ಕನ್ನಡಸಾಹಿತ್ಯ.ಕಾಂ ಹೊಸ ಆವೃತ್ತಿ ಹಾಗೂ ಕನ್ನಡ ಪದಪರೀಕ್ಷಕ

0

ಸಂಪದ ಬಳಗದ ಗೆಳೆಯರೆಲ್ಲರಿಗೂ ನಮಸ್ಕಾರ.

ಕನ್ನಡಸಾಹಿತ್ಯ.ಕಾಂ ಅಂತರ್ಜಾಲ ತಾಣದ ಹೊಸ ಆವೃತ್ತಿ ಹೊರಬಂದಿದೆ. ಈ ಆವೃತ್ತಿಯಲ್ಲಿ ಇದೇ ಇಲ್ಲೇ ಸಂಪದದಲ್ಲಿ ನಮ್ಮೆಲ್ಲರಿಗೂ ಪರಿಚಿತವಾಗಿರುವ ಶ್ಯಾಮ ಕಶ್ಯಪರೂ ಲೇಖಕ ಬಳಗಕ್ಕೆ ಸೇರ್ಪಡೆಯಾಗಿದ್ದಾರೆ. ಅಂತೆಯೇ ಮುಂಬಯಿಯ ಲೇಖಕರಾದ ಕೆ.ಟಿ. ವೇಣುಗೋಪಾಲರು,ಸಂತೋಷ್ ಮೆಹಂದಳೆ, ವಿಕ್ರಮ್ ಹತ್ವಾರ್, ಸಚ್ಚಿದಾನಂದ ಹೆಗಡೆ, ರವಿಶಂಕರ್ ಆರ್ ಇವರುಗಳೂ ಲೇಖಕ ಬಳಗಕ್ಕೆ ಸೇರಿರುವ ಹೊಸಬರು.

ಕನ್ನಡಸಾಹಿತ್ಯ.ಕಾಂ ನ ಅಭಿಮಾನಿ ಗೆಳೆಯರೊಲ್ಲಬ್ಬರಾದ ಶ್ರೀ ರುದ್ರಮೂರ್ತಿಯವರು ಮೈಕ್ರೋಸಾಫ್ಟ್ ಆಫೀಸ್ ತಂತ್ರಾಂಶದಲ್ಲಿ ಬಳಸಬಹುದಾದ ಆಡ್-ಇನ್ ಪದಪರೀಕ್ಷಕವನ್ನು ರೂಪಿಸಿದ್ದು ಅದರ ಮೊದಲ ಆವೃತ್ತಿಯನ್ನು ಈ ತಾಣದಲ್ಲಿ ಪಡೆಯಬಹುದಾಗಿದೆ. ತಂತ್ರಜ್ಞಾನ ಮತ್ತು ಕನ್ನಡ ಎಂಬ ವಿಚಾರದಲ್ಲಿ ಕೆಎಸ್ ಸಿ ಪ್ರತಿಪಾದಿಸುವ ಮೌಲ್ಯ ಹಾಗೂ ಧೋರಣೆಗಳಿಗೆ ಇದು ಕೃತಿ ಸಾಕ್ಷಿ. ಆಸಕ್ತ ಗೆಳೆಯರು ಈ ತಂತ್ರಾಂಶವನ್ನು ಮತ್ತಷ್ಟು ಉತ್ತಮಗೊಳಿಸಲು ಮುಂದೆ ಬರಬೇಕು.

ಅಂತೆಯೇ 'ಸಂಪೂರ್ಣ' CMS ನ ಕಾರ್ಯವೂ ಪ್ರಗತಿಯಲ್ಲಿದೆ. ಅದರಲ್ಲಿ ಪಾಲ್ಗೊಳ್ಳಲಿಚ್ಛಿಸುವವರಿಗಾಗಿ ಸಂಪರ್ಕದ ವಿಳಾಸ sampoorna_ksc@yahoo.com

ವಂದನೆಗಳು.
ರೋಹಿತ್ ಆರ್‍.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.