ಕನ್ನಡ ಬಳಸಿ, ಉಳಿಸಿ, ಕಲಿಸಿ

0

1 - ಕನ್ನಡ ಬಳಿಸಿ - ಆದಷ್ಟರ ಮಟ್ಟಿಗೆ ಕನ್ನಡ ಬಳಿಸಿ. ಪರ ಭಾಷೆಯ ಅಗತ್ಯವಿದ್ದರೆ ಮಾತ್ರ ಬಳಿಸಿ. ಕನ್ನಡದ ಬಗ್ಗೆ ಹೆಚ್ಚು ಅಭಿಮಾನಾವಿರಲಿ ಆದರೆ ಪರಬಷೆಗಳಿಗೂ ಗೌರವ ಕೊಡಿರಿ. ಕೆಲ ಸಂದರ್ಭಗಳಲ್ಲಿ ಆಂಗ್ಲ ಭಾಷೆಯ ಉಪಯೋಗ ಅಗತ್ಯವಾಗಿ ಉಪಯೋಗಿಸಬೇಕಾದರೆ ತಪ್ಪಿಲ್ಲ.

2 - ಕನ್ನಡ ಉಳಿಸಿ - ಕನ್ನಡ ಸಾಹಿತ್ಯಕ್ಕೆ ಆದರ ಕೊಡಿ. ಕನ್ನಡ ಪತ್ರಿಕೆಗಳನ್ನು ಓದಿರಿ. ಕನ್ನಡ ಭಾಷೆಯನ್ನು ಸದಾ ಉತ್ತೇಜಿಸಿ. ಕನ್ನಡ ಸಂಸ್ಕೃತಿಗೆ ಪ್ರೋತ್ಸಾಹ ನೀಡಿ. ಕನ್ನಡ ಸಾಹಿತ್ಯ ಬೆಳವಣಿಗೆಗೆ ನಿಮ್ಮ ಸೇವೆಯನ್ನು ಸಲ್ಲಿಸಿರಿ.

3 - ಕನ್ನಡ ಕಲಿಸಿ - ಕರ್ನಾಟಕಕ್ಕೆ ವಲಸೆ ಬಂದಿರುವ ಪರರಾಜ್ಯಗಳ ಜನರಿಗೆ ನಿಮಾಗದಷ್ಟು ಮಟ್ಟಿಗೆ ಕನ್ನಡವನ್ನು ಕಲಿಸುವ ಪ್ರಯತ್ನ ಮಾಡಿರಿ. ಕನ್ನಡ ಕಲಿಯುವೂದ್ ಸರಳವಾದದ್ದೆಂದು ತಿಳಿಸಿ. ಪರಭಾಷೆಯವರು ರಾತ್ರೋ ರಾತ್ರಿ ಕನ್ನಡ ಪಂಡಿತರಾಗಬೇಕೆಂಬ ಅವಶ್ಯಕತೆಯಿಲ್ಲ. ನಿಧಾನವಾಗಿ ಸರಳ ಸಂವಾದನೆ ನಡೆಸಲು ಅರ್ಹರಾದರೆ ಸಾಕು. ಮುಂದೆ ಮುಂದೆ ಅವರೇ ಸಾವಕಾಶವಾಗಿ ಕಲಿಯುವರ.

ಕನ್ನಡ ಭಾಷೆಯ ಉಳಿಯುವುದು, ಬೆಳೆಯುವುದು ಎಲ್ಲಾ ಕನ್ನಡಿಗರ ಶಕ್ತಿಯಲ್ಲಿದೆ.

ಬನ್ನಿ ಎಲ್ಲರೂ ಸೇರಿ ಕನ್ನಡ ಮಾತೆ, ಕನ್ನಡ ಭಾಷೆ ಮತ್ತು ಕನ್ನಡ ನಾಡಿನ ಸೇವೆ ಮಾಡೋಣ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಬೞಸಿ, ಉೞಿಸಿ, ಕಲಿಸಿ ಜೊತೆಗೆ ಬೆಳೆಸಿ ಏಕಿಲ್ಲ. ಇದನ್ನೂ ಸೇರಿಸಿ. ಹೞತಱೊಡನೆ ಹೊಸತನ್ನು ಕಲಿತು ಕನ್ನಡ ಬೆಳೆಸುವ (ನಿಜವಾಗಿ ಕೇಶಿರಾಜನ ಪ್ರಕಾರ ಬಳೆಸಿ) ಕೆಲಸವನ್ನೂ ಮಾಡಬೇಕು.

ಇಡೀ ಸಂಪದವನ್ನು ಕನ್ನಡಮಯ ಮಾಡಲು ಸಾಧ್ಯವಿಲ್ಲವೇ? ಪ್ರೊಫೈಲ್, ಲೋಗ್ ಔಟ್, ಬ್ಲಾಗ್ಸ್, ಆರ್ಕೈವ್, ತಾರೀಕು ಮತ್ತು ಸಮಯ, ಹಾಗೂ ನಮ್ಮ ಹೆಸರು ಇವುಗಳನ್ನು ಕನ್ನಡಮಯ ಮಾಡಲು ಸಾಧ್ಯವಾದರೆ ಎಷ್ಟು ಒಳ್ಳೆಯದು. ಹೀಗಾದರೂ ನಾವು ಕನ್ನಡ ಬೆಳೆಸಿ ಚಳವಳಿ ಮಾಡಬಹುದು ಅಲ್ಲವೇ ಕನ್ನಡಕಂದರೇ? ಹಲವಾರು ಸಂಪದಿಗರು ಐಟಿ ಅಭಿಯಂತಕರು ಇರುವಾಗ ಖಂಡಿತ ಸಾಧ್ಯವಿದೆ. ಪ್ರಯತ್ನಿಸಿ.