ನಮ್ಮ ಭವ್ಯ ಭಾರತದಲ್ಲಿ "ನಾನು ಭಾರತೀಯ" ಎಂದು ಹೇಳಿಕೊಳ್ಳುವುದೂ ತಪ್ಪೇ ?

0

ನಮ್ಮ ಭವ್ಯ ಭಾರತದಲ್ಲಿ "ನಾನು ಭಾರತೀಯ" ಎಂದು ಹೇಳಿಕೊಳ್ಳುವುದೂ ತಪ್ಪೇ ?  ಏನಾಗಿದೆ, ಈ ಬಾಳ ಠಾಕ್ರೆಗೆ, ಅರುವತ್ತಕ್ಕೆ ಅರುಳೋ ಮರುಳೋ ಅನ್ನುವ ಹಾಗೆ  "ನಾನೊಬ್ಬ ಮರಾಠಿಗ, ಅದಕ್ಕಿಂತ ಹೆಚ್ಚಾಗಿ ನಾನೊಬ್ಬ ಭಾರತೀಯ ಎಂದು ಹೇಳಿಕೊಳ್ಳಲು ಹೆಮ್ಮೆಯಾಗುತ್ತಿದೆ" ಎಂದು ಹೇಳಿದ ಸಚಿನ್ ತೆಂಡೂಲ್ಕರ್ ಮೇಲೆ ಕೆಂಡ ಕಾರುತ್ತಿದ್ದಾರಲ್ಲಾ ?  ಹಾಗಾದರೆ ಮರಾಠಿಗರು ನಾನು ಭಾರತೀಯ ಅನ್ನುವುದು ತಪ್ಪೇ ?  ಅವರು ಭಾರತೀಯರಲ್ಲದಿದ್ದರೆ ಬೇರೆ ಯಾರು ? ಎಲ್ಲಿಂದ ಬಂದರು ?  ಒಂದು ಅರ್ಥಪೂರ್ಣ ಚರ್ಚೆಯಾದರೆ ಚಂದವಲ್ಲವೇ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅದಲ್ಲ ವಿಷಯ ಮುದಿಹುಲಿ ಮರಿಹುಲಿಯಹಾಗೆ ಆರ್ಭಟಿಸಹೊರಟಿದೆ ನೋಡಿ ಮರಿಹುಲಿ(ರಾಜ್ ಠಾಕ್ರೆ) ಮುಸಿಮುಸಿನಗುತ್ತಿದೆ ಇನ್ನೊಮ್ಮೆ ಬಾಳಾಸಾಹೇಬರು ತಾವು ಕಾಗದದ ಹುಲಿ ಅಂತ ಸಾಬೀತುಪಡಿಸಿದರು

ಆತ ಇನ್ನೂ ಬದುಕಿಯೇ ಇದ್ದಾನೆ ಎನ್ನುವುದನ್ನು ನಮ್ಮ ನಾಡಿನ ಜನರೆಲ್ಲಾ ಮರೆಯಬಾರದು ಅಂತ ಈ ರೀತಿಯಾಗಿ ಕನವರಿಸುತ್ತಾ ಇರುತ್ತಾನೆ. ಆಶ್ಚರ್ಯ ಅಂದರೆ, ಆತ ಏನೋ ಗೀಚಿದರೆ, ಅದಕ್ಕೆ ಎಲ್ಲರೂ ಪ್ರತಿಕ್ರಿಯೆ ನೀಡುವುದಕ್ಕೆ ಮುಂದಾಗುತ್ತಾರೆ. ಇದ್ಯಾಕೆ ಹೀಗೆ? ನಿಜವಾಗಿ ನೋಡಿದರೆ, ಸಚಿನನನ್ನು ರಾಜಕೀಯಕ್ಕೆ ಸೆಳೆಯುವ ಹುನ್ನಾರದಲ್ಲಿ ಇದ್ದಾರೆ ಈ ಬಾಯಿ ಬಡುಕರು. ಸಚಿನನೇ ಮೌನಿಯಾಗಿರುವಾಗ ನಾವೆಲ್ಲರೂ ನಿರ್ಲಕ್ಷ್ಯ ತೊರಿ ಸುಮ್ಮನಿರಬೇಕು...

ಮೊದಲು ಭಾರತೀಯ ,ಆಮೇಲೆ ನಾನು ಕನ್ನಡಿಗ/ತಮಿಳಿನವನು/ಹಿಂದಿಯವ. ಅದರಂತೆಯೇ ಮೊದಲು ನಾನು ಭಾರತೀಯ ಆಮೇಲೆ ಉಳಿದದ್ದೆಲ್ಲಾ. ರಾಷ್ಟ್ರಭಕ್ತಿಯ ಪಾಠದಿಂದ ನಾವೆಲ್ಲಾ ವಂಚಿತರಾಗಿದ್ದೇವೆ.ನಮ್ಮ ಪರಂಪರೆ ಮರೆತಿದ್ದೇವೆ. ಆತ್ಮವತ್ ಸರ್ವಭೂತೇಷು ಎಂಬ ನಮ್ಮ ಪೂರ್ವಜರ ಮಾತು ಮರೆತಿದ್ದೇವೆ. ಏಕಂ ಸದ್ವಿಪ್ರಾ ಬಹುದಾ ವದಂತಿ/ ದೇವನೊಬ್ಬ ನಾಮ ಹಲವು, ಎಲ್ಲವನ್ನೂ ಮರೆತು ಸ್ವಾರ್ಥಿಗಳಾಗಿದ್ದೇವೆ.ಅಷ್ಟೇ ಅಲ್ಲ... ನಮ್ಮ ಮಕ್ಕಳಿಗೆ ರಾಕ್ಷಸೀ ಸ್ವಭಾವ ಬೆಳೆಯುತ್ತಿದ್ದರೂ ನೋಡಿಕೊಂಡು ಸುಮ್ಮನಿದ್ದೇವೆ.ಹೀಗೆಯೇ ಮುಂದುವರೆದರೆ ಯಾವ ದೇವರೂ ನಮ್ಮನ್ನು ರಕ್ಷಿಸುವುದಿಲ್ಲ.

ಇದು ಒಮ್ಮೆಸಂಪದದಲ್ಲಿ ಚರ್ಚೆಯಾಗಿದೆ. ಅದನ್ನು ಸಚಿನ್ ಆ ಅರ್ಥದಲ್ಲಿ ಹೇಳಿರಲೂ ಇಲ್ಲ. ಬಹಳ ಸಹಜವಾಗಿ ಹೇಳಿದ್ದ. (ವಿಡಿಯೋ ನೋಡಿದರೆ ಗೊತ್ತಾಗುತ್ತದೆ). ಆದರೆ ಅದನ್ನು ಇಂಗ್ಲೀಷ್ ಮಾಧ್ಯಮದವರು ಶಿವಸೇನೆ, ಮತ್ತು MNSವಿರುದ್ದ ಬಳಸಿಕೊಂಡು ಮರಾಠಿ ಜನರನ್ನು ಅಪಹಾಸ್ಯ ಮಾಡಿದರು. ಆಗ ಬಾಳಾಠಾಕ್ರೆಯವರು ಸಚಿನ್ ಗೆ ಈ ವಿಷಯದಲ್ಲಿ ಸುಮ್ಮನಿದ್ದರೆ ಒಳ್ಳೆಯದು ಎಂದು ಸೂಚಿಸಬೇಕಾಯಿತು. ರಾಜಕೀಯಕ್ಕೆ ಎಳೆದದ್ದು ಇಂಗ್ಲೀಷ್/ಹಿಂದಿ ಮಾಧ್ಯಮಗಳೆಂಬ ಬಾಯಿಬಡುಕರು. ಈ ವಿವಾದ ಮಾದ್ಯಮದವರು ಹತ್ತಿಸಿದ ಕಿಡಿ. ಭಾರತ ಎನ್ನುವುದು ಒಂದು seperate entity ಅಲ್ಲ. ಕರ್ನಾಟಕ, ತಮಿಳ್ನಾಡು, ಬಿಹಾರ ಎಲ್ಲಾ ರಾಜ್ಯಗಳು ಸೇರಿದರೆ ಅದು ಭಾರತ ಎನ್ನಿಸಿಕೊಳ್ಳುತ್ತದೆ. ನಾನು ಹೆಮ್ಮೆಯ ಕನ್ನಡಿಗ ಅಂತ ಹೇಳಿಕೊಂಡರೆ ನಾನು ಹೆಮ್ಮೆಯ ಭಾರತೀಯನೆಂದೇ ಅರ್ಥ. ಆದರೆ ’ಭಾರತೀಯತೆ ’ ಅನ್ನುವ ಹೆಸರಿನಲ್ಲಿ ಪ್ರಾಂತೀಯ ಭಾಷೆಗೆ, ಸಂಸ್ಕೃತಿಗೆ, ಜನರಿಗೆ ತೊಂದರೆಯಾದಾಗ ಅಲ್ಲಿನ ನೆಲದವರಲ್ಲಿ ಈ ’ಅಭಿಮಾನ’ ಅತ್ಯಂತ ಸಹಜವಾದುದು. ಒಬ್ಬ ಪಾಕಿಸ್ತಾನಿ ಎದುರು ನಾನು ಭಾರತೀಯ . ಆದರೆ ಒಬ್ಬ ಮರಾಠಿಗನ ಎದುರು ನಾನು ಕನ್ನಡಿಗ ಎನ್ನುವುದೇ identity. ಅದನ್ನು ದುರಭಿಮಾನ ಎನ್ನುವುದು ಸರಿಯಲ್ಲ. ಮೂಲಜನರ ಭಾವನೆಗೆ ಬೆಲೆ, ಗೌರವ ಕೊಡುವುದನ್ನು ಎಲ್ಲರೂ ಕಲಿಯಬೇಕು ಎನ್ನುವುದು ನನ್ನನಿಸಿಕೆ.