ವಿಧವಾ ವಿವಾಹ

2.333335

ಹಿಂದೆ ಬಾಲ್ಯ ವಿವಾಹ ಪದ್ಧತಿ ಇದ್ದ ಕಾಲದಲ್ಲಿ ಇನ್ನೂ ದೈಹಿಕ ಹಾಗು ಮಾನಸಿಕವಾಗಿ ಬೆಳೆದಿರದ ಪುಟ್ಟ ಹುಡುಗಿಯರಿಗೆ ತನ್ನ ಮದುವೆ ಯಾಕಾಯಿತು? ಹೇಗಾಯಿತು? ಒಂದೂ ತಿಳಿಯುತ್ತಿರಲಿಲ್ಲ. ಅಂತಹ ಪುಟ್ಟ ಬಾಲೆಯರಿಗೆ ತನ್ನ ಅಣ್ಣನೋ ಅಥವಾ ಅಪ್ಪನ ವಯಸ್ಸಿನವನನ್ನೋ ಮದುವೆಯಾದಾಗ ಯಾವ ಭಾವನೆಗಳೂ ಇರ್ತಾ ಇರಲಿಲ್ಲ. ಮುಖ್ಯವಾಗಿ ಮದುವೆ ಎಂದರೇನು? ಅಂತನೇ ಗೊತ್ತಿರದ ಮುಗ್ಧ ಮನಸಿನ ಮಕ್ಕಳವರು. ಅಂತಹವರ ಬಾಳಿನಲ್ಲಿ ಬರ ಸಿಡಿಲಿನಂತೆ ಬರುತ್ತಿದ್ದ ಕೆಟ್ಟ ಸುದ್ದಿ ಎಂದರೆ ಅವಳ ಗಂಡನೆನಿಸಿಕೊಂಡವನ ಮರಣ......ಕಾರಣಗಳೇನೇ ಇರಬಹುದು, ಆದ್ರೆ ಆಕೆಗೆ ತದನಂತರ ಸಿಗುತ್ತಿದ್ದ ಪಟ್ಟ ವಿಧವೆ.ಅಂತಹ ಮುಗ್ಧ,ಪುಟ್ಟ ಬಾಲಕಿಯ ಬಾಳು ಹಾಳಾಗಬಾರದೆಂದು ಸಮಾಜ ಸುಧಾರಕರು ವಿಧವಾ ವಿವಾಹವೆಂಬ ಸುಧಾರಣೆಯನ್ನ ಜಾರಿಗೆ ತಂದರು.
ಇದೆಲ್ಲಾ ಫ್ಲಾಶ್ ಬ್ಯಾಕ್.......
ಇತ್ತೀಚಿನ ದಿನಗಳಲ್ಲಿ ಒಂದು ಹೆಣ್ಣು ಬೆಳೆದು ದೊಡ್ಡವಳಾಗಿ,ವಿದ್ಯಾವಂತಳಾಗಿ,ಬುದ್ಧಿವಂತಳಾಗಿ,ಮದುವೆಯಾಗಿ, ಮಕ್ಕಳಾದ ಮೇಲೆ ಕೇವಲ ಸಮಾಜವನ್ನ ಎದುರಿಸೋ ಸಲುವಾಗಿ ಮದುವೆ ಮಾಡಿಕೊಳ್ಳೋದು ಎಷ್ಟರಮಟ್ಟಿಗೆ ಸರಿ?

ಏಕೆಂದರೆ ಇತ್ತೀಚೆಗಷ್ಟೆ ನಂಗೆ ಗೊತ್ತಿರುವವರೊಬ್ಬರ ಮದುವೆ ಆಯ್ತು...ಆಕೆಯನ್ನ ಮದುವೆಯಾದವನೇನು ನವ ವರನಲ್ಲ.... ಅವನಿಗೂ ಮದುವೆಯಾಗಿ ಒಬ್ಬ ಮಗನಿದ್ದಾನೆ....(.ಆತನ ಮೊದಲ ಹೆಂಡತಿಯೊಂದಿಗೆ ಈತನ ವಿವಾಹ ವಿಚ್ಛೇದನ ಆಗಿದೆ.) ಈಕೆಗೂ ಒಬ್ಬಳು ಮಗಳು... ಮದುವೆ ಸರಳವಾಗಿ ದೇವಸ್ಥಾನವೊಂದರಲ್ಲಿ ಯಾವ ತೊಂದರೆ ತಾಪತ್ರಯವೂ ಇಲ್ಲದಂತೆ ನಡೆಯಿತು....
ಮದುವೆಯ ನಂತರದ ದಿನಳಲ್ಲಿ ಗೊಂದಲ.... ಕಾರಣ ಆಕೆಯ ಮಗಳು... ಅವಳೇನು ಪುಟ್ಟ ಹುಡುಗಿಯಲ್ಲ.... 8ನೇ ತರಗತಿಗೆ ಹೋಗುವವಳು...ಅಮ್ಮ ಮಾಡಿದ್ದು ಸರಿಯೆ ತಪ್ಪೆ ಅಂತ ತೀರ್ಮಾನ ಮಾಡುವಂಥ ವಯಸ್ಸಲ್ಲ...ಏನೋ ಏಕಾಂಗಿತನ... ಅಮ್ಮನಿಗೆ ಇಷ್ಟು ದಿನ ನಾನಿದ್ದೆ... ಈಗ ನನ್ನ ಜೊತೆಗೆ ಅಮ್ಮನಿಲ್ಲವೆಂಬ ಅನಾಥ ಪ್ರಜ್ಞೆ....ಚುರುಕಾಗಿದ್ದ ಹುಡುಗಿ ಮಂಕಾಗಿ ಹೋಗಿದ್ದಳು. ಆ ಹುಡುಗಿಯನ್ನ ನೋಡಿ, ಮಾತಾಡಿಸಿದ ಮೇಲೆ ನನಗನ್ನಿಸಿದ್ದು-"ಇಂತಹ ವಿಧವಾ ವಿವಾಹ ಬೇಕೆ?"
ಸ್ನೇಹಿತರೆ, ನಿಮ್ಮ ಅನಿಸಿಕೆ ಅಭಿಪ್ರಾಯಗಳಿಗಾಗಿ ನಾನು ಕಾಯ್ತಾ ಇದ್ದೀನಿ....
ಇಂತಿ ನಿಮ್ಮ ತೇಜಸ್ವಿನಿ.

Forums: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಕೇವಲ ಸಮಾಜವನ್ನು ಎದುರಿಸೋ ಸಲುವಾಗಿಯಷ್ಟೆ ಯಾರೂ ಮರು ಮದುವೆ ಆಗೋದಿಲ್ಲ. ಅಷ್ಟಕ್ಕೂ ಮದುವೆ, ಈಗಿನ ಪರಿಸ್ಥಿಯಲ್ಲಿ, ಸಮಾಜವನ್ನು ಎದುರಿಸುವ ಸಿಸ್ಟಮ್ ಆಗಿ ಉಳಿದಿಲ್ಲ. ಬಾಳಿನುದ್ದಕ್ಕೂ ಒಬ್ಬ ಜೊತೆಗಾರ ಸಿಗಲಿ ಎಂಬುದು ಮದುವೆಯ ಮುಖ್ಯ ಉದ್ದೇಶಗಳಲೊಂದು. ವಿದ್ಯಾವಂತಳಾಗಿ,ಬುದ್ಧಿವಂತಳಾದ್ದ ಮಾತ್ರಕ್ಕೆ ಏಕಾಂಗಿಯಾಗಿ ಇರೋದು ಎಲ್ಲರಿಗೂ ಸುಲಭವಲ್ಲ.ತನ್ನ ಕಷ್ಟ ಸುಖ ಹಂಚಿಕೊಳ್ಳಲು,ಮಗುವಿನ ಭವಿಷ್ಯದ ಬಗ್ಗೆ ಕನಸು ಕಟ್ಟಲು ಕಡೆ ಪಕ್ಷ ಆಫೀಸಿನಲ್ಲೇನಾಯ್ತು ಅಂತ ಚರ್ಚಿಸಲು ಒಬ್ಬ ಸಂಗಾತಿಯ ಅವಶ್ಯಕತೆ ಇರುತ್ತದೆ ಅಂತ ನನಗನ್ನಿಸುತ್ತದೆ.
ಇನ್ನು ಮಕ್ಕ್ಳ ವಿಷಯ, ತುಂಬ ಚಿಕ್ಕವರಿದ್ದರೆ ಅವರಿಗೇನು ಗೊತ್ತಾಗುವುದಿಲ್ಲ.ಸ್ವಲ್ಪ ಬುದ್ಧಿ ಬಂದ, ಮಕ್ಕಳಿಗೆ ಮೊದಮೊದಲು ಇನ್ಸೆಕ್ಯುರಿಟಿ ಕಾಡಿದರು ನಂತರ ಹೊಂದ್ಕೊಳ್ಳಬಹುದು. ಅವರು ಹೊಂದಿಕೊಳ್ಳುವಂತೆ ಮಾಡುವುದು ಮರು ಮದುವೆ ಆಗುವವರ ಜವಾಬ್ದಾರಿ.

ದಯಮಾಡಿ ಕ್ಷಮಿಸಿ.... ಪ್ರತಿಕ್ರಯಿಸಲು ತುಂಬಾ ತಡವಾಯಿತು.ನೀವು ಹೇಳಿರೋ ಪ್ರಕಾರ ಮದುವೆ ಅನ್ನೋದು ಕೇವಲ ಸಮಾಜವನ್ನು ಎದುರಿಸೋ ಸಿಸ್ಟಂ ಆಗಿ ಉಳಿದಿಲ್ಲ ಅನ್ನೋಕೆ ಆಗಲ್ಲ! ಅಂದರೆ ಮದುವೆನ ಯಾರುಬೇಕಾದರೂ, ಎಲ್ಲಿ ಬೇಕಾದರೂ,ಹೇಗೆ ಬೇಕಾದರೂ ಮದುವೆ ಮಾಡಿಕೊಳ್ಳಬಹುದೆಂದು ನಿಮ್ಮ ಅಭಿಪ್ರಾಯವೆ? ಹಾಗೆನೆ ನೀವು ತಿಳೀಸಿದ್ದೀರ... ಮಕ್ಕಳಿಗೆ ಮನದಟ್ಟು ಮಾಡುವುದು ಮದುವೆಯಾದವರ ಜವಾಬ್ದಾರಿ ಅಂತ... ಆದ್ರೆ ಮರು ಮದುವೆ ಆಗೋದೆ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯಿಂದ ಇರೋಕ್ಕೆ ತಾನೆ? ಆದ್ರೆ ಮಾಡುವ ಕನ್ವಿಂಸ್ ವ್ಯರ್ಥವಾದಾಗ, ಮಕ್ಕಳು ಮಂಕಾಗಿ ಮುದುಡಿ ಹೋದಾಗ ಯಾವ ತಾಯಿತಾನೆ ಮರು ಮದುವೆಯಿಂದ ಸುಖವಾಗಿರಲು ಸಾಧ್ಯ ನೀವೆ ಹೇಳಿ?

ಅದರಲ್ಲಿ ತಪ್ಪೇನಿಲ್ಲ. ಮಗಳಿಗೆ ಆರಂಭದಲ್ಲಿ ಕಿರಿಕಿರಿ ಎನಿಸಿದರೂ ಮುಂದೆ ಸರಿಹೋಗಬಹುದು. ಮೊದಲ ಮದುವೆಗಿಂತ ಹೀಗೆ ಮಕ್ಕಳಾಗಿ ಸಂಗಾತಿ ಕಳೆದುಕೊಂಡ ಮೇಲೆ ಮದುವೆ ಆಗುವವರಿಗೆ ಹೆಚ್ಚು ಜವಾಬ್ದಾರಿಗಳಿರುತ್ತವೆ ಹಾಗೂ ಅದನ್ನು ನಿಭಾಯಿಸುವ ಪ್ರಬುದ್ಧತೆ ಕೂಡ ಜೀವನಾನುಭವದಿಂದ ಬಂದಿರುತ್ತದೆ(%100 ನಿಜವಿರದಿರಬಹುದು). ಪ್ರೌಢಾವಸ್ಥೆಯಲ್ಲಿರುವ ಮಕ್ಕಳು ಇದಕ್ಕೆ ವಿರೋಧ ವ್ಯಕ್ತಪಡಿಸುವಾಗ, ಮೂರನೆ ಒಬ್ಬ ವ್ಯಕ್ತಿ ಆ ಮಕ್ಕಳಿಗೆ ಮನವರಿಕೆ ಮಾಡಿಕೊಡುವುದು ಒಳ್ಳೆಯದು ಎಂದು ನನ್ನ ಭಾವನೆ.

ವಿಧವ ವಿವಾಹ ತಪ್ಪಲ್ಲವಾದರೂ , ಅದು ಸರಿಯಾದ ಸಮಯದಲ್ಲಾದರೆ ಒಳ್ಲೆದು. ಇಲ್ಲವಾದರೆ ಅದು ತುಂಬಾ ತೊಂದರೆಗಳಿಗೆ ಎಡೆ ಮಾಡಿ ಕೊಡುತ್ತದೆ. ಅದರಲ್ಲು ಮಗಳು ೮ನೇ ತರಗತಿಯಲ್ಲಿ ಓದುವಷ್ಟು ದೊಡ್ಡವಳು ಅಂತಂದ ಮೇಲೆ.. ಯೋಚಿಸಬೇಕಾದ್ದೆ.ಈಗಾಗಲೆ ಮದುವೆ ಆಗಿರುವುದರಿಂದ ಇಲ್ಲಿ, ಆಗಿಹೋಗುವುದರ ಬಗ್ಗೆ ಯೋಚಿಸುವುದಕ್ಕಿಂತ ಆಗಬೇಕಾಗಿರುವುದರ ಬಗ್ಗೆ ಯೋಚಿಸುವುದು ಒಳ್ಳೆಯದು.ಈಗ ಹೆಚ್ಚಿನ ಜವಾಬ್ದಾರಿ ತಂದೆ ಎನಿಸಿಕೊಳ್ಲುವವನ ಮೇಲಿರುತ್ತದೆ. ಹಾಗೇ ಆ ತಂದೆಗೂ ಒಬ್ಬನು ಮಗನಿರುವುದರಿಂದ ಮುಂದೆ ಎದುರಾಗಬಹುದಾದ ತೊಂದರೆಗಳನ್ನು ಎದುರಿಸುವಲ್ಲಿ ಇಬ್ಬರೂ ತುಂಬಾ ಜಾಗ್ರತೆಯಾಗಿ ಈಗಿನಿಂದಲೇ ನಿಭಾಯಿಸುವುದು ಅವಶ್ಯಕ.

ಧನ್ಯವಾದ ಮಂಸೋರೆ ಅವರೆ... ನನ್ನ ಕಡೆಯಿಂದ ಪ್ರತಿಕ್ರಿಯಿ ತಡವಾವಿದ್ದಕ್ಕೆ ಕ್ಷಮಿಸಿ. ಹೌದು ನೀವು ಹೇಳಿರುವಂತೆ ವಿಧವಾ ವಿವಾಹ ತಪ್ಪಲ್ಲ ಆದ್ರೆ ಸರಿಯಾದ ಸಮಯದಲ್ಲಿ ಆದ್ರೆ ಒಳ್ಳೆಯದು ಅನ್ನೋದಂತು ಸತ್ಯವಾದ ಮಾತು. ಹದಿ ಹರೆಯದ ಮಕ್ಕಳಿರುವಾಗ(ಅದರಲ್ಲೂ ಹೆಣ್ಣು ಮಗಳಿರುವಾಗ) ಅವರ ಭಾವನೆ, ತುಡಿತ, ಮಿಡಿತಗಳಿಗೆ ಸ್ಪಂದಿಸೋದು ತುಂಬಾ ಮುಖ್ಯ.

ನನಗೇನೋ ಈ ಲೇಖನ ಅಪೂರ್ಣ, ಅಸಂಬದ್ದವಾಗಿದೆ ಅನಿಸಿತು.

ನಮ್ಮಮ್ಮ ಹೇಳುವ ಪ್ರಕಾರ ಬಾಲ್ಯ ವಿವಾಹ ಪದ್ಧತಿ ಶುರುವಾಗಿದ್ದು ಹಿಂದೆಲ್ಲಾ ನಮ್ಮ ಭಾರತಕ್ಕೆ ದಂಡೆತ್ತಿ ಬರುತ್ತಿದ್ದವರ ಪೈಶಾಚಿಕ ಪ್ರವೃತ್ತಿಯಿಂದಾಗಿ. ನಮ್ಮ ಭಾರತೀಯ ಹೆಣ್ಣು ಮಕ್ಕಳ ಲಾವಣ್ಯಕ್ಕೆ ಮನಸೋತವರು ನಮ್ಮ ಹೆಣ್ಣು ಮಕ್ಕಳನ್ನು ಬಲತ್ಕರಿಸುತ್ತಿದ್ದರು. ಇಂತಹವರಿಂದ ಕಾಪಾಡಿಕೊಳ್ಳಲು ಬಾಲ್ಯ ವಿವಾಹ ಪದ್ಧತಿ ಶುರುವಾಗಿದ್ದು. ತದ ನಂತರ ಇದೇ ಸಂಪ್ರದಾಯವಾಗಿಬಿಟ್ಟಿತು.

ಆದರೆ ವಿಧವಾ ವಿವಾಹ ಎಂಬುದು ಅನಾದಿಕಾಲದಿಂದಲೂ ನಮ್ಮ ಭಾರತೀಯ ಸಂಸ್ಕೃತಿಯಲ್ಲಿ ಹಾಸು ಹೊಕ್ಕಾಗಿತ್ತು. ಗಂಡ ಸತ್ತರೆ ಗಂಡನ ಅಣ್ಣ ಅಥವಾ ತಮ್ಮ, ಆ ಹೆಣ್ಣನ್ನು ಮದುವೆಯಾಗುತ್ತಿದ್ದರು. ಈಗಲೂ ಕೂಡ ಹಳ್ಳಿಗಳಲ್ಲಿ ಇದು ಜೀವಂತವಾಗಿದೆ. ಇದಕ್ಕೆ ಕೂಡಾವಳಿ ಎಂದು ಕರೆಯುವರು. ಇದು ಶಾಸ್ತ್ರ ಸಮ್ಮತವೂ ಆಗಿತ್ತು. ಹಾಗಾಗಿ ಮೊದಲನೆಯ ಪತ್ನಿ, ಅವನ ಮಕ್ಕಳು ಕೂಡಾ (ಎಷ್ಟೇ ದೊಡ್ಡವರಾಗಿದ್ದರೂ) ಚಕಾರವೆತ್ತುತ್ತಿರಲಿಲ್ಲ. ವಿಧವೆ ವಿವಾಹವಾಗಬಾರದು ಎನ್ನುವ ಅಲಿಖಿತ ಕಾನೂನು ನಮ್ಮಲ್ಲಿ ಬಂದಿದ್ದು ಸುಮಾರು ೧೦-೧೧ನೆಯ ಶತಮಾನದಿಂದೀಚೆಗೆ (ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಗೊತ್ತಿಲ್ಲ. ಗೊತ್ತಿದ್ದವರು ತಿಳಿಸಬೇಕು). ವಿಧವೆಯ ಬಾಳು ರೋದನವಾಗಿ ಮಾರ್ಪಟ್ಟಿತು. ಅವಳನ್ನು ರಕ್ಷಿಸುವವರು ಯಾರು ಇರದ ಕಾರಣ ಈ ಸತೀ ಪದ್ಧತಿ (ಗಂಡನ ಚಿತೆಯೊಂದಿಗೆ ಸಜೀವವಾಗಿ ತಾನು ಚಿತೆಯೇರುವುದು) ಮುಂತಾದ ಅಸಹ್ಯ, ಹೀನಾಯವಾದ ಆಚರಣೆಗಳು ಆರಂಭಗೊಂಡವು. ಅದು ಉಲ್ಭಣಗೊಂಡ ಸಮಯದಲ್ಲಿ ಇಂತಹ ಪದ್ಧತಿಗಳು ನಿಲ್ಲಬೇಕು. ವಿಧವೆಯಾದ ಮಾತ್ರಕ್ಕೆ ಅವಳ ಆಸೆ ಆಕಾಂಕ್ಷೆಗಳನ್ನು ಕೊಲ್ಲಬೇಕಂತಿಲ್ಲವೆಂದು ವಿಧವಾವಿವಾಹ ಸುಧಾರಣೆಯನ್ನು ಮತ್ತೆ ಜಾರಿಗೆ ತಂದರು.

ನಿಮ್ಮ ಪರಿಚಯಸ್ಥೆ, ಸುಶಿಕ್ಷಿತಳು ಎಂದಿದ್ದೀರಿ. ತನ್ನ ಭವಿಷ್ಯದ ಬಗ್ಗೆ ಆಕೆ ನಮಗಿಂತ ಹೆಚ್ಚಾಗಿ ಯೋಚನೆ ಮಾಡಿರುತ್ತಾಳಲ್ಲವೇ? ಆಕೆ ಅನೈತಿಕ ಸಂಬಂಧವನ್ನೋ, ಇಲ್ಲವೇ ತನ್ನ ಮಗಳನ್ನು ಬೇರೆಲ್ಲೋ ಬಿಟ್ಟಿದ್ದರೆ ಆಕೆ ತಪ್ಪಿತಸ್ಥಳು ಎನ್ನಬಹುದಿತ್ತು. ಆದರೆ ಬಹಳ ಯೋಚಿಸಿ ಸರಿಯಾದ ನಿರ್ಧಾರ ತೆಗೆದುಕೊಂಡಿದ್ದಾರೆ. ನಾವೆಲ್ಲ ಆಕೆಯನ್ನು ಅಭಿನಂದಿಸಬೇಕು ಹಾಗೂ ಅಂತಹವರಿಗೆ ಸಹಕಾರವನ್ನು ನೀಡಬೇಕು. ಮಕ್ಕಳು ಸಮಾಜದ ಉತ್ತಮ ಪ್ರಜೆಗಳಾಗಬೇಕೆಂದರೆ ಒಂದು ಕುಟುಂಬದ ಅವಶ್ಯಕತೆ ಹೆಚ್ಚು. ತಂದೆ ಇಲ್ಲ ತಾಯಿ ಮಾತ್ರವೇ ಮಕ್ಕಳನ್ನು ಚೆನ್ನಾಗಿ ಬೆಳೆಸಲು ಸಾಧ್ಯವಿಲ್ಲ. ವಿಧವಾ ವಿವಾಹವಾಗಲೀ, ಮೊದಲ ಮದುವೆಯಾಗಲೀ ಇನ್ನೊಂದು ಮನೆಯವರಿಗೆ ಹೊಂದಿಕೊಳ್ಳಲು ಎಲ್ಲಾ ಹೆಣ್ಣು ಮಕ್ಕಳಿಗೂ ಗೊಂದಲವಿರುತ್ತದೆ. ಅದೆಲ್ಲಾ ಸ್ವಲ್ಪ ದಿನಗಳ ತಳಮಳ, ಈ ಎರಡು ಮಕ್ಕಳು ಹೊಂದಿಕೊಳ್ಳುವ ತನಕ. ನಂತರ ಎಲ್ಲವೂ ಸರಿಹೋಗುವುದು. ನಿಮ್ಮ ಬಳಿ ಆ ಹುಡುಗಿ ತನ್ನ ಕಷ್ಟವನ್ನು ತೋಡಿಕೊಂಡಾಗ ನೀವು ಅವಳಿಗೆ ತಿಳುವಳಿಕೆ ಹೇಳಬೇಕಿತ್ತು.

ಪ್ರತಿಕ್ರಿಯೆ ಧೀರ್ಘವಾಯಿತು. ಕ್ಷಮೆಯಿರಲಿ.

ತುಂಬಾ ಸರಿಯಾಗಿದೆ ನಿಮ್ಮ ವಿಚಾರಗಳು ಇಂಚರಾ... ಎಲ್ಲವೂ ಮತ್ತೆ ಮದುವೆಯಾದ ಆ ತಂದೆ ಮತ್ತು ಈ ತಾಯಿಯ ಕೈಯಲ್ಲೇ ಇದೆ. ಅವರು ತಮ್ಮ ಮಕ್ಕಳಿಗೆ ಅವರಿಗೆ ತಿಳಿಯುವಂತೆ ಅರ್ಥ ಮಾಡುಸಬಹುದು ಎಂಬುದು ನನ್ನ ಅಭಿಪ್ರಾಯ. ಖ್ಯಾತ ಬರಹಗಾರ್ತಿ ಶೋಭಾ ಡೇ ಗೆ ಮೊದಲ ಮದುವೆಯಿಂದ ಎರಡು ಮಕ್ಕಳಿದ್ದರು ಮತ್ತು ಅವರ ಪತಿಗೂ ಮೊದಲ ಮದುವೆಯಿಂದ ಎರಡು ಮಕ್ಕಳಿದ್ದರು. ಈಗ ಅವರಿಗೆ ಮತ್ತೆರಡು ಮಕ್ಕಳು. ಒಟ್ಟು ಆರು ಮಕ್ಕಳ ಯೋಗಕ್ಷೇಮ ಶೋಭಾ ಡೇ ಸಂಸಾರದಲ್ಲಿ ಚೆನ್ನಾಗೇ ನಡೆಯುತ್ತಿದೆ ಎಂದು ಕೇಳಿದ್ದೇನೆ.........

ಶ್ಯಾಮಲ

ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ. ಆದ್ರೆ ಎಲ್ಲರೂ ಶೋಭಾಡೇ ಆಗೋಕ್ಕೆ ಆಗಲ್ಲ ಅಲ್ವ.. ಪರಿಸರ, ಪರಿಸ್ಥಿತಿಗಳು ಒಂದೇ ಆಗಿರೋದಿಲ್ಲ... ಅಲ್ಲದೆ ತಮ್ಮ ಮೊದಲೆರಡು ಮಕ್ಕಳನ್ನ ತಮ್ಮ ಮಕ್ಕಳೆಂದು ಒಪ್ಪಿಕೊಂಡ ಮೇಲೆ ಮತೇಕೆ ಮಕ್ಕಳನ್ನ ಪಡೆಯ ಬೇಕಾಗಿತ್ತು... ಜನಸಂಖ್ಯೆ ಬಗ್ಗೆನೂ ಅಂತಹ ಬುದ್ಧಿವಂತರು ಯೋಚಿಸಬೇಕಲ್ಲವೆ?

ಇ೦ಚರಾ,
ಒಳ್ಳೆಯ ವಿಚಾರಗಳನ್ನು ಹ೦ಚಿಕೊ೦ಡಿದ್ದೀರಿ. ನನ್ನಿ.
ಇಲ್ಲಿ ಹೇಳಿರುವ ವಿಚಾರದಲ್ಲಿ ಎಲ್ಲೋ communication gap ಆಗಿದೆ ಅನಿಸ್ತದೆ. ಅವರೀರ್ವರು, ಸುಶಿಕ್ಷಿತರು, ತಮ್ಮ ಮಕ್ಕಳೊಡನೆ ಹೆಚ್ಚಿನ ಸಮಯ ಕಳೆದು ಅವರಿ೦ದ ನಾವು ದೂರವಾಗಿಲ್ಲ ಎ೦ಬ ಧೈರ್ಯವನ್ನು ತು೦ಬುವ ಅವಶ್ಯಕತೆಯಿದೆ ಅಷ್ಟೇ.

ಧನ್ಯವಾದಗಳು ವಿನುತಾ. ಹೌದು, ಕಮ್ಯುನಿಕೇಷನ್ ಗ್ಯಾಪ್ ಕಾರಣ ಇಲ್ಲವೇ ಇನ್ನೂ ಆ ತಾಯಿ ತನ್ನ ಗೊಂದಲಗಳಿಂದ ಹೊರಬಂದಿಲ್ಲದಿರಬಹುದು. ತಾನೇ ಗೊಂದಲಗಳಿಂದ ಮುಕ್ತಳಾಗದೇ, ಮಗಳಿಗೆ ತಾನೇ ಯಾವ ಧೈರ್ಯ ತುಂಬಬಲ್ಲಳು. ನಮ್ಮಂತಹವರು ಧೈರ್ಯ ತುಂಬಿದರೆ ಆಕೆಯ ಬಾಳು ಸುಖಮಯವಾದೀತು. ಅದು ಬಿಟ್ಟು ಈ ರೀತಿಯಾಗಿ ಹೆದರಿಸಬಾರದು ಅನ್ನುವುದು ನನ್ನ ಉದ್ದೇಶ.

ನಮ್ಮಲ್ಲಿ ಒಂದಿಂತಹ ಮದುವೆ ನಡೀತು, ನಮ್ಮ ತಾಯ ತಮ್ಮಂದು. ಅವರಿಗೆ ಇಬ್ರು ಮಕ್ಕಳು ೨೬ರ ಹೆಣ್ಣು ಮಗಳು - ಮದ್ವೆ ಆಗಿದೆ. ಮಗ ೧೯ ಇರಬಹುದು. ಮೊದಲಿಗೆ ರಂಪ ಮಾಡಿದ್ರು ಇಬ್ರೂ. ಈಗ ಸರಿಹೋಗಿದ್ದಾರೆ, ಎಲ್ಲಾ ಬುದ್ಧಿ ಹೇಳಿದ ಮೇಲೆ. ಇದರಲ್ಲಿ ಈ ಮಕ್ಕಳ ಮಂಕಾಗುವ ಪ್ರಶ್ನೆ ಇರಲಿಲ್ಲ, ಸ್ವಾರ್ಥದ ಪ್ರಶ್ನೆ ಇತ್ತು ಅಂತ ಅಂದುಕೊಂಡಿದ್ದೇನೆ.

ಮದ್ವೆ ಆದ ಹೆಣ್ಣು ಇನ್ನೂ ಕುಮಾರಿಯು. ಬಹುಶಃ ಬೆಳೆದಿರುವ ಮಕ್ಳು ಆದ್ರಿಂದ ತಿಳುವಳಿಕೆ ಬಂದು ಸರಿಹೋಯ್ತೇನೋ.

ಧನ್ಯವಾದ ನಿಮ್ಮ ಪ್ರತಿಕ್ರಿಯೆಗೆ. ನಿಮ್ಮ ಕುಟುಂಬದಲ್ಲೂ ಇಂಥ ಒಂದು ಸನ್ನಿವೇಶವನ್ನ ನೀವು ಹತ್ತಿರದಿಂದ ಬಲ್ಲವರಾಗಿರೋದ್ರಿಂದ ಇಂಥ ಮದುವೆಗಳ ಒಳಿತು-ಕೆಡುಕುಗಳು ತಿಳಿದಿವೆ. ಮೇಲ್ನೋಟಕ್ಕೆ ಅಂಥ ಹುಡುಗಿಗೊಂದು ಬಾಳು ಸಿಕ್ಕಿತಲ್ಲ ಅಂತ ತುಂಬ ಜನ ಭಾವಿಸಿ ಬಿಟ್ತಾರೆ... ಆದ್ರೆ ಅದರಿಂದ ಮಕ್ಕಳ ಮೇಲಾಗುವ ಪರಿಣಾಮವನ್ನೂ ನೋಡಬೇಕಲ್ವ?

ಗಂಡೊಬ್ಬ ಹುಚ್ಚ. ಹೆಣ್ಣೊಂದು ಹುಚ್ಚಿ. ಇಬ್ಬರು ಹುಚ್ಚರು ಸೇರಿದರೆ ಏನಾಗಬಹುದೋ ಅವೆಲ್ಲ ಗಂಡು ಹೆಣ್ಣಿನ ಸಂಬಂಧದಲ್ಲಿ ಆಗುತ್ತವೆ. ತಮ್ಮ ಪರಸ್ಪರ ಸಂಬಂಧದ ಬಗ್ಗೆಯೇ ಗಂಭೀರ ನಿಲುವಿಲ್ಲ. ಹಾಗಾಗಿ ವಿವಾಹವಿಚ್ಛೇದನ. ವಿವಾಹಬಾಹಿರ ಸಂಬಂಧಗಳು. ಹಾಗೆಯೇ ಈ ನಿಲುವಿಗಳಿಗೆಲ್ಲ ಏನೇನೋ ಸಮಜಾಯಿಷಿಗಳು. ನನ್ನ ಪ್ರಕಾರ ಮದುವೆ ಹೆಚ್ಚೆಂದರೆ ಎರಡೇ ಸಲ ನಡೆಯಬೇಕು. ಕಾರಣ ಸಂಗಾತಿಯ ಅಕಾಲ ಮರಣ ಅಥವಾ ಮೊದಲ ಅನುಭವದಲ್ಲಿ ಎಡವಿ ವಿವಾಹವಿಚ್ಛೇದನ ಆದರೆ. ಅಕಸ್ಮಾತ್ ಗಂಡು ಅಥವಾ ಹೆಣ್ಣು ಮೂಱನೆಯ ಬಾರಿಗೆ ಪುನರ್ವಿವಾಹವಾದರೆ ಅವರಿಗೆ ಗಂಡುಹೆಣ್ಣಿನ ಸಂಬಂಧದಲ್ಲಿ ನಿಜವಾದ ಕಳಕಳಿ ಹಾಗೂ ಗಂಭೀರತೆಯ ಅಱಿವಿಲ್ಲವೆಂದೇ ಹೇೞಬಹುದು.