ಕರ್ನಾಟಕವೂ ಸೇರಿದಂತೆ ದೇಶದಲ್ಲಿನ ಸಮೂಹ ಮಾಧ್ಯಮಗಳು `ನಿಜವಾದ ಪ್ರಗತಿ'ಗೆ ಪೂರಕವಾಗಿವೆಯೇ; ಮಾರಕವಾಗಿವೆಯೇ!?

2.857145

ಕಳೆದ 25 ವರ್ಷಗಳಿಂದ ನಾನು ಮುದ್ರಣ ಮಾಧ್ಯಮ ವೃತ್ತಿಯಲ್ಲಿ ಇದ್ದೇನೆ. ಹೀಗಾಗಿ ವೈಯಕ್ತಿಕವಾಗಿ ಮಾಧ್ಯಮಗಳ ಕುರಿತು ನನಗೂ ಒಂದು ಖಚಿತ ಪರಿಕಲ್ಪನೆ ಹಾಗೂ ಆಶಯವಿದೆ. ಮೊದಲು ಅದನ್ನು ಹೇಳಿಬಿಡುತ್ತೇನೆ. ನಂತರ ಚರ್ಚೆ ಆರಂಭಿಸಬಹುದು:
ನನ್ನ ಪ್ರಕಾರ ಸಮೂಹ ಮಾಧ್ಯಮಗಳ ಮೂಲಕ `ನಿಜವಾದ ಪ್ರಗತಿ' ಸಾಧಿಸಬೇಕಾದ ಪರಿಸ್ಥಿತಿ ಸದ್ಯಕ್ಕೆ ತೀರಾ ಹದಗೆಟ್ಟಿದೆ. ದಿನೇ ದಿನೇ ಮೌಲ್ಯಗಳ ಕುಸಿತಕ್ಕೆ ಈ ಸಮೂಹ ಮಾಧ್ಯಮಗಳೂ ತಮ್ಮದೇ ಆದ ಪಾಲು ನೀಡುತ್ತಿವೆ. ದೇಶದ ಮಾನವ ಸಂಪನ್ಮೂಲದ ಏಳಿಗೆಗೆ ತಾನು ಏನು ಮಾಡಬೇಕು? ಸಮೂಹ ಮಾಧ್ಯಮಗಳ ಸತ್ಪರಿಣಾಮಗಳೇನು; ದುಷ್ಪರಿಣಾಮಗಳೇನು? ಸತ್ಪರಿಣಾಮ ಉಂಟಾಗಲು ತಾನು ಏನು ಮಾಡಬೇಕು? ಮುಂದಿನ ಪೀಳಿಗೆಗೆ ಯಾವ ಮಾರ್ಗ ಹಾಕಿಕೊಡಬೇಕು?- ಇತ್ಯಾದಿ ಪರಿಜ್ಞಾನವೆಲ್ಲ ಈಗ ಮಾಯವಾಗಿವೆ.


ದಶಕಗಳ ಹಿಂದಷ್ಟೇ ಪತ್ರಿಕೆಯಲ್ಲಿ ಯಾವುದಾದರೂ ಸಂಬಂಧಪಟ್ಟ ಸುದ್ದಿ ಪ್ರಕಟವಾದರೆ ಜನ ಸಂಭ್ರಮಿಸುತ್ತಿದ್ದರು; ಇಲ್ಲವೇ ಹೆದರುತ್ತಿದ್ದರು. ಈಗ ಪತ್ರಿಕೆಗಳಲ್ಲಿ ಅಥವಾ ಟಿ.ವಿ.ಗಳಲ್ಲಿ ಏನೇ ಬಿತ್ತರವಾದರೂ ಜನರ ಪ್ರತಿಕ್ರಿಯೆ ನೀರಸ ಹಾಗೂ ತನಗೆ ಸಂಬಂಧವೇ ಇಲ್ಲವೆಂಬಂತೆ ಸಿನಿಕವಾಗುತ್ತಿದೆ.  ಟಿ.ವಿ.; ಸಿನಿಮಾಗಳಿಂದ ಎಳೆಯ ಮನಸ್ಸುಗಳ ಮೇಲಾಗುತ್ತಿರುವ ದುಷ್ಟರಿಣಾಮಕ್ಕೆ ಟಿ.ವಿ./ಸಿನಿಮಾಗಳು ಕಾರಣವೋ ಅಥವಾ ಅವುಗಳ ವೀಕ್ಷಕರ ಪ್ರತ್ಯಕ್ಷ-ಪರೋಕ್ಷ ಅನುಸರಣೆಯೋ? ಮಾನವ ಸಂಪನ್ಮೂಲ ಅಭಿವೃದ್ಧಿಯಲ್ಲಿ ಸಮೂಹ ಮಾಧ್ಯಮಗಳ ಪಾತ್ರವೇನು? ಸಮೂಹ ಮಾಧ್ಯಮಗಳು ನೀಡುತ್ತಿರುವ `ಆದ್ಯತೆ'ಗಳ ಕುರಿತು ನಿಮ್ಮಗಳ ಅಭಿಪ್ರಾಯಗಳೇನು?


ಕರ್ನಾಟಕವೂ ಸೇರಿದಂತೆ ದೇಶದಲ್ಲಿನ ಸಮೂಹ ಮಾಧ್ಯಮಗಳು `ನಿಜವಾದ ಪ್ರಗತಿ'ಗೆ ಪೂರಕವಾಗಿವೆಯೇ; ಮಾರಕವಾಗಿವೆಯೇ!?


 


 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಿಯ ಪ್ರಭಾಕರ್, ಜನರು ಅಷ್ಟೆಲ್ಲಾ ತಲೆಕೆಡಸಿಕೊಳ್ತಾರೆ ಅನ್ಕೊಂಡಿದ್ದೀರಾ? ಆಗ ಓದಿ ಆಗ ಮರೆಯೋದೇ ಸಾಮಾನ್ಯಜನರ ರೀತಿ. ನಿಮ್ಮ ಬರವಣಿಗೆ ಏನಾದರೂ ಸ್ವಲ್ಪ ಕೆರಳಿಸುವಂತಿದ್ದರೆ ಒಂದಿಷ್ಟು ಪ್ರತಿಕ್ರಿಯೆ ಬಂತೀದು; ಮೌಲ್ಯದ ಮಾತಾಡ್ತೀರಲ್ಲಾ! ಛೇ! ಎಲ್ಲೋ ಈ ಪದ ಕೇಳಿದ ನೆನಪು!!!

ಗುರುಗಳಿಗೆ ನಮಸ್ಕಾರ. ಅಬ್ಬಬ್ಬಾ!! ಇದಕ್ಕಿಂತ ಬೇಕೆ ಮರ್ಮಾಘಾತ!!? `ಲೇಖನಿಗಿಂತ (ಸಾರಿ ಟೈಪಿಗಿಂತ) ಖಡ್ಗ ಹರಿತ' ಎಂದು ತೋರಿಸಿಯೇ ಬಿಟ್ಟಿರಲ್ಲ...!!! ಧನ್ಯವಾದಗಳು ಸಾರ್.

ನಿಮ್ಮ ಮಾತು ನಿಜ ಸಾರ್, ಅವರಿಗೆ ಬೇಕಾದ ವಿಷಯಗಳನ್ನು ಮಾತ್ರ ಪ್ರಸರಿಸುವ ಚಾಳಿ ಹರಡಿದೆ. ಉದಾಹರಣೆಗೆ ಚರ್ಚ್ ದಾಳಿ, ಎಲ್ಲಾ ಪ್ರಸಾರ ಮಾಡಿದ್ದಾರೆ.. ಆದರೆ ವರ್ಗಾವಣೆಗೆ ಹೆದರಿ ಸ್ವತಃ ಪಾದ್ರಿಯೆ ದಾಳಿ ನಡೆಸಿದ್ದನ್ನು breaking news ಇರಲಿ, ಚಿಕ್ಕ ಸುದ್ದಿಯಾಗಿಯೂ ಬಂದಿಲ್ಲ.. ಇಲ್ಲಿ ನೋಡಿ.. http://thatskannada.... ಇಲ್ಲಿ ತಿಳಿಯುತ್ತದೆ ಮಾದ್ಯಮಗಳ ಆದ್ಯತೆ ಯಾವ ರೀತಿ ಇದೆ ಎಂದು....

ಪ್ರತಿಕ್ರಿಯೆಗೆ ಧನ್ಯವಾದಗಳು ಭಾಸ್ಕರ್ ಸಾರ್. ನೀವು ಹೇಳಿದ್ದು ನಿಜ. ಇದೂ ಒಂದು ರೀತಿ ಮಾಧ್ಯಮಗಳ ...ತುಷ್ಠೀಕರಣ ಅಥವಾ ಡೋಂಗಿ ಜಾತ್ಯತೀತ ವಾದಕ್ಕೆ ಒಂದು ನಿದರ್ಶನ ಎಂದೇ ನನ್ನ ಅಭಿಪ್ರಾಯ.