ಲತೀನ-ಕನ್ನಡ ಪದಕೋಶ

4.666665
ಲತೀನ-ಕನ್ನಡ ಪದಕೋಶ
Dictionarium Latino Canarense  ಎಂಬುದು ೧೮೬೧ರಲ್ಲಿ ಪ್ರಕಟವಾಗಿರುವ ಲತೀನ-ಕನ್ನಡ ಪದಕೋಶ. ಇದು ಈ ನಿಟ್ಟಿನಲ್ಲಿ ಬಂದ ಮೊತ್ತಮೊದಲ ಕೃತಿಯಾಗಿದೆ. ಲತೀನ ಭಾಷೆಯು ಆ ಕಾಲದಲ್ಲಿ ಚರ್ಚಿನ ದೈವಾರಾಧನೆಯ ಅಧಿಕೃತ ಭಾಷೆಯಾಗಿತ್ತು ಹಾಗೂ ಲತೀನಿನಲ್ಲಿ ತರಬೇತಿ ಪಡೆದು ಮಿಷನರಿ ಕೆಲಸ ಹಾಗೂ ಚರ್ಚಿನ ಉಸ್ತುವಾರಿ ಮತ್ತು ಗುರುಅಭ್ಯರ್ಥಿಗಳ ಶಿಕ್ಷಣಕ್ಕಾಗಿ ಯೂರೋಪಿನಿಂದ ನಮ್ಮ ನಾಡಿಗೆ ಬರುತ್ತಿದ್ದ ವಿದ್ವಾಂಸರು ಮತ್ತು ಸಂದರ್ಶಕರ ಅನುಕೂಲಕ್ಕಾಗಿ ಈ ಪದಕೋಶವನ್ನು ರಚಿಸಲಾಗಿದೆ.
ವಿಚಿತ್ರವೆಂದರೆ ಈ ಮಹಾಗ್ರಂಥವನ್ನು ರಚಿಸಿದಾತ ತನ್ನ ಹೆಸರನ್ನು ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ. ಆದರೆ ಪುಸ್ತಕದ ಮುಖಪುಟದಲ್ಲಿ  AUCTORE RR EPISCOPO JASSENSI, V. A. MAISSURENSI, etc. etc ಎಂದಿರುವುದನ್ನು ನೋಡಿ ಇದನ್ನು ಬರೆದವರು ಬಿಷಪ್ ಯಸೆನ್ ಎಂಬುದಾಗಿ ಹಲವರು ಊಹಿಸಿದ್ದಾರೆ. ಅಮೆರಿಕದ ಟ್ರುಬ್ನರ್ಸ್ ಆರ್ಕೈವಿನ ಕೆಟಲಾಗಿನಲ್ಲಿ (http://www.archive.org/stream/trbnerscatalogu01cogoog/trbnerscatalogu01c...) ಹಾಗೂ ರಷ್ಯಾದ ಲೈಬ್ರರಿ (http://www.brocgaus.ru/text/047/405.htm) ಆ ಪುಸ್ತಕವನ್ನು ಬರೆದವರು ಬಿಷಪ್ ಯಸೆನ್ ಎಂದೇ ದಾಖಲಿಸಲಾಗಿದೆ. ನೋಡಿ: Jassensi, Episcopi, Dictionarium Latino-Canarense. Svo. pp. viii. and 1880 and 36, half bound. Bengalori, 1861. £1 2s. ಆದರೆ ಇಂಡಿಯಾದ ಓರಿಯೆಂಟಲ್ ಲೈಬ್ರರಿ, ನ್ಯಾಷನಲ್ ಬುಕ್ ಟ್ರಸ್ಟ್ ಅಥವಾ ಕೇಂದ್ರ ಸಾಹಿತ್ಯ ಅಕಾಡೆಮಿ ಮುಂತಾದವುಗಳ ಪುಸ್ತಕಯಾದಿಯಲ್ಲಿ ಈ ಗ್ರಂಥವು ದಾಖಲಾಗಿಲ್ಲ.  
ಇನ್ನು ಮುಖಪುಟದಲ್ಲಿ ನಮೂದಾಗಿರುವ AUCTORE RR EPISCOPO JASSENSI, V. A. MAISSURENSI, etc. etc (ಔಕ್ತೊರೆ ರೆವರೆಂದಿಸ್ಸಿಮೊ ಎಪಿಸ್ಕೊಪೊ ಯಸೆನ್, ವಿಕಾರಿಯೋ ಅಪೊಸ್ತೊಲಿಕೊ ಮಯಿಸ್ಸುರ್)  ಎಂಬುದನ್ನು ಅರ್ಥೈಸಿದಾಗ ಈ ಪುಸ್ತಕವನ್ನು ರಚಿಸಿದವರು: ಪೋಪ್ ಜಗದ್ಗುರುಗಳಿಂದ ಬಿರುದಾಂಕಿತ ಬಿಷಪರಾಗಿ ಮೈಸೂರು ಸೀಮೆಗೆ ಕಳುಹಿಸಲ್ಪಟ್ಟ ಪ್ರೇಷಿತ ಮಹಾಸ್ವಾಮಿಗಳು ಎಂದು ತಿಳಿಯುತ್ತದೆ.
ಆ ಸಂದರ್ಭದಲ್ಲಿ ಅಂದರೆ ೧೯ನೇ ಶತಮಾನದಲ್ಲಿ ರೋಮಾಪುರಿಯ ಜಗದ್ಗುರುಗಳು ಎತಿಯೇನ್ ಲೂಯಿ ಶಾರ್ಬೊನೊ ಅವರನ್ನು ಬಿರುದಾಂಕಿತ ಬಿಷಪರಾಗಿ ಅಭಿಷಿಕ್ತಗೊಳಿಸಿ ಮೈಸೂರು ಸೀಮೆಗೆ ಮುಖ್ಯ ಪ್ರೇಷಿತ ಸ್ವಾಮಿಗಳಾಗಿ ಕಳುಹಿಸಿದ್ದರು ಎಂಬ ಎಳೆಯನ್ನು ತೆಗೆದುಕೊಂಡಾಗ ಈ ಲತೀನ್-ಕನ್ನಡ ನಿಘಂಟನ್ನು ರಚಿಸಿದವರು ಶಾರ್ಬೊನೊ ಅವರೇ ಎಂದು ಖಚಿತವಾಗಿ ತಿಳಿದುಬರುತ್ತದೆ. 
ಶಾರ್ಬೊನೊ ಎಂಬುವವರು ಫ್ರಾನ್ಸ್ ದೇಶದವರಾಗಿದ್ದು ಈ ಪದಕೋಶದ ರಚನೆಗೆ ಹದಿನೈದು ವರ್ಷಗಳ ಕಾಲ ಪರಿಶ್ರಮಪಟ್ಟಿದ್ದಾರೆ. ಅವರು ಫ್ರೆಂಚ್ ವಸಾಹತು ಆಗಿದ್ದ ಪಾಂಡಿಚೇರಿಯಲ್ಲಿ ತಮ್ಮ ಮೊದಲ ದಿನಗಳನ್ನು ಕಳೆದು ತಮಿಳು ತೆಲುಗುಗಳ ಪರಿಚಯ ಮಾಡಿಕೊಂಡ ತರುವಾಯ ಕನ್ನಡನಾಡಿಗೆ ಬಂದರು. ಹೀಗಾಗಿ ಅವರು ಕನ್ನಡವನ್ನು ತಮಿಳಿನ ಮೂಲಕ ಕಲಿತ ಸಾಧ್ಯತೆಯಿದೆ. ತಮ್ಮ ತಿಳಿವಳಿಕೆಯ ನಿಲುವಿನಲ್ಲಿ ಅವರು ಕನ್ನಡ ಭಾಷೆಯನ್ನು ಸಂಪದ್ಭರಿತ ಭಾಷೆಯೆಂದು ತಿಳಿದಿಲ್ಲ. ಪುಸ್ತಕದ ಆದಿಯಲ್ಲಿ ನೀಡುವ ಪ್ರಸ್ತಾವನೆಯಲ್ಲಿ  ಅವರು "ಕನ್ನಡವು ನಾಲ್ಕು ಭಾಷೆಗಳಿಂದ ಕಲೆಹಾಕಿರುವ ನುಡಿಯೆಂದು ಹೇಳುವುದುಂಟು . . . ಇಂತಹ ಪರಿಸ್ಥಿತಿಯಲ್ಲಿ ಕನ್ನಡ ಭಾಷೆಯು ಸ್ಥಿರತೆಯನ್ನು ತಲುಪಿರುವುದೆಂದು ಹೇಳಲು ಸಾಧ್ಯವಿಲ್ಲ. ಅದರ ಪದವಿನ್ಯಾಸದಲ್ಲಿ ಕೂಡಾ ವೈವಿಧ್ಯ ಮತ್ತು ಬಹುರೂಪವು ಕಾಣಬರುವುದು" ಎಂದು ಹೇಳುತ್ತಾರೆ. 
ಈ ಪದಕೋಶದ ರಚನೆಗೆ ಶಾರ್ಬೊನೊ ಅವರು ಪುದುಚೇರಿಯಿಂದ ಪ್ರಕಟವಾದ ಲತೀನ್-ತಮಿಳು ನಿಘಂಟಿನ ಸಹಾಯ ಪಡೆದಿದ್ದಾರೆ. ಆದರೆ ಗ್ರಂಥದ ಮುಕ್ತಾಯದ ವೇಳೆಗೆ ಅವರಿಗೆ ರೀವ್ ಅವರ ನಿಘಂಟು ದೊರೆತು ಕನ್ನಡ ಸಾಹಿತ್ಯದ ಅಲ್ಪ ಪರಿಚಯವಾದುದರ ಕುರುಹು ದೊರೆಯುತ್ತದೆ. ಫರ್ಡಿನೆಂಡ್ ಕಿಟೆಲರಂತೆ ಭಾಷಾಧ್ಯಯನ, ಗ್ರಂಥಸಂಪಾದನೆ, ನಿಘಂಟು ರಚನಾಶಾಸ್ತ್ರದ ಗೋಜಿಗೆ ಹೋಗದೆ ಅವರು ಲತೀನ್ ಪದಕ್ಕೆ ಹತ್ತಿರವಾದ ಕನ್ನಡ ಪದವನ್ನು ನೀಡುವುದರಲ್ಲಿಯೇ ತೃಪ್ತರಾಗಿದ್ದಾರೆ. ಆದರೆ ಇದೊಂದು ಪ್ರಾರಂಭಿಕ ಪ್ರಯತ್ನ ಎಂಬುದನ್ನು ಮಾತ್ರ ತಳ್ಳಿಹಾಕುವಂತಿಲ್ಲ, (ಕಿಟೆಲರ ಪದಕೋಶ ಪ್ರಕಟವಾಗಿದ್ದು ೧೮೯೪ರಲ್ಲಿ) ಅದಕ್ಕಾಗಿಯೇ ಈ ಕೃತಿಯು ನಮಗೆ ಮುಖ್ಯವಾಗುತ್ತದೆ ಮಾತ್ರವಲ್ಲ ಐತಿಹಾಸಿಕವಾಗಿಯೂ ಮಹತ್ವದ್ದಾಗುತ್ತದೆ.
ಯಾವುದೇ ಭಾಷಾ ಬೆಳವಣಿಗೆಯಲ್ಲಿ ತೋರಿಬರುವ ಒಂದು ಅನಿವಾರ್ಯ ಪ್ರಕ್ರಿಯೆಯನ್ನು ತಮ್ಮ ಪ್ರಸ್ತಾವನೆಯಲ್ಲಿ ಶಾರ್ಬೊನೊ ಅವರು ದಾಖಲಿಸುತ್ತಾ ಹೀಗೆ ಹೇಳುತ್ತಾರೆ - "ಹಿಂದುಸ್ಥಾನಿಯಿಂದಲೋ ಸಂಸ್ಕೃತದಿಂದಲೋ ಬಂದ, ಇಲ್ಲವೆ ಕನ್ನಡ ದೇಶ ಶಬ್ದಾವಳಿಯಲ್ಲಿ ಸಿಗುವ ಆದಷ್ಟು ಪರ್ಯಾಯ ಪದಗಳನ್ನು ನಾನು ಇಲ್ಲಿ ಸೇರಿಸಿದ್ದೇನೆ. ಆಂಗ್ಲ ಪದಗಳನ್ನು ಮಾತ್ರ, ಅವೆಷ್ಟು ಬಳಕೆಯಲ್ಲಿದ್ದರೂ, ಸೇರಿಸಿಲ್ಲ. ಆದರೂ ನನ್ನ ಅಭಿಪ್ರಾಯದ ಮೇರೆಗೆ ಇಂತಹ ಹಲವು ಪದಗಳನ್ನು ಸ್ವೀಕರಿಸಿ ಅಂಗೀಕರಣ ಕೊಡುವ ಕಾಲವು ಬಲು ದೂರವಿಲ್ಲ. ಕಾರಣ ಆ ಅರ್ಥಗಳಲ್ಲೇ ಬಳಸಲಾಗುತ್ತಿದ್ದ ಅನೇಕ ದೇಶಿ ಪದಗಳು ಲೋಪವಾಗಿ ಅಳಿದುಹೋಗುವಷ್ಟು ಈ ಹೊಸ ಆಂಗ್ಲ ಪದಗಳು ಬಳಕೆಗೆ ಬರಲಾರಂಭಿಸಿವೆ" (ಸ್ವಾಮಿ ದೇವದತ್ತ ಕಾಮತರ ಅನುವಾದ). ಶಾರ್ಬೊನೋ ಅವರ ಈ ಮಾತು ಇಂದಿಗೂ ಅತ್ಯಂತ ಪ್ರಸ್ತುತವಾಗಿದೆ. ಈ ಒಂದು ನಿಟ್ಟಿನಲ್ಲಿ ಅಂದರೆ ಭಾಷಾಧ್ಯಯನದ ದೃಷ್ಟಿಯಿಂದಲೂ ಈ ಲತೀನ್-ಕನ್ನಡ ಪದಕೋಶ ನಮಗೆ ಮುಖ್ಯವಾಗುತ್ತದೆ. 
ಈ ಪದನೆರಕೆಯಲ್ಲಿ ಶಾರ್ಬೊನೊ ಅವರು ಬರೀ ಲತೀನ ಪದಗಳನ್ನು ಅಕಾರಾದಿಯಾಗಿ ಕೊಡುತ್ತಾ ಅವಕ್ಕೆ ಅರ್ಥಪ್ರಾಪ್ತಿಯನ್ನು ನೀಡುತ್ತಿಲ್ಲ. ಬದಲಿಗೆ ಅವರು ಲತೀನ ಪಂಡಿತ ಭಾಷೆ, ದಿನಬಳಕೆಯ ಭಾಷೆ, ಕವಿಗಳ ಸಾಲುಗಳನ್ನು ವಿಶದೀಕರಿಸುತ್ತಾ ಅವುಗಳ ಜೊತೆಜೊತೆಗೇ ಕನ್ನಡದ ಪದಗಳಲ್ಲಿನ ವಿವಿಧ ಪ್ರಾದೇಶಿಕ ಭೇದಗಳು, ಅರ್ಥಾಂತರಗಳು, ಅರ್ಥವೈವಿಧ್ಯಗಳನ್ನು ಸಹಾ ವಿಶದೀಕರಿಸುತ್ತಾರೆ. ಕನ್ನಡಿಗರ ಆಡುಮಾತಿನಲ್ಲಿ ಬಳಕೆಯಲ್ಲಿರುವ ಪದಗಳನ್ನೇ - ಅವುಗಳ ಮೂಲ ಯಾವುದೇ ಇದ್ದರೂ - ಮೊದಲು ನೀಡುತ್ತಾರೆ. ಅವರು ಮುದ್ರಣಕ್ಕಾಗಿ ಬಳಸಿದ ಕನ್ನಡ ಲಿಪಿಯು ಅಂದಿನ ಅಂದರೆ ಹತ್ತೊಂಬತ್ತನೇ ಶತಮಾನದ ಕನ್ನಡ ಲಿಪಿಯಾಗಿದ್ದು ಮೇಲುನೋಟಕ್ಕೆ ಓದಲು ಸ್ವಲ್ಪ ಕ್ಲಿಷ್ಟವೆಂಬಂತೆ ತೋರುತ್ತದೆಯಾದರೂ ಅಲ್ಪ ಪ್ರಯತ್ನವನ್ನು ತೊಡಗಿಸಿದರೆ ಆ ಕ್ಲಿಷ್ಟತೆ ಪರಿಹಾರವಾಗುವುದರಲ್ಲಿ ಸಂಶಯವಿಲ್ಲ. 
ಕ್ರೈಸ್ತ ಮಿಷನರಿಗಳು ತಮ್ಮ ಅವಿಭಾಜ್ಯ ಕರ್ತವ್ಯವಾಗಿದ್ದ ಅಧ್ಯಾತ್ಮವನ್ನು ಬದಿಗಿರಿಸಿ ನೇಮನಿಷ್ಠೆಯೋ ಎಂಬಂತೆ ಕನ್ನಡದ ಅಧ್ಯಯನದಲ್ಲಿ ತೊಡಗಿದ್ದರು. ಮತ್ತು ಅವರ ಕನ್ನಡದ ಕೆಲಸಗಳು ವಿದ್ವತ್ತಿನ ನೆಲೆಯಲ್ಲಿ ನಿರ್ವ್ಯಾಜವಾಗಿ ನಿಲ್ಲುವಂಥವು. ಅದಕ್ಕೆ ಅವರ ಐರೋಪ್ಯ ಶಿಕ್ಷಣಪದ್ಧತಿಯು ಅಪಾರವಾಗಿ ನೆರವಾಗಿತ್ತು ಎಂಬುದರಲ್ಲಿ ಸಂಶಯವಿಲ್ಲ. ಐರೋಪ್ಯ ಶಿಕ್ಷಣಪದ್ಧತಿಯಂತೆ ಅವರು ಭಾಷಾಕಲಿಕೆ ಮತ್ತು ಗ್ರಂಥಸಂಪಾದನೆಗಳನ್ನು ಪ್ರಸ್ತುತಪಡಿಸಿದ ಪರಿಣಾಮವಾಗಿ ಕನ್ನಡ ಸಾಹಿತ್ಯಚರಿತ್ರೆಯಲ್ಲಿ ಜೈನಯುಗ, ಶರಣಯುಗ, ದಾಸಯುಗಗಳೆಂದು ಕರೆದಂತೆ ಹತ್ತೊಂಬತ್ತನೇ ಶತಮಾನವನ್ನು ಕ್ರೈಸ್ತಯುಗವೆಂದು ಕರೆಯುವುದರಲ್ಲಿ ಹಿಂಜರಿತವೇಕೆ? ಇರಬಾರದು. ಕ್ರೈಸ್ತ ಮಿಷನರಿಗಳು ಹಾಗೂ ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಕ್ರೈಸ್ತ ಅಧಿಕಾರಿಗಳು ನಮ್ಮ ನಾಡುನುಡಿಗೆ ಸಲ್ಲಿಸಿದ ಕೊಡುಗೆಯ ಕುರಿತೇ ಹಲವಾರು ಗ್ರಂಥಗಳನ್ನು ಬರೆಯಲಾಗಿದೆ. ಕನ್ನಡ ಬಂಧುಗಳು ಹಾಗೂ ಅಧ್ಯಯನಶೀಲರು ಕಿಟೆಲ್, ರೈಸ್, ಫ್ಲೀಟ್, ಮೊಗ್ಲಿಂಗ್, ಬುಚರ್, ರೀವ್, ಸ್ಯಾಂಡರ‍್ಸನ್, ಮ್ಯಾಕರೆಲ್, ವೈಗಲ್, ಮೆಕೆಂಝಿ, ವಿಲ್ಕ್ಸ್ ಮುಂತಾದ ಇತರ ಐರೋಪ್ಯರ ಕೃತಿಗಳನ್ನು ಆದರಿಸಿದಂತೆ ನಮ್ಮ ಈ ಶಾರ್ಬೊನೊ ಎಂಬ ಫ್ರೆಂಚ್ ಪಾದ್ರಿಯ ಕೃತಿಯನ್ನೂ ಒಪ್ಪಿಸಿಕೊಳ್ಳುವರೇ? 

Dictionarium Latino Canarense  ಎಂಬುದು ೧೮೬೧ರಲ್ಲಿ ಪ್ರಕಟವಾಗಿರುವ ಲತೀನ-ಕನ್ನಡ ಪದಕೋಶ. ಇದು ಈ ನಿಟ್ಟಿನಲ್ಲಿ ಬಂದ ಮೊತ್ತಮೊದಲ ಕೃತಿಯಾಗಿದೆ. ಲತೀನ ಭಾಷೆಯು ಆ ಕಾಲದಲ್ಲಿ ಚರ್ಚಿನ ದೈವಾರಾಧನೆಯ ಅಧಿಕೃತ ಭಾಷೆಯಾಗಿತ್ತು ಹಾಗೂ ಲತೀನಿನಲ್ಲಿ ತರಬೇತಿ ಪಡೆದು ಮಿಷನರಿ ಕೆಲಸ ಹಾಗೂ ಚರ್ಚಿನ ಉಸ್ತುವಾರಿ ಮತ್ತು ಗುರುಅಭ್ಯರ್ಥಿಗಳ ಶಿಕ್ಷಣಕ್ಕಾಗಿ ಯೂರೋಪಿನಿಂದ ನಮ್ಮ ನಾಡಿಗೆ ಬರುತ್ತಿದ್ದ ವಿದ್ವಾಂಸರು ಮತ್ತು ಸಂದರ್ಶಕರ ಅನುಕೂಲಕ್ಕಾಗಿ ಈ ಪದಕೋಶವನ್ನು ರಚಿಸಲಾಗಿದೆ.
ವಿಚಿತ್ರವೆಂದರೆ ಈ ಮಹಾಗ್ರಂಥವನ್ನು ರಚಿಸಿದಾತ ತನ್ನ ಹೆಸರನ್ನು ಎಲ್ಲಿಯೂ ಪ್ರಸ್ತಾಪ ಮಾಡಿಲ್ಲ. ಆದರೆ ಪುಸ್ತಕದ ಮುಖಪುಟದಲ್ಲಿ  AUCTORE RR EPISCOPO JASSENSI, V. A. MAISSURENSI, etc. etc ಎಂದಿರುವುದನ್ನು ನೋಡಿ ಇದನ್ನು ಬರೆದವರು ಬಿಷಪ್ ಯಸೆನ್ ಎಂಬುದಾಗಿ ಹಲವರು ಊಹಿಸಿದ್ದಾರೆ. ಅಮೆರಿಕದ ಟ್ರುಬ್ನರ್ಸ್ ಆರ್ಕೈವಿನ ಕೆಟಲಾಗಿನಲ್ಲಿ (http://www.archive.org/stream/trbnerscatalogu01cogoog/trbnerscatalogu01c...) ಹಾಗೂ ರಷ್ಯಾದ ಲೈಬ್ರರಿ (http://www.brocgaus.ru/text/047/405.htm) ಆ ಪುಸ್ತಕವನ್ನು ಬರೆದವರು ಬಿಷಪ್ ಯಸೆನ್ ಎಂದೇ ದಾಖಲಿಸಲಾಗಿದೆ. ನೋಡಿ: Jassensi, Episcopi, Dictionarium Latino-Canarense. Svo. pp. viii. and 1880 and 36, half bound. Bengalori, 1861. £1 2s. ಆದರೆ ಇಂಡಿಯಾದ ಓರಿಯೆಂಟಲ್ ಲೈಬ್ರರಿ, ನ್ಯಾಷನಲ್ ಬುಕ್ ಟ್ರಸ್ಟ್ ಅಥವಾ ಕೇಂದ್ರ ಸಾಹಿತ್ಯ ಅಕಾಡೆಮಿ ಮುಂತಾದವುಗಳ ಪುಸ್ತಕಯಾದಿಯಲ್ಲಿ ಈ ಗ್ರಂಥವು ದಾಖಲಾಗಿಲ್ಲ.  

ಇನ್ನು ಮುಖಪುಟದಲ್ಲಿ ನಮೂದಾಗಿರುವ AUCTORE RR EPISCOPO JASSENSI, V. A. MAISSURENSI, etc. etc (ಔಕ್ತೊರೆ ರೆವರೆಂದಿಸ್ಸಿಮೊ ಎಪಿಸ್ಕೊಪೊ ಯಸೆನ್, ವಿಕಾರಿಯೋ ಅಪೊಸ್ತೊಲಿಕೊ ಮಯಿಸ್ಸುರ್)  ಎಂಬುದನ್ನು ಅರ್ಥೈಸಿದಾಗ ಈ ಪುಸ್ತಕವನ್ನು ರಚಿಸಿದವರು: ಪೋಪ್ ಜಗದ್ಗುರುಗಳಿಂದ ಬಿರುದಾಂಕಿತ ಬಿಷಪರಾಗಿ ಮೈಸೂರು ಸೀಮೆಗೆ ಕಳುಹಿಸಲ್ಪಟ್ಟ ಪ್ರೇಷಿತ ಮಹಾಸ್ವಾಮಿಗಳು ಎಂದು ತಿಳಿಯುತ್ತದೆ.
ಆ ಸಂದರ್ಭದಲ್ಲಿ ಅಂದರೆ ೧೯ನೇ ಶತಮಾನದಲ್ಲಿ ರೋಮಾಪುರಿಯ ಜಗದ್ಗುರುಗಳು ಎತಿಯೇನ್ ಲೂಯಿ ಶಾರ್ಬೊನೊ ಅವರನ್ನು ಬಿರುದಾಂಕಿತ ಬಿಷಪರಾಗಿ ಅಭಿಷಿಕ್ತಗೊಳಿಸಿ ಮೈಸೂರು ಸೀಮೆಗೆ ಮುಖ್ಯ ಪ್ರೇಷಿತ ಸ್ವಾಮಿಗಳಾಗಿ ಕಳುಹಿಸಿದ್ದರು ಎಂಬ ಎಳೆಯನ್ನು ತೆಗೆದುಕೊಂಡಾಗ ಈ ಲತೀನ್-ಕನ್ನಡ ನಿಘಂಟನ್ನು ರಚಿಸಿದವರು ಶಾರ್ಬೊನೊ ಅವರೇ ಎಂದು ಖಚಿತವಾಗಿ ತಿಳಿದುಬರುತ್ತದೆ. 
ಶಾರ್ಬೊನೊ ಎಂಬುವವರು ಫ್ರಾನ್ಸ್ ದೇಶದವರಾಗಿದ್ದು ಈ ಪದಕೋಶದ ರಚನೆಗೆ ಹದಿನೈದು ವರ್ಷಗಳ ಕಾಲ ಪರಿಶ್ರಮಪಟ್ಟಿದ್ದಾರೆ. ಅವರು ಫ್ರೆಂಚ್ ವಸಾಹತು ಆಗಿದ್ದ ಪಾಂಡಿಚೇರಿಯಲ್ಲಿ ತಮ್ಮ ಮೊದಲ ದಿನಗಳನ್ನು ಕಳೆದು ತಮಿಳು ತೆಲುಗುಗಳ ಪರಿಚಯ ಮಾಡಿಕೊಂಡ ತರುವಾಯ ಕನ್ನಡನಾಡಿಗೆ ಬಂದರು. ಹೀಗಾಗಿ ಅವರು ಕನ್ನಡವನ್ನು ತಮಿಳಿನ ಮೂಲಕ ಕಲಿತ ಸಾಧ್ಯತೆಯಿದೆ. ತಮ್ಮ ತಿಳಿವಳಿಕೆಯ ನಿಲುವಿನಲ್ಲಿ ಅವರು ಕನ್ನಡ ಭಾಷೆಯನ್ನು ಸಂಪದ್ಭರಿತ ಭಾಷೆಯೆಂದು ತಿಳಿದಿಲ್ಲ. ಪುಸ್ತಕದ ಆದಿಯಲ್ಲಿ ನೀಡುವ ಪ್ರಸ್ತಾವನೆಯಲ್ಲಿ  ಅವರು "ಕನ್ನಡವು ನಾಲ್ಕು ಭಾಷೆಗಳಿಂದ ಕಲೆಹಾಕಿರುವ ನುಡಿಯೆಂದು ಹೇಳುವುದುಂಟು . . . ಇಂತಹ ಪರಿಸ್ಥಿತಿಯಲ್ಲಿ ಕನ್ನಡ ಭಾಷೆಯು ಸ್ಥಿರತೆಯನ್ನು ತಲುಪಿರುವುದೆಂದು ಹೇಳಲು ಸಾಧ್ಯವಿಲ್ಲ. ಅದರ ಪದವಿನ್ಯಾಸದಲ್ಲಿ ಕೂಡಾ ವೈವಿಧ್ಯ ಮತ್ತು ಬಹುರೂಪವು ಕಾಣಬರುವುದು" ಎಂದು ಹೇಳುತ್ತಾರೆ. 
ಈ ಪದಕೋಶದ ರಚನೆಗೆ ಶಾರ್ಬೊನೊ ಅವರು ಪುದುಚೇರಿಯಿಂದ ಪ್ರಕಟವಾದ ಲತೀನ್-ತಮಿಳು ನಿಘಂಟಿನ ಸಹಾಯ ಪಡೆದಿದ್ದಾರೆ. ಆದರೆ ಗ್ರಂಥದ ಮುಕ್ತಾಯದ ವೇಳೆಗೆ ಅವರಿಗೆ ರೀವ್ ಅವರ ನಿಘಂಟು ದೊರೆತು ಕನ್ನಡ ಸಾಹಿತ್ಯದ ಅಲ್ಪ ಪರಿಚಯವಾದುದರ ಕುರುಹು ದೊರೆಯುತ್ತದೆ. ಫರ್ಡಿನೆಂಡ್ ಕಿಟೆಲರಂತೆ ಭಾಷಾಧ್ಯಯನ, ಗ್ರಂಥಸಂಪಾದನೆ, ನಿಘಂಟು ರಚನಾಶಾಸ್ತ್ರದ ಗೋಜಿಗೆ ಹೋಗದೆ ಅವರು ಲತೀನ್ ಪದಕ್ಕೆ ಹತ್ತಿರವಾದ ಕನ್ನಡ ಪದವನ್ನು ನೀಡುವುದರಲ್ಲಿಯೇ ತೃಪ್ತರಾಗಿದ್ದಾರೆ. ಆದರೆ ಇದೊಂದು ಪ್ರಾರಂಭಿಕ ಪ್ರಯತ್ನ ಎಂಬುದನ್ನು ಮಾತ್ರ ತಳ್ಳಿಹಾಕುವಂತಿಲ್ಲ, (ಕಿಟೆಲರ ಪದಕೋಶ ಪ್ರಕಟವಾಗಿದ್ದು ೧೮೯೪ರಲ್ಲಿ) ಅದಕ್ಕಾಗಿಯೇ ಈ ಕೃತಿಯು ನಮಗೆ ಮುಖ್ಯವಾಗುತ್ತದೆ ಮಾತ್ರವಲ್ಲ ಐತಿಹಾಸಿಕವಾಗಿಯೂ ಮಹತ್ವದ್ದಾಗುತ್ತದೆ.
ಯಾವುದೇ ಭಾಷಾ ಬೆಳವಣಿಗೆಯಲ್ಲಿ ತೋರಿಬರುವ ಒಂದು ಅನಿವಾರ್ಯ ಪ್ರಕ್ರಿಯೆಯನ್ನು ತಮ್ಮ ಪ್ರಸ್ತಾವನೆಯಲ್ಲಿ ಶಾರ್ಬೊನೊ ಅವರು ದಾಖಲಿಸುತ್ತಾ ಹೀಗೆ ಹೇಳುತ್ತಾರೆ - "ಹಿಂದುಸ್ಥಾನಿಯಿಂದಲೋ ಸಂಸ್ಕೃತದಿಂದಲೋ ಬಂದ, ಇಲ್ಲವೆ ಕನ್ನಡ ದೇಶ ಶಬ್ದಾವಳಿಯಲ್ಲಿ ಸಿಗುವ ಆದಷ್ಟು ಪರ್ಯಾಯ ಪದಗಳನ್ನು ನಾನು ಇಲ್ಲಿ ಸೇರಿಸಿದ್ದೇನೆ. ಆಂಗ್ಲ ಪದಗಳನ್ನು ಮಾತ್ರ, ಅವೆಷ್ಟು ಬಳಕೆಯಲ್ಲಿದ್ದರೂ, ಸೇರಿಸಿಲ್ಲ. ಆದರೂ ನನ್ನ ಅಭಿಪ್ರಾಯದ ಮೇರೆಗೆ ಇಂತಹ ಹಲವು ಪದಗಳನ್ನು ಸ್ವೀಕರಿಸಿ ಅಂಗೀಕರಣ ಕೊಡುವ ಕಾಲವು ಬಲು ದೂರವಿಲ್ಲ. ಕಾರಣ ಆ ಅರ್ಥಗಳಲ್ಲೇ ಬಳಸಲಾಗುತ್ತಿದ್ದ ಅನೇಕ ದೇಶಿ ಪದಗಳು ಲೋಪವಾಗಿ ಅಳಿದುಹೋಗುವಷ್ಟು ಈ ಹೊಸ ಆಂಗ್ಲ ಪದಗಳು ಬಳಕೆಗೆ ಬರಲಾರಂಭಿಸಿವೆ" (ಸ್ವಾಮಿ ದೇವದತ್ತ ಕಾಮತರ ಅನುವಾದ). ಶಾರ್ಬೊನೋ ಅವರ ಈ ಮಾತು ಇಂದಿಗೂ ಅತ್ಯಂತ ಪ್ರಸ್ತುತವಾಗಿದೆ. ಈ ಒಂದು ನಿಟ್ಟಿನಲ್ಲಿ ಅಂದರೆ ಭಾಷಾಧ್ಯಯನದ ದೃಷ್ಟಿಯಿಂದಲೂ ಈ ಲತೀನ್-ಕನ್ನಡ ಪದಕೋಶ ನಮಗೆ ಮುಖ್ಯವಾಗುತ್ತದೆ. 
ಈ ಪದನೆರಕೆಯಲ್ಲಿ ಶಾರ್ಬೊನೊ ಅವರು ಬರೀ ಲತೀನ ಪದಗಳನ್ನು ಅಕಾರಾದಿಯಾಗಿ ಕೊಡುತ್ತಾ ಅವಕ್ಕೆ ಅರ್ಥಪ್ರಾಪ್ತಿಯನ್ನು ನೀಡುತ್ತಿಲ್ಲ. ಬದಲಿಗೆ ಅವರು ಲತೀನ ಪಂಡಿತ ಭಾಷೆ, ದಿನಬಳಕೆಯ ಭಾಷೆ, ಕವಿಗಳ ಸಾಲುಗಳನ್ನು ವಿಶದೀಕರಿಸುತ್ತಾ ಅವುಗಳ ಜೊತೆಜೊತೆಗೇ ಕನ್ನಡದ ಪದಗಳಲ್ಲಿನ ವಿವಿಧ ಪ್ರಾದೇಶಿಕ ಭೇದಗಳು, ಅರ್ಥಾಂತರಗಳು, ಅರ್ಥವೈವಿಧ್ಯಗಳನ್ನು ಸಹಾ ವಿಶದೀಕರಿಸುತ್ತಾರೆ. ಕನ್ನಡಿಗರ ಆಡುಮಾತಿನಲ್ಲಿ ಬಳಕೆಯಲ್ಲಿರುವ ಪದಗಳನ್ನೇ - ಅವುಗಳ ಮೂಲ ಯಾವುದೇ ಇದ್ದರೂ - ಮೊದಲು ನೀಡುತ್ತಾರೆ. ಅವರು ಮುದ್ರಣಕ್ಕಾಗಿ ಬಳಸಿದ ಕನ್ನಡ ಲಿಪಿಯು ಅಂದಿನ ಅಂದರೆ ಹತ್ತೊಂಬತ್ತನೇ ಶತಮಾನದ ಕನ್ನಡ ಲಿಪಿಯಾಗಿದ್ದು ಮೇಲುನೋಟಕ್ಕೆ ಓದಲು ಸ್ವಲ್ಪ ಕ್ಲಿಷ್ಟವೆಂಬಂತೆ ತೋರುತ್ತದೆಯಾದರೂ ಅಲ್ಪ ಪ್ರಯತ್ನವನ್ನು ತೊಡಗಿಸಿದರೆ ಆ ಕ್ಲಿಷ್ಟತೆ ಪರಿಹಾರವಾಗುವುದರಲ್ಲಿ ಸಂಶಯವಿಲ್ಲ. 
ಕ್ರೈಸ್ತ ಮಿಷನರಿಗಳು ತಮ್ಮ ಅವಿಭಾಜ್ಯ ಕರ್ತವ್ಯವಾಗಿದ್ದ ಅಧ್ಯಾತ್ಮವನ್ನು ಬದಿಗಿರಿಸಿ ನೇಮನಿಷ್ಠೆಯೋ ಎಂಬಂತೆ ಕನ್ನಡದ ಅಧ್ಯಯನದಲ್ಲಿ ತೊಡಗಿದ್ದರು. ಮತ್ತು ಅವರ ಕನ್ನಡದ ಕೆಲಸಗಳು ವಿದ್ವತ್ತಿನ ನೆಲೆಯಲ್ಲಿ ನಿರ್ವ್ಯಾಜವಾಗಿ ನಿಲ್ಲುವಂಥವು. ಅದಕ್ಕೆ ಅವರ ಐರೋಪ್ಯ ಶಿಕ್ಷಣಪದ್ಧತಿಯು ಅಪಾರವಾಗಿ ನೆರವಾಗಿತ್ತು ಎಂಬುದರಲ್ಲಿ ಸಂಶಯವಿಲ್ಲ. ಐರೋಪ್ಯ ಶಿಕ್ಷಣಪದ್ಧತಿಯಂತೆ ಅವರು ಭಾಷಾಕಲಿಕೆ ಮತ್ತು ಗ್ರಂಥಸಂಪಾದನೆಗಳನ್ನು ಪ್ರಸ್ತುತಪಡಿಸಿದ ಪರಿಣಾಮವಾಗಿ ಕನ್ನಡ ಸಾಹಿತ್ಯಚರಿತ್ರೆಯಲ್ಲಿ ಜೈನಯುಗ, ಶರಣಯುಗ, ದಾಸಯುಗಗಳೆಂದು ಕರೆದಂತೆ ಹತ್ತೊಂಬತ್ತನೇ ಶತಮಾನವನ್ನು ಕ್ರೈಸ್ತಯುಗವೆಂದು ಕರೆಯುವುದರಲ್ಲಿ ಹಿಂಜರಿತವೇಕೆ? ಕ್ರೈಸ್ತ ಮಿಷನರಿಗಳು ಹಾಗೂ ಬ್ರಿಟಿಷ್ ಆಳ್ವಿಕೆಯಲ್ಲಿದ್ದ ಕ್ರೈಸ್ತ ಅಧಿಕಾರಿಗಳು ನಮ್ಮ ನಾಡುನುಡಿಗೆ ಸಲ್ಲಿಸಿದ ಕೊಡುಗೆಯ ಕುರಿತೇ ಹಲವಾರು ಗ್ರಂಥಗಳನ್ನು ಬರೆಯಲಾಗಿದೆ. ಕನ್ನಡ ಬಂಧುಗಳು ಹಾಗೂ ಅಧ್ಯಯನಶೀಲರು ಕಿಟೆಲ್, ರೈಸ್, ಫ್ಲೀಟ್, ಮೊಗ್ಲಿಂಗ್, ಬುಚರ್, ರೀವ್, ಸ್ಯಾಂಡರ‍್ಸನ್, ಮ್ಯಾಕರೆಲ್, ವೈಗಲ್, ಮೆಕೆಂಝಿ, ವಿಲ್ಕ್ಸ್ ಮುಂತಾದ ಇತರ ಐರೋಪ್ಯರ ಕೃತಿಗಳನ್ನು ಆದರಿಸಿದಂತೆ ನಮ್ಮ ಈ ಶಾರ್ಬೊನೊ ಎಂಬ ಫ್ರೆಂಚ್ ಪಾದ್ರಿಯ ಕೃತಿಯನ್ನೂ ಒಪ್ಪಿಸಿಕೊಳ್ಳುವರೇ? 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಹತ್ತೊಂಬತ್ತನೇ ಶತಮಾನವನ್ನು ಕ್ರೈಸ್ತಯುಗವೆಂದು ಕರೆಯುವುದರಲ್ಲಿ ಹಿಂಜರಿತವೇಕೆ?" ಖಂಡಿತವಾಗಿ ಕರೆಯಬಹುದು, ನನ್ನ ಅನುಮೋದನೆ ಇದೆ ಮಂಗಳೂರಿನ ಬಾಸೆಲ್ ಮಿಶನ್ ಸಂಸ್ಥೆಯು 'ಕನ್ನಡ ಸಾಹಿತ್ಯದ ಮೇಲೆ ಕ್ರೈಸ್ತರ ಪ್ರಭಾವ' ಈ ವಿಷಯ (?) ದ ಮೇಲೆ ಈಗಲೂ ಸಂಶೋಧನೆಗಳನ್ನು ಮುಂದುವರಿಸುತ್ತಲಿದೆ ಎಂದು ಕೇಳಿದ್ದೇನೆ. ಪ್ರಖ್ಯಾತ ಕನ್ನಡ ಬರಹಗಾರ, ಸಂಶೋಧಕ ಡಾ| ಶ್ರೀನಿವಾಸ ಹಾವನೂರ್ ರವರು ಇದರಲ್ಲಿ ಇತ್ತೀಚಿನ ವರೆಗೆ ತೊಡಗಿದ್ದರು. ಈಗಲೂ ಮುಂದುವರಿಯುತ್ತಿದ್ದಾರೋ ಗೊತ್ತಿಲ್ಲ. ಜರ್ಮನಿ, ಸ್ವಿಟ್ಜರ್ಲ್ಯಾಂಡ್ ಗಳಿಗೆ ಈ ಸಂಬಂಧ ಹೋಗಿದ್ದರು. ಆಸಕ್ತಿ ಇದ್ದಲ್ಲಿ ಅವರ ಭೇಟಿ ಮಾಡಿಸಬಹುದು. ವಿಷಯಕ್ಕೆ ಸಂಬಂಧಿಸಿರದ ಒಂದು ವಿನಂತಿ: ಬೆಂಗಳೂರು ಕುಂಬಳಗೋಡಿನಲ್ಲಿ ಆಶೀರ್ವನಂ ಎಂಬ ಸಂತ ಬೆನೆಡಿಕ್ಟರ ಮೋನಾಸ್ಟರಿ ಇದೆ. ಸಂತ ಬೆನೆಡಿಕ್ಟರ ಕುರಿತ ಯಾವುದೋ ಒಂದು ಅಂತರ್ಜಾಲ ಪುಟದಲ್ಲಿ ಅವರ ಸಾಮಾಜಿಕ ಜವಾಬ್ದಾರಿಯ ತತ್ವದ ಹಿಂದಿನ ಕಾರಣಗಳ ಕುರಿತು ವಿವರಣೆ ಕೊಟ್ಟಿದ್ದರು. ಈ ಬಗ್ಗೆಯೂ ಯಾರಾದರೂ ಬರೆದರೆ ಸಂತೋಷ. ಈ ವಿಷಯಗಳ ಬಾಹುಳ್ಯ ಎಷ್ಟಿದೆ ಎಂದರೆ ಒಂದೆರಡು Ph.D. thesis ಗಳಿಗಾಗುವಷ್ಟು.

ನಿಮ್ಮ ಸ್ಪಂದನೆಗೆ ಧನ್ಯವಾದಗಳು ಶ್ರೀಕರ ಅವರೇ. ಮಂಗಳೂರಿನ ಕರ್ನಾಟಕ ಥಿಯೊಲಾಜಿಕಲ್ ಕಾಲೇಜಿನ ಕೋರಿಕೆಯ ಮೇರೆಗೆ ಶ್ರೀನಿವಾಸ ಹಾವನೂರರು ಅಲ್ಲಿನ ಗ್ರಂಥಾಲಯದಲ್ಲಿನ ಪ್ರಾಚೀನವೂ ಮೌಲಿಕವೂ ಆದ ಕೃತಿಗಳ ಒಪ್ಪ ಓರಣಕ್ಕೆ ಹಾಗೂ ಗಣಕ ನಮೂದಿಗೆ ನೆರವಾದರು. ಒಂದು ವರ್ಷದ ಈ ಪರಸ್ಪರ ಒಪ್ಪಂದದಲ್ಲಿ ಇಕ್ಕಡೆಯವರಿಗೂ ಲಾಭವಾಯಿತು. ಶ್ರೀನಿವಾಸ ಹಾವನೂರರ ಮಾರ್ಗದರ್ಶನದಲ್ಲೇ ನಾನು ಬೆಂಗಳೂರಿನ ಮಿಥಿಕ್ ಸೊಸೈಟಿಯಲ್ಲಿ ೧೯೯೪ರ ಫೆಬ್ರವರಿಯಲ್ಲಿ ಕಿಟೆಲ್ ನಿಘಂಟು ಶತಮಾನೋತ್ಸವದ ಅಂಗವಾಗಿ ವಿಚಾರಗೋಷ್ಠಿಯನ್ನು ಏರ್ಪಡಿಸಿದ್ದೆ. ತುಂಬಾ ಯಶಸ್ವಿಯಾಗಿ ನಡೆದ ಆ ಕಾರ್ಯಕ್ರಮದಲ್ಲಿ ಅಂದು ಸಚಿವರಾಗಿದ್ದ ವಿಶ್ವನಾಥರು ಜರ್ಮನಿಯಲ್ಲಿರುವ ಕಿಟೆಲ್ ಅವರ ಸಮಾಧಿಯ ಸಂರಕ್ಷಣೆಗೆ ಕರ್ನಾಟಕ ಸರ್ಕಾರ ಎಲ್ಲ ಕ್ರಮ ಕೈಗೊಂಡಿದೆ ಎಂದು ಬೊಗಳೆ ಬಿಟ್ಟರು. ಹಾಗೆಯೇ ಇಂಡಿಯನ್ ಎಕ್ಸ್ ಪ್ರೆಸ್ ಮತ್ತು ಪಾರ್ಸಿಟೆಂಪಲ್ ಗಳ ಕೂಡುಸ್ಥಳದ ವರ್ತುಳಕ್ಕೆ ಕಿಟೆಲ್ ವರ್ತುಲವೆಂದು ನಾಮಕರಣ ಮಾಡುವ ನಿರ್ಣಯವನ್ನೂ ಕೈಗೊಳ್ಳಲಾಯಿತು. ಮುಂದೆ ಆ ವರ್ತುಲಕ್ಕೆ ಎಸ್ ಜಿ ಬಾಳೆಕುಂದ್ರಿಯವರ ಹೆಸರು ಬರಲು ಕೆಲ ಶಕ್ತಿಗಳು (ಯುಕ್ತಿಗಳು?) ಕೆಲಸ ಮಾಡಿದವು. ಬಾಳೆಕುಂದ್ರಿಯವರ ತಾಂತ್ರಿಕ ಮುಂಗಾಣ್ಕೆಯ ಬಗ್ಗೆ ನನಗೆ ಗೌರವವಿದೆ. ಆಮೇಲೆ ಮೇಯೋಹಾಲ್ ಬಳಿಯ ತ್ರಿಕೋನದ್ವೀಪದಲ್ಲಿ ಕಿಟೆಲರ ಕಂಚಿನ ಪ್ರತಿಮೆ ಸ್ಥಾಪಿಸಿದ್ದು ದೊಡ್ಡ ಕತೆ. ಅದರ ಬಗ್ಗೆ ಮತ್ತೊಮ್ಮೆ ಬರೆಯುವೆ. ಆಶೀರ್ವನಂ ಮೊನಾಸ್ಟರಿಯಲ್ಲಿ ನನ್ನ ಸ್ನೇಹಿತರಾದ ರಾಯಚೂರಿನ ಮಾರ್ಟಿನಪ್ಪ ಇದ್ದಾರೆ. ಸಮಯವಾದಾಗ ಬೆನೆಡಿಕ್ಟರ ಬಗ್ಗೆ ಬೇರೆ ವೇದಿಕೆಯಲ್ಲಿ ಬರೆಯುವೆ. ಪ್ರೀತಿಯಿಂದ ಸಿ ಮರಿಜೋಸೆಫ್

>> ಹತ್ತೊಂಬತ್ತನೇ ಶತಮಾನವನ್ನು ಕ್ರೈಸ್ತಯುಗವೆಂದು ಕರೆಯುವುದರಲ್ಲಿ ಹಿಂಜರಿತವೇಕೆ << ಕ್ರೈಸ್ತ ಮಿಷನರಿಗಳು ಉತ್ತಮ ಕೆಲಸ ಮಾಡಿವೆ. ಮಾಡುತ್ತಲೂ ಇವೆ. ಆದರೆ ಅವರ core ideology ಯಲ್ಲಿ ನನಗೆ ನಂಬಿಕೆ ಇಲ್ಲ. ಕ್ರಿಸ್ತನೊಬ್ಬನೇ ದೇವರು (ಅಥವಾ ದೇವರ ಮಗ) ಎಂಬುವುದನ್ನು ನನ್ನ ಮನಸು ಒಪ್ಪುವುದಿಲ್ಲ. ದೇವರು ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಪ್ರಕಟವಾಗುವನು ಎಂಬುದು ನನ್ನ ನಂಬಿಕೆ. ಭಾರತದ ನಾಗರೀಕತೆ "ಆಕಾಶಾತ್ ಪತಿತಮ್ ತೋಯಮ್ ಯಥಾ ಗಛ್ಛತಿ ಸಾಗರಮ್ ಸರ್ವದೇವ ನಮಸ್ಕಾರಂ ಕೇಶವಮ್ ಪ್ರತಿಗಛ್ಛತಿ" ಎಂಬ ತತ್ವದ ಅಡಿಯಲ್ಲಿ ಬೆಳೆದು ಬಂದಿತ್ತು. ಭಾರತದಲ್ಲಿ ಬೆಳೆದುಬಂದ ಎಲ್ಲಾ ಮತಗಳೂ (ದೇವರುಗಳೂ ಕೂಡ!) ಇದೇ ತತ್ವವನ್ನು ಒಪ್ಪಿಕೊಂಡಿದ್ದವು. ಈ ತತ್ವದ ನಾಶದಲ್ಲಿ (ಈಗ ಹಿಂದೂಗಳೂ ಈ ತತ್ವವನ್ನು ಪಾಲಿಸಿವುದು ಕಡಿಮೆ) ಕ್ರೈಸ್ತ ಮಿಷನರಿಗಳ ಪಾಲು ದೊಡ್ಡದು. ಇನ್ನು ಕ್ರೈಸ್ತಯುಗದ ಬಗ್ಗೆ ಹೇಳುವುದಾದರೆ ಹತ್ತೊಂಬತ್ತು ಮಾತ್ರ ಏಕೆ? ಇಪ್ಪತ್ತು ಮತ್ತು ಇಪ್ಪತ್ತೊಂದನೆಯ ಶತಮಾನವನ್ನೂ ಹಾಗೆಯೇ ಕರೆಯುವುದಕ್ಕೆ ಅಡ್ಡಿಯಿಲ್ಲ.

ನೀರ್ಕಜೆಯವರೇ, ಇಡೀ ಬರಹದಿಂದ ಒಂದು ವಾಕ್ಯವನ್ನು ಆಯ್ದುಕೊಂಡಿದ್ದರೂ, ದಯವಿಟ್ಟು ಆ ವಾಕ್ಯವನ್ನು ಆ ಬರಹದ ಹಿನ್ನೆಲೆಯಲ್ಲೇ ಅರ್ಥೈಸಿ. ಸಾಹಿತ್ಯ, ಭಾಷೆ, ಕಲೆ ಇವುಗಳ ಕುರಿತಾದ ಚರ್ಚೆಗಳನ್ನೂ, ಆ ನಿಮ್ಮ ದೇವರು-ಧರ್ಮ-ಮತಗಳಡಿಯಲ್ಲಿ ಹೊಸಕಿ ಹಾಕದಿರಿ!

>> ಇಡೀ ಬರಹದಿಂದ ಒಂದು ವಾಕ್ಯವನ್ನು ಆಯ್ದುಕೊಂಡಿದ್ದರೂ, ದಯವಿಟ್ಟು ಆ ವಾಕ್ಯವನ್ನು ಆ ಬರಹದ ಹಿನ್ನೆಲೆಯಲ್ಲೇ ಅರ್ಥೈಸಿ. << ಇದು ಕೇವಲ ಕನ್ನಡ ಮತ್ತು ಭಾಷೆಯ ಬಗ್ಗೆ ಆಗಿದ್ದರೆ ಅದನ್ನು ಶಾರ್ಬೊನೊ ಯುಗ ಎಂದು ಕರೆಯಬಹುದಿತ್ತು. ಕ್ರೈಸ್ತ ಯುಗ ಎಂದು ಯಾಕೆ? ನನಗೆ ಅರ್ಥವಾಗುತ್ತಿಲ್ಲ. ಅಷ್ಟಕ್ಕೂ ಕನ್ನಡಕ್ಕೆ ಕ್ರಿಸ್ತನ ಕೊಡುಗೆ ಏನು? ಸ್ವಲ್ಪ ಬಿಡಿಸಿ ಹೇಳುತ್ತೀರ ದಯವಿಟ್ಟು?

ವಚನಸಾಹಿತ್ಯಕ್ಕೆ ಬಸವಣ್ಣರವರಂತೆಯೇ ಅನೇಕಾನೇಕ ಶರಣರ ಕಾಣಿಕೆಯಿದ್ದುದರಿಂದಲೇ ಆ ಬಗೆಯ ಸಾಹಿತ್ಯ ಬೆಳೆದುಬಂದ ಕಾಲವನ್ನು ಶರಣಯುಗ ಎಂದರೇ ಹೊರತು ಬಸವಯುಗ ಎನ್ನಲಿಲ್ಲ. ಅಂತೆಯೇ ಶಾರ್ಬೊನೊ ನಂತಹ ಅನೇಕಾನೇಕ ಕ್ರೈಸ್ತರ ಕಾಣಿಕೆಯಿರುವ ಸಾಹಿತ್ಯದ ಕಾಲವನ್ನು ಕ್ರೈಸ್ತಯುಗವೆಂದು (ಶಾರ್ಬಾನೊ ಯುಗವಲ್ಲ!) ಕರೆಯಲು ಹಿಂಜರಿಕೆಯೇಕೆ ಎಂಬುದೇ ಚರ್ಚೆ! ಇಲ್ಲಿ ಕ್ರಿಸ್ತ-ದೇವರು-ಭಾರತೀಯ ನಾಗರೀಕತೆ ಏಕೆ ನುಸುಳಿತೋ ತಿಳಿಯದಾಗಿದೆ!

ಸಾಮಾನ್ಯವಾಗಿ ಬಸವಯುಗ ಎಂದೇ ಶರಣ ಯುವಗವನ್ನು ಕರೆಯುತ್ತಾರೆ. ಹರಿಹರ ಯುಗ ಎಂದು ಕರೆಯಬೇಕೆಂಬ ವಾದವೂ ಇದೆ. ಆಧುನಿಕ ಕನ್ನಡ ಸಾಹಿತ್ಯ ಆರಂಭಗೊಳ್ಳುವಾಗ ಕ್ರೈಸ್ತ ಮಿಷನರಿಗಳು ಸಾಕಷ್ಟು ದೇಣಿಗೆ ನಈಡಿವೆ. ನಂತರ ಕನ್ನಡ ಅದರ ಸಾರ ಹೀರಿ ತನ್ನದೇ ಆದ ಭಿನ್ನ ಮಾದರಿಗಳನ್ನು ರೂಢಿಸಿಕೊಂಡಿದೆ.

ಉತ್ತಮ ಮಾಹಿತಿಯನ್ನು ಹಂಚಿಕೊಂಡಿದ್ದೀರಿ ಮರಿಜೋಸೆಫ್ ಅವರೇ. ಧನ್ಯವಾದಗಳು. ಕನ್ನಡಕ್ಕೆ ಕಾಣ್ಕೆಯಿತ್ತ ಪ್ರತಿಯೊಬ್ಬ ಮಹಾನುಭಾವರ ಕೃತಿಯನ್ನು, ಅದರ ಸಾಹಿತ್ಯಿಕ ಹಾಗೂ ಐತಿಹಾಸಿಕ ಹಿನ್ನೆಲೆಯಲ್ಲಿ ಕನ್ನಡಿಗರಾಗಿ ನಾವು ಒಪ್ಪಿಕೊಳ್ಳಲೇಬೇಕಾಗುತ್ತದೆ. ಆಸಕ್ತಿಯಿರುವ ಮಟ್ಟಕ್ಕೆ ತಿಳುವಳಿಕೆಯಿಲ್ಲವಾದರೂ, ಒಂದು ಪ್ರಶ್ನೆ. ಕನ್ನಡ ಸಾಹಿತ್ಯಚರಿತ್ರೆಯ ಜೈನಯುಗ, ಶರಣಯುಗ, ದಾಸಯುಗಗಳೆಂಬ ವಿಂಗಡನೆಯಲ್ಲಿ ನಾವು, ಕಾಲದಿಂದ ಕಾಲಕ್ಕೆ ಆಗಿರುವ ಭಾಷೆಯ, ಸಾಹಿತ್ಯ ರಚನೆಯ ವಿವಿಧತೆ/ಬೆಳವಣಿಗೆಯನ್ನು ಕಾಣಬಹುದು. ಜೈನಯುಗದ ಷಟ್ಪದಿ, ರಗಳೆಗಳು, ಶರಣಯುಗದ ವಚನಸಾಹಿತ್ಯ, ದಾಸರುಗಳ ದಾಸಪದಗಳು, ಕೀರ್ತನೆಗಳು ಹೀಗೆ ಜನಸಾಮಾನ್ಯರನ್ನು ತಲುಪಿವೆ. ಈ ನಿಟ್ಟಿನಲ್ಲಿ, ಕ್ರೈಸ್ತಯುಗವೆಂದು ಕರೆಯಲು ಸಾಹಿತ್ಯ/ಭಾಷೆ ಯಾವ ಮೂಲಕ ಜನಸಾಮಾನ್ಯರನ್ನು ತಲುಪಿವೆ? ಈ ಕ್ರೈಸ್ತಯುಗದ ಪರಿಭಾಷೆಯೇನು? ದಯವಿಟ್ಟು ಹೆಚ್ಚಿನ ಮಾಹಿತಿಯನ್ನು ಹಂಚಿಕೊಳ್ಳಿ.

>>ಕನ್ನಡ ಸಾಹಿತ್ಯಚರಿತ್ರೆಯ ಜೈನಯುಗ, ಶರಣಯುಗ, ದಾಸಯುಗಗಳೆಂಬ ವಿಂಗಡನೆಯಲ್ಲಿ ನಾವು, ಕಾಲದಿಂದ ಕಾಲಕ್ಕೆ ಆಗಿರುವ ಭಾಷೆಯ, ಸಾಹಿತ್ಯ ರಚನೆಯ ವಿವಿಧತೆ/ಬೆಳವಣಿಗೆಯನ್ನು ಕಾಣಬಹುದು. ಜೈನಯುಗದ ಷಟ್ಪದಿ, ರಗಳೆಗಳು, ಶರಣಯುಗದ ವಚನಸಾಹಿತ್ಯ, ದಾಸರುಗಳ ದಾಸಪದಗಳು, ಕೀರ್ತನೆಗಳು ಹೀಗೆ ಜನಸಾಮಾನ್ಯರನ್ನು ತಲುಪಿವೆ. ಈ ನಿಟ್ಟಿನಲ್ಲಿ, ಕ್ರೈಸ್ತಯುಗವೆಂದು ಕರೆಯಲು ಸಾಹಿತ್ಯ/ಭಾಷೆ ಯಾವ ಮೂಲಕ ಜನಸಾಮಾನ್ಯರನ್ನು ತಲುಪಿವೆ? ಈ ಕ್ರೈಸ್ತಯುಗದ ಪರಿಭಾಷೆಯೇನು? ವಿನುತ ತುಂಬಾ ದಿನಗಳಿಂದ ನೀವು ಸಂಪದದಲ್ಲಿ ಕಾಣಲಿಲ್ಲ, ಬಹುಶಃ ಯಾವುದಾದರೂ ಪತ್ರಿಕೆ ಸೇರಿಕೊಂಡಿರಬಹುದು ಅಂದುಕೊಂಡಿದ್ದೆ. ಸೇರಿದ್ದರೆ ಸಂತೋಷ ಕಣಮ್ಮ. ಕನ್ನಡ ಸಾಹಿತ್ಯ ಚರಿತ್ರೆಯನ್ನು ದಾಖಲಿಸುವಾಗ ಕೆಲವರ ವಿದ್ವಾಂಸರು ಪಂಪಯುಗ, ಬಸವಯುಗ, ಕುಮಾರವ್ಯಾಸಯುಗ ಎಂಬುದಾಗಿ ಕಾಲವನ್ನು ವಿಂಗಡಿಸಿರುವರಾದರೂ, ಜೈನಯುಗ, ಶರಣಯುಗ, ದಾಸಯುಗ ಎಂಬ ವರ್ಗೀಕರಣವೇ ಜನಪ್ರಿಯವಾಗಿ ಚಾಲ್ತಿಯಲ್ಲಿದೆ. (ಹಾಗೆ ನೋಡಿದರೆ ನಾಗವರ್ಮನ ಛಂದೋಂಬುಧಿಯ ದೀರ್ಘ ಉಪೋದ್ಘಾತದಲ್ಲಿ ರೆವರೆಂಡ್ ಕಿಟೆಲರು ಮಂಡಿಸಿದ ಕನ್ನಡಸಾಹಿತ್ಯಚರಿತ್ರೆಯ ಪರಿಚಯವೇ ಈ ನಿಟ್ಟಿನಲ್ಲಿ ಬಂದ ಮೊತ್ತಮೊದಲ ಪ್ರಯತ್ನವೆನಿಸಿದೆ. ಆಮೇಲಷ್ಟೇ ಜಗತ್ತಿಗೆ ಅದರಲ್ಲೂ ಕನ್ನಡಿಗರಿಗೆ ಕನ್ನಡದ ಸಾಹಿತ್ಯಹಿರಿಮೆಯ ಆಳಅಗಲಗಳ ಪರಿಚಯವಾದುದು). ಈ ಒಂದು ಕನ್ನಡ ಸಾಹಿತ್ಯ ಚರಿತ್ರೆಯನ್ನು ದಾಖಲಿಸುವ ಪ್ರಕ್ರಿಯೆಯಲ್ಲಿ ಜೈನಯುಗ, ಶರಣಯುಗ, ದಾಸಯುಗ ಎಂದಂತೆ ೧೯ನೇ ಶತಮಾನವನ್ನು ಕ್ರೈಸ್ತಯುಗ ಎಂದೇಕೆ ಕರೆಯಬಾರದು ಎಂಬುದೇ ನನ್ನ ಅಭಿಪ್ರಾಯ. ಏಕೆಂದರೆ ೧೯ನೇ ಶತಮಾನದಲ್ಲಿ ಮಿಷನರಿ ಜನರು ಆಗಮಿಸಿ ತಮ್ಮೊಂದಿಗೆ ಪವಿತ್ರ ಬೈಬಲ್ ಮಾತ್ರವಲ್ಲ ಹೊಸ ಉತ್ಸಾಹವನ್ನೇ ತಂದರು. ಹೊಸ ಬದಲಾವಣೆಗಳಿಗೆ ನಾಂದಿಯಾದರು. ಅವರು ಪರಿಚಯಿಸಿದ ವಿವಿಧ ರಂಗಗಳ ಕ್ರಾಂತಿಯ ಫಲವನ್ನು ನಾವಿಂದು ಉಣ್ಣುತ್ತಿದ್ದೇವೆ. ಗ್ರಂಥಸಂಪಾದನೆಯ ಮೂಲಕ ತಾಳೆಗರಿ ಹಸ್ತಪ್ರತಿಗಳೆಲ್ಲ ಬಹುಸಂಖ್ಯೆಯಲ್ಲಿ ಕಾಗದದ ಮೇಲೆ ಮೂಡಿಬಂದು ಪುಸ್ತಕರೂಪ ತಳೆದವು. ಕಲ್ಲಚ್ಚಿನ ಮುದ್ರಣದ ಸಮಾಚಾರ ಪತ್ರಿಕೋದ್ಯಮ ಶುರುವಾಯಿತು. ಅಗ್ರಹಾರಗಳಲ್ಲಿ ಮಠಗಳಲ್ಲಿ ಅಡಗಿದ್ದ ಅಕ್ಷರಾಭ್ಯಾಸ ಅಧ್ಯಯನಗಳು ಎಲ್ಲ ಜನರ ಅದರಲ್ಲೂ ಹೆಣ್ಣುಮಕ್ಕಳವರೆಗೂ ತಲಪಿ ಶೈಕ್ಷಣಿಕ ಕ್ರಾಂತಿಯಾಯಿತು. ಸಾಹಿತ್ಯವಿಕಾಸದಲ್ಲಿ ಗಣನೀಯ ಸಾಧನೆಯಾಗಿ ಛಂದೋರೂಪದ ಕಾವ್ಯಗಳ ಬದಲಿಗೆ ಜನರ ಆಡುಮಾತು ಅಂದರೆ ಸರಳಗದ್ಯ ಮೇಲುಗೈ ಪಡೆಯಿತು. ಒಂದೇ ಎರಡೇ, ಇವುಗಳ ಬಗ್ಗೆ ಹೆಚ್ಚಿನ ಮಾಹಿತಿಗೆ ರಾ ಯ ಧಾರವಾಡಕರ, ಶ್ರೀನಿವಾಸ ಹಾವನೂರ, ಮಹದೇವ ಬಣಕಾರ ಮುಂತಾದವರ ಕೃತಿಗಳನ್ನು ನೋಡಬಹುದು. ಪ್ರೀತಿಯಿಂದ ಸಿ ಮರಿಜೋಸೆಫ್

ಕೆಲಸದೊತ್ತಡದಿಂದಾಗಿ ಕೆಲದಿನಗಳಿಂದ ಸಂಪದ ನೋಡಿರಲಿಲ್ಲವಷ್ಟೆ. ಪತ್ರಿಕೆ ನನಗಿನ್ನೂ ಮರೀಚಿಕೆ! ಆ ನಿಟ್ಟಿನಲ್ಲಿ ನನ್ನ ಅರ್ಹತೆಯೂ ಪ್ರಶ್ನಾರ್ಹ! ನಿಮ್ಮ ಹಾರೈಕೆಗೆ ನನ್ನಿ. ಸಾಹಿತ್ಯ ಸಾಮಾನ್ಯ ಜನರನ್ನು ತಲುಪುವತ್ತ ಮತ್ತು ಅದರ ಆಧುನೀಕರಣದತ್ತ ಮಿಷನರಿಗಳ ಪ್ರಭಾವ ಅಪಾರ ಎನ್ನುವುದು ನಿರ್ವಿವಾದ. ಆದರಲ್ಲಿ ಅವರದೇ ಆದ ಒಂದು ಸಾಹಿತ್ಯ ಪ್ರಾಕಾರದ ರಚನೆಯಾಯಿತೇ ಎನ್ನುವುದು ನನ್ನ ಕುತೂಹಲ. ಹಾವನೂರ, ಬಣಕಾರರ ಕೃತಿಗಳನ್ನು ಓದುತ್ತೇನೆ. ಮಾಹಿತಿಗಾಗಿ ನನ್ನಿ.