ಮಂಗಳೂರು, ಉಡುಪಿಗಳಲ್ಲಿ ಸರಕಾರಿ ಬಸ್. ನಿಮ್ಮ ಅಭಿಪ್ರಾಯ?

3

ನನ್ನ ಅಭಿಪ್ರಾಯ: ಬೆಂಗಳೂರು ಮತ್ತು ಮೈಸೂರಿನ ಸರಕಾರಿ ಬಸ್ಸುಗಳ ಸೇವೆ ನೋಡಿದರೆ, ಮಂಗಳೂರು ಉಡುಪಿಯ ಖಾಸಗಿ ಸೇವೆಯೇ ಉತ್ತಮ. ಆದರೂ ಖಾಸಗಿಯವರು ಕೆಲವೊಮ್ಮೆ ವಿನಾಕಾರಣ ಸೇವೆ ರದ್ಧುಪಡಿಸುವುದನ್ನು ನಿಲ್ಲಿಸಬೇಕು.

ನೀವು ಏನಂತೀರಿ?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಖಾಸಗಿ ನಸ್ಸುಗಳ ವೇಗಕ್ಕೆ ಕಡಿವಾಣ ಹಾಕಿ, ಸಿಬಂದಿಗಳ ವರ್ತನೆಯು ನಯ ವಿನಯದಿಂದ ಕೂಡಿರುವಂತೆ ಮಾಡಬೇಕಿದೆ.
ಸರಕಾರಿ ಬಸ್ಸುಗಳನ್ನೂ ಓಡಿಸಬಹುದು. ಆದರೆ ಅವುಗಳ ಸಂಖ್ಯೆ ಕಡಿಮೆಯಿರಲಿ.
*ಅಶೋಕ್

ಎಡ ಪಂಥೀಯ (!!) ಮೂರ್ಖ ನಿರ್ಧಾರ... ಕಾರಣಗಳು
1. ಕರ್ನಾಟಕದ ಎಷ್ಟೋ ಕಡೆ ಸರಿಯಾದ ಸಾರಿಗೆ ವ್ಯವಸ್ಥೆ ಇಲ್ಲ. ಸರ್ಕಾರ ಅಲ್ಲೆಲ್ಲಾ ಪರಿಸ್ಥಿತಿ ಸುಧಾರಿಸಬಹುದಿತ್ತು.
2. ಅತೀ ವೇಗದ ಬಗ್ಗೆ ಮಾತ್ರ ಖಾಸಗಿಯವರ ಸೇವೆಯ ಬಗ್ಗೆ ದೂರಬಹುದು. ಉಳಿದಂತೆ ಆ ಮಟ್ಟದ ಸೇವೆ ಸರ್ಕಾರದಿಂದ ಸಾಧ್ಯ ಇಲ್ಲ.
3. ಹೊಸ ಸರ್ಕಾರಿ ಉದ್ಯೋಗ ಸೃಷ್ಟಿ ಆಗ ಬಹುದಾದರೂ, ಅಂದಾಜು ೩೦ ಸಾವಿರ ಮಂದಿ ಈಗ ಇರುವ ಉದ್ಯೋಗ ಕಳೆದುಕೊಳ್ಳುತಾರೆ.
ಇನ್ನೂ ಹಲವಾರು......
ಸರ್ಕಾರ ಯಥಾ ಸ್ತಿತಿ ಕಾಯ್ದುಕೊಳ್ಳಬಹುದಿತ್ತು ......

ಎಲ್ಲಿ ಖಾಸಗಿ ವ್ಯವಸ್ಥೆ ಸರಿಯಾಗಿದೆಯೋ ಅಲ್ಲಿ ಸರ್ಕಾರಿ ಬಸ್ ಬೇಡ. ಲಾಭವಿಲ್ಲದ ಮಾರ್ಗಗಳಲ್ಲಿ ಖಾಸಗಿಯವರು ಬಸ್ ಸಂಚಾರ ಏರ್ಪಡಿಸರು. ಅಂತಹ ಕಡೆ ಸರ್ಕಾರಿ ಬಸ್ ಸೇವೆ ಅತ್ಯಗತ್ಯ.

ಹೌದು. ಮೈಸೂರನ್ನೇ ತೆಗೆದುಕೊಳ್ಳಿ. ಅಲ್ಲಿ ನಗರ ಸಾರಿಗೆ ಸಮರ್ಪಕವಾಗಿಲ್ಲ. ಬೆಂಗಳೂರಿನಲ್ಲಿ ಸಹ ಬಸ್ಸುಗಳು ೧೫ ನಿಮಿಷಕ್ಕೊಮ್ಮೆ ಇದೆ.ಕೆಲವೊಮ್ಮೆ ಅರ್ಧ ಗಂಟೆಯಾದರೂ ಇರುವುದಿಲ್ಲ. ಆದರೆ ಮಂಗಳೂರಿನಲ್ಲಿ ಯಾವುದೇ ಸಮಯದಲ್ಲೂ ಬಸ್ಸುಗಳ ಕೊರತೆ ಇರುವುದಿಲ್ಲ. ಇದೆ ಕಾರಣದಿಂದಾಗಿ ಮಂಗಳೂರು ಜನತೆ ತಮ್ಮ ಖಾಸಗಿ ವಾಹನಕ್ಕಿಂತ ಹೆಚ್ಚಾಗಿ ಬಸ್ಸುಗಳಲ್ಲೇ ಪ್ರಯಾಣಿಸುತ್ತಾರೆ.

ಮೊದಲು ಸರ್ಕಾರ ಮೈಸೂರು, ಬೆಂಗಳೂರಿನಲ್ಲಿ ಸಮರ್ಪಕ ವ್ಯವಸ್ಥೆಯನ್ನು ಜಾರಿಗೆ ತರಲಿ. ನಂತರ ಮಂಗಳೂರಿಗೆ ಕೈ ಹಾಕುವುದು ಒಳಿತು.