ಊರಿನ ಹೆಸರುಗಳಲ್ಲಿ ಬೞಕೆಯಾಗುವ ಪದಗಳು

3

ಊರಿಗೆ ಒಂದು ಹೆಸರು ಬರುವುದೇ ಒಂದು ವಿಶೇಷ. ಮನುಷ್ಯ ಎಲ್ಲವಕ್ಕೂ ಹೆಸರಿಡುತ್ತಾನೆ. ಊರಿನ ಹೆಸರುಗಳ ವಿಶೇಷತೆ ನೋಡೋಣ. ಊರುಗಳ ಹೆಸರುಗಳ ಜೊತೆ ಊರ್(ಊರು), ಹಳ್ಳಿ, ಪುರ, ನಗರ, ಹೊೞಲ್(ಹೊೞಲು), ಪೇಟೆ, ಪಟ್ಟಣ, ಗ್ರಾಮ, ಗಾವ, ಗಾವಿ, ಗಾಂವಿ, ಬೆಟ್ಟ, ಕುಂದ, ಗಿರಿ, ಕೆಱೆ, ಸಾಗರ, ಕೊಪ್ಪ, ಕೊಪ್ಪಲ್, ಪಾಡಿ(ಹಾಡಿ), ಸಂತೆ, ದುರ್ಗ, ಕೋಟೆ ಇತ್ಯಾದಿ ಸೇರುವುದು ವಿಶೇಷ. ಕೆಲವು ಊರುಗಳ ವಿಶೇಷತೆ ನೋಡೋಣ.
ಸೋಮವಾರಪೇಟೆ, ಶನಿವಾರಸಂತೆ: ಈ ಊರುಗಳಲ್ಲಿ ಸಂತೆ ಕ್ರಮವಾಗಿ, ಸೋಮವಾರ ಹಾಗೂ ಶನಿವಾರಗಳಲ್ಲಿ.
ನರಗುಂದ, ನವಲಗುಂದ, ಕುಂದ= ಇವು ನರಿಗುಂದ, ನವಿಲಗುಂದ ಮತ್ತು ಕುಂದ ಈ ಊರುಗಳಲ್ಲಿ ಕುಂದ=ಬೆಟ್ಟಗಳಿವೆ. ಹಿಂದೆ ನರಗುಂದ ಮತ್ತು ನವಲುಗುಂದದ ಬೆಟ್ಟಗಳಲ್ಲಿ ನರಿ ಮತ್ತು ನವಿಲುಗಳಿದ್ದವೇನೋ?
ಶ್ರೀರಂಗಪಟ್ಟಣ, ಬಸವಾಪಟ್ಟಣ.
ದಾವಣಗೆಱೆ, ಸಿರಿಗೆಱೆ, ಅರಸೀಕೆಱೆ, ಕೊರಟಗೆಱೆ, ಮೂಡಿಗೆಱೆ, ಅಱಕೆಱೆ, ಹೊೞಲ್ಕೆಱೆ : ಪ್ರಾಯಶಃ ಈ ಊರುಗಳಲ್ಲಿದ್ದ ಪ್ರಮುಖ ಕೆಱೆಗಳಿಂದಾಗಿ ಈ ಹೆಸರುಗಳು
ಚಿತ್ರದುರ್ಗ, ಹೊಸದುರ್ಗ: ಕೋಟೆಗಳಿರುವುದಱಿಂದ ಈ ಹೆಸರು
ಹನುಮಸಾಗರ, ಭರಮಸಾಗರ, ಶಾಂತಿಸಾಗರ, ಸಾಗರ: ಕೆಱೆಗಳಿಂದ ಈ ಹೆಸರು. ಸಾಗರ ಪಟ್ಟಣದ ಕೆಱೆಯನ್ನು ಕೆಳದಿಯ ಪಾಳೆಯಗಾಱನಾಗಿದ್ದ ಸದಾಶಿವನಾಯಕ ಕಟ್ಟಿಸಿ ಅದನ್ನು ಸದಾಶಿವಸಾಗರನೆಂದು ಕರೆದನಂತೆ. ಜನರು ಊರಿನ ಹೆಸರು ದೊಡ್ಡದಾಯಿತೆಂದು ಸದಾಶಿವನನ್ನು ಬಿಟ್ಟು ಸಾಗರ ಮಾತ್ರ ಉೞಿಸಿಕೊಂಡರೆಂದು ನಂಬಿಕೆ. ಇನ್ನೂ ಊರಿನ ಹೆಸರುಗಳಲ್ಲಿ ವಿಶೇಷತೆಯಿರಬಹುದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹಾಗೆಯೇ, ದೊಡ್ಡ:ಚಿಕ್ಕ ಜೋಡಿ ಊರು ಹೆಸರುಗಳು
ದೊಡ್ಡಬಳ್ಳಪುರ, ಚಿಕ್ಕಬಳ್ಳಪುರ, ದೊಡ್ಡಾರಸಿನಕೆರೆ, ಚಿಕ್ಕಾರಸಿನಕೆರೆ, ದೊಡ್ಡಮಗಳೂರು, ಚಿಕ್ಕಮಗಳೂರು..

ಪ್ರತಿಕ್ರಿಯಿಸಿದ ಮರಿ ಜೋಸೆಫ್, ಕೇವೆಂ, ಹರಿಹರಪುರ ಶ್ರೀಧರ್, ಪವಿತ್ರ ಎಲ್ಲರಿಗೂ ಧನ್ಯವಾದಗಳು. ಇವುಗಳ ಜೊತೆಗೆ ಸರ ಎಂಬ ಪದ ಕೂಡ ಸಾಗರದ ಕಡೆ ಸೇರುತ್ತದೆ. ನೋಡಿ ಕೇಡಲಸರ, ಹೊನ್ನೆಸರ, ಮಾವಿನಸರ, ಮತ್ತಿಸರ ಇತ್ಯಾದಿ. ಗುಂಟೆ/ಕುಂಟೆ ನಿಮಗೆಲ್ಲ ಗೊತ್ತಿರುವಂತೆ ಭೂಮಿಯ ವಿಸ್ತೀರ್ಣದ ಒಂದು ಅಳತೆ ಅದನ್ನು ಊರಿನ ಹೆಸರಿನಲ್ಲಿ ಬೞಸುತ್ತಾರೆ. ಉದಾಹರಣೆಗೆ ಕೋಣನಕುಂಟೆ, ಅರಿಸಿನಕುಂಟೆ. ಪ್ರಾಯಶಃ ಇಲ್ಲೆಲ್ಲಾ ಕ್ರಮವಾಗಿ ಕೋಣಗಳನ್ನು ಕಟ್ಟಲು ವಿಸ್ತಾರವಾದ ಜಾಗ ಬೞಸುತ್ತಿದ್ದಿರಬಹುದು. ಹಾಗೆಯೇ ತುಂಬಾ ವಿಸ್ತಾರವಾದ ಪ್ರದೇಶದಲ್ಲಿ ಅರಿಸಿನವನ್ನು ಬೆಳೆಸುತ್ತಿದ್ದಿರಬಹುದು. ಹಾಗೆಯೇ ಗುಂಡಿ, ಮಕ್ಕಿ ಇತ್ಯಾದಿ.

ಇಂದು ಸ್ಥಳನಾಮಪುರಾಣ ಅನ್ನೋದೇ ಒಂದು ಅಧ್ಯಯನದ ವಿಷಯವಾಗಿದೆ.ಬೆಂಗಳೂರು ಸಿಟಿ ರೈಲುನಿಲ್ದಾಣದ ಎದುರಿನ ಬಸ್ ಸ್ಟ್ಯಾಂಡ್ ಇದೆಯಲ್ಲ ಅದು ಮೊದಲು ಒಂದು ಕೆರೆಯಾಗಿತ್ತು. ನೀವು ಕೆ ವಿ ಅಯ್ಯರ‍್ ಅವರ ಬರಹಳನ್ನು ಓದಿದರೆ ಆ ಪರಿಸರದ ಒಂದು ನೋಟ ಸಿಗುತ್ತದೆ. ಆ ಕೆರೆಗೆ ಧರ್ಮಾಂಬುಧಿ ಕೆರೆ ಅನ್ತ ಹೆಸರಿತ್ತು. ಜನಪದರ ಬಾಯಲ್ಲಿ ಅದು ದರುಮಾಪುರಿ ಕೆರೆ ಅಂತಲೂ ಅನ್ನಿಸಿಕೊಳ್ತಾ ಇತ್ತು. ಮುಂದೆ ಅದು ದೊಡ್ಡ ಬಸ್ ನಿಲ್ದಾಣವಾಗಿ ಬಸ್ಸುಗಳ ಮೂಲಕ ಬೆಂಗಳೂರಿಗೆ ಹೊಸ ನೀರು ಹರಿದುಬಂದು ಹೊಸ ಹೊಸ ಸಿದ್ಧಾಂತಗಳೂ ತರ್ಕಗಳೂ ವಾದಗಳೂ ಮೈದಳೆದು ಬೆಂಗಳೂರಿನ ಎ‌ಲ್ಲೆಡೆಗಳ ಹಳೇ ಹೆಸರುಗಳ ಜಾಗದಲ್ಲಿ ’ಒಸಾ’ ಹೆಸರುಗಳು ಬಂದವು.
ಯಾವ ಜನ ತಮ್ಮ ಊರಿಗೆ ತಲತಲಾಂತರದಿಂದಲೂ ’ಸೂಳೆಕೆರೆ’ ಅನ್ನೋ ಹೆಸರಿದೆ. ಅದರೊಂದಿಗೆ ನಮ್ಮ ಭಾವನಾತ್ಮಕ ಸಂಬಂಧವಿದೆ. ಅದನ್ನು ಯಾರೇ ಆಗಲೀ ’ಶಾಂತಿಸಾಗರ’ ಅಂತ ಬದಲಾಯಿಸಬಾರದು ಅಂತ ಉಗ್ರ ಓರಾಟ ಮಾಡಿದರೋ ಅದೇ ಜನ ಬೆಂಗಳೂರಿನ ಬಡಾವಣೆಗಳಿಗೆ ಬೇರೆಬೇರೆ ನಾಮ ಹಾಕಿದರು.

ಪ್ರೀತಿಯಿಂದ
ಸಿ ಮರಿಜೋಸೆಫ್

ಅನಂತ ಕೃಷ್ಣರವರೇ

ನನ್ನ ಕೋರಿಕೆ ಹಾಗೇ ಮಾಯಸಂದ್ರ, ಭೂಪಸಂದ್ರ, ಅಮ್ಮಸಂದ್ರ, ಬ್ಯೆರಸಂದ್ರ, ದೊಡ್ಡಸಂದ್ರಗಳಲ್ಲಿ ಸಂದ್ರ ಅಂದ್ರ ಏನು ಅಂತಾ ತಿಳಿಸಿಕೊಡಿ.

ಅರವಿಂದ್

ಶಿವನು ಈ ಊರಿನ ಕಲ್ಲು ಬಂಡೆಗಳ ಮೇಲೆ ನರ್ತಿಸಿದ್ದನಂತೆ!
ಹಾಗಾಗಿ 'ನರ್ತನ ಶಿಲಾಪುರಿ' ಯೆಂಬ ಈ ಊರಿನ ಹೆಸರು ಇಂದು ಆಡು ಭಾಷೆಯಲ್ಲಿ ರೂಪಾಂತರಗೊಂಡು 'ಕುಣಿಗಲ್' ಆಗಿದೆ.

ಅಂದ ಹಾಗೇ 'ಕಲ್' ಅಥವಾ 'ಗಲ್' ನೊಂದಿಗೆ ಬೆಸೆದುಕೊಂಡಿರುವ ಕೆಲ ಊರುಗಳನ್ನು ಹೆಸರಿಸಬಹುದಾದಲ್ಲಿ ಹಾನಗಲ್, ದಿಂಡಿಗಲ್, ಹೊಗೇನಕಲ್, ಗುಂತಕಲ್ ಹೀಗೆ......
ಅನ್ಯ ರಾಜ್ಯಗಳ ಊರುಗಳಲ್ಲಿನ 'ಕಲ್' ಅಥವಾ 'ಗಲ್' ಶಬ್ದದ ಅರ್ಥ ಏನೋ ಗೊತ್ತಿಲ್ಲ.

ಅಂದ ಹಾಗೇ 'ಕಲ್' ಅಥವಾ 'ಗಲ್' ನೊಂದಿಗೆ ಬೆಸೆದುಕೊಂಡಿರುವ ಕೆಲ ಊರುಗಳನ್ನು ಹೆಸರಿಸಬಹುದಾದಲ್ಲಿ ಹಾನಗಲ್, ದಿಂಡಿಗಲ್, ಹೊಗೇನಕಲ್, ಗುಂತಕಲ್ ಹೀಗೆ......
ಅನ್ಯ ರಾಜ್ಯಗಳ ಊರುಗಳಲ್ಲಿನ 'ಕಲ್' ಅಥವಾ 'ಗಲ್' ಶಬ್ದದ ಅರ್ಥ ಏನೋ ಗೊತ್ತಿಲ್ಲ.

ಪ್ರಾಯಶಃ ತೆಲುಗಿನ ಕಲ್ ಕೂಡ ಕನ್ನಡದ ಕಲ್ಲೇ ಆಗಿರಬೇಕು. ತೆಲುಗಿನಲ್ಲಿ ಮುಂದೆ ಕಲ್ಲು=ಕಳ್ಳು (ಹೆಂಡ) ಆಗುವುದಱಿಂದ ನಿಜವಾದ ಕಲ್ಲಿಗೆ ರಾಯಿ ಎಂದು ಹೇೞಲು ನಂತರ ಪ್ರಾರಂಭಿಸಿರಬೇಕು. ಯಾಕೆಂದರೆ ’ವಡಗಲ್ಲು=ಕಲ್ಲು, ರತ್ನ’ ಎಂಬರ್ಥದಲ್ಲಿ ಪದವಿದೆ.
Dravidian Etymological Dictionaryಯಲ್ಲಿ ತೆಲುಗಿನಲ್ಲಿ ಕಲ್ಲು=ಕನ್ನಡದ ಕಲ್ಲು ಎಂದೇ ಅರ್ಥದಲ್ಲಿ ಬೞಸಿರುವುದಕ್ಕೆ ಉದಾಹರಣೆ ಈ ಕೆೞಗಿನಂತಿದೆ.

stone. Tu. kallů id. Te. kallu (pl. kanḍlu) id. Nk. khalbada stone slab for pounding. Pa. kel stone. Ga. (Oll.) kanḍ, (S.) kanḍu (pl. kanḍkil) id. Go. (Mu. M.) kal (obl. kad-, pl. kalk), (G.) kall(i) (pl. kalku), (Ma.) kalu id. (Voc. 585). Konḍa kalu id. Pe. kal (pl. -ku) id. Br. xal id., boulder. DED(S) 1091.

ಸಂದ್ರ=ಸಂತೆ, ಗುಂಪು ಇರಬಹುದು. ಕ್ಯಾತಸಂದ್ರ, ದೊಮ್ಮಸಂದ್ರ ಕ್ಯಾತ=ಓತಿಕ್ಯಾತ ದೊಮ್ಮ=ದೋಮೆ=ಸೊಳ್ಳೆ ಇರಬಹುದು. ಸಮುದ್ರ ಎನ್ನುವುದನ್ನೇ ಸಮ್‍ದ್ರ ಎಂದು ಅದನ್ನು ಕೊನೆಗೆ ಸಂದ್ರ ಎಂದಿರಲಿಕ್ಕೂ ಸಾಧ್ಯವಿದೆ. ಇದು ನನ್ನ ವಿಶ್ಲೇಷಣೆಯಷ್ಟೆ.

ಹಾಲಾಡಿ,ಚೋರಾಡಿ,ಹೇರಾಡಿ,ಹಾರಾಡಿ,ಎಡ್ತಾಡಿ,ತಂತ್ರಾಡಿ, ತಗ್ಗಿನಬೈಲು,ಆಮಾವಾಸ್ಯ ಬೈಲು,ಹುಣಸೆ ಬೈಲು, ಹೇರೂರು,ಶಿರೂರು,ಆಲೂರು, ಅಂಬಲ್ ಪಾಡಿ,ಬೈಕಂಪಾಡಿ, ಬಿದ್ ಕಲ್ ಕಟ್ಟೆ,ಮಾರನ್ ಕಟ್ಟೆ,ಸೈಬರ್ ಕಟ್ಟೆ,ನೇರಳೆ ಕಟ್ಟೆ,ಮಾವಿನ ಕಟ್ಟೆ,ಸುರ್ಗಿಕಟ್ಟೆ,ರಂಗನ್ ಕಟ್ಟೆ,..... ;)

ದಾವಣಗೆರೆ ಗೆ ಮದಕರಿ ನಾಯಕನ ಕಾಲದಲ್ಲಿ ದೇವನಗರಿ ಎನ್ನುತ್ತಿದ್ದರು ಎಂಬ ಐತಿಹ್ಯವಿದೆ. ದವನದ ಹೂವುಗಳ ಆಕರವಾಗಿದ್ದರಿಂದ ದವನಗಿರಿ ಎನ್ನುತ್ತಿದ್ದರು ಎಂಬುದಕ್ಕೂ ದಾಖಲೆಗಳು ಲಭ್ಯವಿವೆ. ಈ ಹೆಸರುಗಳ ಅಪಭ್ರಂಶ ದಾವಣಗೆರೆ ಎಂದು ಹೇಳುತ್ತಾರೆ. ಅಲ್ಲದೇ ದಾವಣಗೆರೆಯ ಸುತ್ತಹೊಂದಿಕೊಂಡಂತೆ ಯಾವ ಕೆರೆಯೂ ಇಲ್ಲ.

ಮಂಡಿಕಲ್ಲು, ಗುಡಿಬಂಡೆ, (ಹೆಸರೇಕೆ ಬಂತೆಂದು ನನಗೆ ತಿಳಿಯದು ಆದರೂ ಎರಡೂ ಊರು "ಚಿಕ್ಕಬಳ್ಳಾಪುರ' ಜಿಲ್ಲೆಯಲ್ಲಿ ಬರುತ್ತವೆ) ದಿಬ್ಬೂರುಹಳ್ಳಿ , ಹಳ್ಳಿ ಮೈಸೂರು, ( ಊರು ಹಳ್ಳಿ ಎರಡನ್ನೂ ಸೂಚಿಸುತ್ತೆ. )

ಮಂಡಿಕಲ್ಲು= ಹತ್ತಿರದಲ್ಲಿ ಮಂಡಿ(ಮೞಿಗೆ, Shop) ಒಂದಿದ್ದು ಅಲ್ಲಿಗೆ ಸರಿಯಾಗಿ ಒಂದು ಮೈಲುಗಲ್ಲು ಇರಬಹುದೇನೋ? ಗುಡಿಬಂಡೆ= ದೊಡ್ಡ ಕಲ್ಲು ಬಂಡೆಯ ಬೞಿಯಿರುವ ಅಥವಾ ದೊಡ್ಡ ಬಂಡೆಯಲ್ಲೇ ಕೆತ್ತಿದ ಗುಡಿಯಿರಬಹುದೇನೋ? ದಿಬ್ಬೂರು=ದಿಬ್ಬ ಅಥವಾ ಸಣ್ಣ ಬೆಟ್ಟ ಇರುವ ಹಳ್ಳಿ.

ಕನ್ನಡಕಂದ ಅವರೆ, ನಿಮ್ಮ ಈ thread ಸ್ವಾರಸ್ಯವಾಗಿದೆ. ಸಮುದ್ರ ’ಸಂದ್ರ’ ಆಗಿದೆ ಎಂದೂ ಕೇಳಿದ್ದೇನೆ... ಆದರೆ ಎಷ್ಟು ನಿಜವೋ ಗೊತ್ತಿಲ್ಲ. ನಿಮ್ಮ ಲಿಷ್ಟಿಗೆ ’ವರ’ಅಂತ್ಯದ ಬಾಣಾವರ, ಬ್ರಹ್ಮಾವರ, ಚಂದಾವರ, ನಾಗಾವರ ಇತ್ಯಾದಿ, 'ಘಟ್ಟ’ ಅಂತ್ಯದ ಬನ್ನೇರುಘಟ್ಟ, ಹೆಸರುಘಟ್ಟ ಇತ್ಯಾದಿ, ’ಪೇಟೆ’ ಕೊನೆಯ ಹೊಸಪೇಟೆ, ಗುಂಡ್ಲುಪೇಟೆ ಇತ್ಯಾದಿಗಳನ್ನು ಸೇರಿಸಕೊಳ್ಳಬಹುದು. ಬೆಂಗಳೂರಿನ ಮಟ್ಟಿಗೆ ಹೇಳಬೇಕಾದರೆ...ಅವೆಲ್ಲಕ್ಕಿಂತ ಲೇಔಟ್, ಬ್ಲಾಕ್, ಗಾರ್ಡನ್, ಎಕ್ಸ್‌ಟೆಂಷನ್, ಕಾಂಪೌಂಡ್, ಪಾರ್ಕ್, ಕಾಲೋನಿ, ಟೌನ್, ಪಾಳ್ಯ, ಪುರ, ನಗರ... ಇವನ್ನು ಶಾಲಾ ಮಕ್ಕಳ ಹೆಸರಿನ (ಶಾಂತಿ, ಭಾರತಿ, ಇಂದಿರಾ, ಸಂಜಯ, ರಾಜೀವ್, ರಾಹುಲ) ಕೊನೆಗೆ ಜೊತೆಗೆ ಸೇರಿಸಿ ಮಾಡುವ/ಮಾಡಿರುವ ಬೆಂಗಳೂರಿನ ಹೆಸರುಗಳು ಎಷ್ಟೋ ವಾಸಿ ಅಲ್ಲವೇ! ;-) ಬೆಂಗಳೂರಿನಲ್ಲಿ ’ಮೊಹಲ್ಲಾ’ ಇದ್ದಂತೆ ಕಾಣಲಿಲ್ಲ. ಬೆಂಗಳೂರಿನ ವಿಚಿತ್ರ ಹೆಸರುಗಳಲ್ಲಿ ಒಂದು ‘ಜೀವನ್ ಭೀಮಾ ನಗರ್’. insurance ’ವಿಮಾ’ ಹೋಗಿ ’ಬಿಮಾ’ ಆಗಿ, ’ಬಿಮಾ’ ’ಭೀಮಾ’ ಆಗಿದೆ ಎನಿಸುತ್ತದೆ. ಯಾವುದೇ suffixಗಳಿಲ್ಲದ ಮಲ್ಲೇಶ್ವರ, ವೈಯಾಳಿಕಾವಲ್, ಮಾಗಡಿ, ಹೆಬ್ಬಾಳ, ಯಲಹಂಕ, ಬಸವನಗುಡಿ, ಬನಶಂಕರಿ, ಕೋರಮಂಗಲ, ಆಡುಗೋಡಿ ಇಂತಹವು ಬಹಳ ಕಮ್ಮಿ ಆಗಿವೆ. ವೈಯಾಳಿಕಾವಲ್ ಹಿಂದೆ ಯಾವಗಲೋ ವೈಹಾಳಿ ನಡೆಯುತ್ತಿದ್ದ ಕಾವಲು ಆಗಿರಬಹುದೆ? ಈ ಕೆಳಗಿನ ಮ್ಯಾಪಿನ ಪ್ರಕಾರ http://upload.wikime... ಉತ್ತರಕ್ಕೆ ಮಲ್ಲೇಶ್ವರ, ದಕ್ಷಿಣಕ್ಕೆ ಚಾಮರಾಜಪೇಟೆ ಮತ್ತು ಬಸವನಗುಡಿ. ನಡುವೆ ಪೇಟೆಗಳ downtown... ಹಳೆಯ ಬೆಂಗಳೂರಿನ civil ವಿಭಾಗ. ರಾ.ಶಿ.ಯವರ ‘ಕೈಲಾಸಂ ಮತ್ತು ನಾನು’ ಪುಸ್ತಕದಲ್ಲಿರುವ ೩೦, ೪೦ರ ದಶಕದ ಬೆಂಗಳೂರಿನ ಕೆಲವು ಸ್ಥಳೀಯ ವಿವರಗಳು ಆಸಕ್ತರಿಗೆ ಹಿಡಿಸಬಹುದು. ಮೈಸೂರಿನ ಅಂತಹ, ಆದರೆ ಇನ್ನೂ ಹಳೆಯ, ಸ್ಥಳೀಯ ವಿವರಗಳು ಕೆ. ವಾಸುದೇವಾಚಾರ್ಯರ ‘ನನ್ನ ನೆನಪುಗಳು’ ಪುಸ್ತಕದಲ್ಲಿವೆ. ಪ್ರಭು

ವರ ಅಲ್ಲ. ಆವಾರ‌=ಸ್ಥಳ. ಹೆಚ್ಚು ದೀರ್ಘಸ್ವರಗಳು ಇದ್ದರೆ ಕೆಲವು ಹ್ರಸ್ವವಾಗುವುದು ಕನ್ನಡದ ಜಾಯಮಾನ ಉದಾಹರಣೆ ಸಮಾಧಾನ=ಸಮಧಾನ, ಅನಾಹೂತ=ಅನಾಹುತ ಇತ್ಯಾದಿ ಬಾಣಾವಾರ, ಬ್ರಹ್ಮಾವಾರ, ಹೊನ್ನಾವಾರಗಳು ಬಾಣಾವರ, ಬ್ರಹ್ಮಾವರ, ಹೊನ್ನಾವರಗಳಾಗಿರಬೇಕು.

ಇಲ್ಲ. ಮಂಡಿಕಲ್ಲಿನ ಬಳಿ ಯಾವುದೋ ಮಂಡಿ ನಡೆಯುತ್ತಿದ್ದ ಕುರುಹೂ ಈಗಿಲ್ಲ್. ಪೆರೇಸಂದ್ರ ಮತ್ತು ಗುಡಿಬಂಡೆ ಪಾಳೇಪಟ್ಟುಗಳ ಗಡಿ ಭಾಗದ ಹಳ್ಳಿಯದು. ಗುಡಿಬಂಡೆಯಲ್ಲಿ ಅಂಥಾ ಗುಡಿ ಯಾವುದೂ ಕಾಣಲಿಲ್ಲ.

@ ಶ್ರೀಹರ್ಷ ಸಾಲಿಮಠ <<< ಅಲ್ಲದೇ ದಾವಣಗೆರೆಯ ಸುತ್ತಹೊಂದಿಕೊಂಡಂತೆ ಯಾವ ಕೆರೆಯೂ ಇಲ್ಲ.>>> ಸಣ್ಣ ತಿದ್ದುಪಡಿ. ಇಲ್ಲಿ ನೋಡಿ. http://wgbis.ces.iis... There are three major lakes in and around Davangere City. These are Bathi Lake, Kundawada Lake and Avaragere Lake. Because of entry of city sewage and agricultural run off, all of these lakes are polluted and the water has become unfit for drinking. A study has been conducted on Kundawada Lake from April 2004 to March 2006. ......Accordingly the lake has been restored and is being used as drinking source for Davangere City.

ನಮ್ಮ ಮಲೆನಾಡಿನಲ್ಲಿ ಒಂಟಿ ಮನೆಗಳಿಗೇ ಒಂದು ಊರು. ಆ ಊರಿಗೆ ಅದರದ್ದೇ ಆದ ಒಂದು ಹೆಸರು. ಆಗುಂಬೆ ಹೋಬಳಿಯ ಕೆಲವು ಊರುಗಳ ಹೆಸರು ಹೇಳುತ್ತೇನೆ : ಇಳಿಮನೆ, ಹಸಿರುಮನೆ, ಕಾರೆಮನೆ, ಅವರೇಮನೆ, ಅಸೀಮನೆ, ಸಣ್ಣಮನೆ, ಪುಟ್ಟಮನೆ, ಸವಿತ್ರಿಮನೆ.......