ಷ ಅವುಗಳ ನಡುವೆ ಇರುವ ಮೇಲು ಕೀಳು ಅಸ್ಪೃಶ್ಯತೆ ಇವೆಲ್ಲಾ ತೊಲಗಲಿ ಎನ್ನುವುದೂ ತಪ್ಪೆ?

ಈ ಜಾತಿಗಳ ಮನೆ ಹಾಳು ಬಿದ್ದು ಹೋಗಲಿ ಅನ್ನುವುದೇ ನನ್ನ ಆಶಯ ಕೂಡ. >>ಇದೇ ಉತ್ತರವನ್ನು ಮೊದಲೇ ಹೇಳಬಹುದಿತ್ತು. ಇರಲಿ ಬಿಡಿ. ತಮಗೆ ನನ್ನ ಮೊದಲ ಉತ್ತರದಿಂದ ಬೇಸರವಾಗಿದ್ದರೆ ಕ್ಷಮೆಯಿರಲಿ. actually ಈ ಜಾತಿಯ ಬಗೆ ಆಡೋ ಮಾತುಗಳನ್ನ ನೋಡಿದರೆ ಮೈಯೆಲ್ಲಾ ಉರಿದೋಗುತ್ತೆ, ಅದೇ ಪ್ರತಿಕ್ರಿಯೆಯ ರೂಪದಲ್ಲಿ ಬಂತು ಅಷ್ಟೇ :)

ಇಲ್ಲಿ ಸರಕಾರ ಯಾಕೆ ಮಧ್ಯ ಬಂದಿದೆ? ದಲಿತನೊಬ್ಬ ಬ್ರಾಹ್ಮಣನಾಗಬೇಕಿದ್ದರೆ ಆತ ಉಪನಯನ ಮಾಡಿಕೊಳ್ಳಬೇಕು. ನಂತರ ಬ್ರಾಹ್ಮಣನ ಜೀವನ ಕ್ರಮ ಅನುಸರಿಸಬೇಕು. ಅಷ್ಟು ಸುಲಭವಲ್ಲ, ಆದರೆ ಅಸಾಧ್ಯವಲ್ಲ. ಬ್ರಾಹ್ಮಣನೊಬ್ಬ ದಲಿತನಾಗಿಬೇಕಿದ್ದರೆ ತನ್ನ ಜನಿವಾರವನ್ನು ಕಿತ್ತು ಹಾಕಬೇಕು. ಸಂಧ್ಯಾವಂದನೆ ಜಪ ಮಾಡುವುದನ್ನು ಬಿಡಬೇಕು. ತುಂಬಾ ಸುಲಭ. ದಲಿತನೊಬ್ಬ ಬ್ರಾಹ್ಮಣ ಆಗುವುದು ಸಮಾಜದಲ್ಲಿ ಸ್ವಿಕೃತವಾಗುತ್ತದೆಯೇ? ಸದ್ಯದ ಪರಿಸ್ಥಿತಿಯಲ್ಲಿ ಇಲ್ಲ. ನನಗೆ ತಿಳಿದಿರುವಂತೆ ಮೈತ್ರೇಯಿ ಗುರುಕುಲ ಇತ್ಯಾದಿ ರಾಷ್ಟೀಯ ಸ್ವಯಂಸೇವಕ ಸಂಘ ನಡೆಸುವ/ಸಂಘದಿಂದ ಪ್ರೇರೇಪಿತವಾದ ಗುರುಕುಲಗಳು ಯಾವುದೇ ಜಾತಿಯಲ್ಲಿ ಹುಟ್ಟಿದ ಮಕ್ಕಳಿಗೆ ಯಜ್ನೊಪವೀತ ದೀಕ್ಷೆ ಕೊಟ್ಟು 'ಬ್ರಾಹ್ಮಣ' ನನ್ನಾಗಿಸುತ್ತವೆ. ಸಂಘದ ಉದ್ದೇಶ ಎಲ್ಲರಿಗೂ ವೇದಾಧ್ಯಯನಕ್ಕೆ ಅವಕಾಶ ಕೊಡುವುದೇ ಹೊರತು ಬ್ರಾಹ್ಮಣ ರನ್ನು ತಯಾರು ಮಾಡುವುದಲ್ಲ.

ಸರಕಾರ ಕೊಡುವ ರಿಸೆರ್ವಷನ ಗಳನ್ನೆಲ್ಲ ಬಿಟ್ಟು ಬ್ರಾಹ್ಮಣ ಆಗಲಿಕ್ಕೆ ಹೊರಟಿರುವ ದಲಿತನ ಕಾಮನ್ಸೆನ್ಸ್ ಬಗ್ಗೆ ಪ್ರಶ್ನೆ ಏಳುತ್ತೆ.. ;)

ರಾಕೇಶ್ ಅತ್ಯಂತ ಕಡಿಮೆ ಆಳುವ ಮನಸ್ಥಿತಿಯಿರುವ ಸರ್ಕಾರ ಉತ್ತಮವಾಗಿರುತ್ತದೆ. ಜನಸಾಮನ್ಯರ ತೀರಾ ಖಾಸಗೀ ವಿಷಯಗಳನ್ನೆಲ್ಲಾ ಕಾನೂನಿನ ಚೌಕಟ್ಟಿನೊಳಗೆ ಒಳಪಡಿಸುವುದು ಕಷ್ಟ. ಅದಕ್ಕೆ ನಮ್ಮಲ್ಲಿರುವ ಹೆಚ್ಚಿನ ಕಾನೂನುಗಳು ಅನುಪಯುಕ್ತವಾಗಿರುವುದೇ ಸಾಕ್ಷಿ. ಎಷ್ಟೋ ಕಾನೂನುಗಳು ಜನಸಾಮಾನ್ಯರಿಗೆ ಗೊತ್ತೇ ಇರುವುದಿಲ್ಲ. ಪ್ರಜಾಪ್ರಭುತ್ವದಲ್ಲಿ ಪ್ರಜೆಯಾದವನೇ ಪ್ರಭು ಎನ್ನುವ ಸಂದರ್ಭದಲ್ಲಿ ಒಬ್ಬ ಪ್ರಜೆ ತನಗೆ ಬೇಕಾದುದನ್ನು ತಾನು ಪಡೆಯುವುದಕ್ಕಾಗಿ, ಅದಕ್ಕೆ ಬೇಕಾಗುವ ಸಾಮಾಜಿಕ ಮನ್ನಣೆಗಾಗಿ ಸರ್ಕಾರಗಳಿಗೆ ಅನುಮತಿ ಕೇಳುವುದು ಸರಿಯಷ್ಟೆ. ಆ ಹಿನ್ನೆಲೆಯಲ್ಲಿ ಈ ಪ್ರಶ್ನೆಯನ್ನು ಕೇಳಲಾಗಿತ್ತು, ಅಷ್ಟೆ. ಇಲ್ಲಿ ಬ್ರಾಹ್ಮಣ ಶೂದ್ರನಾಗುವುದು ದಲಿತನಾಗುವುದು, ದಲಿತ ಅಥವಾ ಶೂದ್ರ ಬ್ರಾಹ್ಮಣನಾಗುವುದು ಎರಡೂ ಸಾಧ್ಯವಿದೆ. ಇಲ್ಲಿ ಸರ್ಕಾರಗಳ, ಆಳುವವರ ಪಾತ್ರವೇನೂ ಇಲ್ಲ. ಅದು ಏನಾದರೂ ಆಗಬಯಸುವವನ ಸಾಮರ್ಥ್ಯದ ಮೇಲೆ ಅವಲಂಬಿತವಾಗುತ್ತದೆ. ಆದರೆ ಅದು ತೀರಾ ವ್ಯಯಕ್ತಿಕ ವಿಚಾರ. ಈ ರೀತಿ ತೀರಾ ವ್ಯಯಕ್ತಿಕ ಆದಂತಹ ವಿಚಾರಗಳನ್ನು ಸರ್ಕಾರಗಳು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಲು ಪ್ರಯತ್ನಿಸಿದರೆ ಏನೆಲ್ಲಾ ಗೊಂದಲಗಳು ಉಂಟಾಗುತ್ತವೆ ಎನ್ನುವುದನ್ನು ಅರಿಯುವ ಉದ್ದೇಶವಿತ್ತೇ ಹೊರತು ಅನ್ಯಥಾ ಭಾವಿಸುವಂತಹುದು ಏನೂ ಇಲ್ಲ.

ಸತ್ಯನಾರಾಯಣ ಸರ್ .. ನಮ್ಮಲ್ಲಿ 'ಮದುವೆ ಆಗೊ ತನಕ ಹುಚ್ಚು ಬಿಡಲ್ಲ..ಹುಚ್ಚು ಬಿಡೋತಂಕ ಮದುವೆ ಆಗಲ್ಲ!' ಅನ್ನೊ ಗಾದೆ ಹೇಳ್ತಾರಲ್ಲ..ಇದನ್ನ ಻ಅನ್ವಯಿಸಿ 'ಮೀಸಲಾತಿ ಇರೊ ತನಕಾ ಜಾತಿ ಹೋಗಲ್ಲ..ಜಾತಿ ಇರೋತನಕಾ ಮೀಸಲಾತಿ ಹೋಗಲ್ಲ' ಅಂತಾ ನನಗನಿಸುತ್ತೆ..ಜಾತಿ ಆಧಾರಿತ ಮೀಸಲಾತಿಯನ್ನು ತೆಗೆಯುವುದು ಸಧ್ಯದ ಮಟ್ಟಿಗೆ ಸಾಧ್ಯವಿಲ್ಲದ ಮಾತು. ಆದ್ದರಿಂದ ನಾವು ಇದ್ದ ಜಾತಿಯಲ್ಲೇ ಇದ್ದಕೊಂಡು ಅತ್ಯುತ್ತಮರಾಗೊದೆ ದಾರಿ. ದಲಿತರಿಗೆ ಶಿಕ್ಷಣದಲ್ಲಿ ಆಸಕ್ತಿ ಬರುವಂತೆ ಮಾಡುವ, ಉನ್ನತಿಗೇರುವಂತೆ ಮಾಡುವ ಹೊಣೆ ದಲಿತ ಚಿಂತಕರ, ದಲಿತ ಸಂಘಟನೆಗಳ ಮೇಲೆ ಇದೆ..ಸರ್ಕಾರ ಸಂವಿಧಾನಬದ್ಧ ಸವಲತ್ತುಗಳನ್ನು ಕೊಡಬಹುದು ಅಷ್ಟೆ.

<<'ಮೀಸಲಾತಿ ಇರೊ ತನಕಾ ಜಾತಿ ಹೋಗಲ್ಲ..ಜಾತಿ ಇರೋತನಕಾ ಮೀಸಲಾತಿ ಹೋಗಲ್ಲ' >> ಇದು ನೂರಕ್ಕೆ ನೂರು ನಿಜ. ಮೊದಲು ಜಾತಿಯಿಂದಾಗಿ ಮೀಸಲಾತಿ ಹುಟ್ಟಿತು. ಈಗ ಮೀಸಲಾತಿಯ ಆಸೆಯಿಂದ ಹೊಸ ಹೊಸ ಜಾತಿಗಳು ಹುಟ್ಟುವ ಪ್ರಕ್ರಿಯೆಯೂ ಆರಂಭವಾಗಿದೆ. ಇದು ಅಪಾಯಕಾರಿ.

ಒಂದು ವೇಳೆ ವರ್ಗಾವಣೆ ಆಯಿತೆಂದಿಟ್ಟುಕೊಳ್ಳೊಣ...ಆಮೇಲೆ? ವರ್ಗಾವಣೆಗೊಂಡವರನ್ನು 'ದಲಿತ ಬ್ರಾಹ್ನಣ' ಎಂದು ಗುರುತಿಸುವುದೊ? ಕ್ರೈಸ್ತ ಧರ್ಮಕ್ಕೆ ಮತಾಂತರಗೊಂಡ ದಲಿತರನ್ನು 'ದಲಿತ ಕ್ರೈಸ್ತ'ರೆಂದು ಕರೆಯಬೇಕು ಎಂದ ಹಾಗೆ!.. ಏಕೆಂದರೆ ಈಗಾಗಲೇ ಬ್ರಾಹ್ಮಣರಲ್ಲಿಯೇ ಹಲವು ಹದಿನೆಂಟು ಪಂಗಡಗಳಿವೆ. ತಮ್ಮ 'ಪ್ರಭುದ್ಧ' ಪ್ರಶ್ನಾವಳಿಗಳ ಮಾಲಿಕೆಗೆ ನನ್ನವೆರಡು ಪ್ರಶ್ನೆಗಳ ಕಾಣಿಕೆ..ಮುಂದಿನ ಲೇಖನಗಳಲ್ಲಿ ಉಪಯೋಗಕ್ಕೆ ಬರಬಹುದು.. 1)ದಲಿತನೊಬ್ಬ 'ನನ್ನ ಮದುವೆಯನ್ನು ಪಕ್ಕದ ಓಣಿಯ ಶಾಸ್ತ್ರಿಗಳ ಮಗಳ ಜೊತೆಯೇ ಮಾಡಿಕೊಡಬೇಕೆಂದು' ಎಂದು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರೆ, ಅದಕ್ಕೆ ಸರ್ಕಾರದ ಉತ್ತರ ಏನಿರಬಹುದು? ಊಹೆ ಮಾಡಿ. 2)ದಲಿತನೊಬ್ಬ 'ವೆಂಕಟೇಶ್ವರ ದೇವಾಲಯದ ಪೂಜಾರಿಯನ್ನು ದಲಿತ ಜಾತಿಗೆ ವರ್ಗಾವಣೆ ಮಾಡಿ, ತನ್ನ ಮತ್ತು ಅವನ ನಡುವೆ ಸಮಾನತೆಯನ್ನು ತರಬೇಕು' ಎಂದು ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರೆ, ಅದಕ್ಕೆ ಸರ್ಕಾರದ ಉತ್ತರ ಏನಿರಬಹುದು? ಊಹೆ ಮಾಡಿ. -

ನನ್ನ ಪ್ರಶ್ನೆಗೆ ಪೂರಕವಾಗಿಯೇ ನಿಮ್ಮ ಎರಡೂ ಪ್ರಶ್ನೆಗಳಿವೆ. ನನ್ನ ಪ್ರಶ್ನೆಯ 'ದಲಿತನೊ ಬ್ರಾಹ್ಮಣನಾಗುವ' ಹಾಗೂ ನಿಮ್ಮ ಪ್ರಶ್ನೆಯ 'ದಲಿತನೊಬ್ಬ ಪಕ್ಕದ ಓಣಿಯ ಶಾಸ್ತ್ರಿಗಳ ಮಗಳನ್ನು ಮದುವೆಯಾಗುವ' ಮತ್ತು 'ದೇವಾಲಯದ ಪೂಜಾರಿಯೊಂದಿಗೆ ಸಮಾನತೆ ಸಾಧಿಸಿಕೊಳ್ಳುವ' ಎಲ್ಲಾ ವಿಚಾರಗಳೂ ಅವನವನ ವ್ಯಯಕ್ತಿಕ ವಿಚಾರಗಳು. ಅವು ಅವನ ಸಾಮರ್ಥ್ಯದ ಮೇಲೆಯೇ ನಿರ್ಧಾರವಾಗುವಂಥಹವು. ಅಂತಹುಗಳನ್ನು ಸರ್ಕಾರ ಯಾರೋ ಒಬ್ಬನ(ರ) ಒತ್ತಡಕ್ಕೆ ಮಣಿದು ಕಾನೂನಿನ ಚೌಕಟ್ಟಿನೊಳಗೆ ಬಂಧಿಸಲು ಹೊರಟರೆ .............

ದಲಿತ ಎಲ್ಲಿಯವರೆಗೆ ಬ್ರಾಹ್ಮಣ ಆಗೋದಿಲ್ಲವೋ ಅಲ್ಲಿಯವರೆಗೆ ಶಾಸ್ತ್ರಿ ಮಗಳೊಂದಿಗೆ ಮದುವೆಯಿಲ್ಲ, ಎಲ್ಲಿಯವರೆಗೆ ಶಾಸ್ತ್ರಿ ಮಗಳೊಂದಿಗೆ ಮದುವೆ ಆಗುವುದಿಲ್ಲವೋ ಅಲ್ಲಿಯವರೆಗೆ ದಲಿತ ಬ್ರಾಹ್ಮಣ ಆಗುವುದಿಲ್ಲ ಮೇಲಿನ ಅಡಕೊತ್ತರಿಯಲ್ಲಿ ಸಿಕ್ಕ ಅಡಿಕೆಯ ಪರಿಸ್ಥಿತಿಗೆ ಆಂಗ್ಲ ಭಾಷೆಯಲ್ಲಿ catch-22 situation ಎನ್ನುತ್ತಾರೆ. ಮಗನ ಬ್ಯಾನೆ ವಾಸಿ ಆಗೋ ತನಕ ಆವನಿಗೆ ಮದುವೆಯಿಲ್ಲ, ಮದುವೆ ಆಗೊತನಕ ಮಗನ ಬ್ಯಾನೆ ವಾಸಿ ಆಗೋದಿಲ್ಲ. ಜೋಸೆಫ್ ಹೆಲ್ಲರ್ ಬರೆದ catch -22 ಕಾದಂಬರಿಯಲ್ಲಿನ ಸನ್ನಿವೇಶ ಇದು. ಈಗ ಆಂಗ್ಲ ಪದಕೋಶದಲ್ಲಿ ಅಜರಾಮರವಾಯಿತು catch-22

ಈ ಪ್ರಶ್ನೆ ನಿಮಗೆ "ಈಗ" ಬರಲು ಕಾರಣಗಲೇನೋ ತಿಳಿಯದು. ನಾನೊಮ್ಮೆ ಈ ಬಗ್ಗೆ ಬೇರೆಡೆ ಪ್ರಸ್ತಾಪಿಸಿದ್ದೆ. "ಹಾಗಾಗಿ" ಇಲ್ಲಿ ಸ್ವಲ್ಪ ಸೇರಿಸ್ತ ಇದ್ದೇನೆ. ಒಂದು ವೇಳೆ ಯಾರೇ ಒಬ್ಬ ( ಅವ ದಲಿತನೆ ಇರಲಿ, ಶೂದ್ರನೆ ಇರಲಿ ಅತ್ವ ಈ ವರ್ಣಗಳಲ್ಲಿ ಬರದ ಲಿಂಗಾಯತನೆ ಇರಲಿ) .. "ಬ್ರಾಹ್ಮಣನಾಗಲು "ಅರ್ಜಿ" ಹಾಕಿದ್ದೆ ಆದರೆ ಅದು ತನಗೆ ತಾನೇ ಮೋಸ ಮಾಡಿಕೊಳ್ಳುವ, ತನ್ನತನ್ವನ್ನು ಕೊಂದುಕೊಳ್ಳುವ ಕೆಲಸವಾಗುತ್ತೆ. ಕಾಲದ ಜೊತೆ ಮುಂದು ಹೋಗದೆ ಯಾವುದೋ ಹಿಂದಿನ ಕತ್ತಲ ಕಾಲಕ್ಕೆ ಹೋದಂತೆಯೇ ಸರಿ. "ಜಾತಿ" ಯಿಂದ "ಬ್ರಾಹ್ಮಣ" ನಾಗ್ತೀನಿ ಅಂದ್ರೆ .. ಆ ಜಾತಿಗೆ ಸೇರಿಸಿಕೊಲ್ಲೋದು ಆ ಜಾತಿಗೆ ಬಿಟ್ಟದ್ದು. ಸರ್ಕಾರ ಇದರ ಬಗ್ಗೆ ಏನೂ ಮಾಡಕ್ಕೆ ಆಗಲ್ಲ. "ವರ್ಣ" ದಿಂದ "ಬ್ರಾಹ್ಮಣ" ನಾಗ್ತೀನಿ ಅಂದ್ರೆ .. ಅದು ಆ ವ್ಯಕ್ತಿಯ ಸಂಸ್ಕಾರಕ್ಕೆ ಬಿಟ್ಟದ್ದು. [ಜಾತಿಯಿಂದ] ಬ್ರಾಹ್ಮಣ / ಶೂದ್ರ / ಅಸ್ಪ್ರುಷ್ಯರಲ್ಲಿ ವರ್ಣದಿಂದ ಬ್ರಾಹ್ಮಣರು ಹೆಚ್ಚು ಕಮ್ಮಿ ಸಮಾನವಾಗಿಯೇ ಇದ್ದಾರೆ. ಈ ವರ್ಣದಿಂದ ಬ್ರಾಹ್ಮನರಾದವರಿಗೆ "ಈಗಿನ" ಶಾಸ್ತ್ರಗ್ರಂಥಗಳು ಉತ್ತಮ ಸಾಮಾಜಿಕ ಗೌರವ ಮರ್ಯಾದೆ ಗಳನ್ನೂ ಕೊಡಲ್ಲ. ವ್ಯಕ್ತಿಯ ಉದ್ದಾರಕ್ಕೂ (ಹಣಕಾಸಿನ ರೀತಿಯಲ್ಲಿ) ಈ ಬ್ರಾಹ್ಮಣನಾಗಿ ಬದಲಾಗುವುದಕ್ಕೂ ಹೆಚ್ಚಿನ ಸಂಬಂಧವಿಲ್ಲ. ಸಂಸ್ಕಾರದಿಂದ ಬ್ರಾಹ್ಮಣನಾದವನಿಗೆ ಈ "ಸಮಾಜದ ಶಾಸ್ತ್ರಗ್ರಂಥ"ಗಳು ವಿಶೇಷ ಸ್ಥಾನಮಾನವನ್ನೇನೂ ಕೊಡಲ್ಲ. ..................... ಒಬ್ಬ ವ್ಯಕ್ತಿಗೆ ಸಾಮಾಜಿಕವಾಗಿ ಸಮಾನವಾದ ಗೌರವಗಳು ಸಿಗಬೇಕು. ಯಾರದೇ ನಡವಳಿಕೆಗಳು / ಆಚರಣೆಗಳು /ನಂಬಿಕೆಗಳು ಇತರರ ಆತ್ಮ ಗೌರವವನ್ನು ಅವಮಾನಿಸುವನ್ತಿರಬಾರದು. ಆದರೆ ಈಗಿನ ನಮ್ಮ " ವರ್ಣ ವ್ಯವಸ್ತೆ" ನಮ್ಮ ಸಮಾಜದ ಅನೇಕ ಪಂಗಡಗಳನ್ನು ಮಾನಸಿಕವಾಗಿ ಹಿಂಸಿಸುತ್ತ ಇದೆ. ಈ ರೀತಿಯ ಅವಮಾನವನ್ನು ನಿವಾರಿಸಬೇಕು ಅಂದ್ರೆ ಇರೋ ಒಂದೇ ದಾರಿ...." ಈ ಬ್ರಾಹ್ಮಣ-ಶೂದ್ರ-ಅಸ್ಪೃಶ್ಯ" ಅಂತ ಮಾತಾದೊದನ್ನು ಕಾನೂನು ಬಾಹಿರ ಮಾಡಬೇಕು. ಸರ್ಕಾರ ಇದರ ಬಗ್ಗೆ ಗಮನ ಕೊಡಬೇಕು!. ಶೂದ್ರ ಅಸ್ಪೃಶ್ಯ ಅಂತ ಮಾತಾಡೊರನ್ನು "ಪಾಪಿಗಳು" ಅನ್ನೋ ಸಾಮಾನ್ಯ ಪದ ಬಳಸದೆ ಅವರಿಗೆ ತಕ್ಕ ಶಿಕ್ಷೆ ಕೊಡಬೇಕು. ವರ್ಣ ವ್ಯವಸ್ಥೆಯನ್ನು ಎತ್ತಿ ಹಿಡಿಯುವ ಶಾಸ್ತ್ರ ಗ್ರಂಥಗಳನ್ನು ನಿಷೇಧಿಸಬೇಕು.

ಬ್ರಾಹ್ಮಣ, ಬ್ರಹ್ಮತ್ವ ಇವುಗಳ ಇಚ್ಛೆಗಿಂತ ಮೀಸಲಾತಿಯ ಆಮಿಷವೇ ಹೆಚ್ಚಿರುವಾಗ ಹೀಗೊಂದು ಅರ್ಜಿ ಹಾಕಿದವನ 'ಕಾಮನ್ ಸೆನ್ಸ್' ಪ್ರಶ್ನಾರ್ಹ...! ಸರ್ಕಾರವೇನಾದರೂ ಮೂಗುತೂರಿಸಿದರೆ ಅದರ 'ಸೆನ್ಸ್' ಸಂದೇಹಾರ್ಹ ಮತ್ತು ಆ 'ನ್ಯೂಸೆನ್ಸ್' ಶಿಕ್ಷಾರ್ಹ...!