"ಬಾಡು" ಯಾಕೆ "ಬಾಟ" ಆಗೋದಿಲ್ಲ?

0

ಕೂಡು->ಕೂಟ, ಓಡು -> ಓಟ,ಪಾಡು-> ಪಾಟ,ಕಾಡು->ಕಾಟ,ನೋಡು->ನೋಟ,ಉಣ್ಣು->ಊಟ, ತೋಡು->ತೋಟ,ಹೂಡು-> ಹೂಟ ಇವೆಲ್ಲಾ ಸರಿ.. ಆದರೆ "ಬಾಡು" ಯಾಕೆ "ಬಾಟ" ಆಗೋದಿಲ್ಲ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>ಕೂಡು->ಕೂಟ, ಓಡು -> ಓಟ,ಪಾಡು-> ಪಾಟ,ಕಾಡು->ಕಾಟ,ನೋಡು->ನೋಟ,ಉಣ್ಣು->ಊಟ, ತೋಡು->ತೋಟ,ಹೂಡು-> ಹೂಟ ಇವೆಲ್ಲಾ ಸರಿ.. ಆದರೆ "ಬಾಡು" ಯಾಕೆ "ಬಾಟ" ಆಗೋದಿಲ್ಲ?

ವೆಂಕಟೇಶ ಅವರೇ ನಿಮಗೇ ಉತ್ತರ ಗೊತ್ತಿದ್ದರೆ ತಿಳಿಸಿ. ನನಗೂ ಈ ಬಗ್ಗೆ ಕುತೂಹಲ ಇದೆ.

ಅನಂತಕೃಷ್ಣ ಅವರು ಈ ಬಗ್ಗೆ ಏನಾದರೂ ಪ್ರತಿಕ್ರಿಯಿಸ್ತಾರೆ ಎಂದು ಕಾದಿದ್ದೆ. ಆದರೆ ಸಂಪದದಲ್ಲಿ ಯಾಕೋ ಈ ನಡುವೆ ಅವರ ಸುಳಿವಿಲ್ಲ.

ಕೂಡ್, ಓಡ್, ಪಾಡ್, ನೋಡ್ ಇವೆಲ್ಲ ಕ್ರಿಯಾಧಾತುಗಳಾಗುತ್ತವೆ. ಆದರೆ ನಿಮ್ಮ ಬಾಡು ಅನ್ನೋ ಪದ ನಾಮಪದವಾಗಿಯೂ ಬಳಕೆಯಲ್ಲಿದೆ.
ಬಾಡು ಅನ್ನೋದಕ್ಕೆ ಮೂರು ಅರ್ಥಗಳಿವೆ. ೧.ಬಾಡು=ಮಾಂಸ ೨.ಬಾಡು=ಮುರುಟು, ಸೊರಗು ೩.ಬಾಡು=ನೆರಳು shelter

ನಾವು ಮೊದಲು ನೋಡಿದಂತೆ ಕೂಡ್, ಓಡ್, ನೋಡ್ ಇವುಗಳಂತೆ ಬಾಡ್ ಅನ್ನೋದು ಮೂಲ ಕ್ರಿಯಾಧಾತುವಾಗಿರಲು ಸಾಧ್ಯವಿಲ್ಲ. ಅದೇನೋ ಬೇರೆ ರೂಪದಲ್ಲಿರಬಹುದು ಅನ್ನಿಸುತ್ತೆ. ಬಹುಶಃ ಆ ಕಾರಣಕ್ಕಾಗಿಯೇ ನಮಗೆ ಬಾಟ ಅನ್ನೋ ರೂಪ ಎಲ್ಲೂ ಕಂಡುಬರೋದಿಲ್ಲ. ಈ ಬಗ್ಗೆ ನಾನು ಅಧಿಕೃತವಾಗಿ ಮಾತನಾಡಲು ತಕ್ಕವನಲ್ಲ. ಬಲ್ಲವರು ಯಾರಾದರೂ ಹೇಳಿದರೆ ಒಳ್ಳೆಯದು.

ಪ್ರೀತಿಯಿಂದ
ಸಿ ಮರಿಜೋಸೆಫ್