'ಸಳ' - ಈ ಪದದ ಅರ್ಥವೇನು?

0

ಹೊಯ್ಸಳರ ಸಾಮ್ರಾಜ್ಯದ ಕಥೆಯಲ್ಲಿ ಬರುವ 'ಸಳ' ಚಿರಪರಿಚಿತ.
ನನ್ನ ಪ್ರಶ್ನೆ, 'ಸಳ' - ಈ ಪದದ ಅರ್ಥವೇನು?

--ಶ್ರೀ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಾವು ಓದುವಾಗಿನ ಕತೆಯಂತೆ ಹುಲಿಯನ್ನು ಕಂಡೊಡನೆ ಗುರುಗಳು ಸಳನನ್ನು ಕೂಗಿ 'ಹೊಯ್' ಸಳ ಎಂದರು.ಸಳ ಕೂಡಲೇ ಗುರುವಿನ ಅನುಮತಿಯಂತೆ ಹುಲಿಯ ಮೇಲೆರಗಿದ. ಇತ್ಯಾದಿ. 'ಸಳ' ಎಂಬುದು ಶಿಷ್ಯನ ಹೆಸರಾಗಿತ್ತು. ಆದ್ದರಿಂದ ಹೊಯ್ಸಳ ಎಂಬ ಹೆಸರು ಬಂದಿತೆಂದು ಆ ಪಾಠದಲ್ಲಿ ತಿಳಿಸಿದ್ದರು.

ಆ ಕಥೆ ಗೊತ್ತು...ಆದರೆ ಈ ಹೆಸರಿಗೆ ಏನಾದ್ರೂ ಅರ್ಥ ಇದೆಯಾ ಅಂತ...

ಉದಾಹರಣೆಗೆ ಇವು ನೋಡಿ:
ಜನ್ನ:
೧. ಜನ್ನ (ಸಂ) (ನಾ) ೧ ಯಜ್ಞ, ಯಾಗ ೨ ಒಂದು ಬಗೆಯ ಕುದುರೆ ೩ ಕನ್ನಡ ಸಾಹಿತ್ಯದಲ್ಲಿ ಪ್ರಸಿದ್ಧನಾದ ಒಬ್ಬ ಕವಿಯ ಹೆಸರು

ಪಂಪ:
೧. ರತ್ನತ್ರಯ (ನಾ) ೧ (ಜೈನಧರ್ಮದಲ್ಲಿ) ಮೋಕ್ಷ ಸಾಧನೆಗಳಾದ ಸಮ್ಯಕ್ ದೃಷ್ಟಿ, ಜ್ಞಾನ, ಚಾರಿತ್ರ್ಯ - ಎಂಬ ಮೂರು ತತ್ವಗಳು ೨ ಪಂಪ, ಪೊನ್ನ ಮತ್ತು ರನ್ನರೆಂಬ ಕನ್ನಡದ ಮೂವರು ಶ್ರೇಷ್ಠ ಜೈನ ಕವಿಗಳು

ಹೈಸ್ಕೂಲ್‍ಬಲ್ಲಿ ಚರಿತ್ರೆ ಕಲಿಯುವಾಗ ಬೋಧಿಸಿದ್ದರು.
ಹುಲಿಯೊಂದು ಎದುರು ಬಂದಾಗ ಜನರು ಪರಾಕ್ರಮಿಯನ್ನು ಗಾಭರಿಯಿಂದ ಜೋರಾಗಿ ಕೂಗಿ ಹೇಲಿದರು: ’ಹೊಯ್ ಸಳ’!
ಹೊಹ್ = (ಕತ್ತಿಯಿಂದ) ಹೊಡಿ, ಸೀಳು, ಕೊಲ್ಲು, ಮುಂತಾದ ಅರ್ಥ ತಿಳಿಸಿದ್ದರು.
’ಸಳ’ ಅದು ಒಂದು ಹೆಸರು. ನೊಮಗೆ ಗೊತ್ತಿರುವಂತೆ ಎಲ್ಲಾ ಭಾಷೆಗಳಲ್ಲಿ ಕೆಲೌ ಹೆಸರುಗಳಿಗೆ ಅರ್ಥವಿರುವುದಿಲ್ಲ.
’ಸಳ’ ಆ ಮಾತು ಕಿಟ್ಟೆಲ್ ನಿಘಂಟಿನಲ್ಲೂ ಇಲ್ಲ. ಅಲ್ಲಿ ’ಸಳೆ’ ಯನ್ನು ’ಪಿಡಿದು ಸಳದು ಎತ್ತಿ ಬಿಸಾಡುವಿಕೆ’ ಎಂದು ವಿವರಿಸಿದ್ದಾರೆ.
ಆಗ ’ಹೊಯ್ಸಳ’ದ ಅರ್ಥ ’ಕೊಂದು ಬಿಸಾಡು’ ಅನಿಸುತ್ತದೆ.
ಉಧೇಕದಲ್ಲಿ ತಟಕ್ಕನೆ ನುಡಿದ ಆ ಜಾಣ್ಣುಡಿಯನ್ನು (ಫ್ರೇಸ್) ಆತನ ಪರ‍ಕ್ರಮದ ನೇರವೇರಿಕೆಯ ನೆನಪಿಗೆ ಕೊಟ್ಟಿಟ್ಟ ನಾಮ ಅನ್ನಬಹುದು.
ಭಾವಾರ್ಥವಾಗಿ ’ಸಳ’ ವನ್ನು ಸಾಹಸಿ ಪರಾಕ್ರಮಿ ಎಂದು ಪರಿವರ್ತಿಸಬಹುದು.
*
ಇತರ ಭಾಷಾ ಪಾಂಡಿತ್ಯರ ವಿವರಣೆ ಓದಲು ಕುತೂಹಲವಿದೆ.
ವಿಜಯಶೀಲ
೦೨.೦೬.೦೯