ಕಬ್ಬಿನ ಹಾಲಿನ ಅಂಗಡಿಗೆ ಅಚ್ಚ ಗನ್ನಡದ ಹೆಸರು?!

0

ನಮ್ಮ ಗೆಳೆಯ ಒಬ್ಬ ಇದ್ದಾನೆ. ಇಲ್ಲೇ ಆಫೀಸಿನಲ್ಲೇ!.  ಟೀ ಅಂಗಡಿ ಇಟ್ಟಿದ್ದಾನೆ. ನಾನು ಅವನಿಗೆ ದೊಡ್ಡ ಟೀ ಗಿರಾಕಿ. ;)

ಮೊನ್ನೆ ( ತಿಂಗಳೇ ಆಯ್ತು?!) ಹೀಗೇ ಮಾತಾಡ್ತಾ ಅವನು ಅವನ ಯೋಜನೆಗಳ ಬಗ್ಗೆ ಹೇಳಿದ.  ನಗರದ ವಿವಿಧ ಭಾಗಗಳಲ್ಲಿ ಅವನ ಅಂಗಡಿ ಅನ್ನು ಆರಂಬಿಸೋದು..... ಕಬ್ಬಿನ ಹಾಲಿನ ಅಂಗಡಿ (ಮತ್ತು ಸ್ವಲ್ಪ ಕುರುಚಲು.. ಅದೇ ಸ್ನ್ಯಾಕ್ಸ್ :) ಅಂಗಡಿ ) ಇಡಬೇಕು ಅಂತ.

ನಾನು ಅವನಿಗೆ ಸ್ವಲ್ಪ ಗ್ಲಾಮರ್ ಇರೋ ಕನ್ನಡ ಹೆಸರು ಇಡು... ಇತ್ತೀಚೆಗೆ ಕನ್ನಡಕ್ಕೆ ಬಾಳನೇ ಗ್ಲಾಮರ್ ಬರ್ತಾ ಇದೆ ಅಂತ ಸಲಹೆ ಕೊಟ್ಟೆ. ಅವನು ನನಗೆನೇ ಕನ್ನಡ ಹೆಸರು ಸೂಚಿಸಲು ಕೇಳಿದ. ಒಪ್ಪಿಕೊಂಡು ಬಂದೆ. ಆಗ ಸಂಪದದಲ್ಲಿಯಾದರೂ/ ಸಂಪದಿಗರಿಂದಲಾದರೂ  ಒಳ್ಳೆ ಕನ್ನಡ ಹೆಸರು ಸಿಗುತ್ತೆ ಅನ್ನೋ ಆಶಾವದಿಯಾಗಿದ್ದೆ ;) .

ನೀವು ಕಬ್ಬಿನ ಹಾಲಿನ ಅಂಗಡಿಗೆ ಒಂದು ಒಳ್ಳೆ ಕನ್ನಡದ ಗ್ಲಾಮರ್ ಇರೋ ಹೆಸರು ಸುಚಿಸ್ತೀರಾ?

ಮುಂಚಿತವಾಗಿ ನನ್ನೀ.

extra:

ವಿಜಯನಗರದಲ್ಲಿ ಒಂದು ಕಬ್ಬಿನ ಹಾಲಿನ ಅಂಗಡಿ ಇದೆ. "ಆಲೆಮನೆ" ಅಂತ. ಸಕತ್ ಹೆಸರು.. ಅರ್ಥ ಹೊಂದುತ್ತೆ ಮತ್ತು ಸಕತ್ ಗ್ಲಾಮರಸ್ ಆಗಿಯೂ ಇದೆ. ಅಂತಹ ಹೆಸರುಗಳಿದ್ದರೆ ಚೆನ್ನ. 
 
ಈ ಅಂಗಡಿಯ ಹೆಸರಿಗಾಗಿಯೇ ;) ಆ ಜಾಗದಲ್ಲಿ ಹೋಗುವಾಗಲೆಲ್ಲ ಅಲ್ಲಿ ಕಬ್ಬಿನ ಹಾಲು ಕುಡಿದೇ ಹೋಗುವುದು!. :). 
 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಜಲ್ಲೆಕಬ್ಬು-ಜೋನಿಬೆಲ್ಲ"
"ಜಲ್ಲೆ ಜೇನು"

ಕಬ್ಬಿನ ಹಾಲಿನ ಜೊತೆಗೆ, ಜೋನಿಬೆಲ್ಲ, ತಟ್ಟೆಬೆಲ್ಲ, ಸಕ್ಕರೆ ಕಡ್ಡಿ ಮುಂತಾದುವುಗಳೆಲ್ಲಾ ಮಾರಿದರೆ ಒಳ್ಳೇದು(ಇಬ್ಬರಿಗೂ)

ಹಿನ್ನೆಲೆಯಲ್ಲಿ "ಜಲ್ಲೆ ಕಬ್ಬು ವಲ್ಲಿ ವಸ್ತ್ರ ನಲ್ಲ ನಿನಗೆ
ಪಟ್ಟು ಸೀರೆ ಪಟ್ಟು ರವಿಕೆ ನಲ್ಲ ನನಗೆ ........" ಹಾಡು :-)