Mac OS Nudi ತಂತ್ರಾಂಶವನ್ನು ಸಪೋರ್ಟ ಮಾಡುತ್ತಾ?

0

ಸ್ನೇಹಿತರೆ,
(ಅಪರೂಪಕ್ಕೆ!) ನಮ್ಮೂರಿನವರೊಬ್ಬರು ಇತ್ತೀಚೆಗೆ Windows ಬಿಟ್ಟು Mac OS ಬಳಸಲು ಶುರು ಮಾಡಿದ್ದಾರೆ. Nudiಯಲ್ಲಿ ಟೈಪ್ ಮಾಡಿದ ಎಷ್ಟೋ documents Mac OSನಲ್ಲಿ open ಆಗುತ್ತಿಲ್ಲವಂತೆ. ನಾನಂತೂ Mac ಇನ್ನೂ ಬಳಸಿಲ್ಲ. ನಿಮ್ಮಲ್ಲಿ ಯಾರದರು ಬಳಸಿದ್ದರೆ, Macನಲ್ಲಿ Nudi ಹೇಗೆ ಬಳಸಬಹುದೆಂದು ತಿಳಿಸುವಿರಾ? Mac OSಗಾಗಿ ನುಡಿ fonts ಅಥವ Nudi Software ಏನಾದರು ಸಿಗುತ್ತಾ? http://www.kagapa.org/ ನಲ್ಲಿ ಡೌನ್ಲೋಡ್ ಮಾಡಿಕೊಂಡ ನುಡಿ Fonts, windowsನಲ್ಲಿ ಮಾತ್ರ ಬಳಸಬಹುದಾಗಿದೆ. Mac ಗೆ ಸಂಬಂದಿಸಿದ ಯಾವುದೆ ಮಾಹಿತಿ ಸಿಗಲಿಲ್ಲ. ವಿಕಿಪೀಡಿಯದಲ್ಲಿ open source fonts ಲಿಂಕ್ ಇದೆ. ಆದರೆ ನುಡಿಗೆ ಸಂಬಂದಿಸಿದ ಯಾವುದೇ ಮಾಹಿತಿ ಸಿಗಲಿಲ್ಲ.

ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇನೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>Nudiಯಲ್ಲಿ ಟೈಪ್ ಮಾಡಿದ ಎಷ್ಟೋ documents Mac OSನಲ್ಲಿ open ಆಗುತ್ತಿಲ್ಲವಂತೆ. ಈ ವಿಷಯದ ಬಗ್ಗೆ ಈ ಕೊಂಡಿಯಲ್ಲಿ ಹೇಳಿದ್ದಾರೆ ನೋಡಿ http://www.sharma-ho... >>Macನಲ್ಲಿ Nudi ಹೇಗೆ ಬಳಸಬಹುದೆಂದು ತಿಳಿಸುವಿರಾ? Mac OSಗಾಗಿ ನುಡಿ fonts ಅಥವ Nudi Software ಏನಾದರು ಸಿಗುತ್ತಾ? ನುಡಿ Mac ಗಾಗಿ ಇಲ್ಲ ಆದರೆ ಕನ್ನಡ ಓದಲು ಮತ್ತು ಬರೆಯಲು ಸಾಧ್ಯ ಹೆಚ್ಚಿನ ಮಾಹಿತಿಗಾಗಿ ಈ ಕೊಂಡಿಯನ್ನು ನೋಡಿ http://web.nickshank... ಇಲ್ಲಿ ಕೆದಗೆ ಫಾಂಟ್ ಅನ್ನ್ ಹೇಗೆ ಇನ್ಸ್ಟಾಲ್ ಮಾಡ್ಕೋಬೋದು ಅಂತ ಇದೆ. ಇದನ್ನ ಮ್ಯಾಕ್ ಲೆಪರ್ಡ್ ನಲ್ಲಿ ಬಳಸಿದ್ದೇನೆ ಫಾಂಟ್ ಇನ್ಸ್ಟಾಲ್ ಆದ್ಮೇಲೆ ಕನ್ನಡ ಜಾಲ ತಾಣಗಳು ಸರಿಯಾಗಿ ಮೂಡುತ್ತವೆ. ಇದರಲ್ಲಿ ಕನ್ನಡದಲ್ಲಿ ಬರೆಯಲು ಸಹಾಯವಾಗಲು keyboard layout ಕೂಡ ಕೊಟ್ಟಿದ್ದಾರೆ (ಆದರೆ ನಾನು ಇದನ್ನು ಬಳಸಿಲ್ಲ..) --ವಾಸುದೇವ

@ಲೋದ್ಯಾಶಿ: ನೀವು ಈ ರೀತಿ ಕೇಳಿದರೆ ಹೇಗೆ, ಸಹಾಯ ಬೇಡ ಎಂದು ಹೇಳುವುದುಂಟೇ? ನಾನು ನುಡಿ ಬಳಸುವುದೇ ಇಲ್ಲ, ಬಳಸುವುದು ಬರಹ ಮಾತ್ರ. ನಮ್ಮೂರಿನ ಸ್ನೇಹಿತರು ಮೊದಲು ನುಡಿ ಬಳಸುತ್ತಿದ್ದರು. ಅವರು ಈಗ ಮ್ಯಕ್ ಓಎಸ್ ಬಳಸುತ್ತಿರುವುದರಿಂದ ಅವರಿಗೆ ಸಹಾಯವಾಗಬಗುದೇ ಎಂಬ ವಿಚಾರದಿಂದ ಹಾಗೆ ಕೇಳಿದೆ. @ವಾಸುದೇವ: linksಗಳಿಗಾಗಿ ಧನ್ಯವಾದಗಳು. ನಮ್ಮ ಸರ್ಕಾರದವರು ನುಡಿ softwareನ್ನು ಎಲ್ಲಾ OSಗಳಿಗಾಗಿ ಸಿದ್ಧಗೊಳಿದರೆ "ನುಡಿ" ಇನ್ನಷ್ಟು ಮಾತಡಬಹುದೇನೋ..... :)

ನುಡಿಯಲ್ಲಿ rtf ಅಥವಾ txt Format ನಲ್ಲಿ ಮತ್ತು Unicode Encoding ನಲ್ಲಿ ಕಡತವನ್ನು ಉಳಿಸಿದರೆ, Mac OS ನ TextEdit ಬಳಸಿ ಕಡತವನ್ನು ಒಪೆನ್ ಮಾಡಬಹುದು. Mac OS X ನಲ್ಲಿ ಹೆಚ್ಚಿನ ಆಪ್ಲೀಕೇಶನ್ ಗಳು Unicode ಸಪೋರ್ಟ್ ಮಾಡುವುದರಿಂದ ನುಡಿಯಂತಹ ಆಪ್ಲೀಕೇಶನ್ ಬೇಕಾಗಲಿಕ್ಕಿಲ್ಲ. ಇತಿ, ರವಿಪ್ರಕಾಶ