ಕನ್ನಡ ಕಲಿಕೆ

0

ಕನ್ನಡ ಅನ್ನೋದೇ ಕಬ್ಬಿಣದ ಕಡಲೆ ಆದ್ರೆ ಎಂಗಣ್ಣ? ಎಂಬ ಈ ಲೇಖನದಲ್ಲಿ ಕನ್ನಡ ಕಲಿಕೆಯನ್ನು ಮತ್ತಷ್ಟು ಸ್ನೇಹಪರವಾಗಿ ಮಾಡಬಹುದಲ್ಲವೇ ಎಂಬ ಚಿಂತನೆಯಿದೆ. 

ನೋಡಿ: 

http://enguru.blogspot.com/2008/11/blog-post.html 

 

ಪ್ರೀತಿಯಿಂದ

ಸಿ ಮರಿಜೋಸೆಫ್ 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶಾಸ್ತ್ರೀಯಭಾಷೆ ಕನ್ನಡವನ್ನು ಬಾಲಾನುಕೂಲಕ್ಕಾಗಿ ಅಜ್ಞರಿಗೆ ಸ್ನೇಹಪರವಾಗಿ ಲಘುವೀಕರಿಸಲಾಗದು. ಉತ್ತಮವಾದ ಕನ್ನಡ ಸಾಹಿತ್ಯ ಮತ್ತು ಭಾಷಾಪ್ರಯೋಗಗಳು ಸತತ ಪರಿಶ್ರಮದಿಂದ ಸಾಧ್ಯವೇ ಹೊರತು. ಅಲ್ಪಶ್ರಮದಿಂದ ಲಭಿಸಲದು, ಬಾಲ್ಯದಲ್ಲಿ ಕಲಿಯು ಬಾಲಪಾಟಕ್ಕೆ ಸೀಮಿತವಾದುದಲ್ಲ.

ಕನ್ನಡದ ಉನ್ನತೀಕರಣದಿಂದ ಉತ್ಕೃಷ್ಟ ಸಾಹಿತ್ಯ ಜನಿತವಾಗಿ, ನಮ್ಮ ಹೆಮ್ಮೆಯ ಪ್ರತೀಕವಾಗಿದೆ. ಶಾಸ್ತ್ರೀಯಸ್ಥಾನ ಲಭಿಸಿದ್ದು ಕವಿರಾಜಮಾರ್ಗಾದಿ ಶ್ರೇಷ್ಠಸಾಹಿತ್ಯದಿಂದ ಹೊರತು ಗ್ರಾಮ್ಯಭಾಷೆಯ ಜಾನಪದದಿಂದ ಅಲ್ಲ.

ಸ್ನೇಹಪರತೆ ಎಂದು ಭಾಷೆಯ ಘನತೆಗೆ ಹಿರಿಮೆ ಚ್ಯುತಿದ ಘಟಿಸಕೂಡದು.

ಧನ್ಯವಾದ.
-ಮಹೇಶ

"ಸ್ನೇಹಪರತೆ ಎಂದು ಭಾಷೆಯ ಘನತೆಗೆ ಹಿರಿಮೆ ಚ್ಯುತಿದ ಘಟಿಸಕೂಡದು."

ಈ ವಾಕ್ಯದ ’ಸ್ನೇಹಪರತೆಯೆಂದು ಭಾಷೆಯ ಘನತೆಗೆ ಹಿರಿಮೆಗೆ ಚ್ಯುತಿ ಘಟಿಸಕೂಡದು.’ ವ್ಯಾಕರಣಶುದ್ಧರೂಪವನ್ನು ಸ್ವೀಕರಿಸಿರಿ.

-ಮಹೇಶ

ಶ್ಯಾಮಲೆಯವರಿಗೆ ವಿವರವಿಚಾರ ಹೇಳಿದ್ದೇನೆ. ಅಪರಾಧದ ಜ್ಞಾನೋದಯವಾಗಿದೆ.

ಧನ್ಯವಾದ
-ಮಹೇಶ

ಆದರೆ ನಮಗೆ ಬಹಳ ನಿರಾಸೆಯಾಗಿದೆ. ನಿಮ್ಮಿಂದ ಕಂನುಡಿಯ ಚೆಲ್ವೊರೆಗಳನ್ನು ಈಗಲೂ ಎದುರು ನೋಡುತ್ತಿರುವೆವು.

ಶಾಮಲ

ನಿಮಗೆ ನಿರಾಸೆಯಾಗಿರುವುದಕ್ಕೆ ಖೇದವಿದೆ. ಅನ್ಯಥಾ ಭಾವಿಸಿ ಪುನಃ ಮ್ಲಾನರಾಗಬೇಡಿರಿ

ಧನ್ಯವಾದ
-ಮಹೇಶ

ಅತಿ ಸರ್ವತ್ರ ವರ್ಜಯೇತ್ ! , ಮಹೇಶ್ .
ಒಮ್ಮೆ ಅತೀವೃಷ್ಟಿ , ಇನ್ನೊಮ್ಮೆ ಅನಾವೃಷ್ಟಿ ಅಂತ ಆಗಬಾರದಲ್ವೆ?

ದಯವಿಟ್ಟು ಜನಸಾಮಾನ್ಯರ ಕನ್ನಡದಲ್ಲಿ ಬರೀರಿ. ಮುಖ್ಯಧಾರೆಗೆ ಬನ್ನಿ .

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ಜನಸಾಮಾನ್ಯರ ಕನ್ನಡದಲ್ಲಿ ಬರೆದರೆ ಅದು ಲೇಖನ ಮತ್ತು ಪ್ರತಿಕ್ರಿಯೆಯಾಗುವುದಿಲ್ಲ. ಮುಖ್ಯಧಾರೆಗಿಂತ ಮೇಲುಧಾರೆ ಮುಖ್ಯ.

ಆದರೂ ಗುರುಜನಾಭಿಪ್ರಾಯಕ್ಕೆ ಗೌರವವೀಯ್ಯುವುದು ಸಜ್ಜನರ ಸಂಭಾವಿತ ಸಂಸ್ಕೃತಿ. ಆ ದಿಶೆಯಲ್ಲಿ ಪ್ರಯತ್ನಶೀಲನಾಗಲು ಪ್ರಯತ್ನಿಸುವೆನು.

ಧನ್ಯವಾದ
-ಮಹೇಶ

ಮಾಯ್ಸರೇ, ಇಂದು ಗೋಚರಿಸುತ್ತಿರುವ ತಮ್ಮ ಭಾಷಾ ಪಾಂಡಿತ್ಯ ಬದಲಾವಣೆ ಪ್ರಯೋಗಕ್ಕೆ ಕಾರಣವಾದರೂ ಏನು ಎಂಬುದನ್ನು ಹೇಳುವಂತಹವರಾಗಿರಿ. ಸಂಪದೋತ್ತಮ ಸಕಲರಿಗೂ ಇಂತಹುದೇ ಪ್ರಶ್ನೆ ಉದ್ಭವಿಸಿರಬಹುದಲ್ಲವೆ.

ಕಲ್ಪಿತ ಅಂತರ್‍ಜಾಲೀಯ ನಾಮಗಳೆಂದು ಅನುಮಾನಾಸ್ಪದವಾದವುಗಳಿಗೆ ಉತ್ತರಿಸುವುದು ರಕ್ಷಣಾತ್ಮಕವಾಗಿ ನಿಷಿದ್ಧ.
ಧನ್ಯವಾದ
-ಮಹೇಶ

೧. ಸಧ್ಯದ ಕನ್ನಡ ಕಬ್ಬಿಣದ ಕಡಲೆ ಅಂತ ನಿಜವಾಗಿಯೂ ಇವರು ಹೇಳುತ್ತಿರುವ ’ಹಳ್ಳಿ ಹುಡುಗರು’ ಹೇಳುತ್ತಿದ್ದಾರಾ ಅಥವಾ ಇವರೇ ಸುಮ್ಮನೆ ಹೇಳುತ್ತಿದ್ದಾರಾ? ಎಶ್ಟು ಹಳ್ಳಿಹುಡುಗರು ಬಂದು ’ಕನ್ನಡ ಕಷ್ಟ’ ಅಂತ ಇವರ ಹತ್ತಿರ ಕಷ್ಟ ತೋಡಿಕೊಂಡಿದ್ದಾರೆ? ಲೆಕ್ಕ ತೋರಿಸಿ ಮಾತಾಡಲಿ.

೨. ಇಂಗ್ಲೀಸು ಕಲ್ಯಕ್ಕೆ ನಮ್ಮೈಕ್ಳಿಗೆ ತೊಂದರೆ ಆಗ್ತದೆ ಅದಕ್ಕೆ ಇಂಗ್ಲೀಸಿನಲ್ಲಿರೋ ಗ್ರೀಕು ಲ್ಯಾಟಿನ್ನು ಪದಗಳನ್ನು ಒದ್ದೋಡಿಸಿ ಅಂತ ಇಂಗ್ಲೆಂಡಲ್ಲಿರುವವರು ಧರಣಿ ಕೂತರೆ ಹೇಗಿರುತ್ತಿತ್ತು? ಇಂಗ್ಲೀಷು ಇಷ್ಟು ಬೆಳೆದಿರುವುದು ಎಲ್ಲ ಭಾಶೆಯ ಸಾಕಷ್ಟು ಪದಗಳನ್ನು ಸೇರಿಸಿಕೊಂಡೇ.

ಏನ್‌ಗುರು ಅನ್ನೋ ಆ ಬಿಲಾಗಿನಲ್ಲಿ ಯೋಳಿದ್ ಯಿಸ್ಯಾವೆಲ್ಲ ಓದೋವತ್ಗೆ ಔದಲ್ಲಣ್ಣಾ ನಾವೂನೂ ಇಸ್ಕೂಲ್‌ನಾಗೆ ಸಮಕಲನ ಯವಕಲನ ಅನ್ತಾಲೇ ಓದಿದ್ದಲ್ಲವ್ರಾ? ಆದ್ರೆ ಇವಾಗ ಅವ್ಯಾವ್ದೂನೂ ಗ್ನ್ಯಪ್ತಿ ಇಲ್ಲದಂಗಾಗೈತೆ. ನಮ್ಗೆಲ್ಲ ಕೂಡೋದು ಕಳಿಯೋದು ಅಂತಂದ್ರೇನೇ ಅರ್ತವಾಗೋದು. ಇನ್ನೂ ಎಚ್ಗೆ ಮಾತಾಡುದ್ರೆ ನಾವು ಆಡು ಸಬ್ಸ್ಟ್ರಾಕ್ಟೇ ಮಾಡೋದು.
ಇಲ್ಲಿ ಕಮೆಂಟಿಸಿದ ಎಚ್ಚಿನೋರು ಆ ಮೂಲ ಬಿಲಾಗಿನಾಗೆ ಏನೈತೆ ಅನ್ನೋದನ್ನ ನೋಡೇ ಇಲ್ಲ. ಹಾವು ಬುಟ್ಬುಟ್ಟು ಉತ್ತಕ್ಕೆ ಹೊಡುದ್ರು ಅನ್ನೋ ಅಂಗೆ ನಿಮ್ ಪಾಡು. ನಂಗೊತ್ತು ಫಾರ್‍ ವಾಟ್ ಯುವರ್‍ ಹಾರ್‍ಟ್ ಈಸ್ ಬೀಟಿಂಗ್ ಟು ಅನ್ತ, ನೀವೆಲ್ಲ ಸುಮ್ಕೆ ಬೀಟಿಂಗ್ ದ ಬುಶ್ಶು.

ಆದರೂ ಈ ವಿಷಯವನ್ನು ಒಂದು ಚರ್ಚಾ ವಿಷಯವಾಗಿ ತೆಗೆದುಕೊಂಡು ಪ್ರತಿಕ್ರಿಯಿಸಿದಿರಲ್ಲ, ಸಂತೋಷ.

ಪ್ರೀತಿಯಿಂದ
ಸಿ ಮರಿಜೋಸೆಫ್

ಸನ್ಮಾನ್ಯ ಸ.ಮರಿಜೋಸೆಫರೇ

ನಿಮ್ಮ ಪ್ರತಿಕ್ರಿಯೆಯ ಸಂಪೂರ್ಣ ಅರ್ಥಗ್ರಹಣವೆನ್ನಿಂದ ಸಾಧ್ಯವಾಗುತ್ತಿಲ್ಲ. ಪ್ರಾಯಶಃ ನನಗೆ ನಿಮ್ಮ ಲಿಖಿತಸಂವಹನವನ್ನು ಗ್ರಹಿಸುವಲ್ಲಿ ಅಸಾಮರ್ಥ್ಯವಿರಬೇಕು.

ಅಂತಿಮ ವಾಕ್ಯದಲ್ಲಿ ನಿಮ್ಮ ಸಂತೋಷಕ್ಕೆ ನನ್ನ ಪ್ರತಿಕ್ರಿಯೆ ಕಾರಣವಾಯಿತು ಎಂಬುದನ್ನು ತಿಳಿದು ನನಗೂ ಪರಮಾನಂದವಾಗಿತು.

ಧನ್ಯವಾದ
-ಮಹೇಶ