ಚಿನ್ನದ ಬಟ್ಟಿಲು ... ಚಹಾ(ಟೀ)ದ ರುಚಿ ... ನಿಮ್ಮ ಆಯ್ಕೆ ಎನು ??

0

ಒಬ್ಬ ಮೇಸ್ಟ್ರು ತಮ್ಮ ಯಲ್ಲಾ ಶಿಶ್ಯಂದಿರನ್ನ ಮನೆಗೆ ಕರೆದು ಚಹಾ(ಟೀ) ಕೊಡುತ್ತಾರೆ ... ಅದರಲ್ಲಿ ಕೆಲವು ಚಿನ್ನದ ಬಟ್ಟಿಲು ಇನ್ನು ಕೆಲವು ಬೆಳ್ಳಿಯದು ಹಾಗೆ ಕೆಲವು ಸ್ಟೀಲಿನದು ಮತ್ತು ಒಂದು ಮಣ್ಣಿನದು! ... ಶಿಶ್ಯಂದಿರು ಒಬ್ಬೊಬ್ಬರಾಗೆ ಮೊದಲು ಚಿನ್ನದ ಬಟ್ಟಿಲು, ನಂತರ ಬೆಳ್ಳಿ ಹಾಗು ನಂತರ ಸ್ಟೀಲಿನ ಬಟ್ಟಿಲುಗಲನ್ನು ಆರಿಸಿಕೊಳ್ಳುತ್ತಾರೆ ... ಬಟ್ಟಿಲುಗಳು ಅಲ್ಲಿ ಇರುವ ಶಿಶ್ಯಂದರಿಗಿಂತ ಜಾಸ್ತಿ ... ಹೀಗಾಗಿ ಯಾರು ಮಣ್ಣಿನ ಬಟ್ಟಿಲನ್ನು ತೆಗೆದುಕೊಳ್ಳುವುದಿಲ್ಲಾ!


ನಾವು ಸವಿಯಬೇಕಾಗಿರುವುದು ಚಹಾದ ರುಚಿಯನ್ನೋ ಅಥವಾ ಚಿನ್ನದ ಬಟ್ಟಿಲನ್ನೋ ?


ಆದರೆ ಜೀವನದಲ್ಲಿ ಬಹಳಸ್ಟು ಜನರಿಗೆ ಚಹಾದ ರುಚಿಗಿಂತ ... ಚಿನ್ನದ ಬಟ್ಟಿಲ ಮೇಲೆ ವ್ಯಾಮೋಹ ಜಾಸ್ತಿ.


ಇಂತಹ ವ್ಯಾಮೋಹ ನಮ್ಮ ಜೀವನವನ್ನು ಭಾರವಗಿಸ್ತಾ ಇದೆ ...


ಹೀಗಾಗಿ ನಾವು ನಮ್ಮದಲ್ಲದ ಅನೇಕ ಸಮಸ್ಯೆಗಳನ್ನು ನಮ್ಮ ತಲೆಮೇಲೆ ಹೊತ್ಕೊಂಡು ಒದ್ದಾಡ್ತಾ ಇದೆವೆ ... ಎಕೆಂದರೆ ನಮಗೆ ಚಹಾದ ರುಚಿಗಿಂತ ... ಚಿನ್ನದ ಬಟ್ಟಿಲ ಮೇಲೆ ವ್ಯಾಮೋಹ ಜಾಸ್ತಿ.


ಇದರ ಅರಿವು ನಮಗಾದರೆ, ಚಿನ್ನದ ಬಟ್ಟಿಲ ಮೇಲಿನ ವ್ಯಾಮೋಹ ಕಡಿಮೆಯಾದರೆ, ಜೀವನ ಹಗುರವಾಗುವುದರಲ್ಲಿ ಯಾವೂದೇ ತೊಡಕಿಲ್ಲ. ನೀವು ಎನು ಹೇಳ್ತಿರಾ ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.