ಬೆಂಗಳೂರು ಚಿತ್ರೋದ್ಯಮದ ಕೈಯಲ್ಲಿ ಬಡವಾಗುತ್ತಿರುವ ಕನ್ನಡ

4

ಗೆಳೆಯರೇ, ಒಂದು ಭಾಷೆ ಸಮ್ರುಧ್ಧವಾಗಬೇಕಾದರೆ, ಜಗತ್ತಿನ ಸರ್ವ ವಿಷಯಗಳನ್ನು ಅದು ತನ್ನೊಳಗೆ ಅಡಗಿಸಿಕೊಳ್ಳಬೇಕು. ಆದರೆ ಕನ್ನಡ ಚಿತ್ರರಂಗದವರ ಸ್ವಾರ್ಥ ಮತ್ತು ಆತ್ಮವಿಶ್ವಾಸದ ಕೊರತೆಯಿಂದಾಗಿ ಕನ್ನಡ ಭಾಷೆಯೇ ಬಡವಾಗಿದೆ. ಶ್ರವಣ ಮತ್ತು ದ್ರುಶ್ಯ ಮಾಧ್ಯಮವು ಅಕ್ಷರ ಮಾಧ್ಯಮಕ್ಕಿಂತ ಪ್ರಭಾವಶಾಲಿಯಾಗಿದೆ. ಇದು ಎಲ್ಲರಿಗೂ ತಿಳಿದ ವಿಷಯ. ಈಗ ಕನ್ನಡವನ್ನು ಕಾಪಾಡಬೇಕಾಗಿರುವುದು, ಹೊರಗಿನವರಿಂದಲ್ಲ ಕನ್ನಡ ಚಿತ್ರರಂಗದವರಿಂದ. ಹೌದು. ನಾನು ಹೇಳುತ್ತಿರುವುದು ಕರ್ನಾಟಕದಲ್ಲಿ ಡಬ್ಬಿಂಗ ಚಿತ್ರಗಳನ್ನು ದೂರವಿಟ್ಟಿರುವುದರ ಬಗ್ಗೆ. ಇದರಿಂದ ಕನ್ನಡ ಚಿತ್ರರಂಗಕ್ಕೆ ಹೊಡೆತ ಬೀಳುತ್ತದೆ ಅದು ಬೇಡ ಅಂತನೇ ಹೆಚ್ಚಿನವರು ನಂಬಿದ್ದಾರೆ. ಬೆಂಗಳೂರಿನ ಕೆಲವು ಜನರನ್ನು ಕಾಯುವ ಹೊಣೆ ಹೊತ್ತು ಕನ್ನಡ ತಾಯಿ ಭುವನೇಶ್ವರಿ ಕ್ರುಷವಾಗಿದ್ದಾಳೆ. ಸ್ವಾಮಿ ಕನ್ನಡ ಚಿತ್ರರಂಗವನ್ನು ಒಂದು ಮುಕ್ತ ಅಖಾಡವಾಗಿಸಿರಿ, ಇದರಿಂದ ಭಾಷೆ ಸಮ್ರುದ್ಧಿಯಾಗಿ ಬೆಳೆಯುವುದಷ್ಟೇ ಅಲ್ಲ ಕನ್ನಡ ಚಿತ್ರೋದ್ಯಮವೂ ತೆಲುಗು ಮತ್ತು ತಮಿಳು ಚಿತ್ರರಂಗಗಳಂತೆ ವಿಶಾಲವಾಗುತ್ತದೆ. ದಯವಿಟ್ಟು ಕನ್ನಡವನ್ನು ನಮ್ಮದೇ ಚಿತ್ರೋದ್ಯಮದವರ ಕೈಯಿಂದ ಮುಕ್ತಗೊಳಿಸಿ, ಇಲ್ಲವಾದರೆ ಕನ್ನಡಕ್ಕೆ ಬೀಳುತ್ತಿರುವ ಹೊಡೆತಗಳು ಅವ್ಯಾಹತವಾಗಿ ಸಾಗಿರುತ್ತವೆ. ಇಂದು ಕನ್ನಡ ಚಿತ್ರರಂಗ ಬೆಳೆದಿದೆ, ಈಗಲಾದರೂ ಮುಕ್ತ ಸ್ಪರ್ದೆಗೆ ಸಿದ್ಧರಾಗಿ, ಕನ್ನಡ ನಾಡಿನಲ್ಲಿ ನಮ್ಮದಲ್ಲದ ಭಾಷೆಯಲ್ಲಿ ಚಿತ್ರ ನೋಡಬೇಕಾದ ವಿಪರ್ಯಾಸವನ್ನು ತಪ್ಪಿಸಿ. ತಮಿಳು ಮತ್ತು ತೆಲುಗು ಭಾಷೆಗಳು ತಮ್ಮ ಚಿತ್ರಗಳ ಮೂಲಕ ನಿರಂತರವಾಗಿ ಕರ್ನಾಟಕದೊಳಗೆ ನುಸುಳುತ್ತಿವೆ. ಅಪ್ಪಟ ಕನ್ನಡ ಒಳನಾಡುಗಳಲ್ಲೂ ಹೊರಗಿನ ಭಾಷೆಯ ಚಿತ್ರಗಳು ದಾಳಿ ನಡೆಸಿವೆ. ಆದರೆ ಕನ್ನಡ ಚಿತ್ರಗಳ ಮೂಲಕ ಅವರ ನಾಡಿಗೆ ವಿಚಾರಗಳು ತಲುಪುತ್ತವೆಯೇ ಹೊರತು ಭಾಷೆ ಕಿಂಚಿತ್ತೂ ಇಣುಕದು, ಅಂದ ಮೇಲೆ ಭಾಷೆಯ ಬೆಳವಣಿಗೆಯಾದರೂ ಹೇಗೆ ಸಾಧ್ಯ. ಚಿತ್ರರಂಗದವರ ಈ ಧೋರಣೆಯಿಂದ ಕನ್ನಡಕ್ಕೆ A.R.ರೆಹಮಾನ್‌ರಂತ ಅದ್ಭುತ ಪ್ರತಿಭೆಯ ಸಂಗೀತ ದೊರಕಿಲ್ಲ, ಅದೇ ತೆಲುಗು ಮತ್ತು ತಮಿಳು ರಂಗಗಳನ್ನು ನೋಡಿ, ಅವರು ಇಂಗ್ಲಿಷ್ ಚಿತ್ರಗಳನ್ನು ಮೊದಲುಗೊಂಡು ಎಲ್ಲವನ್ನು ತಮ್ಮ ಭಾಷೆಗೆ ಅಳವಡಿಸಿಕೊಂಡು ತಮ್ಮ ಭಾಷೆಯನ್ನು ಮತ್ತಷ್ಟು ಶ್ರೀಮಂತಗೊಳಿಸಿಕೊಂಡಿರುವುದಷ್ಟೇ ಅಲ್ಲದೇ ಅದರಿಂದ ಅವರ ಚಿತ್ರರಂಗ ಅದ್ಭುತ ಚಿತ್ರಗಳನ್ನು ನಿರ್ಮಿಸಲು ಅನುಕೂಲವಾಗಿದೆ. ಬೇರೆ ಭಾಷೆಯವರು,ಅವರೇ ಏಕೆ ನಮ್ಮವರೇ, ನಮ್ಮ ಚಿತ್ರಗಳನ್ನು ಅಸಡ್ಡೆ ಧೋರಣೆಯಿಂದ ನೋಡುವುದು ಇದೇ ಕಾರಣದಿಂದ. ಬೆಂಗಳೂರಿನ ಚಿದ್ರೋದ್ಯಮದವರೇಕೇ ಇಷ್ಟೊಂದು ಆತ್ಮವಿಶ್ವಾಸವಿಲ್ಲದರಾಗಿದ್ದಾರೆ. ಮುಂಚಿನಿಂದಲೂ ಡಬ್ಬಿಂಗಗೆ ಅವಕಾಶವಿದ್ದಲ್ಲಿ ಇಂದು ಕನ್ನಡ ಖಂಡಿತವಾಗಿ ಈ ಸ್ಥಿತಿಯಲ್ಲಿರುತ್ತಿರಲಿಲ್ಲ.

ಪರನಾಡಿನ ಲೇಖಕರು ಕನ್ನಡ ಸಾರಸ್ವತ ಲೋಕಕ್ಕೆ ಎಷ್ಟೋ ಕೊಡುಗೆ ನೀಡಿದ್ದಾರೆ, ಅದರಿಂದ ಕನ್ನಡ ಪುಸ್ತಕ ಲೋಕ ಶ್ರೀಮಂತವಾಗಿದೆ, ಕನ್ನಡದಲ್ಲಿ ಕನ್ನಡದವರು ಬರೆದ ಲೇಖನಗಳು ಮಾತ್ರ ಇರಬೇಕು, ಅಂತ ಆ ಬಾಗಿಲನ್ನೂ ಮುಚ್ಚಿದ್ದರೆ ಕನ್ನಡ ಇಂದು ಬದುಕಿರುತ್ತಿರಲಿಲ್ಲ. ಹೊಸದನ್ನು ತಿಳಿದುಕೊಳ್ಳಬೇಕೆಂಬ ಹಂಬಲ ಭಾಷಾಪ್ರೇಮವನ್ನೂ ಮೀರಿ ನಿಲ್ಲುತ್ತದೆ, ಭಾಷೆಯೆಂಬುದು ಒಂದು ಮಾಧ್ಯಮ ಮಾತ್ರ.ಕನ್ನಡಿಗರು ಭಾಷಾ ಪ್ರೇಮಿಗಳಲ್ಲ ಅಂತ ಎಲ್ಲರೂ ಮಾತನಾಡುತ್ತಾರೆ ಆದರೆ ಜಗತ್ತನ್ನು ಕನ್ನಡದಲ್ಲಿ ನೋಡುವ ಅವಕಾಶ ಕನ್ನಡಿಗನಿಲ್ಲ, ಇದೆಂತ ಇಬ್ಬಗೆತನ? ಈಗಲೂ ಕನ್ನಡ ಚಿತ್ರಗಳನ್ನು ನೋಡುವವರು ಬೇರೆ ಭಾಷೆ ಆಡದ ಮುಗ್ಧ ಹಳ್ಳಿಯ ಜನ ಮಾತ್ರ. ತೆಲುಗು ಮತ್ತು ತಮಿಳು ಚಿತ್ರರಂಗಗಳ ಪರಸ್ಪರ ವಿನಿಮಯದಿಂದ ಭಾಷೆಗಳು ಒಂದಕ್ಕೊಂದು ಪೂರಕವಾಗಿ ಬೆಳೆದಿವೆ. ಈಗಲಾದರೂ ನಮ್ಮ ಭಾಷೆಯನ್ನು ನಮ್ಮವರೇ ಮರೆಯುವ ಮುನ್ನ ಎಚ್ಚೆತ್ತುಕೊಳ್ಳಿ, ನಿಮ್ಮ ಕಪಿಮುಷ್ಟಿಯಿಂದ ಕನ್ನಡವನ್ನು ಬಿಡುಗಡೆಗೊಳಿಸಿ, ಕನ್ನಡಿಗರಿಗೆ ಕನ್ನಡ ಪ್ರೇಮದ ಹೆಸರಿನಲ್ಲಿ ಬೆಂಗಳೂರಿನಲ್ಲಿ ತಯಾರಾದ ಚಿತ್ರಗಳನ್ನು ಮಾತ್ರ ನೋಡಬೇಕೆಂಬ ಕಲ್ಲುಗುಂಡನ್ನು ಹೊರೆಸಬೇಡಿ, ಕನ್ನಡಿಗರಿಗೆ ಮತ್ತು ಕನ್ನಡ ಭಾಷೆಗೆ ಉಸಿರಾಡಲು ಅವಕಾಶ ಕೊಡಿ, ನಾವು ನಿಮ್ಮನ್ನೇನು ಮುಳುಗಿಸುವುದಿಲ್ಲ ಬದಲಾಗಿ ನೀವು (ಕನ್ನಡ ಚಿತ್ರರಂಗದವರು) ಇನ್ನೂ ಶ್ರೀಮಂತವಾಗುವಿರಿ. ಸ್ವಾಮಿ ಸಕಲ ಕನ್ನಡ ಪ್ರೇಮಿಗಳೇ, ಸಾಹಿತಿಗಳೇ, ಕನ್ನಡ ಅಭಿವ್ರುದ್ಧಿ ಮಂಡಳಿಯವರೇ, ಸಕಲ ಕನ್ನಡಿಗರೇ ಕನ್ನಡವನ್ನು ಕನ್ನಡ ಚಿತ್ರರಂಗದವರಿಂದ ಕಾಪಾಡಿ. ಕನ್ನಡಕ್ಕೆ ಬೆಳೆಯಲು ಅವಕಾಶ ನೀಡಿ. click here
ನನ್ನ ಬ್ಲಾಗ್ ನೋಡಿ ಹೌದು ಅನಿಸಿದರೆ ಸುಮ್ಮನಿರಬೇಡಿ, ಎಲ್ಲರಲ್ಲೂ ಈ ಬಗ್ಗೆ ಅರಿವು ಮೂಡಿಸಿ, ಕನ್ನಡ ಬೆಳಗಬೇಕೆನ್ನುವವರಿಗೆ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸರಿಯಾಗ್ಬರ್ದಿದ್ದೀರಿ. ಚಿದ್ರ + ಉದ್ಯಮ - ನಮ್ಮ ಕನ್ನಡ ಚಿದ್ರೋದ್ಯಮ. Cool ಚಿದ್ರವಾಗಿ ಹೋಗಿದೆ, ಅಲ್ವೇನ್ರಿ?

ನಮಗೆ ಡಬ್ಬಿಂಗ್ ಅಗತ್ಯವೆ?

೧)ರಜಿನಿಕಾಂತ್, ಅಮಿತಾಬ್ ಬಚ್ಚನ್, ಚಿರಂಜೀವಿ,ಹೃತಿಕ್ ರೊಶನ್, ಐಶ್ವರ್ಯ ರೈ, ರಾಣಿ ಮುಖರ್ಜಿ, ಪ್ರಿಯಂಕಾ ಚೋಪ್ರಾ ಮುಂತಾದ ಸುಪ್ರಸಿದ್ದ ಕಲಾವಿದರು ನಟಿಸಿರುವ ಕನ್ನಡೀಕರಿಸಿದ ಚಿತ್ರಗಳು ಬಿಡುಗಡೆಯಾದರೆ ಕನ್ನಡ ಚಿತ್ರಗಳಿಗೆ ಚಿತ್ರಮಂದಿರವೇ ಇರುವುದಿಲ್ಲ.
೨)ಈಗಾಗಲೇ ಕರ್ನಾಟಕದಲ್ಲಿ ಮಾರುಕಟ್ಟೆ ಹೊಂದಿರುವ ಪರಭಾಷೆಯ ಚಿತ್ರಗಳು ಕನ್ನಡಿಕರಿಸಿಕೊಂಡು ಬಂದರೆ, ಕರ್ನಾಟಕದ ಜನ ಮುಗಿಬೀಳುವುದು ಸಹಜವೆ. ಇದರಿಂದ ಕನ್ನಡ ಚಿತ್ರಮಂದಿರಗಳು ಖಾಲಿ ಹೊಡೆಯಬಹುದು.
೩)ಎಲ್ಲಾ ಭಾಷೆಯ (ಪ್ರಮುಖವಾಗಿ ಹಿಂದಿ,ತೆಲುಗು ಹಾಗೂ ತಮಿಳು) ಚಿತ್ರಗಳು ವಾರಕ್ಕೊಂದು ಬಿಡುಗಡೆಯಾದರೂ ಸಾಕು ವರ್ಷಕ್ಕೆ ೫೨ ಚಿತ್ರಗಳಾಗುತ್ತವೆ ಆದರೆ ಈಗ ತೆಲುಗು ಚಿತ್ರೋದ್ಯಮದಲ್ಲಿ ವಾರ್ಷಿಕ ಸರಾಸರಿ ೧೫೦ ಚಿತ್ರಗಳು ಬಿಡುಗಡೆಯಾಗುತ್ತವೆ, ತಮಿಳು ಚಿತ್ರೋದ್ಯಮದಲ್ಲಿ ಸರಾಸರಿ ೧೦೦ ಚಿತ್ರಗಳು ಬಿಡುಗಡೆಯಾಗುತ್ತವೆ, ಇನ್ನು ಹಿಂದಿ ಚಿತ್ರೋದ್ಯಮದಲ್ಲಂತೂ ಬಿಡಿ ಹೇಳೊ ಹಾಗೇ ಇಲ್ಲ.
೪)ಕೆಲಸದ ಬಗ್ಗೆ ಹೇಳಬೇಕೆಂದರೆ ಈ ಕನ್ನಡೀಕರಣ ಕೇವಲ ಕೆಲವೇ ತಂತ್ರಜ್ಞರಿಕೆ ಮಾತ್ರ ಕೆಲಸ ಕೊಡುತ್ತದೆ, ಅದ್ಹೇಗಪ್ಪಾ ಅಂದ್ರೆ ಚಿತ್ರ ಎಲ್ಲಾ ರೀತಿಯಲ್ಲೂ ತಯ್ಯಾರಾದ ಮೇಲೆ ಕೇವಲ ದ್ವನಿ ಬದಲವಣೆಗೆ ಮಾತ್ರ ಸ್ಟುಡಿಯೋಗೆ ಹೋಗಬೆಕಾಗುತ್ತೆ. ಯಾವುದೇ ಹೊಸ ಪರಿಣಿತರ ಅಗತ್ಯವೇ ಇರುವುದಿಲ್ಲ. ನಟರಿಗೇ ಆಗಲಿ, ಸೃಜನಶೀಲ ಸಾಹಿತ್ಯಕ್ಕೇ ಆಗಲಿ ಬೆಲೆ ಇರುವುದಿಲ್ಲ.

ಇಷ್ಟೆಲ್ಲಾ ತೊಂದರೆಗಳು ಇದ್ದರೂ ನಾವು ಪರಭಾಷಾ ಚಿತ್ರಗಳ ಕನ್ನಡೀಕರಣವನ್ನು ವಿರೋಧಿಸಿದರೆ ನಷ್ಟವೇನೂ ಇಲ್ಲ, ಉದಾಹರಣೆಯಾಗಿ ಈಗಿರುವ ಮರಾಠಿ ಹಾಗೂ ಮಲಯಾಳಂ ಚಿತ್ರೋದ್ಯಮದ ಸ್ಥಿತಿಯನ್ನ ನೋಡಿದರೆ ತಿಳಿಯುತ್ತೆ, ಡಬ್ಬಿಂಗ್ ಎಷ್ಟು ಉಪಯೋಗಿ ಎಂದು.

ಧನ್ಯವಾದಗಳೊಂದಿಗೆ
ರಾಘವೇಂದ್ರ.ಎಸ್

ಸ್ವಾಮಿ

ಕನ್ನಡ ಚಿತ್ರರಂಗದ ಬಗ್ಗೆ ಹಲವಾರು ಅಭಿಪ್ರಾಯಗಳನ್ನು ಓದಿದ ಮೇಲೆ ನನ್ನ ಅನಿಸಿಕೆ, ನಾವು ಕನ್ನಡಿಗರು ನಮ್ಮ ಚಿತ್ರಗಳನ್ನು ನೋಡದೆಯೆ ವಿಮರ್ಶೆ/ಪ್ರತಿಕ್ರಿಯೆ ವ್ಯಕ್ತಪಡಿಸುತ್ತೇವೆ, ನಾನೇನು ಬಿಡುಗಡೆಯಾಗುವ ಪ್ರತಿಯೊಂದು ಚಿತ್ರವನ್ನು ನೋಡಿ ಎಂದು ಹೇಳುವುದಿಲ್ಲ ಆದರೆ ಕೇವಲ ಅಂತೆ/ಕಂತೆ ಗಳಲ್ಲಿಯೇ ನಮ್ಮ ಪ್ರತಿಕ್ರಿಯೆಗಳನ್ನು ವ್ಯಕ್ತಪಡಿಸಿದರೆ ಹೇಗೆ,ಯಾವುದೇ ಭಾಷೆಯ ಚಿತ್ರ ವ್ಯಾಪರ ಹಾಗು ಕಲೆ ಎರಡನ್ನು ಹದವಾಗಿ ಬೆರಿಸಿದಾಗ ಒಂದು Masterpiece ಯಾಗುತ್ತದೆ, ಇಂದು ಯಾವುದೇ ಭಾಷೆಯಾಗಲಿ ಅಂತಹ Masterpiece ಚಿತ್ರಗಳ ಸಂಖ್ಯೆ ಕಡಿಮೆಯಾಗಿದೆ, ಈ ನಿಟಿನಲ್ಲಿ ಪ್ರೇಕ್ಷಕ ಮೇಕರ್ ನೊಂದಿಗೆ ಸಹಕರಿಸಿದರೆ ಮಾತ್ರ Masterpiece ಮಾಡಲು ಸಾದ್ಯ, 

ಉದಾಹರಣೆಗೆ ಕನ್ನಡದ "ಚೈತ್ರದ ಚಿಗುರು" ಹಾಗು ಹಿಂದಿಯ "Swades" ಚಿತ್ರ ಗಮನಿಸಿ, ನಾಗಭರಣ ನಿರ್ದೇಶನದ ಚಿಗುರು ಅದೇ ಹೆಸರಿನ ಕಾರಂತರ ಕಾದಂಬರಿಯಿಂದ ತಯಾರದದ್ದು ಎಂದು ಹೇಳುತ್ತಾರೆ, ಆದರೆ ಹಿಂದಿಯ ಚಿತ್ರಕಥೆಯನ್ನು ಬರೆದವರು ನಮ್ಮ ಕನ್ನಡವರು, ಅವರು ಕಾರಂತರ ಕಾದಂಬರಿಯಿಂದ ತೆಗೆದುಕೊಂಡಿದ್ದು ಎಂದು ಹೇಳುವುದಿಲ್ಲ, ಎರಡು ಚಿತ್ರವನ್ನು ನೋಡಿದವರು, ಕಾದಾಂಬರಿಯನ್ನು ಓದಿದರೆ ಕಾರಂತರ ಕಾದಂಬರಿಗೆ ಎರಡು ಹತ್ತಿರವಾಗಿದೆ ಎಂದು ಗೊತ್ತಾಗುತ್ತ್ದೆ, ಆದರೂ ನಮ್ಮ ಕನ್ನಡದ ಜನ "Swades" ಗೆ ಕೊಟ್ಟ ಮನ್ನಣೆ "ಚಿಗುರು"ಗೆ ಕೊಡಲಿಲ್ಲ, ಶಿವಣ್ಣನ ಅಭಿನಯ, ಜಯಂತ್ ರ ಸಾಹಿತ್ಯ, ಕರುನಾಡಿನ ಪ್ರಕೃತಿ, ಯಾವುದು ನಮ್ಮ ಕನ್ನಡಿಗರಿಗೆ ಅಪಾಯಾಯಮಾನವಾಗಲಿಲ್ಲ, ನಮ್ಮ ಚಿತ್ರವನ್ನು ನಾವೇ ನೋಡದೆ ಇದ್ದರೆ ಕನ್ನಡ ಬರೀ ಬ್ಲಾಗ್ ನಲ್ಲಿ ಉಳಿದಿತು ಅಲ್ಲವೆ, ಇನ್ನಾದರು ಚಿತ್ರ ನೋಡಿ ಪ್ರತಿಕಿಯೆ ಕೊಡಿ, ಅಂದ ಹಾಗೆ ಹಿಂದಿಯ "ಪಹೇಲಿ" ಹಾಗು ಕನ್ನಡದ "ನಾಗಮಂಡಲ" ದ ಬಗ್ಗೆ ಮುಂದೆ ಬರೆಯುತ್ತೇನೆ

ಸಿನಿಮಾ ನೋಡಲು ಸಿನಿಮನೆಗೆ(Theator) ಹೋಗುವ ಯೋಚನೆ ಬಂದಾಗ ನನ್ನ ಮೊದಲ ಆದ್ದೆತೆ ಕನ್ನಡಕ್ಕಿರುತ್ತದೆ. ಕನ್ನಡ ಸಿನಿಮಾಗಳವರಿಗೆ ಸ್‍ಪರದಿಗಳೇ ಇಲ್ಲವಾಗಿದ್ದಾರೆ. ಅವರು ಕನ್ನಡ ಸಿನಿಮಾ ನೋಡಿ, ನೋಡಿ ಅಂತ ಬೇಡಿಕೊಳ್ಳುತ್ತಾರೆ. ಒಳ್ಳೆ ಸಿನಿಮಾ ಮಾಡಿದರೆ ಯಾರು, ಯಾಕೆ ನೋಡುವದಿಲ್ಲ? ಡಬ್ಬಿಂಗ್‍ಗೆ ಅವಕಾಸ ನೀಡುವುದರಿಂದ, ಸ್‍ಪರದೆ ಉಂಟಾಗಿ ಉತ್ತಮ ಸಿನಿಮಾಗಳು ಬರತೊಡಗುತ್ತವೆ. ಡಬ್ಬಿಂಗ್ ಇಚಾರ ಬಂದಾಗ ನಮ್ಮ ಸಿನಿಮಾ ರಂಗದವರು ಬೊಬ್ಬೆ ಹೊಡೆಯಲು ಸುರು ಮಾಡುವದು ಅವರ ಬೇಳೆ ಬೇಯಿಸಿಕೊಳ್ಳಲು. ಇದರಿಂದ ಕನ್ನಡಕ್ಕೇ ತೊಂದರೆಯಾಗಿದೆ. ಕನ್ನಡಿಗರೇ ಕರುನಾಡಲ್ಲಿ ಬೇರೇ ಬಾಸೆ ಸಿನಿಮಾ ನೋಡುತ್ತಾರೆ. ಇದು ನಮ್ಮ ಹಣೆಬರಹ.

ಮನಸಿನ ಮಾತು ಅವರ ಮೂಲ ಕೊಡುಗೆಯಲ್ಲಿ ಕೆಲವು ಧೀರ್ಗ ಪ್ರಶ್ನೆ ಗಳಿವೆ.

ಒಂದುಕಡೆ ಭಾಷೆ ಉಳಿಸಲು, ಬೆಳಿಸಲು ಸಿನೆಮ ಮಾಧ್ಯಮ ಬಹಳ ಮುಖ್ಯ ಅಂತ ಒಪ್ಪಿ ಇನ್ನೊಂದ್ ಕಡೆ ಡಬ್ಬಿಂಗ್ ಅಂದ ಕೂಡಲೆ ಹಿಂಜರಿತೀವಿ.
ಸಾಹಿತ್ಯ ದಲ್ಲಿ ಅನುವಾದ, ರೂಪಾಂತರ, ಭಾವಾನಂತರ ಗಳನ್ನ ಹೊಗಳಿ, ಸಿನೆಮ ರಂಗಕ್ಕೆ ಬಂದಾಗ ಮಾತ್ರ ಯಾಕೆ ರೀಮೇಕ್, ಡಬ್ಬಿಂಗ್ ಅಂದ್ರೆ ಅಸಹ್ಯ ಪಡ್ತೀವಿ?

ಚಿತ್ರರಂಗಕ್ಕೆ ಎರಡು ವಿಚಾರ ಇವೆ
ಒಂದು ಚಲಿಸುವ ಚಿತ್ರಗಳನ್ನು ಪೊಣಿಸುವ ಕಲೆ
ಇನ್ನೊಂದು ಆ ಚಿತ್ರಗಳಿಗೆ (ಕನ್ನಡ) ಭಾಷೆಯ ಶ್ರುಂಗಾರ.
ಎರಡೂ ಸರಿ ಕಟ್ಟಿ ಬರಬೇಕು. ಚಿತ್ರ ಡಬ್ಬಿಂಗ್ ಆದರೂ ಭಾಷೆ ನಮ್ಮದಲ್ಲವೆ? ಆ ಚಿತ್ರಕ್ಕೆ ಸುಸೂತ್ರ ಭಾಷೆ ಹೆಣೆಯುವುದು ನಮ್ಮವರಲ್ಲವೆ?

ಸೈನೈಡ್ಡ್ ಮತ್ತು ಚಿಗುರಿದ ಕನಸು ಚಿತ್ರಗಳ ಎರಡು ಉದಾಹರಣೆ
ಸೈನೈಡ್ಡ್: ಸಾಧಾರಣ ಕಥೆ, ಅದ್ಭುತ ಭಾಶೆ.
ಚಿಗುರಿದ ಕನಸು: ಅದ್ಭುತ ಕಥೆ, ಸಾಧಾರಣ ಭಾಶೆ.

ಸೈನೈಡ್ಡ್: ಈದು ನಿಜವಾಗಿಯು ಒಂದು ತಮಿಳ್ಳ್ ಕಥೆ. ಇದರ ಮೂಲ ಪಾತ್ರಗಳೆಲ್ಲ ತಮಲ್ಲಿ ತಮಿಳಲ್ಲೆ ಮಾತಾಡ್ ತಿದ್ರು. ಆದರೂ, ಈ ಚಿತ್ರದಲ್ಲಿನ ಅದ್ಭುತ ಕನ್ನಡ ಪ್ರಯೊಜನದಿಂದಾಗಿ ಆ ಸಂದೇಹ ಬರುವುದಿಲ್ಲ. ಅತಿ ಧೀರ್ಗ ಸಂಭಾಷಣೆ ಇಲ್ಲದಿದ್ದರೂ ಇರುವ ಸರಳ ಸಂಭಾಷಣೆಗೆ ಧೀರ್ಗ ಅರ್ಥ ಇದೆ. ಮುಖ್ಯವಾಗಿ ಆ ಸಂಭಾಷಣೆಯ ಭಾಷೆ ಅದ್ಭುತ. ಸಿನೆಮ ಸೂತ್ರಧಾರನ ಶಿಸ್ತಿನ ಕನ್ನಡವಾಗಲಿ, ಉಳಿದವರ ಆಡೊ ಭಾಶೆಯಾಗಲಿ ಬಹಳ ಗಮನ ಕೊಟ್ಟು ಬರೆದ ಹಾಗಿದೆ. ಈ ಸಿನೆಮ ನನ್ನ ಲೆಕ್ಕದಲ್ಲಿ ಕನ್ನಡದಲ್ಲಿನ 5 ಪ್ರಮುಖ ಸಿನೆಮಗಳಲ್ಲಿ ಒಂದು. IMHO, this movie shows supreme confidence and comfort in being rooted in kannada even when the subject matter is not and that is one of the reasons why it is great.

ಚಿಗುರಿದ ಕನಸು: ಈ ಕಥೆಯ ಒಂದು ಮುಖ್ಯ ಅಂಶ ಕನ್ನಡ. ಕನ್ನಡಕ್ಕಾಗಿಯೇ ಬರೆದ ಕಥೆ. ದಿಲ್ಲಿ ಕನ್ನಡಿಗ, ಅವನ ಹುಬ್ಬಳ್ಳಿ ಮಿತ್ರ, ಕರಾವಳಿಗೆ ತೆರಳುವುದು … ಕನ್ನಡದಲ್ಲಿನ ವೈವಿಧ್ಯತೆ ಕೊಂಡಾಡುವುದಕ್ಕೆ ಎಷ್ಟೇಲ್ಲಾ ಸಾಧ್ಯತೆ ಗಳಿದ್ದವು, ಎಲ್ಲ ನೀರಿಗೆ ಚೆಲ್ಲಿ ಬಿಟ್ಟರು. ಒಂದೆ ಒಂದು ಸಂಭಾಶಣೆ ನೈಜವಗಿಲ್ಲ – ಮಾತಿನ ಅರ್ಥ ಆಗಲಿ, ಅದರ ತ್ರಾಸ ಆಗಲಿ ಹೊಂದು ಬರೊದಿಲ್ಲ.

ಭಾಷೆಯ ಅದ್ಭುತ ಪ್ರಯೊಗ ಮಾಡೊ ಸೈನೈಡ್ಡ್, ಮತದಾನಗಳಂತಹ ಚಿತ್ರಗಳಾ, ಇಲ್ಲ ಭಾಷೆಗೆಗಮನವೇ ಕೊಡದ ಚಿಗುರಿದ ಕನಸು ಮತ್ತು ಗಾಂಧೀನಗರದ ಇನ್ನಿತರ ಕೊಡುಗೆಗಳ? ನೀವು ಹೆಳಿ ಯಾವುದು ಒಳ್ಳೆ ಕನ್ನಡ ಚಿತ್ರ?

ಗಾಂಧೀನಗರ ಉಳಿಸಲು ಹೊಗಿ ಕನ್ನಡ ಕೊಂದರೆ, ಕೊನೆಗೆ ಗಾಂಧೀನಗರವು ಇಲ್ಲ ಕನ್ನಡವು ಇಲ್ಲ. ನಮಗೆ ಗಾಂಧೀನಗರ ಮುಖ್ಯನ ಇಲ್ಲ ಕನ್ನಡ ಮುಖ್ಯನ? ಕನ್ನಡದ ಕಲೆಗಾರರಿಗೆ ಹೊಡೆತ ಬೀಳುತ್ತೆ ಅನೊದು ತಪ್ಪು ಕಲ್ಪನೆ. ಕನ್ನಡದ ಕಲೆಗಾರರು ಇತರ ಭಾಷೆಗಳಲ್ಲಿ ನಟ/ನಟಿ ಗಳಾಗಿಯು, ಸಿನೆಮ ಮಾಡುವ ಕಲೆ ನಿಪುಣರಾಗಿಯು ಬೆಳಿಯುತ್ಥಿದಾರೆ. ಬೀಳುವ ಹೊಡೆತ ಗಾಂಧೀನಗರದ ಕಳಭಟ್ಟಿ ವ್ಯಪಾರಿಗಳಿಗೆ ಮಾತ್ರ.

ಯಾವುದೇ ಉದ್ಯಮ ಆರೋಗ್ಯಕರವಾಗಿ ಬೆಳೆಯಬೇಕಾದರೆ, ವೈಜ್ಞಾನಿಕ ಮತ್ತು ಮೂಲಭೂತವಾಗಿ ವಿದ್ಯೆ ಮುಖ್ಯ. (ಐ.ಟಿ. ಉದ್ಯಮ ಉದಾಹರಣೆಗೆ, ಅತ್ಯಂತ ವೈಜ್ಞಾನಿಕವಾಗಿ ಬೆಳೆದಿರುವಂತೆ)

ಚಿತ್ರಸಾಹಿತ್ಯಕ್ಕೆ ಸಂಭಂದಿಸಿದಂತೆ, ಗೀತರಚನೆಕಾರರಿಗೆ ಸಂಗೀತ, ಸಾಹಿತ್ಯ ಮುಂತಾದುವುಗಳ ಬಗ್ಗೆ ಜ್ಞಾನ ಅತಿ ಅವಶ್ಯ.

ಆದರೆ ಈಗ, ವಿಧಾನಸಭೆಗೆ ಅವೈಜ್ಞಾನಿಕ ಆರಿಸಿಬರುವ ಅವಿದ್ಯಾವಂತ ಸದಸ್ಯರಂತೆ, ಚ.ಚಿ. ಉದ್ಯಮ ಬೆಳೆದಿದೆ. ನೀವು ಹಾಡಿನಲ್ಲಿ ಸಾಹಿತ್ಯ ಹುಡುಕಬೇಕೆಂದರೆ ಒಂದು ಬಿಳಿ ಹಾಳೆಯಲ್ಲಿ ಹಾಡನ್ನು ಬರೆದು ಓದಿದರೆ ಗೊತ್ತಾಗುತ್ತದೆ.

ನನ್ನ ಪ್ರಕಾರ ಚ.ಚಿ.ಉದ್ಯಮದಲ್ಲಿ ಸಿನಿಮಾ ಮಾಡಲು ಎಳ್ಳಷ್ಟೂ ಸರಕೇ ಉಳಿದಿಲ್ಲ, ಚಿ||ಉದಯಶಂಕರ್, ಡಾ||ರಾಜ್ ಅವರ ಕಾಲಕ್ಕೆ ಮುಗಿದಿದೆ.

ಈಗ ಯಾವುದೇ ಚಿತ್ರ ಮಾಡಿದರೂ ನೀರಿನ ಮೇಲೆಗುಳ್ಳೆಯಂತೆ ಬಂದು ಹೋಗಿರುವ ಹಾಡುಕುಣಿತ, ಕಥೆಗಳ ಚಿತ್ರನ್ನ ಅಷ್ಟೇ.

ಕನ್ನಡದಲ್ಲಿ ಅಪರಿಮಿತ ಕಥೆ, ಕಾದಂಬರಿ,ಸಾಹಿತ್ಯ,ಸಂಸ್ಕೃತಿಗಳಿವೆ, ಆದರೆ, ಅವಿದ್ಯಾವಂತ ನಿರ್ಮಾಪಕರ ಕೈಯಲ್ಲಿ ಕನ್ನಡ ಮಾತ್ರ ನಲುಗಿದೆ.