ಭಾರತದ ಸುರಕ್ಷತೆ

5

ನಾನು ಕೇಳಿದ್ದು, ’ಅಲೆಗ್ಜಾಂಡರ್ ದ ಗ್ರೇಟ್’ನ ಕಾಲದಲ್ಲಿ, ಭಾರತ ಸೋಲುಣ್ಣದ ನಾಡು ಎಂದು ಖ್ಯಾತವಾಗಿತ್ತೆಂದು. ಮುಖ್ಯ ಕಾರಣ, ಆನೆಗಳನ್ನು ಪಳಗಿಸಿ ಯುದ್ಧಗಳಲ್ಲಿ ಬಳಸುವ ಕಲೆ ಭಾರತೀಯರಿಗಸ್ಟೇ ಕರಗತವಾಗಿತ್ತೆಂಬುದು. ಆಗಿನ ನಂದರ ಬಳಿ ಸುಮಾರು ಆರು ಸಾವಿರ ಆನೆಗಳ ದಂಡು ಇತ್ತೆಂಬುದು ಹುಬ್ಬೇರಿಸುವ ಮಾತೇ. ಮುಂದೆ ಅದು ಹೇಗೆ ಭಾರತೀಯರು ಶಕ್ತಿಗುಂದಿದರು? ಮಹಮ್ಮದ್ ಘಜನಿ ಅಂತವರಿಗೆ ಮತ್ತೆ ಮತ್ತೆ, ಹದಿನೇಳು ಬಾರಿ, ದಂಡೆತ್ತಿ ಬರಲು ಹೇಗೆ ಸಾಧ್ಯವಾಯಿತು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ದ್ರಾವಿಡ ವಿಶ್ವವಿದ್ಯಾಲಯದವರು ಹೊರತಂದಿರುವ ಎಂ ವಿ ಆರ್‍ ಶಾಸ್ತ್ರಿಯವರು ಬರೆದಿರುವ "ಯಾವುದು ಚರಿತ್ರ?" ಹೊತ್ತಗೆಯಲ್ಲಿ ಈ ಬಗ್ಗೆ ಅನೇಕ ವಿಚಾರಗಳನ್ನು ಚರ್ಚಿಸಿದ್ದಾರೆ. ಇದು ಕನ್ನಡದಲ್ಲಿ "ಯಾವುದು ಚರಿತ್ರೆ?" ಎಂಬ ಹೆಸರಲ್ಲಿ ಲಭ್ಯವಿದೆ. ಬಾಬು ಕೃಷ್ಣಮೂರ್ತಿಯವರು ಅನುವಾದಿಸಿದ್ದಾರೆ. ಅದರಲ್ಲಿ ಹೆಚ್ಚಿನ ಮಾಹಿತಿ ಸಿಗಬಹುದು.

ತಮ್ಮ ತಮ್ಮಲ್ಲಿ ಕಚ್ಚಾಟ , ದೂರದರ್ಶಿತ್ವದ ಕೊರತೆ , ವಿಚಾರಶೀಲತೆಯನ್ನು ತೊರೆದು ನಿಂತ ನೀರಿನಂತಾದ ಸಮಾಜ , ಅಹಿಂಸೆಗೆ ಒತ್ತು ಕೊಟ್ಟ ಜೈನ ಬೌದ್ಧಧರ್ಮಗಳು , ಪರಕೀಯರ ಮುಂದುವರಿದ ತಾಂತ್ರಿಕತೆ , ಯಾರು ಬಂದರೂ ರಾಗಿ ಬೀಸೋದು ತಪ್ಪೋದಿಲ್ಲ ಎಂಬಂತಹ ಆಡಳಿತವ್ಯವಸ್ಥೆ , ಹೀಗೆಲ್ಲ ಅನೇಕ ಕಾರಣ ಇರಬಹುದು . ಇತಿಹಾಸದ ಬಗ್ಗೆ ಹೆಚ್ಚು ಓದಿ , ಚಿಂತಿಸಿದರೆ ಉತ್ತರ ಸಿಗಬಹುದು.

[quote]ಅಹಿಂಸೆಗೆ ಒತ್ತು ಕೊಟ್ಟ ಜೈನ ಬೌದ್ಧಧರ್ಮಗಳು,[/quote] ಅಹಿಂಸೆಗೆ ಬೌದ್ಧ ಮತ್ತು ಜೈನ ಧರ್ಮಗಳು ಒತ್ತು ಕೊಟ್ಟಿದ್ದರಿಂದ, ಮಂದಿ ಅವುಗಳ ಕಡೆ ವಾಲಿದ್ದರಿಂದ ಹಿಂದುಗಳೂ ಸಹ relatively ಮೆತ್ತಗಾದರು ಅನ್ನುವ ವಾದವಿದೆ. ಆದರೆ ಇದು ಎಸ್ಟರ ಮಟ್ಟಿಗೆ ದಿಟ ಅನ್ನುವದು ಅನುಮಾನದ ಸಂಗತಿ.

ನಮ್ಮ ಇತಿಹಾಸವನ್ನು ಪೂರ್ವಾಗ್ರಹಗಳಿಲ್ಲದೆ ಅಧ್ಯಯನ ಮಾಡದಿದ್ದರೆ ಈ ಪ್ರಶ್ನೆಗಳಿಗೆ ಉತ್ತರ ಸಿಗೋಲ್ಲ. ದಂಡೆತ್ತಿ ಬಂದವರೆಲ್ಲಾ ಇಲ್ಲಿ ಗೆಲ್ಲಲಿಲ್ಲ. ಅದು ಸುಮಾರು ಶತಮಾನಗಳ ಕಾಲ ನಡೆದ ದೊಡ್ಡ ಹೋರಾಟ. ಇಲ್ಲಿರುವ ಕೆಲವು ಕೊಂಡಿಗಳನ್ನು ಓದಿ. ಬಹಳ ಸೊಗಸಾಗಿ ಬರೆದಿದ್ದಾರೆ. http://horsesandswor... http://horsesandswor... http://horsesandswor... http://horsesandswor... http://horsesandswor... http://horsesandswor... ಭೈರಪ್ಪನವರ " ಸಾರ್ಥ" ದಲ್ಲಿ ಅರಬರು ಮುಲ್ತಾನವನ್ನು ಅಕ್ರಮಿಸಿಕೊಂಡಾಗ ಪ್ರತೀಹಾರರ ಸೈನ್ಯ ಅದನ್ನು ಬಿಡಿಸಲು ಬಂದಾಗ ನಡೆದ ಸಂಗತಿಗಳಿವೆ. ಅರಬರು ಅಲ್ಲಿನ ದೇವಸ್ಥಾನವನ್ನು ಒಡೆಯುತ್ತೇವೆ ಎಂದು ಹೆದರಿಸಿದರು. ಇವರು ತೆಪ್ಪಗೆ ವಾಪಸು ಹೋದರು! ಮುಖ್ಯವಾಗಿ ಭಾರತದ ರಾಜರು ಯುದ್ಧ ಮಾಡುತಿದ್ದದ್ದು ಫಲವತ್ತಾದ ಭೂಮಿ ಅಥವಾ ವಾಣಿಜ್ಯ ಕೇಂದ್ರಗಳ ಹತೋಟಿಗಾಗಿ. ಇದರಲ್ಲಿ ಲೂಟಿ , ಗುಲಾಮರು ಮತ್ತು ಮತಾಂತರದ ಉದ್ದೇಶಗಳಿರುತಿರಲಿಲ್ಲ್. ಇದರಿಂದಾಗಿ ಅಫಘಾನಿಸ್ತಾನ ಕೊಂಚಕೊಂಚವಾಗಿ ತುರುಕರ ಪಾಲಾಗುತ್ತಿದ್ದಾಗ ಗುಜರಾತಿನ ಚಾಲುಕ್ಯರಾಗಲಿ , ಅಜಮೇರಿನ ಚೌಹಾಣರಾಗಲಿ ತಲೆ ಕೆಡಿಸಕೊಳ್ಳಲಿಲ್ಲ. ತುರುಕರು ಗೆದ್ದರೆ ಏನಾಗುತ್ತದೆ ಎಂಬ ಕಲ್ಪನೆ ಕೂಡ ಇರಲಿಲ್ಲ.

ಒಳ್ಳೆ ವಿಚಾರ ಮಾಡಿದ್ದೀರಿ. ನನ್ನ ಪ್ರಕಾರ ಯಾವುದೇ ದೇಶ ಸತತವಾಗಿ ಉನ್ನತಿಯಲ್ಲಿರುವುದು ಸಾಧ್ಯವಿಲ್ಲ. ಅದು ಪ್ರಕೃತಿ ನಿಯಮ. ಸಿಂಹವು ಕೂಡಾ ಮುಪ್ಪು ಬಂದಾಗ ತನ್ನ ಶಕ್ತಿ ಕಳೆದುಕೊಳ್ಳುತದೆ. ಇದು ದೇಶಗಳಿಗೆ ಮಾತ್ರವಲ್ಲ, ಸಂಸ್ಕೃತಿಗಳಿಗೂ, ನಾಗರಿಕತೆಗಳಿಗೂ ಅನ್ವಯಿಸುತ್ತದೆ. ಭಾರತವೂ ಇದಕ್ಕೆ ಹೊರತಲ್ಲ. ಭಾರತದ ಪತನ ಅನಿವಾರ್ಯವಾಗಿತ್ತು. ಹಾಗೆಯೇ ಅದು ಪುನಹ ಹುಟ್ಟಿಬರುವುದರಲ್ಲಿ ಸಂಶಯವಿಲ್ಲ. ಭಾರತದ ಪತನ ಪ್ರಾರಂಭವಾಗಿ ಸಾವಿರ ವರ್ಷಗಳಾಗುತ್ತಾ ಬಂತು. ಇಲ್ಲಿವರೆಗೆ ಸತತ ಹೋರಾಟ, ತ್ಯಾಗಗಳ ಬಲಿದಾನಗಳ ಮೂಲಕ ಇನ್ನೂ ಭಾರತದ ಅಂತಸತ್ವವನ್ನು ಅಲ್ಪ ಸ್ವಲ್ಪ ಉಳಿಸಿಕೊಂಡಿದ್ದೇವೆ. ಈ ಅಂತ:ಸತ್ವ ಪುನಹ ಪ್ರಜ್ವಲಿಸುವ ಸಮಯ ಬಂದಿದೆಯೇ? ಈ ಬಗ್ಗೆ ಹೆಚ್ಚು ಅರಿಯಬೇಕಾದರೆ ಮಹರ್ಷಿ ಅರವಿಂದರ ಕೃತಿಯ ಕನ್ನಡ ಅನುವಾದ 'ಭಾರತದ ಮರುಹುಟ್ಟು' ಪುಸ್ತಕವನ್ನು ಓದಬಹುದು.

ದಕ್ಷಿಣ ಭಾರತವಂತೂ ಹದಿನಾರನೇ ಶತಮಾನದವರೆಗೆ ಮುಸ್ಲೀಮ್ ದೊರೆಗಳಿಗೆ ಒಳಗಾಗಿರಲಿಲ್ಲ. ಉತ್ತರ ಭಾರತ ಹನ್ನೆರಡನೇ ಶತಮಾನದ ಹೊತ್ತಿಗೆ ಮುಸ್ಲೀಂ ದೊರೆಗಳ ಕೈ ಸೇರಿತ್ತು. http://en.wikipedia.... ಅಲ್ಲಿ ಬಲಗಡೆಯ ಕಾಲಮಾನ ಪಟ್ಟಿ ನೋಡಿ. ಭಾರತದ ಮೇಲಿನ ಮೊಟ್ಟ ಮೊದಲ ದಾಳಿ ಅಂದರೆ, ಕಿ.ಶ ೭೧೫ರಲ್ಲಿ ರಾಜ ದಾಬಿರ್ ಮೇಲೆ ಮೊಹಮ್ಮದ್ ಬಿನ್ ಖಾಸಿಮ್ ನಡೆಸಿದ ದಾಳಿ. ದಾಬಿರ್ ಸಿಂಧ್ ಪ್ರಾಂತವನ್ನು ಆಳುತ್ತಿದ್ದ ಬ್ರಾಹ್ಮಣ ದೊರೆ. http://www.hindubook... ಇಲ್ಲಿ ಇದರ ಬಗ್ಗೆ ಹೆಚ್ಚಿನ ಮಾಹಿತಿ ಇದೆ. ಕ್ರಿ.ಪೂ ೧೮೦ ಸುಮಾರಿನಲ್ಲಿ ಮೌರ್ಯರ ಪತನದ ನಂತರ, ಹಲವು ರಾಜರು ಉತ್ತರ ಭಾರತದ ಪಶ್ಚಿಮ ಭಾಗವನ್ನು ಆಳಿ ಹೋಗಿದ್ದಾರೆ. ಆಗ ಭಾರತ ಈಗಿನ ಅಫಘಾನಿಸ್ತಾವನ್ನೂ ದಾಟಿ, ಅರಬ್ ವೆರೆಗೆ ಹಬ್ಬಿತ್ತು ಎಂಬುದು ಗಮನಾರ್ಹ ಸಂಗತಿ. ಮೌರ್ಯರ ನಂತರ ಸಿಂಧ್ ಪ್ರಾಂತದಲ್ಲಿ ಸುಂಗರು(185-73 BCE), ಕಣ್ವರು(75-26 BCE), ಕುಶಾನರು(60–240 CE) ಮತ್ತು ಗುಪ್ತರು(280–550 CE) ಪ್ರಮುಖರು. ಕುಶಾನರು ಉತ್ತರದ ಪೂರ್ವ ಭಾಗವನ್ನು ಗುಪ್ತರಿಗೆ ಕಳೆದುಕೊಂಡರೆ, ಪಶ್ಚಿಮದ ಭಾಗ(ಅಫಘಾನಿಸ್ತಾನ)ವನ್ನು Sassanid ಎಂಬ ಜನಾಂಗಕ್ಕೆ ಕಳೆದುಕೊಂಡರು.(ಈ ಭೂಪಟ ನೋಡಿ http://en.wikipedia....) ಕುಶಾನರು ಹಿಂದೂಗಳಲ್ಲ, ಆದರೆ ಅವರು ಬೌದ್ಧ ಮತ್ತು ಶೈವ ಪದ್ಧತಿಗಳಲ್ಲಿ ನಂಬುಗೆಯುಳ್ಳವರಾಗಿದ್ದರು. ಬಹುಶ ಕುಶಾನರ ನಂತರ ಸಿಂಧ್ ಪ್ರಾಂತದವರೆಗೆ ಮಾತ್ರ ಹಿಂದೂ ಆಳ್ವಿಕೆ ಸೀಮಿತಗೊಂಡಿತು. ಮೌರ್ಯ ಸಾಮ್ರಾಜ್ಯದ ಅಶೋಕನ ಕಾಲ ಮತ್ತು ತರುವಾಯ ಬೌದ್ಧ ಧರ್ಮದ ಆಕರ್ಷಣೆ ಹೆಚ್ಚಿ ಅದು ಕ್ಷಿಪ್ರ ಗತಿಯಲ್ಲಿ ಬೆಳೆದು, ವೈದಿಕ ಧರ್ಮ ಹೀನಾಯ ಸ್ತಿತಿ ತಲುಪಿತ್ತು. ಬೌದ್ಧ ಧರ್ಮವನ್ನು ಸದೆಬಡಿದು ವೈದಿಕ ಧರ್ಮದ ಪುನರ್ಥಾಪನೆಗೆ ವೈದಿಕ ಅನುಯಾಯಿಗಳು ಪ್ರಯತ್ನ ಪಡುತ್ತಿದ್ದರು. ಮೇಲೆ ಹೇಳಿದ ದಾಬಿರ್‍‍ನ ಮೊದಲು ಅಲ್ಲಿ ಬೌದ್ದ ದೊರೆ ಇದ್ದ, ಅವನ ಮಂತ್ರಿಯಾಗಿದ್ದ ದಾಬಿರ್ ಆತನನ್ನು ಕೊಂದು, ಅಧಿಕಾರಕ್ಕೆ ಬಂದಿದ್ದನು. ದಾಬಿರ್‍‍ನ ಕಾಲದಲ್ಲಿ ಅರಬ್ಬರು ದಾಳಿ ಮಾಡಲು ಕಾರಣವಾದ ಘಟನೆಯೊಂದು ಶ್ರೀ ನಾರಾಯಣ ಶರ್ಮಾ ಬರೆದಿರುವ ’ಭಾರತದ ಇತಿಹಾಸ(ಪ್ರಾಚೀನ)’ ಪುಸ್ತಕದಲ್ಲಿ ಬರೆಯಲ್ಪಟ್ಟಿದೆ. (http://dli.iiit.ac.i...) ಅರಬ್ಬರ ಹಡಗೊಂದು ದಾರಿ ತಪ್ಪಿ ಸಿಂದೂ ನದಿಯ ದಡಕ್ಕೆ ತಲುಪಿದಾಗ, ಅಲ್ಲಿನ ಕಡಲುಗಳ್ಳರು ಅದನ್ನು ಲೂಟಿ ಮಾಡಿ, ಹೆಂಗಸರನ್ನು ಸೆರೆ ಹಿಡಿದು, ಗಂಡಸರನ್ನು ಕೊಲೆ ಮಾಡುತ್ತಾರೆ. ಆ ಪ್ರಾಂತ ದಾಬಿರನ ಆಳ್ವಿಕೆಯಲ್ಲಿದ್ದು ಅದರ ಬಗ್ಗೆ ಅವನು ಯಾವುದೇ ಕ್ರಮ ತೆಗೆದುಕೊಳ್ಳುವದಿಲ್ಲ. ಈ ಸಂಗತಿ ಅರಬ್ಬರಿಗೆ ತಲುಪಿ, ಅವರ ದಾಳಿಗೆ ಕಾರಣವಾಯಿತು. ಆ ಯುದ್ದದಲ್ಲಿ ಇಡೀ ಸಿಂಧ್ ಪ್ರಾಂತವನ್ನು ಅರಬ್ಬರು ಗೆಲ್ಲುತ್ತಾರೆ. ಸಿಂಧ್ ಅನ್ನು ಗೆದ್ದ ಮೇಲೆ, ಒಳನುಗ್ಗುವದು ಅರಬ್ಬರಿಗೆ ಅತ್ಯಂತ ಸರಳವಾಗಿ ಬಿಡುತ್ತದೆ. ಹಿಂದೂಗಳನ್ನು ಬೇರೆ ಧರ್ಮದ ರಾಜರು ಆಳಿದ್ದರೂ, ಹಿಂದೂಗಳನ್ನು ತಮ್ಮ ಆಚರಣೆಗಳನ್ನು ಮಾಡಿಕೊಂಡಿರಲು ಬಿಟ್ಟಿದ್ದರು. ಹೀಗಾಗಿ ಅದು ಹಿಂದೂ ಜನಜೀವನಕ್ಕೆ ಧಕ್ಕೆ ತರುತ್ತಿರಲಿಲ್ಲ. ಹಾಗಾಗಿ ಮೇಲೆ "ಕೇವೆಂ" ಅವರು ಹೇಳಿರುವಂತೆ ಮುಸ್ಲೀಂ ದೊರೆಗಳ ಗೆಲುವನ್ನು ಯಾರೂ ತಮ್ಮ ಆಚರಣೆಗಳಿಗೊದಗಬಹುದಾದ ಕುತ್ತೆಂದು ಯಾರೂ ಭಾವಿಸಲಿಲ್ಲ.

<<ಆಗ ಭಾರತ ಈಗಿನ ಅಫಘಾನಿಸ್ತಾವನ್ನೂ ದಾಟಿ, ಅರಬ್ ವೆರೆಗೆ ಹಬ್ಬಿತ್ತು ಎಂಬುದು ಗಮನಾರ್ಹ ಸಂಗತಿ>> ಆಗ ನಮ್ಮ ದೇಶವನ್ನು "ಭಾರತ" ಎಂದು ಕರೆಯಲಾಗುತಿತ್ತೇ? ವಿವಿಧ ಹಿಂದೂ.ಬೌದ್ಧ ರಾಜರು ಆಳಿದ ಕಾರಣ ನೀವು ಅದನ್ನು ಭಾರತ ಎಂದು refer ಮಾಡುತ್ತಿದ್ದೀರಾ?

ಎರಡೂ ಅಲ್ಲ. ಇಂದು ನಾವು ಕರೆಯುವ ಹೆಸರನ್ನು ನಾನು ರೆಫರ್ ಮಾಡಿದ್ದೇನೆ ಅಸ್ಟೇ. ’ಹಿಂದೂಸ್ಥಾನ’ ಅಂತ ಕೆರೆದಿದ್ದರೆ ಸೂಕ್ತವಿರುತ್ತಿತ್ತು ಅಂತೀರ?

<<ಇಂದು ನಾವು ಕರೆಯುವ ಹೆಸರನ್ನು ನಾನು ರೆಫರ್ ಮಾಡಿದ್ದೇನೆ ಅಸ್ಟೇ.>> ಹಾಗಿದ್ದರೆ "ಭಾರತವು ಅರಬ್ ವರೆಗೆ ವಿಸ್ತರಿಸಿತ್ತು ಎಂಬ ಹೇಳಿಕೆ ತಪ್ಪಾಗುತ್ತದೆ. <<’ಹಿಂದೂಸ್ಥಾನ’ ಅಂತ ಕೆರೆದಿದ್ದರೆ ಸೂಕ್ತವಿರುತ್ತಿತ್ತು ಅಂತೀರ?>> no comments. (ಅದು "ಕೆರೆಯುವುದಲ್ಲ" ಕರೆಯುವುದು!)

<<ಹಾಗಿದ್ದರೆ "ಭಾರತವು ಅರಬ್ ವರೆಗೆ ವಿಸ್ತರಿಸಿತ್ತು ಎಂಬ ಹೇಳಿಕೆ ತಪ್ಪಾಗುತ್ತದೆ.>> ಅಯ್ತು ಗುರುಗಳೇ!

ಆಗ ಆಳುತ್ತಿದ್ದ ರಾಜರು ಯಾರೇ ಇರಲಿ , ಅಲ್ಲಿನ ಜನ ತಮ್ಮ ದೇಶವನ್ನು ಬೇರೆ ಏನೆಂದು ಕರೆಯುತ್ತಿದ್ದರು? ನನಗೆ ತಿಳಿದ ಹಾಗೆ ಆ ಕಾಲದಲ್ಲಿ "ದೇಶ" ಅನ್ನುವ ಪದ ಈಗಿನ "ಪ್ರದೇಶ" ಎಂಬ ಅರ್ಥದಲ್ಲಿ ಬಳಸುತ್ತಿದ್ದರು. ಉದಾ-- ಸಿಂಧು ದೇಶ, ಗಾಂಧಾರ ದೇಶ, ವಿಧರ್ಭ ದೇಶ ... ಈಗಿನ ಪಾಕಿಸ್ತಾನ ,ಹಿಂದುಸ್ತಾನ ಮತ್ತು ಬಂಗ್ಮಾದೇಶದ ಸಮಸ್ತ ಭೂಪ್ರದೇಶವನ್ನು ಭರತ ಖಂಡ ಎಂದು ಗುರುತಿಸುತ್ತಿದ್ದರು. ಅದನ್ನು ನಾವು ಭಾರತ ಅಂದರೆ ಹೆಚ್ಚು ವ್ಯತ್ಯಾಸವೇನಿಲ್ಲ ಬಿಡಿ. ಆರಬರು ಇದನ್ನೇ " ಅಲ್-ಹಿಂದ್" ಎಂದು ಗುರುತಿಸುತ್ತಿದ್ದರು.

೭೦೦ ವರ್ಷಗಳ ಕಾಲದ ಮುಸ್ಲೀಂ ಆಳ್ವಿಕೆ ಭಾರತದ ಮಟ್ಟಿಗೆ "ಕತ್ತಲೆಯ ಕಾಲ" :-( ಯಾವುದೇ ಪ್ರತಿಭೆಗಳಿಗೆ ಪ್ರೋತ್ಸಾಹಗಳಿಲ್ಲ, ಅಭಿವ್ರುದ್ಧಿ ಸೊನ್ನೆ, ತನ್ನತನದ ಸ್ವಾಭಿಮಾನ ಮಣ್ಣುಪಾಲಾದ ಮೇಲೆ ನಾಡಿನ ಜನತೆಯಾಗಲಿ, ಬುದ್ಧಿವಂತರಾಗಲಿ ಅಭಿವ್ರುದ್ದಿಯ ವಿಚಾರನಾದ್ರೂ ಹೇಗೆ ತಾನೆ ಮಾಡಿಯಾರು?