ನಮ್ಮ ಜೀವನದಲ್ಲಿ ನಾವು ಒಮ್ಮೆಯಾದರೂ ಓದಲೇ ಬೇಕಾದ ಆ ಒಂದು ಪುಸ್ತಕ ಯಾವುದು.....?ಯಾಕೆ.....?

2.714285

ನಮ್ಮ ಜೀವನದಲ್ಲಿ ನಾವು ಒಮ್ಮೆಯಾದರೂ ಓದಲೇ ಬೇಕಾದ ಆ ಒಂದು ಪುಸ್ತಕ ಯಾವುದು.....?ಯಾಕೆ.....?

namma jIwanadalli naawu ommeyaadarU OdalE bEkaada aa oMdu pustaka yaawudu.....?yaake.....?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಓಶೋ ರವರ "ಸಂಭೋಗದಿಂದ ಸಮಾಧಿಯೆಡೆಗೆ" ಎಂಬ ಅದ್ಭುತ ಜೀವನ ಮಾರ್ಗದರ್ಶಿ.... ಈ ಪುಸ್ತಕದಲ್ಲಿ ಓಶೋ ಮಂಡಿಸುವಂತೆ ’ಯೌವ್ವನದಲ್ಲೇ ಮುಪ್ಪನ್ನನುಭಿಸುತ್ತಿರುವ, ಮುಪ್ಪಿನಲ್ಲಿಯೂ ನೈಜ ಯೌವ್ವನ ಕಾಣುತ್ತಿರುವ’ ಜೀವನದ ಎರಡು ವಿಶಿಷ್ಟ ಹಾಗೂ ವಿಚಿತ್ರ ಮಗ್ಗಲುಗಳ ಅಥವಾ ವ್ಯಕ್ತಿತ್ವಗಳ ಪರಾಮರ್ಶಿಕೆಯಂತೂ ಅದ್ಭುತ. ಯೌವ್ವನವೆಂಬ ಅಮೂಲ್ಯ ಕ್ಷಣಗಳನ್ನು ನಮಗೆ ಅರಿವಿದ್ದೋ ಅರಿವಿಲ್ಲದೆಯೋ ನಾವು ಹೇಗೆ ಕೈ ಚೆಲ್ಲುತ್ತಾ ಕುಳಿತಿದ್ದೇವೆ, ಮುಪ್ಪಿನಲ್ಲಿ ನಾ ಹಾಗೆ ಮಾಡಬೇಕಿತ್ತು.. ಅಲ್ಲಲ್ಲಾ ಹೀಗೆ ಮಾಡಬೇಕಿತ್ತು.. ಎಂಬ ಪಶ್ಚಾತ್ತಾಪಗಳ ಯೋಚನೆಯ ಬದಲು ಈ ಅಮೂಲ್ಯ ಕ್ಷಣಗಳನ್ನು ಅಂದೇ ಹೇಗೆ ಸದುಪಯೋಗಪಡಿಸಿಕೊಳ್ಳಬೇಕೆಂಬ ನಿರ್ದೇಶನಕ್ಕಾದರೂ ಈ ಪುಸ್ತಕವನ್ನು ಓದುವುದು ಅದರಲ್ಲೂ ಯುವಕ/ತಿಯರು ಓದುವುದು ಅವಶ್ಯ. ಏನಿದು, ಹೆಸರಿನಲ್ಲೇ ಅಶ್ಲೀಲವಿದೆಯಲ್ಲ! ಎಂದು ಅನೇಕರು ಮೂತಿ ತಿರುಗಿಸಿದ್ದನ್ನೂ ನೋಡಿದ್ದೇನೆ. ಪುಸ್ತಕದ ಒಳಹೊಕ್ಕು ನೋಡಿದರೆ ಮಾತ್ರ ಅದರಲ್ಲಿನ ತಿರುಳು ನಮ್ಮ ಜೀವನದ ಸತ್ಯಾಸತ್ಯತೆಗಳನ್ನು ಹೇಗೆ ಪ್ರತಿಬಿಂಬಿಸುತ್ತಿದೆಯೆಂದು ಅರಿವಾಗುವುದು. ಹಾಗೆ ನೋಡಿದರೆ ಓಶೋರವರ ಅನೇಕ ಅದ್ಭುತ ಪುಸ್ತಕಗಳನ್ನು ಹೆಸರಿಸಬಹುದು. ನನ್ನ ಪ್ರಕಾರ ಪ್ರತಿಯೊಬ್ಬರೂ ಕನಿಷ್ಟ ಒಮ್ಮೆಯಾದರೂ ಓದಬೇಕಾದ ಪುಸ್ತಕವಿದು.

”ಯೋಗಿಯ ಆತ್ಮಕಥೆ", "ಹಿಮಾಲಯದ ಮಹಾತ್ಮರ ಸನ್ನಿಧಿಯಲ್ಲಿ" ಹಾಗೂ "ಯೇಗ್ದಾಗೆಲ್ಲಾ ಐತಿ" ಪುಸ್ತಕಗಳು ತನ್ನದೇ ಆದ ವಿಶಿಷ್ಟ ರೀತಿಯ ಹಾಗೂ ಆಧ್ಯಾತ್ಮ ಚಿಂತನೆಗೆ ದಿಕ್ಕು ತೋರಿಸುವ ಮಹಾನ್ ಕೃತಿಗಳೇ.

ಈ ವಯಸ್ಸಿನಲ್ಲಿ ಯೋಗಿ, ಹಿಮಾಲಯ ಅಂತೆಲ್ಲ ಓದಿದರೆ ಆಮೇಲೆ ಮಟ ಹತ್ತೊದ್ರಲ್ಲಿ ಅನುಮಾನವೇ ಇಲ್ಲ ,ಅದಕ್ಕೆಲ್ಲ ಇನ್ನು ಟೈಮ್ ಇದೆ ಕಣ್ರೀ. ರೂಪ ಅವರು ಹೇಳ್ದಂಗೆ ಎಸ್ಸ್.ಎಲ್ ಭೈರಪ್ಪ ನವರ "ಆವರಣ" ಓದಿ ತುಂಬಾ ಚೆನ್ನಾಗಿದೆ , ಇತಿಹಾಸ ಮತ್ತು ಇತಿಹಾಸಕಾರ ಇಬ್ಬರನ್ನೂ "ಆವರಣ"ವು ಒಳಗೊಳ್ಳುತ್ತದೆ . ಇತಿಹಾಸಕಾರನೆ ಇತಿಹಾಸವನ್ನು ಕಾಣುವ ಕಣ್ಣಿಗೆ ಅಡ್ಡ ನಿಂತರೆ ಗತಿ ಏನು? "ಆವರಣ ಓದಿ . ಆಮೇಲೆ, ತ.ರಾ.ಸು ಅವರ ಚಿತ್ರದುರ್ಗದ ಇತಿಹಾಸಕ್ಕೆ ಸಂಬಂಧಿಸಿದ ಕಾದಂಬರಿಗಳು: ೧.ಕಂಬನಿಯ ಕುಯಿಲು , ೨. ರಕ್ತ ರಾತ್ರಿ , ೩.ತಿರುಗುಬಾಣ , ೪.ಹೊಸ ಹಗಲು, ೫.ವಿಜಯೋತ್ಸವ ,೬.ರಾಜ್ಯ ದಾಹ, ೭.ಕಸ್ತೂರಿ ಕಂಕಣ, ೮.ದುರ್ಗಾಸ್ತಮಾನ , ಇದೆಲ್ಲ ೪ ತಿಂಗಳು ಕೆಳಗೆ ಸಪ್ನಾ ಬುಕ್ ಹೌಸ್ ನಿಂದ ತಂದು ಓದಿದ್ದು ಸ್ವಾಮಿ, ಆಮೇಲೆ, ದೇವುಡು ಅವರ ಮಹಾ ಕ್ಷತ್ರಿಯ , ಮಹಾ ಬ್ರಾಹ್ಮಣ ತುಂಬಾ ಚೆನ್ನಾಗಿದೆ , ಹೀಗೆ ಪಟ್ಟಿ ಮಾಡ್ತಾ ಹೋದ್ರೆ ತುಂಬಾ ಇದೆ ಕಣ್ರೀ, ನಮ್ ಕನ್ನಡ ಸಾಹಿತಿಗಳ ಸಾಧನೆ ಬಹಳ ದೊಡ್ಡದು , ಹಾಗೆ ವಾಚಕರಾಗಿ ನಾವು ಕನ್ನಡ ಸಾಹಿತಿಗಳ ಕಾದಂಬರಿಗಳನ್ನೇ ಓದಬೇಕು..

ಸಮಯ ಸಿಕ್ಕರೆ ಹುಡುಕಿ "ಭಾರತಿರಾಜಾ"ರವರು ಚೀನೀ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡಿರುವ "ನಿರ್ದೋಷಿಗಳ ಪಲಾಯನ" ಒಮ್ಮೆ ಓದಿ, ಮಾವೋತ್ಸೆ ತುಂಗನ ಭೀಕರ ದುರಾಡಳಿತದಲ್ಲಿ ನೊಂದು ನಲುಗಿ, ಚೀನಾದಿಂದ ಅಂದು ಬ್ರಿಟಿಷರ ಆಳ್ವಿಕೆಯಲ್ಲಿದ್ದ ಹಾಂಗಕಾಂಗಿಗೆ ಪಲಾಯನ ಮಾಡಿದ ಹಲವು ಕುಟುಂಬಗಳ ಕಥೆ, ವ್ಯಥೆಗಳನ್ನು ಮನ ಮುಟ್ಟುವಂತೆ ಚಿತ್ರಿಸಿದ್ದಾರೆ. ಇದು ಇಂದಿಗೂ ನನ್ನ ನೆನಪಿನಲ್ಲುಳಿದಿರುವ ಮರೆಯಲಾಗದ ಕಾದಂಬರಿ. ಇನ್ನು ಕನ್ನಡಕ್ಕೆ ಬಂದರೆ ದಿವಂಗತ ತರಾಸುರವರ "ದುರ್ಗಾಸ್ತಮಾನ" ಹಾಗೂ ಕೆವಿಅಯ್ಯರ್ ರವರು ಬರೆದಿರುವ "ಶಾಂತಲಾ" ಮರೆಯಲಾಗದಂಥ ನೆನಪನ್ನು ಒತ್ತಿವೆ. ಕುವೆಂಪುರವರ "ಮಲೆಗಳಲ್ಲಿ ಮದುಮಗಳು", ಶಿವರಾಮ ಕಾರಂತರ "ಮೂಕಜ್ಜಿಯ ಕನಸುಗಳು", ಭೈರಪ್ಪನವರ "ಆವರಣ",ಶ್ರೀನಿವಾಸರ "ಚಿಕ್ಕವೀರರಾಜೇಂದ್ರ", ಗೊರೂರು ರಾಮಸ್ವಾಮಿ ಐಯ್ಯಂಗಾರರ ಅಕ್ಕಿ ಹೆಬ್ಬಾಳಿನ ಕಾವೇರಿಯ ಕಲರವವನ್ನು ನೆನಪಿಸುವ ಕಥೆ-ಕಾದಂಬರಿಗಳು, ಒಂದೇ ಎರಡೇ, ಎಲ್ಲವೂ ಜೀವನದಲ್ಲಿ ಒಮ್ಮೆ ಓದಲೇಬೇಕಾದಂಥವು. ಕನ್ನಡ ಸಾಹಿತ್ಯ ತುಂಬಾ ಶ್ರೀಮಂತವಾಗಿದೆ. ಅದೆಷ್ಟು ಓದಿದರೂ ಮುಗಿಯದು.

ಮಂಜು ಅವರೇ, << "ಭಾರತಿರಾಜಾ"ರವರು ಚೀನೀ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡಿರುವ "ನಿರ್ದೋಷಿಗಳ ಪಲಾಯನ" >> ಈ ಪುಸ್ತಕ ದಯವಿಟ್ಟು ಎಲ್ಲಿ ಸಿಗುತ್ತೆಂತ ಹೇಳ್ತಿರ? ಇದನ್ನು ಒಮ್ಮೆ ಓದಬೇಕೆಂಬ ಆಸೆ ..

ಈ ಪುಸ್ತಕ ನನಗೆ ನನ್ನಪ್ಪನಿಂದ ದೊರೆತಿದ್ದ ಬಳುವಳಿ, ಅದನ್ನು ಹಲವಾರು ಬಾರಿ ಓದಿದ್ದೆ, ಆ ಊರು, ಈ ಊರು ಎಂದು ತಿರುಗಾಟದಲ್ಲಿ ಅದೆಲ್ಲಿ ಮಾಯವಾಯ್ತು ಅಂತ ಗೊತ್ತಿಲ್ಲ. ನನಗೆ ತಿಳಿದಿರುವಂತೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇದರ ಒಂದು ಪ್ರತಿ ಲಭ್ಯವಿದೆ. ಪ್ರಯತ್ನಿಸಿ ನೋಡಿ, ನಿಮಗೆ ಸಿಕ್ಕರೆ ದಯ ಮಾಡಿ ನನಗೂ ತಿಳಿಸಿ, ಮುಂದಿನ ಸಲ ಬೆಂಗಳೂರಿಗೆ ಬಂದಾಗ ಮರೆಯದೆ ಹೇಗಾದರೂ ಇದನ್ನು ಪಡೆಯುವ ಪ್ರಯತ್ನ ಮಾಡುತ್ತೇನೆ. ತುಂಬಾ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ.

ನನ್ನ ಆಯ್ಕೆಗಳು :- 'ನನ್ನ ಸತ್ಯಾನ್ವೇಷಣೆ' , 'ನನ್ನ ಭಯಾಗ್ರಫಿ' , 'ಕಾರ್ವಾಲೋ', 'ಚಿಕವೀರ ರಾಜೇಂದ್ರ' ಮತ್ತು 'ದೇವರು, ದೆವ್ವ, ವಿಜ್ಞಾನ'.

ಭೈರಪ್ಪನವರ ಎಲ್ಲಾ ಕಾದ೦ಬರಿಗಳು ನನಗಿಷ್ಟ ಪದೇ ಪದೇ ಓದಿದ ಪುಸ್ತಕ ’ದೂರ ಸರಿದವರು’ (ಅ೦ದಾಜು ಮುವತ್ತು ಬಾರಿ) ಪ್ರೀತಿಯ ತುತ್ತತುದಿಯನ್ನ ಅನಾವರಣಗೊಳಿಸಿದ್ದಾರೆ ತಾಯಿಯ ಪ್ರೇಮ ಬ೦ಧನದಿ೦ದ ಹೊರಬರಲಾಗದೆ ಚಡಪಡಿಸುವ ವಿನತೆ ಅವಳ ಮಾನಸಿಕ ದ್ವ೦ದ್ವ. ಬೌದ್ದಿಕ ಸಾಹಚರ್ಯವೇ ಸ೦ಸಾರಕ್ಕೆ ಬೇಕಾದುದು ಎ೦ದು ತಿಳಿದ ವಸ೦ತ ಮತ್ತು ಗೊ೦ದಲಗಳಿಗೊಳಗಾಗಿ ಉಮೆಯಿ೦ದ ದೂರಾದವನ ಚಿತ್ರಣ ಸೊಗಸಾಗಿ ಮೂಡಿ ಬ೦ದಿದೆ ಇಡೀ ಕಾದ೦ಬರಿಗೆ ನಾಯಕನ೦ತೆ ಕಾಣುವವನು ಸಚ್ಚಿದಾನ೦ದ (ವಾಸ್ತವವಾಗಿ ಇದರಲ್ಲಿ ನಾಯಕನಿಲ್ಲ ವಿನತೆಯೇ ಕಾದ೦ಬರಿಯ ನಾಯಕಳ೦ತೆ ಕಾಣುತ್ತಾಳೆ) ಹೇಳುತ್ತಾ ಹೋದ೦ತೆ ದೊಡ್ಡದಾಗುತ್ತದೆ.ಎಲ್ಲರೂ ಒಮ್ಮೆ ಓದಲೇಬೇಕಾದ್ ಪುಸ್ತಕ ಅ೦ದರೆ ತಪ್ಪಾಗಲಾರದು ನಮ್ಮನ್ನು ನಾವೇ ಆ ಪಾತ್ರಗಳಲ್ಲಿ ನೋಡಿಕೊಳ್ಳಬಹುದು "ಹಿಮಾಲಯನ್ ಬ್ಲ೦ಡರ್" ಬೆಳಗೆರೆಯವರ ಕಾದ೦ಬರಿ ತು೦ಬಾ ಇಷ್ಟಪಟ್ಟು ಓದಿದ್ದು ಕಾರ೦ತರ "ಮೈ ಮನಗಳ ಸುಳಿಯಲ್ಲಿ’ಅಳಿದ ಮೇಲೆ’ ಕೂಲ್ ಎನಿಸುವ೦ಥ ಆದರೆ ಚಿ೦ತನೆ ಹಚ್ಚುವ೦ಥ ಕಾದ೦ಬರಿಗಳು ಇನ್ನೂ ಇವೆ ಹರಿ

ತರಾಸುರವರ "ದುರ್ಗಾಸ್ತಮಾನ" ಕುವೆಂಪುರವರ "ಮಲೆಗಳಲ್ಲಿ ಮದುಮಗಳು,ಶ್ರೀ ರಾಮಾಯಣ ದರ್ಶನಂ " ಶಿವರಾಮ ಕಾರಂತರ "ಮೂಕಜ್ಜಿಯ ಕನಸುಗಳು,ಮರಳಿ ಮಣ್ಣಿಗೆ" ಭೈರಪ್ಪನವರ "ಆವರಣ,ಪರ್ವ" ತೇಜಸ್ವಿರವರ " ಕಾರ್ವಾಲೋ, ಜುಗಾರಿ ಕ್ರಾಸ್,ಚಿದಂಬರ ರಹಸ್ಯ " ಮಾಸ್ತಿ ವೆಂಕಟೇಶ ಐಯ್ಯಂಗಾರ್ "ಚಿಕ್ಕವೀರರಾಜೇಂದ್ರ"

<< "ಭಾರತಿರಾಜಾ"ರವರು ಚೀನೀ ಭಾಷೆಯಿಂದ ಕನ್ನಡಕ್ಕೆ ಅನುವಾದ ಮಾಡಿರುವ "ನಿರ್ದೋಷಿಗಳ ಪಲಾಯನ" >> ಈ ಪುಸ್ತಕ ದಯವಿಟ್ಟು ಎಲ್ಲಿ ಸಿಗುತ್ತೆಂತ ಹೇಳ್ತಿರ? ಇದನ್ನು ಒಮ್ಮೆ ಓದಬೇಕೆಂಬ ಆಸೆ ..

ಈ ಪುಸ್ತಕ ನನಗೆ ನನ್ನಪ್ಪನಿಂದ ದೊರೆತಿದ್ದ ಬಳುವಳಿ, ಅದನ್ನು ಹಲವಾರು ಬಾರಿ ಓದಿದ್ದೆ, ಆ ಊರು, ಈ ಊರು ಎಂದು ತಿರುಗಾಟದಲ್ಲಿ ಅದೆಲ್ಲಿ ಮಾಯವಾಯ್ತು ಅಂತ ಗೊತ್ತಿಲ್ಲ. ನನಗೆ ತಿಳಿದಿರುವಂತೆ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ಇದರ ಒಂದು ಪ್ರತಿ ಲಭ್ಯವಿದೆ. ಪ್ರಯತ್ನಿಸಿ ನೋಡಿ, ನಿಮಗೆ ಸಿಕ್ಕರೆ ದಯ ಮಾಡಿ ನನಗೂ ತಿಳಿಸಿ, ಮುಂದಿನ ಸಲ ಬೆಂಗಳೂರಿಗೆ ಬಂದಾಗ ಮರೆಯದೆ ಹೇಗಾದರೂ ಇದನ್ನು ಪಡೆಯುವ ಪ್ರಯತ್ನ ಮಾಡುತ್ತೇನೆ. ತುಂಬಾ ಚೆನ್ನಾಗಿ ಓದಿಸಿಕೊಂಡು ಹೋಗುತ್ತದೆ.

ಡಿ ವಿ ಜಿ ಯವರ ಮ೦ಕು ತಿಮ್ಮನ ಕಗ್ಗ. ನನ್ನ೦ತವರಿಗೆ ಅದು ಅರ್ಥವಾಗುವುದಿಲ್ಲ - ಹಾಗಿದಲ್ಲಿ ಕಗ್ಗದ ಪ್ರತಿ ಶ್ಲೋಕವನ್ನು ದಿವ೦ಗತ Dr.ವೆ೦ಕಟರಮಣನ್ ಅವರು ತಮ್ಮ "ಕಗ್ಗಕ್ಕೊ೦ದು ಕೈ ಪಿಡಿ" ಎ೦ಬ ಪುಸ್ತಕದಲ್ಲಿ ವಿವರಿಸಿದ್ದಾರೆ. ಮ೦ಕು ತಿಮ್ಮನ ಕಗ್ಗದಲ್ಲಿ ಜೀವನದ ಎಲ್ಲಾ ಪ್ರಶ್ನೆಗಳಿಗೆ ಉತ್ತರವಿದೆ. ಡಿವಿಜಿಯವರು ತಮ್ಮ ಎಲ್ಲಾ ಅನುಭವವದ ಸಾರ೦ಶವನ್ನು ಬರೆದಿದ್ದಾರೆ. ಕಗ್ಗವನ್ನು ಕನ್ನಡದ ಭಗವತ್ ಗೀತೆ ಎ೦ದು ಹೇಳುತ್ತಾರೆ.

ಮಾಸ್ತಿ ವೆಂಕಟೇಶ ಅಯ್ಯಂಗಾರರು ಮತ್ತು ಜಯಂತ ಕಾಯ್ಕಿಣಿಯವರು ಬರೆದ ಎಲ್ಲ ಕತೆಗಳನ್ನು ಒಂದು ಬಾರಿಯಾದರೂ ನಮ್ಮ ಜೀವನದಲ್ಲಿ ಓದಲೇಬೇಕು . ನಮ್ಮ ಜೀವನದ ಬಗ್ಗೆ ನಮ್ಮ ಧೋರಣೆಯನ್ನೇ ಬದಲಿಸುತ್ತವೆ ಈ ಬರಹಗಳು. ಅತಿ ಶ್ರೇಷ್ಠ ಮಟ್ಟದ ಹಾಸ್ಯ ಬೇಕೆಂದರೆ ಬೆಸ್ಟ್ ಆಫ್ ಅ.ರಾ.ಸೇ ಮತ್ತು ಬೆಸ್ಟ್ ಆಫ್ ಕೇ.ಫ ಓದಬೇಕು. ಒಳ್ಳೇ ರೋಮಾಂಚಕ ಸಾಹಿತ್ಯ ಬೇಕೆಂದರೆ ತೇಜಸ್ವಿಯವರ ಜುಗಾರಿಕ್ರಾಸ್. ಸಭ್ಯತೆಯ ಗಡಿಮೀರದ ಸರಸ ಸಾಹಿತ್ಯಕ್ಕೆ ಈಶ್ವರಯ್ಯ ಬರೆದ 'ಸರಸ' ( ಭಾಗ ೧ ಮತ್ತು ೨) ನೋಡಿ . ಮಾಸ್ತಿ ವೆಂಕಟೇಶ ಅಯ್ಯಂಗಾರ ಬರೆದ 'ಶ್ರೀರಾಮ ಪಟ್ಟಾಭಿಷೇಕ' ಕೂಡ ಓದಲೇಬೇಕು. ಇವಿಷ್ಟು ನನ್ನ ರಾಶಿ ರಾಶಿ ಓದಿನ ನಂತರ 'ಕಡೇಪಕ್ಷ ಇಷ್ಟನ್ನಾದರೂ ನೀವು ಓದಲೇಬೇಕು' ಎಂದು ಬಯಸುವ ಪುಸ್ತಕಗಳ ಪಟ್ಟಿ .

ಮಾಸ್ತಿಯವರ ಕಥೆಗಳಬಗ್ಗೆ ಬರೆಯಬೇಕೆನುವಾಗ ಅದೇ ಸಮಯಕ್ಕೇ ಶ್ರೀಕಾಂತ ಮಿಶ್ರಿಕೋಟಿ ಅವರೂ ಬರೆದಿದ್ದು ಅಚ್ಚರಿ! ಸಣ್ಣ ಕತೆಗಳಲ್ಲಿ ’ಗೌತಮಿ ಹೇಳಿದ ಕಥೆ’, ’ಮೊಸರಿನ ಮಂಗಮ್ಮ’ , ನೀಳ್ಗತೆಯಾದ ’ಸುಬ್ಬಣ್ಣ’ ತಟಕ್ಕೆಂದು ನೆನಪಿಗೆ ಬಂದವು. ಮಾಸ್ತಿಯವರ ಚೆನ್ನಬಸವನಾಯಕ ಕೂಡ ಓದಲೇಬೇಕಾದ ಪುಸ್ತಕ. ಇನ್ನೊಂದೆರಡು ಮರೆಯಲಾರದ ಪುಸ್ತಕಗಳೆಂದರೆ ನಾ ಡಿ’ಸೌಜರ ’ಕುಂಜಾಲು ಕಣಿವೆಯ ಕೆಂಪು ಹೂವು’, ಕೆಟಿಗಟ್ಟಿಯವರ ’ನಿರಂತರ’.

ಒಂದೇ ಪುಸ್ತಕದ ಬಗ್ಗೆ ಹೇಳಬೇಕೆ? ಕಷ್ಟ ಕಣ್ರೀ... ಅಗ್ನಿ ಶ್ರೀಧರರ ದಾದಾಗಿರಿಯ ದಿನಗಳು ನನ್ನನ್ನು ತುಂಬಾ ದಿನ ಕಾಡಿದ ಪುಸ್ತಕ, ಹಾಗೇ ಹಿಮಾಲಯನ್ ಬ್ಲಂಡರ್ (ಜಾನ್ ಪಿ ದಳವಿ ಮೂಲ) ರವಿಬೆಳಗೆರೆ ಅವರ ಅನುವಾದಿತ, ವಂಶವೃಕ್ಷ ಹಾಗು ಗೃಹಭಂಗ ಭೈರಪ್ಪನವರ ಕಾದಂಬರಿಗಳು ಇಷ್ಟವಾದವು.

‘ದಾದಾಗಿರಿಯ ದಿನಗಳು’ ಅಷ್ಟು ಕಾಡಿತೇ ನಿಮ್ಮನ್ನು? ಸಂಶಯವಿಲ್ಲ ಬಿಡಿ ;-) ನನಗೆ ನಾ ಓದುವ ಪ್ರತಿಯೊಂದು ಪುಸ್ತಕವೂ ಇಷ್ಟವಾಗುತ್ತದೆ. ಚಿಕ್ಕಂದಿನಲ್ಲಿ ಪತ್ತೇದಾರಿ, ಹೈಸ್ಕೂಲಿನಲ್ಲಿ ಯಂಡಮೂರಿ, ಕಾಲೇಜಿನಲ್ಲಿ ರವಿ ಬೆಳಗೆರೆ, ಬೈರಪ್ಪ, ಪೂರ್ಣಚಂದ್ರ ತೇಜಸ್ವಿ, ಹೀಗೆ ಲಿಸ್ಟ್ ಬಹು ದೊಡ್ಡದಿದೆ.