ಇದು ಕನ್ನಡದ ದೌರ್ಭಾಗ್ಯವಲ್ಲವೇ?

5

ಕನ್ನಡದ ಕೆಲವು ಹೞೆಯ ಪುಸ್ತಕಗಳು ಈಗ ಲಭ್ಯವಿಲ್ಲ. ಹಾಗೆಯೇ ಓದುಗರ ಕೊಱತೆ ಕೂಡ. ನಾನು ಓದಲೆಂದೇ ಕಲೆಹಾಕಿದ ಕೆಲ ಪುಸ್ತಕಗಳನ್ನುದಾಹರಿಸುತ್ತೇನೆ.

ರೆವರೆಂಡ್ ಎಫ್. ಕಿಟ್ಟೆಲರು ಸಂಪಾದಿಸಿದ

  1. ಕನ್ನಡ-ಇಂಗ್ಲಿಷ್ ಕೋಶ
  2. ನಾಗವರ್ಮನ ಕನ್ನಡ ಛಂದಸ್ಸು
  3. ಕರ್ನಾಟಕ ಕಾವ್ಯಮಾಲೆ
  4. ಕೇಶಿರಾಜನ ಶಬ್ದಮಣಿದರ್ಪಣ

ಬೆಂಜಮಿನ್ ಲೂಯಿ ರೈಸ್ ಸಂಪಾದಿಸಿದ

  1. ಅಮರಸಿಂಹನ ಅಮರಕೋಶ
  2. ಕನ್ನಡ ಸಾಹಿತ್ಯ ಚರಿತ್ರೆ

ಹಾಗೂ ನರಸಿಂಹಾಚಾರ್ ಸಂಪಾದಿಸಿದ

  1. ಕನ್ನಡ ಭಾಷೆಯ ಚರಿತ್ರೆ
  2. ನಾಗವರ್ಮನ ಕರ್ನಾಟಕಕಾವ್ಯಾವಲೋಕನ

ಇವನ್ನೆಲ್ಲ ಓದುವವರ ಕೊಱತೆ ಹಾಗೂ ಮಾಱುಕಟ್ಟೆಯಲ್ಲಿ ಈ ಪುಸ್ತಕಗಳು ಲಭ್ಯವಿರದಿರುವುದು ನಮ್ಮ ದೌರ್ಭಾಗ್ಯವಲ್ಲವೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಇವನ್ನೆಲ್ಲ ಓದುವವರ ಕೊಱತೆ ಹಾಗೂ ಮಾಱುಕಟ್ಟೆಯಲ್ಲಿ ಈ ಪುಸ್ತಕಗಳು ಲಭ್ಯವಿರದಿರುವುದು ನಮ್ಮ ದೌರ್ಭಾಗ್ಯವಲ್ಲವೇ?<< ಓದುವವರ ಕೊರತೆ ನನ್ನ (ನಮ್ಮ) ದೌರ್ಭಾಗ್ಯ ಅಲ್ಲ. ನನಗೆ ಅಗತ್ಯ ಕಂಡಾಗ, ಮಾರುಕಟ್ಟೆಯಲ್ಲಿ ಈ ಪುಸ್ತಕಗಳು ಲಭ್ಯವಿರದಿರುವುದು, ನನ್ನ ದೌರ್ಭಾಗ್ಯವೇನೋ ಹೌದು. ನನಗೆ ಅಗತ್ಯ ಇಲ್ಲದಾಗ, ನನಗೆ ಅಗತ್ಯ ಇಲ್ಲದ ಪುಸ್ತಕಗಳು ಮಾರುಕಟ್ಟೆಯಲ್ಲಿ ಲಭ್ಯವಿರದಿರುವುದು, ನನ್ನ ದೌರ್ಭಾಗ್ಯವಂತೂ ಅಲ್ಲ. - ಆಸು ಹೆಗ್ಡೆ.

ರೆವರೆಂಡ್ ಎಫ್. ಕಿಟೆಲರು ಸಂಪಾದಿಸಿದ ಕನ್ನಡ-ಇಂಗ್ಲಿಷ್ ಪದನೆರಕೆಯು ಇಂದಿಗೂ ಲಭ್ಯವಿದೆ. ನವದೆಹಲಿಯ Asian Educational Services ನವರು ಮರುಮುದ್ರಿಸಿದ್ದಾರೆ. ನವಕರ್ನಾಟಕದಲ್ಲಿ ಸಿಗುತ್ತೆ. ಬೆಲೆ ಸುಮಾರು ೮೦೦ ರುಪಾಯಿ ಅನ್ತ ಕಾಣುತ್ತೆ. ನಾಗವರ್ಮನ ಕನ್ನಡ ಛಂದಸ್ಸು ಇದರ ಹೆಸರು ’ಛಂದೋಂಬುಧಿ’ ಅನ್ತ. ನನ್ನ ಹತ್ತಿರ ಇದೆ.ಇದರ ಉಪೋದ್ಘಾತದಲ್ಲಿ ಕಿಟೆಲರು ಕನ್ನಡ ಭಾಷೆಯ ಇತಿಹಾಸವನ್ನು ಬರೆದು ಆ ನಿಟ್ಟಿನಲ್ಲಿ ಮೊತ್ತಮೊದಲಿಗರೆನಿಸಿದ್ದಾರೆ. ಕರ್ನಾಟಕ ಕಾವ್ಯಮಾಲೆ - ಇದನ್ನು ಶಾಲೆಗಳಲ್ಲಿ ಮಕ್ಕಳು ಕನ್ನಡದ ಕಾವ್ಯಗಳ ಕುರಿತು ಅರಿವು ಹೆಚ್ಚಿಸಿಕೊಳ್ಳಲಿ ಎನ್ನುವ ಉದ್ದೇಶದಿಂದ ಕಿಟೆಲರು ಪಠ್ಯಪುಸ್ತಕವಾಗಿ ಪ್ರಕಟಿಸಿದರು. ಇದರ ಹೆಸರು ’ಸಂಣ ಕರ್ನಾಟಕ ಕಾವ್ಯಮಾಲೆ’ ಅನ್ತ. ಇದು ಕೂಡಾ ನನ್ನಲ್ಲಿದೆ. ಕೇಶಿರಾಜನ ಶಬ್ದಮಣಿದರ್ಪಣ - ಇದನ್ನು ಮರುಪ್ರಕಟಿಸುವಲ್ಲಿ ಕಿಟೆಲರೇ ಮೊದಲಿಗರಾದರೂ ಇಂದು ತ ಸು ಶಾಮರಾಯರ ಪುಸ್ತಕವೇ ಜನಪ್ರಿಯವೆನಿಸಿದೆ. ಆದರೂ ಕಬ್ಬಿಣದ ಕಡಲೆಯಾದ ಇಂಥ ಪುಸ್ತಕಗಳನ್ನು ಕನ್ನಡ ಮಾತೃಭಾಷೆಯಲ್ಲದ ಒಬ್ಬ ವಿದೇಶೀಯನು ಅಧ್ಯಯನ ಮಾಡಿ ಮತ್ತೆ ಬೆಳಕಿಗೆ ತಂದನೆಂದರೆ . . ಬ್ಯಾಡಾ ಬಿಡಿ. ಬೆಂಜಮಿನ್ ಲೂಯಿ ರೈಸ್ ಸಂಪಾದಿಸಿದ ಅಮರಸಿಂಹನ ಅಮರಕೋಶ, ಕನ್ನಡ ಸಾಹಿತ್ಯ ಚರಿತ್ರೆಗಳಿಗಿಂತ ಅವರ ಎಪಿಗ್ರಾಫಿಯಾ ಕರ್ನಾಟಿಕಾ ಇವೆಯಲ್ಲ ಅದನ್ನು ಇವತ್ತು ಒಂದು ವಿಶ್ವವಿದ್ಯಾಲಯವೂ ಮಾಡಕ್ಕಾಗಲ್ಲ. ಇನ್ನು ಡಿ ಎಲ್ ನರಸಿಂಹಾಚಾರ್ಯರೂ ರೈಸರ ಗರಡಿಯಲ್ಲಿಯೇ ಬೆಳೆದವರು. ಹಾಗೂ ನರಸಿಂಹಾಚಾರ್ ಸಂಪಾದಿಸಿದ ನಾಗವರ್ಮನ ಕರ್ನಾಟಕಕಾವ್ಯಾವಲೋಕನ ಇದು ಬಹುಶಃ ಕಾವ್ಯಾಲೋಕನ ಅನ್ತ ಇರಬಹುದು ಅನ್ನಿಸುತ್ತೆ. ನೆನಪಾಗ್ತಿಲ್ಲ. ಪ್ರೀತಿಯಿಂದ ಸಿ ಮರಿಜೋಸೆಫ್

ಇವನ್ನೆಲ್ಲ ಓದಿದ್ದೇನೆ. ಓದುತ್ತಿದ್ದೇನೆ. ಓದಿ ಅವನ್ನೆಲ್ಲ ವಿಶ್ಲೇಷಿಸಿ ಕನ್ನಡಿಗರು ಕೇಳುವ ಕೇಳಿದ ಪ್ರಶ್ನೆಗಳಿಗೆ ಸಮಂಜಸ ಉತ್ತರ ಕೊಡುವ ನಿಟ್ಟಿನಲ್ಲಿ ಪ್ರಯತ್ನಿಸಿದ್ದೇನೆ. ನನ್ನ ’ಱ’ ಮತ್ತು ’ೞ’ ಅಧ್ಯಯನದಲ್ಲಿ ಈ ಎಲ್ಲಾ ಪುಸ್ತಕಗಳು ಸಹಾಯ ಮಾಡಿವೆ. ಕೆಲವೊಮ್ಮೆ ಮಾಱುಕಟ್ಟೆಯಲ್ಲಿ ಲಭ್ಯವಿಲ್ಲ ಎಂಬ ಮಾತುಗಳು (ಈ ಪುಸ್ತಕಗಳನ್ನು ಪ್ರಕಟಿಸುವ Asian Education Services ಸಂಸ್ಥೆಯೂ ಕೂಡ ಹೇೞುವಾಗ) ನನ್ನನ್ನು ನಿರಾಶನನ್ನಾಗಿ ಮಾಡುತ್ತವೆ.