ಅಕ್ಶರಣಾಂ ಅಕಾರೋಸ್ಮಿ...

0

"ಅಕ್ಷರಣಾಂ ಅಕಾರೋಸ್ಮಿ..." ಅನ್ನೊ ಭಗವದ್ಗೀತೆಯ ವಚನಕ್ಕೂ ಮತ್ತು ತಿರುಕ್ಕುರಳ್ ಮೊದಲನೇ ವಚನಕ್ಕೂ ಸಂಭಂದವಿದೆಯೇ?

"ಅಗರ ಮುದಲ ಎೞುತ್ತೆಲ್ಲಾಮ್, ಆದಿ ಬಗವನ್ ಮುದ’ರ್ರೆ ಉಲಗು"... (ತಿರುಕ್ಕು'ರಳ್)
ಅಗರ=ಅ-ಕಾರ ಮುದಲ=ಮೊದಲು ಎೞುತ್ತೆಲ್ಲಾಮ್=ಅಕ್ಷರದಲ್ಲೆಲ್ಲಾ ಆದಿ=ಆದಿ ಬಗವನ್=ಬಗವಂತ ಮುದ’ರ್ರೇ=ಮೊದಲಿಗ ಉಲಗು=ಲೋಕ(ಕ್ಕೆ).

ಇದನ್ನು ಬ್ರಹ್ಮನ ಕುರಿತು ಬರೆದಿರುವುದಾಗಿ ಹೇಳಲಾಗಿದೆ ಎಂದು ಕೇಳಿದ್ದೇನೆ. ಇದರ ತಾತ್ಪರ್ಯ ನನ್ನ ಮಟ್ಟಿಗೆ ಈ ರೀತಿ ಅರ್ಥೈಸಬಹುದು.

"ಪರಬ್ರಹ್ಮ ಲೋಕದ ಮೂಲ, ಓಂ-ಕಾರ ಸ್ವರಕ್ಕೆಲ್ಲಾ ಮೂಲ"

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>>"ಅಗರ ಮುದಲ ಎೞುತ್ತೆಲ್ಲಾಮ್, ಆದಿ ಬಗವನ್ ಮುದ’ರ್ರೆ ಉಲಗು"... (ತಿರುಕ್ಕು'ರಳ್)

ಅಂದ ಹಾಗೆ ಇದು ಹೀಗಿರಬೇಕಿತ್ತು:
"ಅಗರ ಮುದಲ ಎೞುತ್ತೆಲ್ಲಾಮ್, ಆದಿ ಬಗವನ್ ಮುದಟ್ಱೇ ಉಲಗು"

ತಮಿಳಿನಲ್ಲಿ ಱ್ಱ್ ಎಂದು ಬರೆದರೂ ಅದರ ಉಚ್ಚಾರ ಟ್ಱ್ ಎಂದು ಆಗುತ್ತೆ.

ಅಲ್ಲದೆ, ಈ ಆದಿ ಭಗವನ್ ಯಾರು ಎಂಬುದರ ಬಗ್ಗೆಯೂ ಬಹಳ ಜಿಜ್ಞಾಸೆಯಾಗಿದೆ. ಆದಿ ಮತ್ತು ಬಗವನ್ ವಳ್ಳುವರ ತಾಯಿ ತಂದೆಯರ ಹೆಸರೆಂದೂ, ಅಥವಾ ಇದು ಜಿನನ ಬಗ್ಗೆ (ಅಥವಾ ಬುದ್ಧನ ಬಗ್ಗೆಯೋ) ಹೇಳುತ್ತೆ ಅನ್ನುವರೂ ಇದ್ದಾರೆ.

-ಹಂಸಾನಂದಿ

"ಮುದಟ್ಟ್ರೇ ಉಲಗು" ಅನ್ನುವ ವಾಕ್ಯದ ಅರ್ಥವೇನು???
ಈ ವಚನದ ಸಾರಾಂಶ, "ಅ-ಕಾರ ಅಕ್ಷರಗಳಿಗೆ ಹೇಗೆ ಮೊದಲೊ ಹಾಗೆ ದೈವಿ ಶಕ್ತಿ ಈ ಲೋಕಕೆ ಮೊದಲು ಅಂತ ಖಂಡಿತ ಅರ್ಥೈಸಲಾಗದು".
ಎೞುತ್ತು ಅನ್ನೊ ಪದದ ಅರ್ಥ ಸ್ವರ ಎಂದು ಅರ್ಥೈಸಿದರೆ, ಇದು ಜಿನನ ಕುರಿತು ಅಥವಾ ಬುದ್ದನ ಕುರಿತು ಹೇಳಲಾದ ವಚನ ಅಲ್ಲ ಎಂದಾಗುತ್ತದೆ.
"ಪರಬ್ರಹ್ಮ ವಸ್ತುವಿನಿಂದ ಸೃಷ್ಠಿಯ ಉತ್ಪತ್ತಿ, ನಾದಬ್ರಹ್ಮನಿಂದ ಸ್ವರದ ಉತ್ಪತ್ತಿ" ಅಂತ ಅಂದರೆ ಸರಿ ಅನ್ನೊ ಅನಿಸಿಕೆ ನನ್ನದು.
ಇದೇ ನನ್ನ ಪ್ರಶ್ನೆಯ ಸಂದೇಹ ಕೂಡ.

ತಿಳುವಳಿಕೆ: ಪರಬ್ರಹ್ಮ (ವಸ್ತು) ಮತ್ತು ಬ್ರಹ್ಮ (ತ್ರಿಮೂರ್ತಿಗಳಲ್ಲಿ ಒಬ್ಬ) ಬೇರೆಬೇರೆ. ಬ್ರಹ್ಮ ಪುರಾಣದ ಒಬ್ಬ ದೈವ, ಪರಬ್ರಹ್ಮ ಉಪನಿಶತ್ತುಗಳಲ್ಲಿನ ದೈವ (ಉದಾ: ಅಹಂ ಬ್ರಹ್ಮಾಸ್ಮಿ, ಈ ವಾಕ್ಯದಲ್ಲಿ ಬ್ರಹ್ಮ ಎಂದರೆ ಪರಬ್ರಹ್ಮ ವಸ್ತು ಎಂದರ್ಥ) ಸೃಷ್ಠಿ ಎಲ್ಲವೂ ಪರಬ್ರಹ್ಮ ವಸ್ತುವಿನಿಂದ ಹೆಣೆಯಲ್ಪಟ್ಟಿದೆ ಎಂದು ತಿಳಿಯಬಹುದು.
ಇಂಗ್ಲಿಷ್ ಭಾಷೆಯಲ್ಲಿ " God is before everything, and by him everything exists "

ನಿಜವಾದ ತಮಿೞಿನಲ್ಲಿ ರ, ಱ ಮತ್ತು ಲಕಾರದಿಂದ ಪದಗಳು ಪ್ರಾರಂಭವಾಗುವಂತಿಲ್ಲ. ರ್, ಱ್ ಮತ್ತು ಲ್ ಮುಂದಿನ ಸ್ವರವನ್ನನುಸರಿಸಿ ಇವುಗಳ ಹಿಂದೆ ಅ, ಇ ಮತ್ತು ಉಕಾರಗಳನು ಸೇರಿಸಿ ಪದ ಮಾಡಬೇಕು.
ಹಾಗಾಗಿ ಲಂಕೆ=ಇಲಂಗೈ, ಲಕ್ಷಣಮ್->ಲಕ್ಕಣಂ->ಇಲಕ್ಕಣಂ, ಲೋಗಂ=ಉಲಗಂ, ರಾಮನ್=ಇರಾಮನ್ ರಾವಣನ್=ಇರಾವಣನ್, ಱೆಕ್ಕೆ=ಇಱಕ್ಕು. ಆದರೆ ಕನ್ನಡದಲ್ಲಿ ಹಾಗಿಲ್ಲ. ಇಲ್ಲಿ ಬೇಕಾದಷ್ಟು ರಕಾರ ಲಕಾರ ಮತ್ತು ಱಕಾರದಿಂದ ಶುರುವಾಗುವ ಪದಗಳಿವೆ. ರೇಗು, ಲೆತ್ತ, ಲೇಸು, ಱೆಕ್ಕೆ, ಱೆಕ್ಕೆ, ಱೆಪ್ಪೆ, ಱವಕೆ ಇತ್ಯಾದಿ ತಮಿೞಿನಲ್ಲಿ ಱವಕೆ=ಇಱವಿಕ್ಕೈ.