ಪ್ರಳಯ

3.5

ಪ್ರೀತಿಯ ಓದುಗರೇ ಇಂದು ನಾನು ಇಷ್ಟ ಪಟ್ಟು ಚರ್ಚೆಗೆ ಇಡುತ್ತಿರುವ ವಿಷಯ ಏನೆಂದರೆ ಪ್ರಳಯ. ಇಂದು ಏಕೆ ನನಗೆ ಈ ವಿಷಯ ಇಷ್ಟವಾಯಿತೆಂದರೆ ಟಿವಿ ಮಾಧ್ಯಮಗಳಲ್ಲಿ ಚೇಳೂರು ಬಾವಿ , ಬಸವಣ್ಣ ಹಾಗು ಕೋಳಿಯ ಬಗ್ಗೆ ಪ್ರಸಾರವಾಗುತ್ತಿದೆ. ನಾನು ಚಿಕ್ಕಂದಿನ್ನಿಂದ ಬಹಳ ಸಲ ಈ ಮೂರನ್ನು ನೋಡಿದ್ದೇನೆ ... ಈಗ ಮೂಡಿ ಬರುತ್ತಿರುವ ವಿಷಯ ನಿಜಕ್ಕೂ ವಿಸ್ಮಯಕಾರಿ .... ಅದ್ದರಿಂದ ಈ ನಮ್ಮ ಬುಧ್ಧಿವಂತ ಸಾರಸ್ವತ ಲೋಕದ ಗೆಳೆಯರಿಂದ ಈ ಪ್ರಳಯ ಹಾಗು ಚೇಳೂರಿನ ವಿಷಯದ ಬಗ್ಗೆ ಅಭಿಪ್ರಾಯ ಸಂಗ್ರಹಿಸುವುದು ಹಾಗು ಒಂದು ಸ್ವಾರಸ್ಯಕರ ಚರ್ಚೆ ನಡೆಸುವುದು ನನ್ನ ಉದ್ದೇಶ ,,...

 

ಪ್ರೀತಿಯಿಂದ

ಗಣೇಶ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಏನಿದು ಕೋಳಿ, ಬಸವಣ್ಣ ಬಾವಿ? ಏನಿದರ ಮಹಿಮೆ? ಸಲ್ಪ ತಿಳಿಸಿಕೊಡಿ! ನಂತರ ಚರ್ಚಿಸಬಹುದು!

ಇಲ್ಲಿರುವ ಬಾವಿಯಲ್ಲಿ ಇಲ್ಲಿವರೆಗೂ ನೀರು ಇರಲಿಲ್ಲ ಏಕೆಂದರೆ ಇದನ್ನು ಕಟ್ಟಿಸಿದ ಬಿಜ್ಜಳ ಮಹಾದೇವಿ ಎನ್ನುವ ರಾಣಿಯು ಇದನ್ನು ಕಟ್ಟಿಸಿದ ನಂತರ ನಿಟ್ಟುಸಿರು ಬಿಟ್ಟಳೆಂದು ಪ್ರತೀತಿ, ಈ ಬಾವಿಯಲ್ಲಿ ಇಗ ನೀರು ಉಕ್ಕುತಿದೆ ಹಾಗು ಈ ಮರಳು ಬಸವಣ್ಣ ಸಂಪೂರ್ಣವಾಗಿ ಮರಳಿನಿಂದ ನಿರ್ಮಿತವದಂತದ್ದು , ಅದು ಮೊದಲು ಒಂದು ಚಿಕ್ಕ ಶಿವಲಿನ್ಗದಂತಿದ್ದು ಇಗ ಸಂಪೂರ್ಣ ಆಕಾರ ಪಡೆದಿದೆ ಹಾಗು ಅದು ಕಣ್ಣು ಬಿಟ್ಟಿದೆ , ಇನ್ನು ಕಲ್ಲು ಕೋಳಿ ಊರ ಹೆಬ್ಬಾಗಿಲಲ್ಲಿದೆ . ಇಲ್ಲಿನ ಶಾಸನದ ಪ್ರಕಾರ ಈ ಬಾವಿ ತುಂಬಿ , ಮರಳು ಬಸವಣ್ಣ ಎದ್ದು ಗುಟುರು(ಕೂಗು) ಹಾಕಿದರೆ ಹಾಗು ಕಲ್ಲಿನ ಕೋಳಿ ಕೂಗಿದರೆ ಪ್ರಳಯ ಸಂಭವಿಸುತ್ತದೆ ಎಂದು ತಿಳಿಯಬಹುದಾಗಿದೆ .. ಗಣೇಶ

ಪ್ರಳಯ! ನಾನಂತೂ ನಂಬ್ತೀನಿ. ಸರಿಯಾಗಿ ಲೆಕ್ಕ ಹಾಕಿದರೆ ಇನ್ನು ಸಾವಿರ ದಿನಗಳೂ ಇಲ್ಲ! ಸಮಯ ಕಮ್ಮಿ ಇದೆ. ಆದಷ್ಟೂ ಬೇಗ..... ಆದಷ್ಟೂ ಬೇಗ..... ಈ ಟಿ.ವಿ೯, ಸುವರ್ಣ ಇತ್ಯಾದಿ ಚಾನಲ್‌ಗಳ ಪ್ರಳಯಾತಂಕ ವರದಿಗಾರರನ್ನು, ಪ್ರಳಯ ಜ್ಯೋತಿಷಿಗಳನ್ನು, ಹಾಗೂ ಉಂಟೆ, ಹೇಗೂ ಉಂಟೆ, ಇನ್ನೂ ಉಂಟೆ ಇತ್ಯಾದಿ ಉಂಟೆಗಳನ್ನು, ಚೇಳೂರಿಗೆ ಕರೆಸಿ............... ಒಂದು ಕ್ಯಾಮರ ಗೂಳಿಗೆ, ಇನ್ನೊಂದು ಕೋಳಿಗೆ, ಮತ್ತೊಂದು ಕೆರೆಗೆ, ಮಗದೊಂದು ಯಾರು ಸಿಗುತ್ತಾರೋ ಅವರ mooತಿಗೆ, ಫೋಕಸ್ ಮಾಡಿಟ್ಟು......ಕ್ಷಣಕ್ಷಣದ ವರದಿ ನೀಡಲಿ.......... ಬ್ರೇಕಿಂಗ್ ನ್ಯೂಸ್ ತರಹ ಟಿ.ವಿ.ಯ ಒಂದು ಬದಿಯಲ್ಲಿ ರಿಲೇ ಆಗುತ್ತಲೇ ಇರಲಿ...... ಗೂಳಿ ಗುಟುರು ಹಾಕುವುದನ್ನು ಮೊದಲು ವರದಿ ಮಾಡುವ ಚಾನ್ಸ್ ಯಾರಿಗೆ ಸಿಗುತ್ತೋ ನೋಡೋಣ. :) -ಗಣೇಶ(ಸೀನಿಯರ್) :)