ಕನ್ನಡತಮಿೞ್ಗಳ ಪುಂಸೂಚಕ ನಕಾರಕ್ಕೆ ಡಕಾರಂ ತೆಲುಗಿನೊಳ್

0

ಕನ್ನಡ ಮತ್ತು ತಮಿೞಿನ ಪುಲ್ಲಿಂಗ ಸೂಚಕವಾದ ನ್/ನು ಗೆ ತೆಲುಗಿನಲ್ಲಿ ಡ್ ಬಂದು ಸಾಮಾನ್ಯವಾಗಿ ತೆಲುಗು ಹೊಸಗನ್ನಡದಲ್ಲಿ ಕೊನೆಯ ಎಲ್ಲಾ ವ್ಯಂಜನಾಂತಗಳಿಗೆ ಉಕಾರ ಸೇರಿಸುವುದಱಿಂದ ಡ್->ಡು ಆಗುತ್ತದೆ.

ಉದಾಹರಣೆಗೆ: ಕನ್ನಡ ಹಾಗೂ ತಮಿೞಿನ ರಾಮನ್(ನು) ತೆಲುಗಿನಲ್ಲಿ ರಾಮುಡು.
ಹಾಗೆಯೇ ಅವನ್(ನು) ವಾಡು. ಇವನ್(ನು) ವೀಡು ಇತ್ಯಾದಿ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ೞ್ ತೆಲುಗಿನಲ್ಲಿ ಡ್ ಆಗಿ ಮಾರ್ಪಡುತ್ತದೆ. ಉದಾಹರಣೆಗೆ ಏೞ್=ಏಡು, ಮೆದುೞ್=ಮೆದುಡು. ಆದರೆ ಱ್ ತೆಲುಗಿನಲ್ಲಿ ಇನ್ನೂ ಇದೆ. ಅವನ್ ವಾನ್ ವಾನ್ಱ್ ಆಗಿ ವಾಡು ಆಗುತ್ತದೆಂಬುದು ಸಂಶಯದ ವಿಷಯ.

ದ್ರಾವಿಡ ಮೂಲದ ಶಬ್ದ ಅವನ್ಱ್. ಕನ್ನಡದಲ್ಲಿ ಅವನ್ಱ್ > ಅವನ್ದ್ ಆಗಿದೆ. (ಅವನ್ದಿರು, ರಾಜನ್ದಿರು, ಅಪ್ಪನ್ದಿರು ಎನ್ನುವಲ್ಲಿ ಇರುವ ದಕಾರದ ಉೞಿಕೆಯೇ ಇದಕ್ಕೆ ಆಧಾರ.) ತೆಲುಗಿನಲ್ಲಿ ಅವನ್ಱ್ > ವಾನ್ಱ್ > ವಾ°ಡು > ವಾಡು ಮೂನ್ಱ್ > ಮೂ°ಡು > ಮೂಡು = ಮೂಱು (ಕ.) ಕನ್ಱ್ > ಕಱು ಆಗುವುದರೊಂದಿಗೆ ಇದಕ್ಕೆ ಹೋಲಿಕೆಯಿದೆ. ಕನ್ನಡದಲ್ಲಿ ಈ ಮಾರ್ಪಾಡು ಎರಡು ವಿಧವಾಗಿ ನಡೆಯುತ್ತದೆ. ೧. ನನ್ಱಿ > ನನ್ದಿ, ಒನ್ಱ್ > ಒನ್ದು, ಕನ್ಱ್ > ಕನ್ದು. ೨. ಕನ್ಱ್ > ಕಱು. ಕನ್ದು (ಬಾೞೆ), ಕಱು (ಹಸುವಿನ) ಹೀಗೆ ಎರಡು ರೀತಿ. ತುಳುವಿನಲ್ಲಿ ಕನ್ಱ್ > ಕಂಜಿ ಆಗಿದೆ. ಹಾಗೆಯೇ ಒನ್ಱ್ > ಒಂಜಿ.