"ನೈಸ್ ಟೌನ್ ಶಿಪ್ ಮತ್ತು ರಸ್ತೆ " ನಿಮ್ಮಗಳ ಅಭಿಪ್ರಾಯ

5

ಇಷ್ಟೆಲ್ಲ್ಲಾ ನೋಡಿ
ಪ್ರಶ್ನೆ ಕೇಳುವ ಉಮೇದು ಬಂತು ನಂಗೆ..?
ನೈಸ್ ಬಗ್ಗೆ ನಿಮ್ಮ ಅಭಿಪ್ರಾಯ ಎಂಗೆ ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ರೈತರ ಹೋರಾಟವೇನೋ ಸರಿಯೇ . ಐದಾರು ವರ್ಷದ ಹಿಂದೆ ಕನಕ ಪುರದ ಸಮೀಪ ಒಂದು ಎಕರೆ ಭೂಮಿ ಕೊಂಡುಕೊಳ್ಳಲು ಹೋಗಿದ್ದೆವು. ಆ ಭೂಮಿಯಲ್ಲಿ ಬಿತ್ತೆನೆ ಏನು ಇರಲಿಲ್ಲ .ಆ ರೈತ ಒಂದು ಲಕ್ಷಕ್ಕೆ ಒಪ್ಪಿದ್ದ . ಅದೇನಾಯ್ತೋ ಆ ನಂತರ ಮಾರಾಟಕ್ಕೆ ಒಪ್ಪಲಿಲ್ಲ. ನಂತರ ತಿಳಿಯಿತು . ಆ ಭೂಮಿ ನೈಸ್ ರೋಡಿನ ಹತ್ತಿರ ಇರುವುದರಿಂದ ಭೂಮಿಗೆ ಬೆಲೆ ಹೆಚ್ಚು ಬರುತ್ತದೆ ಎಂಬ ಮುಂದಾಲೋಚನೆ . ನಮ್ಮ ಮನೆಯ ಬಳಿಯಲ್ಲೇ ಇರುವ ಸುಮಾರು ಜಾಗಗಳು ಎಕರೆಗಟ್ಟಲೇ ಈ ನೈಸ್ ರೋಡಿನ ಆಸು ಪಾಸಿನಲ್ಲೇ ಬರುತ್ತದೆ. ಅವರೂ ನೈಸ್ ರೋಡಿನ ವಿರುದ್ದದ ಹೋರಾಟಕ್ಕೆ ದನಿಯಾಗಿದ್ದಾರೆ ಕಾರಣ ಹೊಲ ಗದ್ದೆಯಲ್ಲ . ಅವರ ಎಕರೆಗಟ್ಟಲೆ ಜಾಗಗಳಿಗೆ ಕೋಟಿಗಟ್ಟಲೆ ಹಣ ಸಿಗುತ್ತದೆ ಎಂಬ ಕಾರಣಕ್ಕಾಗಿ. ಸರ್ಕಾರದಿಂದ ಸಿಗುವ ಹಣ ಒಟ್ಟಿನಲ್ಲಿ ಬೆಳೆ ಬೆಳೆಯುವ ಹೊಲ ಗದ್ದೆಗಳಿಗಾಗಿ ಮಾಡುವ ಹೋರಾಟಕ್ಕಿಂತ ಆ ಭೂಮಿಗೆ ಬರುವ ಚಿನ್ನದ ಬೆಲೆ (ಆ ಭೂಮಿಯನ್ನ ಕೃಷಿ ಬಳಕೆಗೆ ಬಳಸಿದರೆ ಬೇರೆ ಮಾತು)ಬರುತ್ತದೆ ಎಂಬ ಕಾರಣಕ್ಕಾಗಿ ನಡೆಯುತ್ತಿರುವ ಹೋರಾಟವೇ ಜಾಸ್ತಿ ನಾನು ನೋಡುತ್ತಿರುವ ಮಟ್ಟಿಗೆ. ನೈಸ್ ರೋಡಿಗೆ ಸಂಬಂಧಿಸಿದಂತೆ ಈ ಜನಗಳ(ಮೇಲೆ ಹೇಳಿದಂತಹ ಭೂ ಮಾಲಿಕರ) ಗಲಾಟೆಯೇ ಜಾಸ್ತಿ . ನಿಜವಾದ ರೈತರು ಎಷ್ಗ್ಟು ಮಂದಿ ಇದರಲ್ಲಿ ಪಾಲ್ಗೊಂಡಿದ್ದಾರೆ ಎಂಬುದೂ ರಹಸ್ತ್ಯವಾಗಿಯೇನೂ ಇಲ್ಲ. ಇದು ನಾನು ನೋಡಿದಂತೆ. ನಾನು ಇದೇ ರಸ್ತೆಯ ಬಳಿ ವಾಸಿಸುತಿರುವುದರಿಂದ ಇದಿಷ್ಟು ನನ್ನ ಗಮನಕ್ಕೆ ಬಂದಿರುವುದು ಇನ್ನು ದೇವೆಗೌಡರ ಬಗ್ಗೆ ಹೇಳುವುದಾದರೆ ವೈಯುಕ್ತಿಕವಾಗಿ ಎಷ್ಟೆ ದ್ವೇಷವಿದ್ದರೂ ಸಾರ್ವಜನಿಕ ರಂಗದಲ್ಲಿ ಗುರುತಿಸಿಕೊಂಡ ವ್ಯಕ್ತಿಯೊಬ್ಬರು ಅದೂ ಪ್ರಧಾನಿ ಪಟ್ಟದಲ್ಲಿ ಕೂತವರ ಬಾಯಲ್ಲಿ ಅಂತಹ ಮಾತು ಬರಬಾರದಿತ್ತು. ಇದು ನನ್ನ ಅಭಿಪ್ರಾಯ.

ನನ್ನ ಅಭಿಪ್ರಾಯ: ದೇವೇಗೌಡರ ಬಗ್ಗೆ... - ಒಬ್ಬ ಜನ ಪ್ರತಿನಿಧಿಯಾಗಿ ದೇವೇಗೌಡರು, ಅವರ ಕ್ಷೇತ್ರಕ್ಕೆ ಮಾಡಿರುವ ಕೆಲಸದ ಬಗ್ಗೆ ಒಳ್ಳೆಯ ಮಾತುಗಳನ್ನು ನಾನೂ ಬಹಳಷ್ಟು ಕೇಳಿದ್ದೇನೆ. ಅಂತಹ ದಕ್ಷ ರಾಜಕಾರಣಿಗಳು ಕಡಿಮೆ. - ದೇವೇಗೌಡರ ಭ್ರಷ್ಟಾಚಾರದ ಬಗ್ಗೆ, ಪದ್ಮನಾಭ ನಗರದ ರಿಯಲ್ ಎಸ್ಟೇಟ್ ದಾಂಧಲೆಗಳ ಬಗ್ಗೆಯೂ ಕೇಳಿದ್ದೇನೆ. ಹೆಚ್ಚು ಕಮ್ಮಿ ೯೦% ಜನ ತಮ್ಮ ಕೈಲಾದಷ್ಟು ಭ್ರಷ್ಟಾಚಾರ, ದಾಂಧಲೆ ಮಾಡುವವರೆ. - ಆದ್ದರಿಂದ ದೇವೇಗೌಡರ ಬಗ್ಗೆ ಒಂದು ಬಗೆಯ ಆದರವಿತ್ತು. - ಸಭೆಗಳಲ್ಲಿ ನಿದ್ದೆ ಮಾಡುತ್ತಿದ್ದ ಪ್ರಧಾನಿ ಅಂದು ದೇವೇಗೌಡರ ಬಗ್ಗೆ ಗೇಲಿ ಮಾಡುವವರ ಜೊತೆ ನಾನು ತುಂಬ ವಾದ ಮಾಡಿದ್ದುಂಟು. - ಆದರೆ, ಈಗ ದೇವೇಗೌಡರು ನನ್ನ ಬೆಂಬಲದ ಮಿತಿಯನ್ನು ದಾಟಿ ಹೋಗಿದ್ದಾರೆ. - ರೂಪ ಅವರು ಹೇಳಿದಂತೆ, ದೇವೇಗೌಡರು ಸಾರ್ವಜನಿಕವಾಗಿ ಆ ಬಗೆಯ ಮಾತನಾಡುವುದು ಅವರ ವಯಸ್ಸಿಗೂ, ಸಾಧನೆಗೂ, ಸ್ಥಾನಮಾನಕ್ಕೂ ಸರಿಯಲ್ಲ. ನೈಸ್ ಬಗ್ಗೆ: - ದೇವೇಗೌಡರ ಕಾಲದಲ್ಲಿ ನೈಸ್ ಕಾರಿಡಾರ್ ಯೋಜನೆ ಯನ್ನು ಮೊದಲು ಹುಟ್ಟುಹಾಕಿದಾಗ ಗುತ್ತಿಗೆ ಪಡೆದ ಆ ಸಂಸ್ಥೆಯ ಬಗ್ಗೆ ಹಲವು ಅನುಮಾನಗಳಿದ್ದವು. ಈಗ ಯಾರೂ ಅದರ ಬಗ್ಗೆ ಸೊಲ್ಲೆತ್ತುತ್ತಿಲ್ಲ. - ನೈಸ್ ವ್ಯವಹಾರದಲ್ಲಿ ಸುಭಗರು ಯಾರೂ ಇಲ್ಲ. ನೈಸೂ ಅಲ್ಲ, ಗೌಡ್ರೂ ಅಲ್ಲ, ಬಿಜೆಪಿಯೂ ಅಲ್ಲ. ಈಗ ಹೋರಾಟ ಮಾಡುತ್ತಿರುವ ರೈತರೂ ಅಲ್ಲ. - ಆದರೆ ಈ ಪರಿಸ್ಥಿತಿ ಆ ರೈತರ ಆಯ್ಕೆ ಆಗಿರಲಿಲ್ಲ. ಉಳಿದವರ ಆಯ್ಕೆ ಆಗಿತ್ತು. - ಎಕ್ಸ್ಪ್ರೆಸ್ ಕಾರಿಡಾರ್ ನಂತಹ ಪ್ರಾಜೆಕ್ಟ್ ನಲ್ಲಿ ಬರೆ ದಾರಿ ಸುಂಕ ದಿಂದ ಅಸಲು ಬಡ್ಡಿ ಲಾಭ ಬರುತ್ತೆ ಅಂತ ನನ್ಗೆ ಅನ್ನಿಸುವುದಿಲ್ಲ. ಟೌನ್ ಶಿಪ್ ಅವಶ್ಯಕತೆ ಇದೆ ಅನ್ನಿಸುತ್ತೆ. - ಆದರೆ ಐದು ಟೌನ್ ಶಿಪ್ ಬೇಕೆ? ಅಷ್ಟೊಂದು ಜಾಗ ಬೇಕೆ? ಅನುಮಾನ ಇದೆ ನನಗೆ. - ೩೦*೪೦ ಸೈಟು ತಗೊಂಡವನೆ ೩-೪ ಅಡಿ ಸರಕಾರಿ ದಾರಿ ಕದೀತಾನೆ. ಇನ್ನು ನೈಸ್ ೨೦ಸಾವಿರ ಎಕರೆ ತಗಂಡಿದೆ, ಅಂದ್ರೆ ಅವರೂ ಆದಷ್ಟು ಕದಿಯೋಕೆ ಪ್ರಯತ್ನಿಸ್ತಾ ಇದ್ದಾರೆ. - ನೈಸ್ ವ್ಯವಹಾರದಲ್ಲಿ ಬೇಕಾದಷ್ಟಿವೆ, ಎತ್ತಿ ಆಡಲು. ದೇವೆಗೌಡರ ಪಾಲು ಅಷ್ಟೆ. ಅವರಿಗೆ ದುಡ್ಡು ಮಾಡಲು ಹಲವು ದಾರಿ ಇದೆ. ಆದರೆ, ಇದು ಅಂಗೈಯಲ್ಲಿರುವ ನೆಲ್ಲಿಕಾಯಿ. ಯಡ್ಡಿ ಕಿತ್ಕೊಳ್ಳದಿದ್ದರೆ. - ರಸ್ತೆ ಬಂದರೆ, ಜಮೀನು ವಾಪಸು ಸಿಕ್ಕರೆ, ರೈತರಿಗೆ ಬಂಪರ್. ಆದ್ದರಿಂದ ರೈತರಲ್ಲಿ ಹೆಚ್ಚಿನವರು ವಿರೋಧಿಸ್ತಾ ಇದ್ದಾರೆ. ಕೊನೆಯದಾಗಿ: - ನಾನು ದೇವೇಗೌಡರ ಜಾತಿನೂ ಅಲ್ಲ. ಯಡ್ಡಿಯೂರಪ್ಪ ಜಾತಿನೂ ಅಲ್ಲ; ಅದಕ್ಕೆ ಇಬ್ರಿಗೂ ಬೈತಿದ್ದೀನಿ :೦) ಇತೀ, ಉಉನಾಶೆ

//ಎಕ್ಸ್ಪ್ರೆಸ್ ಕಾರಿಡಾರ್ ನಂತಹ ಪ್ರಾಜೆಕ್ಟ್ ನಲ್ಲಿ ಬರೆ ದಾರಿ ಸುಂಕ ದಿಂದ ಅಸಲು ಬಡ್ಡಿ ಲಾಭ ಬರುತ್ತೆ ಅಂತ ನನ್ಗೆ ಅನ್ನಿಸುವುದಿಲ್ಲ. ಟೌನ್ ಶಿಪ್ ಅವಶ್ಯಕತೆ ಇದೆ ಅನ್ನಿಸುತ್ತೆ. ಬುದ್ದೀ ಲಿಂಕ್ ರೋಡಿಂದ ಕೆಂಗೇರಿ ಹತ್ರಕ್ಕೆ ಹನ್ನೆರಡ್ ಕಿಲೋಮೀಟರ್ಗೆ ಮೂವತ್ತೈದೇ ರೂಪಾಯಿ. ನೂರಿಪ್ಪತ್ತು ಕಿಲೋಮೀಟರ್ಗೆ..?

//ಕಾರಣ ಹೊಲ ಗದ್ದೆಯಲ್ಲ . ಅವರ ಎಕರೆಗಟ್ಟಲೆ ಜಾಗಗಳಿಗೆ ಕೋಟಿಗಟ್ಟಲೆ ಹಣ ಬೆಂಗಳೂರಿನ ಸುತ್ತಾ-ಮುತ್ತಾ ನಿಮ್ಮ ಮಾತು ಸರಿ ಇರಬಹುದು.. ಚನ್ನಪಟ್ಟಣ ಶ್ರೀರಂಗಪಟ್ಟಣ ಟೌನ್-ಶಿಪ್ ಬಗ್ಗೆ ಏನು ಹೇಳುತ್ತೀರಾ..?

`ನೈಸ್' ಸೇರಿದಂತೆ ಎಲ್ಲ ಬೃಹತ್ ಯೋಜನೆಗಳ ಹಿಂದಿನ `ರಫ್' ಹೋರಾಟ ಗಮನಿಸಿದರೆ, ಎಲ್ಲರೂ ಸಂಪತ್ತಿನ ಹಿಂದೆ ಓಡುತ್ತಿರುವ ವ್ಯಾಪಾರಿಕರಣದ ದಟ್ಟ ಪ್ರಭಾವಕ್ಕೆ ಒಳಗಾಗಿರುವುದು ಕಾಣುತ್ತಿದೆ. `ಮುಂದೆ ಕಾದಿದೆ ಮುದುಕಿ ಹಬ್ಬ' ಎಂಬಂತೆ ಇದೆಲ್ಲದರ ಪರಿಣಾಮ ಈಗಲ್ಲ-ಮುಂದೆ ಕಾದಿದೆ. ಆಹಾರಕ್ಕಾಗಿ ಎಲ್ಲೆಲ್ಲೂ ಹಾಹಾಕಾರವೆದ್ದಾಗ, `ಹಸಿವಿಗೆ ಅನ್ನ ತಿನ್ನದೇ `ಚಿನ್ನ'ವನು (ಹಣ-ಸಂಪತ್ತು-ಐಷಾರಾಮ) ತಿನ್ನಲು ಸಾಧ್ಯವೇನು!?' ಎಂಬ (ಹಸಿವಿನ) ಅರಿವಿನ ಪ್ರಶ್ನೆ ಏಳುತ್ತದೆ; ಅಷ್ಟರಲ್ಲಿ ಕಾಲ ಮಿಂಚಿರುತ್ತದೆ! ಈ `ರೀತಿ'ಯ ಶರೀರ ಹೊತ್ತ ಎಲ್ಲರೂ ಅದಕ್ಕೆ ಅಗತ್ಯವಾದ ಆಹಾರ, ನೀರು, ಗಾಳಿ ಇತ್ಯಾದಿ ಪ್ರಾಕೃತಿಕ ಸಂಪತ್ತೆನ್ನೆಲ್ಲ ಈ ಪಾಟಿ ದುರ್ಬಳಕೆ ಮಾಡಿಕೊಳ್ಳುತ್ತಾ, ದುರ್ಲಭವಾಗಿಸುತ್ತಾ, ತಾವೂ ನಾಶವಾಗಿ, ಇತರ ಬಹುಪಾಲು ಅಮಾಯಕರನ್ನೂ ನಾಶ ಮಾಡುತ್ತಿದ್ಧಾರೆ. ಥೂ! ಇವರುಗಳ ಮುಖಕ್ಕಿಷ್ಟು ಬೆಂಕಿ ಹಾಕ!!

[ಥೂ! ಇವರುಗಳ ಮುಖಕ್ಕಿಷ್ಟು ಬೆಂಕಿ ಹಾಕ!!] ಇದೇನಿದು ಹೊಸರಾಗ? ಬೇಗ ಬರೋದಿಲ್ಲ ಆ ಯೋಗ "ಪಾಪಿ ಚಿರಾಯು" ಅನ್ನೋದನ್ನು ತಿಳ್ಕೊಳ್ಳಿ ಬೇಗ

ಈ ವಿಶೇಷ ಆರ್ಥಿಕ ವಲಯ, "ಟೌನ್ಶಿಪ್", ಹೆದ್ದಾರಿ ನಿರ್ಮಾಣ, ಇಂತಹ ಒಂದಿಲ್ಲೊಂದು ಕಾರಣದಿಂದ ಕೃಷಿ ಭೂಮಿಗಳು ಉದ್ದಿಮೆದಾರರ ಕೈಸೇರುತ್ತಿವೆ. ಇವಕ್ಕೆ ಕಾರಣವೂ ಇಲ್ಲದಿಲ್ಲ. ಹಳ್ಳಿಗಳಲ್ಲಿ, ಕೃಷಿ ಕೆಲ್ಸಕ್ಕೆ ಸಾಕಷ್ಟು ಕೆಲಸದಾಳುಗಳು ಸಿಗುತ್ತಿಲ್ಲ. ಭ್ರಷ್ಟಾಚಾರದ ಪರಮಾವಧಿಯಲ್ಲಿನ ಈ ದಿನಗಳಲ್ಲಿ ಒಳ್ಳೆಯ ಬಿತ್ತನೆ ಬೀಜಗಳು ದೊರೆಯುತ್ತಿಲ್ಲ. ಸಾಕಷ್ಟು ರಸಗೊಬ್ಬರದ ಸರಬರಾಜೂ ಆಗುತ್ತಿಲ್ಲ. ಅತೀವೃಷ್ಟಿ ಮತ್ತು ಅನಾವೃಷ್ಟಿಯಿಂದಾಗಿ ಕೃಷಿಯಿಂದ ಬರಬೇಕಾದ ಆದಾಯವೂ ಸರಿಯಾಗಿ ಬರುತ್ತಿಲ್ಲ. ಈ ಎಲ್ಲಾ ಕಾರಣಗಳಿಂದಾಗಿ ರೊಸಿಹೋದ ಕೃಷಿಕರು ಒಮ್ಮೆಲೇ ಕೈಗೆ ಸಿಗುವ ಹಣದ ಆಮಿಷಕ್ಕೆ ಬಲಿಯಾಗಿ ಕೃಷಿಭೂಮಿಯನ್ನು ಮಾರುವುದಕ್ಕೆ ತಯಾರಾಗುತ್ತಿದ್ದಾರೆ. ಇನ್ನೂ ಜಾಸ್ತಿ ಬೆಲೆ ಸಿಕ್ಕರೆ ಖಾಸಗಿಯಾಗಿ ಮಾರಬೇಕೆನ್ನುವ ಇಚ್ಛೆ ಹೆಚ್ಚಿನವರದು. ಮಾರಲೇ ಬಾರದೆನ್ನುವವರು ಕಡಿಮೆ ಇದ್ದಾರೆನ್ನುವುದೂ ಸತ್ಯಕ್ಕೆ ದೂರವಾದ ಮಾತಲ್ಲ. ಇದು ಎಲ್ಲಾ ಹಳ್ಳಿಗಳಿಗೆ ಅನ್ಯಯವಾಗುವ ಮಾತಲ್ಲವಾಗಿದ್ದರೂ ಹೆಚ್ಚಿನೆಲ್ಲ ಹಳ್ಳಿಗಳಿಗೆ ಅನ್ವಯಿಸುವಂತಾದ್ದು ಎನ್ನುವುದರಲ್ಲಿ ಎರಡು ಮಾತಿಲ್ಲ.

ಮಾಯ್ಸ, ನಾನುವೆ ನೋಡ್ತ ಬ೦ದಿವ್ನಿ ಆವತ್ತಿನಿ೦ದ, ಈ ಜನ್ಗಳಿಗೆ ಒಳ್ಳೆ ಕೆಲ್ಸ ಮಾಡೋಕೆ ಹೋದ್ರೆ ಆಗುಕ್ಕಿಲ್ಲ ಅ೦ತ ಗೊತ್ತಾಗ್ಬುಟ್ಟದೆ. ಕೆಲುವ್ರು ನಮ್ ಸ೦ಪದದಲ್ಲೆ ಇರೋರು ಬಾಳ ಕವನ ಬರಿತಾವ್ರೆ. ಈ ಪೇಪರ‍್ನೋರು ತಾನೆ ಎನ..ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ಅದರ ಮೂಲ ಎನು ಅ೦ತ ಹುಡ್ಕಿರ‍ೋರು, ಅವ್ರಿಗೆ ಅದ್ಯಾವುದೋ ಭಾಷೆಲಿ ಬೈದ್ರು ಅ೦ತ ದೊಡ್ದಾಗಿ ಹಾಕಿ ಕೇಳುಗರಿಗೆ ಇದು ಸರಿನ? ತಪ್ಪ? ಅ೦ತ ಒ೦ದು ಪೇಜ್ ತು೦ಬ ಹಾಕ್ತರೆ..ಅಲ್ಲ ಗುರು ರೈತರ ಕಷ್ಟ ಎನೂ ಅ೦ತ ಹಾಕುದ್ ಬೇಡ್ವೆ. ಒಟ್ನಲ್ಲಿ ಇಲ್ಲಿ ಜಾತಿನೆ ಮೇಲ್ ಹಾಗಿದೆ...ದೇವೆಗೌಡ್ರುಗೆ ಬೇರೆ ಬೇರೆ ಪಕ್ಸ್ದೋರು ಬಾಯಿಗೆ ಬ೦ದ೦ಗೆ ಬೈತಿದ್ದಾಗ ಇವ್ರಿಲ್ಲ ಎಲ್ಲಿದ್ರು ಅ೦ತಿನಿ. ಅಯ್ಯೊ ಈ ಜನಗಳಿಗೆ ಅದ್ರಲ್ಲುವೆ ನಮ್ಮ ವಿದ್ಯವ೦ತ್ರ೦ತು ಬಾಳ ಬ್ಯಾಸ್ರ ಮಾಡ್ಕ೦ದವ್ರೆ ಅವರ ಭಾಷೆ ಬಳಸಿದ್ದಕ್ಕೆ. ಈ ಉರಿ ಬಿಸ್ಲಲ್ಲಿ ದ್ಯಾವೆ ಗೌಡ್ರುಗೆ ಯಾಕ್ ಬೇಕು ಅ೦ತಿನಿ. ಅಮೇಲೆ ಜನ ಎನ್ ತಿಳ್ಕ೦ಡವ್ರೆ ಅ೦ದ್ರೆ ಅವ್ರ ಜಮೀನ್ ಇರ್ ಬೇಕು ಅದಕ್ಕೆ ಪ್ರತಿಭಟನೆಯ ನಾಟ್ಕ ಆಡ್ತಾವ್ರೆ ಗೌಡ್ರು ಅ೦ತ..ಥೂ...ಅವ್ರಿಗೆ ದುಡ್ಡ್ ಮಾಡ್ಲಿಕ್ಕೆ ಬೇಕದಸ್ಟು ದಾರಿ ಎರ್ತವೆ ಅನ್ನೊದನ್ನ ಜನ ತಿಳ್ಕಬೇಕು..ಬಿಸ್ಲಲ್ಲಿ ಈ..ಟೀಕೆ ಎದ್ರುಸ್ ಬೇಕಾಗಿರಿಲ್ಲ ..ಅಲ್ವ..

>>ಅದಕ್ಕೇಕೆ ಇಸೊ೦ದ್ ಬೇಜಾರ್ ಮಾಡ್ಕೊಡ್ಡಿದ್ದೀರಿ<< ಬೇಜಾರ್ ಮಾಡ್ಕೊಂಡಿರೋದ್ ನಾನಾ? ನಿಮಗೆ ಅದು ಹೇಗೆ ಗೊತ್ತಾಗುತ್ತದೆ ಸ್ವಲ್ಪ ಬಿಡಿಸಿ ಹೇಳ್ತೀರಾ?

ನನ್ನ ಮಾತುಗಳನು ಮೆಚ್ಚದವರೂ ಓದುತ್ತಾರೆ ಅನ್ನುವುದನರಿತೆನಗೆ ಖುಷಿ ಆಯ್ತು ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಅಲ್ಲೆಲ್ಲೆಲ್ಲೋ ಪ್ರತಿಕ್ರಿಸುವುದು ನಿಜವಾಯ್ತು ನನ್ನ ಮನದ ಮಾತುಗಳನು ಕವನವೆಂದು ಅವರೇ ವರ್ಗೀಕರಿಸಿ ತಲೆ ಪಟ್ಟಿ ಕಟ್ಟಿದರು ನಂತರ ಅದನ್ನು ಕವನವೇ ಅಲ್ಲವೆಂದು ಸಾರ್ವಜನಿಕವಾಗಿ ಹೀಗಳೆದರು ಹಾಗಳೆದರು ಹೇಗೆ ಅಳೆದರೆ ನನಗೇನು ನನ್ನ ಪ್ರಚಾರವನ್ನು ಪುಕ್ಕಟೆಯಾಗಿ ಅವರೇ ಮಾಡುತ್ತಾರೆ ನನ್ನ ಮನದ ಮಾತುಗಳನ್ನು ಜನ ಹುಡುಕಿಕೊಂಡು ಹೋಗುವಂತೆ ಪ್ರೇರೇಪಿಸುತ್ತಾರೆ ನಾನು ಒಬ್ಬರ ಬಗ್ಗೆ ಹೀಗೆ ಬರೆದುದು ತಪ್ಪು ಎನ್ನುವುದಕ್ಕಿಂತಲೂ ಹೆಚ್ಚಾಗಿ ನಾ ಆಗೀಗ ಮತ್ತೊಬ್ಬರ ಬಗ್ಗೆ ಬರೆಯದೇ ಸುಮ್ಮನಿದ್ದೆ ಏಕೆ ಅನ್ನುವುದೇ ಚಿಂತೆ ಇವರೆಲ್ಲರಿಗೆ ಈಗ ಹಾಗಾದರೆ ನಾ ಬರೆಯುವ ಪರಿಯ ಇವರೆಲ್ಲಾ ಮೆಚ್ಚಿಕೊಂಡಿದ್ದಾರೆಂದ ಹಾಗಾಯ್ತು ಎಲ್ಲರ ಬಗ್ಗೆಯೂ ಬರೆದರೆ ಇವರೆಲ್ಲಾ ನನ್ನ ಮಾತನ್ನು ಕೊಂಡಾಡುವರು ಎಂದಾಯ್ತು :))

// ಮಾತು ಕುಲ ಹೇಳುತ್ತಾ...? ಕುಲಕುಲಕುಲವೆಂದು ....... :) //.ಕ್ವಾಪ ಮಾಡ್ಕ ಬೇಡಿ ಬುದ್ದಿ ಅಯ್ಯೋ ಬಿಡ್ರೀ ಬುದ್ದಿ ಬಡ್ವನ್ ಕೋಪ ದವ್ಡೇಗ್ moola. ಚರ್ಚೆ ನಡೀಬೇಕು ಕೋಪ ಇರ್ಬಾರ್ದು. ಆಗ ಒಳ್ಳೇ ಉತ್ತರ ಸಿಗುತ್ತೆ ಅಂತ ಸಾಕ್ರಟೀಸ್ ಹೇಳಿದ್ದು ಗೆಪ್ತಿ...

//ಈ ಪೇಪರ‍್ನೋರು ತಾನೆ ಎನ..ರೈತರ ಬಗ್ಗೆ ಕಾಳಜಿ ಇದ್ದಿದ್ದರೆ ಅದರ ಮೂಲ ಎನು ಅ೦ತ ಹುಡ್ಕಿರ‍ೋರು, ಮೂಲ ಹುಡ್ಕೋ ಪತ್ರಿಕೆಗೋಳ್ ನಿಂತು ಶಾನೆ ದಿವ್ಸ ಆಯ್ತು ಬುದ್ದಿ. ಈಗೇನಿದ್ರೂ "moolah' ಹುಡ್ಕೋ ಪತ್ರಿಕೆ-ಗೋಳು.

ಇದನ್ನು ಹೀಗೆನ್ನಬಹುದೇ...! ಮಣ್ಣಿನ ಮಗ--ಯಡ್ಡಿಯ "ಜಗಳ" --> ನೈಸ್ ರೋಡ್, ಪ್ರತಿಭಟನೆ, ಅವ್ಯಾಚ ಶಬ್ಧ, "ಶ್ವೇತ ಪತ್ರ", "ಟಿ.ವಿ ಇಂಟರ್ವ್ಯುವ್".... ಮುಂತಾದವುಗಳ ತನಕ .... ;)

ಇದೆಲ್ಲಾ ಕೋಳಿ ಜಗ್ಳ ನಿಲ್ಸಿ, ಎಲ್ಲಾನೂ ಬುಟ್ಟಾಕಿ, ಈ ಕಿತ್ತೋಗಿರೋ ರಾಜಕೀಯ್ದಾಗೆ ಎಲ್ಲಾರೂ ಒಂದೇಯ, ಅದ್ಯಾಕಂಗೆ ಯಾರೋ ಒಬ್ರುನ್ನ ವಯಿಸ್ಕೊಂಡ್ ಮಾತಾಡ್ತೀರಾ? ಎಲ್ಲಾ ಕಳ್ರೇ, ಯಾರೂ ಸಾಚಾ ಇಲ್ಲ, ರೈತ್ರ ಜಮೀನ್ ಕಿತ್ಕೊಂಡು ಇವ್ರು ಬಂಗ್ಲೆ ಮೇಲೆ ಬಂಗ್ಲೆ ಕಟ್ಟಿಸ್ತಾರೆ, ಮಾಡ್ಬಾರ್ದ್ನೆಲ್ಲ ಮಾಡ್ತಾರೆ. ಇಲ್ಲಿ, ಸಂಪದದಲ್ಲಿ ಅವ್ರ ಬಗ್ಗೆ ಯಾಕೆ ಜಗ್ಳ? ಯೇ, ಬುಡ್ಬುಡಿ, ಇದ್ನೆಲ್ಲಾ ಬುಟ್ಟಾಕಿ ಏನಾದ್ರೂ ಒಸಿ ಒಳ್ಳೊಳ್ಳೆ ವಿಚಾರ್ಗಳ್ನ ಬರೀರಿ. ಜನ ಓದಾಕೆ ಕಾಯ್ತಾ ಅವ್ರೆ.

//ಯೇ, ಬುಡ್ಬುಡಿ, ಇದ್ನೆಲ್ಲಾ ಬುಟ್ಟಾಕಿ ಏನಾದ್ರೂ ಒಸಿ ಒಳ್ಳೊಳ್ಳೆ ವಿಚಾರ್ಗಳ್ನ ಬರೀರಿ. ಹೊಟ್ಟೆ ಉರಿಸ್ಕ್ಂಡು ಕೇಳಿದ್ ಪ್ರಶ್ನೆ ಇದು .. ನೈಸ್ ಬಗ್ಗೆ ಹೇಳೋದಾದ್ರೆ ನಾನು ಸತ್ಯವಾಗಿ ಟೌನ್ಶಿಪ್ ವಿರೋಧಿ. ಯಾಕೆ ಅಂತ ನಮ್ಮ ಸಂಪದದ ಜನ ಕೇಳ್ತಾರೆ ಅಂತ ಇದ್ದೆ. ಸುಮ್ಮನೆ ಆವಯ್ಯ ಇಂಗಂದ ಈವಯ್ಯ ಅಂಗಂದ ಅಂತ ಹೇಳೋ ಬದಲು.. ನೈಸ್ ಬಗ್ಗೆ ನಿಮ್ಮನಿಸಿಕೆ ಹೇಳ್ತಾ ಹೋದ್ರೆ. ಸರಿ ಅಂತ ನನ್ಮಾತು ..

ನಾನೂ ಈ ಟೌನ್ಶಿಪ್ಗಳ ಕಡು ವಿರೋಧಿಯೇ. ಸಾಯೋಕ್ಕೆ ಇವ್ರಿಗೆ ನೂರೆಂಟು ಟೌನುಗಳು ಈಗಾಗಲೆ ಇರುವಾಗ ರೈತರ ಭೂಮಿ ಕಿತ್ಕೊಂಡು ಮತ್ತೆ ಹೊಸ ಹೊಸ ಟೌನುಗಳನ್ನು ಮಾಡಿ, ಟನ್ಗಟ್ಟಲೆ ತ್ಯಾಜ್ಯವನ್ನು ಅಲ್ಲೆಲ್ಲಾ ಸುರಿದು, ಟನ್ಗಟ್ಟಲೆ ದುಡ್ಡು ಮಾಡಿ ತಿಂದು ತೇಗುವ ಹುನ್ನಾರ ಇವ್ರದ್ದು. ಅದನ್ನು ಎಲ್ರೂ ವಿರೋಧಿಸ್ಬೇಕು, ಆದ್ರೆ ಈ ಮಣ್ಣಿನಮಗನ ಥರಾ ಅಲ್ಲ. ಒಂದು ವಿಚಾರ ಪ್ರಚೋದಕವಾಗುವಂಥ ಅರ್ಥಪೂರ್ಣ ಚರ್ಚೆ ನಡೆದ್ರೆ ಪರವಾಗಿಲ್ಲ. ಅದು ಬಿಟ್ಟು ಒಬ್ಬೊಬ್ರು ಒಬ್ಬೊಬ್ರನ್ನ ವಹಿಸ್ಕೊಂಡು ಲಾಯರ್ಗಳ ಥರ ಆಡಿದ್ರೆ ಏನುಪಯೋಗ ??